Site icon Vistara News

ವಿಸ್ತಾರ TOP 10 NEWS | ʼವಿನಾಯಕʼ ಸಂಭ್ರಮಕ್ಕೆ GDP ಮೆರುಗು ಹಾಗೂ ಇನ್ನಿತರ ಪ್ರಮುಖ ಸುದ್ದಿಗಳಿವು

assam madarasa, Ganeshothsav, GDP growth, latest, Mikhail Gorbachev, murugha mutt case, ramya production house, savarkar issue, TV Mohandas Pai tweet, Uttar Pradesh Government, ವಿಸ್ತಾರ Money Guide

ಬೆಂಗಳೂರು: ವಿನಾಯಕ ದಾಮೋದರ ಸಾವರ್ಕರ್‌ ದೇಶಪ್ರೇಮದ ಕುರಿತೇ ಕೆಲವರು ಪ್ರಶ್ನೆಗಳನ್ನೆತ್ತುತ್ತಿರುವ ಸಂದರ್ಭದಲ್ಲಿ, ರಾಜ್ಯಾದ್ಯಂತ ವಿನಾಯಕ ಚತುರ್ಥಿಯನ್ನು ಸಾವರ್ಕರ್‌ ಹೆಸರಿನಲ್ಲೇ ಸಂಭ್ರಮಿಸಲಾಗಿದೆ. ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಚತುರ್ಥಿಗೆ ಅವಕಾಶ ಸಿಗದ ನಡುವೆಯೇ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಶಾಂತಿಯುತವಾಗಿ ನಡೆಯುತ್ತಿದೆ. ಅನೇಕ ಸವಾಲುಗಳ ನಡುವೆಯೂ ದೇಶದ ಜಿಡಿಪಿ ಉತ್ತಮ ಪ್ರಗತಿ ದಾಖಲಿಸಿರುವುದು ಸಮಾಧಾನ ತಂದಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS ಇಲ್ಲಿದೆ.

1. Ganesh Chaturthi | ಗಣೇಶ ಪೂಜಾ ಮಂಟಪದಲ್ಲಿ ಸಾವರ್ಕರ್‌ ಹವಾ, ಭಾವಚಿತ್ರ, ಜೀವನಕಥೆ ಪುಸ್ತಕ ವಿತರಣೆ
ರಾಜ್ಯಾದ್ಯಂತ ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ್‌ ಸಾವರ್ಕರ್‌ ಕುರಿತಂತೆ ವಾದ ವಿವಾದಗಳು ಎದ್ದಿರುವ ನಡುವೆಯೇ ಗಣೇಶೋತ್ಸವದಲ್ಲಿ ಸಾವರ್ಕರ್‌ ವಿಜೃಂಭಣೆ ಜೋರಾಗಿಯೇ ನಡೆದಿದೆ. ರಾಜ್ಯದ ಬಹುತೇಕ ಎಲ್ಲ ಭಾಗಗಳಲ್ಲಿ ಗಣೇಶೋತ್ಸವ ಮಂಟಪಗಳಲ್ಲಿ ಸಾವರ್ಕರ್‌ ಅವರ ಭಾವಚಿತ್ರಗಳನ್ನು ಇಡಲಾಗಿದೆ, ಸಾವರ್ಕರ್‌ ಅವರ ಜೀವನ ಕಥೆ ಆಧರಿಸಿದ ಪುಸ್ತಕಗಳನ್ನೂ ವಿತರಿಸಲಾಗುತ್ತಿದೆ. ತುಮಕೂರಿನ ಗಣೇಶೋತ್ಸವದ ಕೇಸರಿ ಧ್ವಜದಲ್ಲಿ ಸಾವರ್ಕರ್‌ ಚಿತ್ರವಿದ್ದರೆ,ಚಿತ್ರದುರ್ಗದಲ್ಲಿ ಮಂಟಪಕ್ಕೆ ಸಾವರ್ಕರ್‌ ಹೆಸರಿಡಲಾಗಿದೆ, ಬೆಳಗಾವಿಯಲ್ಲಿ ಮನೆಗಳಿಗೆ ಸಾವರ್ಕರ್‌ ಭಾವಚಿತ್ರ ವಿತರಣೆ ಮಾಡಲಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

2. Ganesh Chaturthi | ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಶಾಂತ, ಮೂರು ದಿನ ಪೂಜೆ, ದರ್ಶನಕ್ಕೆ ಅವಕಾಶ
ಹುಬ್ಬಳ್ಳಿ: ರಾಷ್ಟ್ರಾದ್ಯಂತ ಸುದ್ದಿ ಮಾಡಿದ ಹುಬ್ಬಳ್ಳಿಯ ಈದ್ಗಾ ಮೈದಾನ ಗಣೇಶೋತ್ಸವ ಅತ್ಯಂತ ಶಾಂತವಾಗಿ ನಡೆಯುತ್ತಿದೆ. ಇಲ್ಲಿ ಗಣೇಶೋತ್ಸವ ನಡೆಸುವ ವಿಚಾರದಲ್ಲಿ ಮಹಾನಗರ ಪಾಲಿಕೆ ವಿವೇಚನಾಧಿಕಾರ ಬಳಸಿ ತೀರ್ಮಾನ ತೆಗೆದುಕೊಳ್ಳಬಹುದು ಎಂದು ರಾಜ್ಯ ಹೈಕೋರ್ಟ್‌ ಮಂಗಳವಾರ ರಾತ್ರಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆಯೇ ರಾಣಿ ಚೆನ್ನಮ್ಮ ಗಜಾನನ ಉತ್ಸವ ಸಮಿತಿಯಿಂದ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗಿದೆ. ಆ ಬಳಿಕ ಭಕ್ತರು ಬಂದು ದೇವರ ಪೂಜೆ, ದರ್ಶನ ಮತ್ತು ಪೂಜೆ ಮಾಡಿಕೊಂಡು ಹೋಗಲು ಅನುಮತಿ ನೀಡಲಾಗಿದೆ. ಇನ್ನು ಮೂರು ದಿನಗಳ ಕಾಲ ಗಣೇಶೋತ್ಸವ ನಡೆಯಲಿದ್ದು, ಶುಕ್ರವಾರ ವಿಸರ್ಜನಾ ಮೆರವಣಿಗೆ ಆಯೋಜಿಸಲು ತೀರ್ಮಾನಿಸಲಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

3. GDP | ಏಪ್ರಿಲ್-ಜೂನ್‌ ಅವಧಿಯ ಜಿಡಿಪಿ ಬೆಳವಣಿಗೆ 13.5%ಕ್ಕೆ ಏರಿಕೆ
ಪ್ರಸಕ್ತ ಸಾಲಿನ ಏಪ್ರಿಲ್-ಜೂನ್‌ ಅವಧಿಯಲ್ಲಿ ಭಾರತದ ಜಿಡಿಪಿ ( ಒಟ್ಟಾರೆ ರಾಷ್ಟ್ರೀಯ ಉತ್ಪನ್ನ) ಬೆಳವಣಿಗೆ 13.5 %ಕ್ಕೆ ಏರಿಕೆಯಾಗಿದೆ. 2021 ರ ಏಪ್ರಿಲ್-ಜೂನ್‌ ಅವಧಿಗೆ ಹೋಲಿಸಿದರೆ ( 4.09% ) ಇದು ಹೆಚ್ಚಳವಾಗಿದೆ. ರಷ್ಯಾ-ಉಕ್ರೇನ್‌ ಸಂಘರ್ಷ, ಬಿಸಿಗಾಳಿಯಿಂದ ಬೆಳೆ ಹಾನಿ, ಸರಕುಗಳ ದರ ಏರಿಕೆ, ಹಣದುಬ್ಬರ ಇತ್ಯಾದಿ ಸವಾಲುಗಳ ನಡುವೆಯೂ ತ್ರೈಮಾಸಿಕ ಜಿಡಿಪಿ 13.5% ಕ್ಕೆ ಏರಿಕೆಯಾಗಿದೆ. ಕಳೆದ 70 ವರ್ಷಗಳ ಅವಧಿಯಲ್ಲಿ ಭಾರತದ ಜಿಡಿಪಿ 2.7 ಲಕ್ಷ ಕೋಟಿ ರೂ.ಗಳಿಂದ 150 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

4. ಮುರುಘಾಶ್ರೀ ಪ್ರಕರಣ | ಮಠದ ಸಿಬ್ಬಂದಿ ಜತೆ ಶ್ರೀಗಳ ಸಮಾಲೋಚನೆ, ನಾಳೆ ಏನಾದೀತು?
ಮಠದ ಹಾಸ್ಟೆಲ್‌ನಲ್ಲಿ ಆಶ್ರಯ ಪಡೆದಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಇಲ್ಲಿನ ಮುರುಘಾಮಠದ ಶ್ರೀ ಶಿವಮೂರ್ತಿ ಮುರುಘಾಶರಣರು ಬುಧವಾರ ಮಠದ ಆಪ್ತ ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿದರು. ಅವರ ಜತೆಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿ ನಮೂದಾಗಿರುವ ಮಠದ ಕಾರ್ಯದರ್ಶಿ ಪರಮ ಶಿವಯ್ಯ ಅವರು ಕೂಡಾ ಇದ್ದರು. ಬುಧವಾರ ಮಠದಲ್ಲೇ ಇದ್ದ ಶ್ರೀಗಳು ಆತ್ಮೀಯರೊಂದಿಗೆ ಮಾತ್ರ ಮಾತುಕತೆ ನಡೆಸಿದ್ದರು. ಸಂಜೆಯ ಹೊತ್ತಿಗೆ ಸ್ವಾಮೀಜಿ ಮತ್ತು ಪರಮಶಿವಯ್ಯ ಅವರು ಅಲ್ಲಮಪ್ರಭು ಸಂಶೋಧನಾ ಕೇಂದ್ರದ ಒಳಗೆ ತೆರಳಿ ಸಭೆ ನಡೆಸಿದರು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಮಾಹಿತಿಗೆ: ಮುರುಘಾಶ್ರೀ ಕೇಸ್‌| ಬಸವರಾಜ್‌ ವಿರುದ್ಧದ ಅತ್ಯಾಚಾರ ಯತ್ನ ಪ್ರಕರಣದಲ್ಲಿ ಹಾಸ್ಟೆಲ್‌ನಲ್ಲಿ ಮಹಜರು

5. ರಾಜಧಾನಿ ಅವ್ಯವಸ್ಥೆ ಬಗ್ಗೆ ಮತ್ತೆ ಮೋಹನ್‌ದಾಸ್‌ ಪೈ ಗರಂ, ಬೆಂಗಳೂರು ಉಳಿಸಿ ಎಂದು ಮೋದಿಗೆ ಮನವಿ
ಪದ್ಮಶ್ರೀ ಪುರಸ್ಕೃತ ಟೆಕ್ಕಿ, ಇನ್ಫೋಸಿಸ್‌ನ ಮಾಜಿ ನಿರ್ದೇಶಕ, ಮಣಿಪಾಲ್‌ ಗ್ಲೋಬಲ್‌ ಎಜುಕೇಶನ್‌ನ ಅಧ್ಯಕ್ಷರಾಗಿರುವ ಟಿ.ವಿ. ಮೋಹನ್‌ದಾಸ್‌ ಪೈ ಅವರು ಬೆಂಗಳೂರಿನ ಹದಗೆಟ್ಟ ರಸ್ತೆ, ಕೊಳಚೆ ತುಂಬಿದ ರಾಜಕಾಲುವೆಗಳು, ಮೂಲಭೂತ ಸೌಕರ್ಯ ಸಮಸ್ಯೆ ಬಗ್ಗೆ ಮತ್ತೊಮ್ಮೆ ಗರಂ ಆಗಿದ್ದಾರೆ. ಕಳೆದ ಏಪ್ರಿಲ್‌ನಲ್ಲೂ ಅವರು ಇಲ್ಲಿನ ಅವ್ಯವಸ್ಥೆ ಬಗ್ಗೆ ಸಿಟ್ಟಾಗಿ ಪ್ರತಿಕ್ರಿಯಿಸಿದ್ದರು. ಈ ಬಾರಿ ರಾಜಧಾನಿಯ ಸಮಸ್ಯೆ ಬಗ್ಗೆ ಟ್ವೀಟ್‌ ಮಾಡಿದ್ದಲ್ಲದೆ, ನರೇಂದ್ರ ಮೋದಿಯವರೇ ನೀವಾದರೂ ಬೆಂಗಳೂರನ್ನು ಉಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಮೋಹನದಾಸ್ ಪೈ ಅವರು ಕಳಕಳಿ ಇಟ್ಟುಕೊಂಡೇ ಟ್ವೀಟ್ ಮಾಡುತ್ತಾರೆ. ಅವರ ಸಲಹೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಿ ಕಾರ್ಯಾಚರಣೆ ಮಾಡುತ್ತೇವೆ. ಮಾರತ್ತಹಳ್ಳಿ ಸುತ್ತಮುತ್ತ ಗುರುವಾರ ಪರಿಶೀಲನೆ ಮಾಡುತ್ತೇನೆ ಎಂದಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

6. Conviction Rate | ಉತ್ತರ ಪ್ರದೇಶದಲ್ಲಿ ಮಹಿಳಾ ದೌರ್ಜನ್ಯಕ್ಕಿಲ್ಲ ಆಸ್ಪದ, ಶಿಕ್ಷೆ ಪ್ರಮಾಣ ದೇಶದಲ್ಲೇ ಗರಿಷ್ಠ
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಅವರು ಮುಖ್ಯಮಂತ್ರಿಯಾದ ಬಳಿಕ ಅಪರಾಧ ಪ್ರಮಾಣ ಕಡಿಮೆಯಾಗಿದೆ. ಅದರಲ್ಲೂ, ಎನ್‌ಕೌಂಟರ್‌ಗಳು ಜಾಸ್ತಿಯಾದ ಕಾರಣ ಅಪರಾಧಿಗಳೇ ಜೈಲಿಗೆ ಬಂದು ನಮ್ಮನ್ನು ಬಂಧಿಸಿ ಎಂಬುದಾಗಿ ಮನವಿ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಎನ್‌ಕೌಂಟರ್‌ಗಳು ಮಾತ್ರವಲ್ಲ, ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರಿಗೆ ಅಪರಾಧ ಸಾಬೀತಾಗಿ ಶಿಕ್ಷೆ ವಿಧಿಸುವಲ್ಲಿಯೂ (Conviction Rate) ರಾಜ್ಯ ಮುಂದಿದೆ ಎಂದು ಸರಕಾರ ತಿಳಿಸಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

7. Ramya Production House | ದೊಡ್ಡ ಗ್ಯಾಪ್‌‌ ಬಳಿಕ ‘ಚಂದನವನ’ಕ್ಕೆ ರಮ್ಯಾ ಗ್ರ್ಯಾಂಡ್‌ ಕಮ್​ ಬ್ಯಾಕ್​ !
ರಮ್ಯಾ ಎಲ್ಲಿ ಹೋದರು..? ಅಂತಾ ಕೇಳುತ್ತಿದ್ದವರ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆದರೆ ಈ ಬಾರಿ ಪಾಲಿಟಿಕ್ಸ್‌ಗೆ ಗುಡ್‌ ಬೈ ಹೇಳಿ ಮತ್ತೊಮ್ಮೆ ಚಿತ್ರರಂಗಕ್ಕೆ ಹಾಯ್‌ ಎಂದಿದ್ದಾರೆ ರಮ್ಯಾ. ‘ಆ್ಯಪಲ್ ಬಾಕ್ಸ್‌’ (Ramya Production House) ಹೆಸರಲ್ಲಿ ಪ್ರೊಡಕ್ಷನ್‌ ಹೌಸ್‌ ಲಾಂಚ್‌ ಮಾಡಿರುವ ರಮ್ಯಾ ‘ಚಂದನವನ’ಕ್ಕೆ ಗ್ರ್ಯಾಂಡ್‌ ಕಮ್​​ಬ್ಯಾಕ್ ಮಾಡಿದ್ದಾರೆ. ನಿನ್ನೆಯೇ ಹಿಂಟ್‌ ಕೊಟ್ಟಿದ್ದ ನಟಿ ರಮ್ಯಾ, ನಾಳೆ ಸಿಹಿಸುದ್ದಿ ಕೊಡುತ್ತೇನೆ ಎಂದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದರು. ಹಬ್ಬದ ಸಂಭ್ರಮದ ಜೊತೆಗೆ ಇಂದು ಆ ಸಿಹಿಸುದ್ದಿ ಏನು ಅನ್ನೋದು ರಿವೀಲ್‌ ಆಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
ರಮ್ಯಾ ‘ಪ್ರೊಡಕ್ಷನ್‌ ಹೌಸ್‌’ ಲಾಂಚ್‌; ನಿನ್ನೆಯೇ ಸುದ್ದಿ ಪ್ರಕಟಿಸಿದ್ದ ‘ವಿಸ್ತಾರ ನ್ಯೂಸ್’!

8. ಉಗ್ರ ಚಟುವಟಿಕೆ; ಅಸ್ಸಾಂನಲ್ಲಿ ಮದರಸಾವನ್ನು ನೆಲಸಮ ಮಾಡಿದ ಜಿಲ್ಲಾಡಳಿತ
ಅಸ್ಸಾಂನ ಬೊಂಗೈಗಾಂವ್​​​ನ ಮರ್ಕಝುಲ್ ಮಾ-ಆರಿಫ್ ಕ್ವಾರಿಯಾನದಲ್ಲಿರುವ ಮದರಸಾವೊಂದನ್ನು ಧ್ವಂಸಗೊಳಿಸಲಾಗಿದೆ. ಇತ್ತೀಚೆಗೆ ಬಾಂಗ್ಲಾದೇಶ ಮೂಲದ ಪ್ರತ್ಯೇಕತಾ ಗುಂಪೊಂದರ ಜತೆ ಸಂಪರ್ಕವಿರುವ ಐವರನ್ನು ಬಂಧಿಸಲಾಗಿತ್ತು. ಅವರನ್ನು ವಿಚಾರಣೆಗೆ ಒಳಪಡಿಸಿದ ಬೆನ್ನಲ್ಲೇ, ಈ ಮದರಸಾ ನಾಶವಾಗಿದೆ. ಮದರಸಾಕ್ಕೆ ಅಲ್​ ಖೈದಾ ಉಗ್ರಸಂಘಟನೆಯೊಂದಿಗೆ ಲಿಂಕ್​ ಇದೆ. ಇಲ್ಲಿ ಉಗ್ರ ಚಟುವಟಿಕೆಗಳು ನಡೆಯುತ್ತವೆ ಎಂಬ ಆರೋಪದಡಿ ಮದರಸಾವನ್ನು ಕೆಡವಲಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

9. Mikhail Gorbachev | ಆಧುನಿಕ ರಷ್ಯದ ನಿರ್ಮಾತೃ ಮಿಖಾಯಿಲ್‌ ಗೊರ್ಬಚೆವ್ ನಿಧನ
ಆಧುನಿಕ ರಷ್ಯದ ರೂವಾರಿ, ದೇಶದ ಆರ್ಥಿಕ ಮುನ್ನಡೆಯ ಸ್ಫೂರ್ತಿಶಕ್ತಿಯಾಗಿದ್ದ ಮಾಜಿ ಅಧ್ಯಕ್ಷ ಮಿಖಾಯಿಲ್‌ ಗೊರ್ಬಚೆವ್ ಅವರು ತೀರಿಕೊಂಡಿದ್ದಾರೆ. ಮಿಖಾಯಿಲ್‌ ಗೊರ್ಬಚೆವ್ ಅವರಿಗೆ 91 ವರ್ಷ ವಯಸ್ಸಾಗಿತ್ತು. ಮಾಸ್ಕೋದ ಆಸ್ಪತ್ರೆಯಲ್ಲಿ ಸುದೀರ್ಘಕಾಲದ ಗಂಭೀರ ಅನಾರೋಗ್ಯದಿಂದ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
Mikhail Gorbachev | ಪಾಶ್ಚಿಮಾತ್ಯರಿಗೆ ಪ್ರಿಯ, ದೇಶದೊಳಗೆ ವಿವಾದಿತ, ಬದುಕು ವರ್ಣರಂಜಿತ

10. ವಿಸ್ತಾರ Money Guide | ಬ್ಯಾಂಕ್‌ಗಳಲ್ಲಿ ವಾರಸುದಾರರಿಲ್ಲದ ಹಣ 48,000 ಕೋಟಿ ರೂ!
ಪ್ರತಿಯೊಬ್ಬರೂ ಯಾವುದಾದರೂ ಮೂಲದಲ್ಲಿ ಹಣವನ್ನು ಉಳಿತಾಯ ಮಾಡಲು ಯತ್ನಿಸುತ್ತಾರೆ. ಆದರೆ ನಿಮಗೆ ಆಶ್ಚರ್ಯವಾಗಬಹುದು. ದೇಶದ ಬ್ಯಾಂಕ್‌ಗಳಲ್ಲಿ ೨೦೨೧-೨೨ರಲ್ಲಿ ಹೇಳುವವರು-ಕೇಳುವವರಿಲ್ಲದ ಅಥವಾ ವಾರಸುದಾರರಿಲ್ಲದ ಹಣದ ಮೊತ್ತ ೪೮,೦೦೦ ಕೋಟಿ ರೂ.ಗೆ ಏರಿಕೆಯಾಗಿದೆ. (೪೮,೨೬೨ ಕೋಟಿ ರೂ.) ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ ವರದಿಯೇ ಈ ವಿಷಯವನ್ನು ತಿಳಿಸಿದೆ. ಹಾಗಾದರೆ ಬ್ಯಾಂಕ್‌ ಖಾತೆಗಳಲ್ಲಿ ಈ ರೀತಿ ಅನ್‌ ಕ್ಲೇಮ್ಡ್‌ ಮೊತ್ತ ಹೇಗೆ ಉಂಟಾಗುತ್ತದೆ? ನಿಜವಾದ ವಾರಸುದಾರರು ಹೇಗೆ ಇದನ್ನು ಪಡೆಯಬಹುದು? (ವಿಸ್ತಾರ Money Guide) ಇಲ್ಲಿದೆ ವಿವರ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Exit mobile version