Site icon Vistara News

ವಿಸ್ತಾರ TOP 10 NEWS | ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಯಿಂದ ಡಲ್ಲಾಸ್‌ ಏರ್‌ ಶೋ ದುರಂತವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 13112022

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಿಂದ ಕೂದಲೆಳೆಯ ಅಂತರದಲ್ಲಿ ಜಯಿಸಿದ್ದ ಸಿದ್ದರಾಮಯ್ಯ ಅವರು ಈ ಬಾರಿ ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ದಾರೆ. ಹಾಗೂ ಸಿಎಂ ಆಗುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. ಡಯಾಬಿಟಿಸ್‌ ಔಷಧಗಳ ದರ ಕಡಿಮೆಯಾಗಲಿದೆ, T20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಚಾಂಪಿಯನ್‌ ಆಗಿದೆ, ಅಮೆರಿಕದ ಡಲ್ಲಾಸ್‌ನ ಏರ್‌ ಶೋ ವೇಳೆ ಸಂಭವಿಸಿದ ವಿಮಾನಗಳ ಡಿಕ್ಕಿಯಿಂದಾಗಿ 6 ಮಂದಿ ಮೃತಪಟ್ಟಿದ್ದಾರೆ ಎನ್ನುವುದೂ ಸೇರಿದಂತೆ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Siddaramaiah In Kolar | ಕೋಲಾರದಿಂದ ಗೆದ್ದು ಯಾಕೆ CM ಆಗಬಾರದು?: ಮತ್ತೊಮ್ಮೆ ಮುಖ್ಯಮಂತ್ರಿ ಕನಸು ಬಿಚ್ಚಿಟ್ಟ ಸಿದ್ದರಾಮಯ್ಯ
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಕುರಿತು ಮಾಜಿ ಸಿಎಂ ಘೋಷಣೆ ಮಾಡಿದ್ದಾರೆ. ಮತ್ತೆ ನಾಮಪತ್ರ ಸಲ್ಲಿಕೆ ಬರುತ್ತೇನೆ ಎಂದು ಹೇಳಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಅನೇಕ ದಿನಗಳಿಂದ ರಾಜ್ಯ ರಾಝಕೀಯದಲ್ಲಿ ನಡೆಯುತ್ತಿದ್ದ ಚರ್ಚೆಗೆ ಈ ಮೂಲಕ ತೆರೆ ಎಳೆದಿದ್ದಾರೆ. ಕೋಲಾರದಿಂದ ಜಯಿಸಿ ಮತ್ತೊಮ್ಮೆ ಯಾಕೆ ಸಿಎಂ ಆಗಬಾರದು ಎಂಬ ಕನಸನ್ನೂ ಬಿಚ್ಚಿಟ್ಟಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. ಕು.ಮು.ದ. ಲೆಕ್ಕದಲ್ಲಿ ಕೋಲಾರದಿಂದ ಸ್ಪರ್ಧೆ: ಸಿದ್ದರಾಮಯ್ಯ ಗೆಲುವಿಗೆ ನೂರೆಂಟು ತೊಡಕು; ಹಾಗಾದರೆ ಯಾರಿಗೆ ಲಾಭ?
ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ಅವಕಾಶವಿದ್ದರೂ ಅಲ್ಲಿನ ಗೆಲುವು ಅಷ್ಟು ಸುಲಭವಲ್ಲ ಎನ್ನುವುದು ಕಾಂಗ್ರೆಸ್‌ ಪಕ್ಷದಲ್ಲಿಯೇ ಕೇಳಿಬರುತ್ತಿರುವ ಮಾತು. ಕೋಲಾರ ಜಿಲ್ಲೆ ಒಟ್ಟಾರೆಯಾಗಿ ದಲಿತ ಪ್ರಾಬಲ್ಯವಿರುವ ಕ್ಷೇತ್ರ. ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳು ದಲಿತ ಮೀಸಲು ಕ್ಷೇತ್ರಗಳಾಗಿರುವುದೇ ಇದಕ್ಕೆ ಸಾಕ್ಷಿ. ತಾವು ಸಿಎಂ ಆಗಿದ್ದಾಗ ಎಸ್‌ಸಿಎಸ್‌ಟಿ ಸಮುದಾಯಕ್ಕೆ ನೀಡಿದ ಸೌಲಭ್ಯಗಳಿಂದಾಗಿ ಆ ಸಮುದಾಯ ತಮ್ಮ ಕೈ ಹಿಡಿಯುತ್ತದೆ, ಟಿಪ್ಪು ಜಯಂತಿ ಸೇರಿ ಅನೇಕ ವಿಚಾರಗಳಿಂದ ಮುಸ್ಲಿಂ ಸಮುದಾಯಕ್ಕೆ ಫೇವರಿಟ್‌ ಆಗಿದ್ದೇನೆ ಎಂದು ಸಿದ್ದರಾಮಯ್ಯ ನಂಬಿದ್ದಾರೆ. ಇನ್ನು ಕುರುಬ ಸಮುದಾಯ ತಮ್ಮನ್ನು ಬಿಟ್ಟುಕೊಡುವುದೇ ಇಲ್ಲ ಎನ್ನುವ ಖಾತ್ರಿ. ಕುರುಬ-ಮುಸ್ಲಿಂ-ದಲಿತ (ಕು.ಮು.ದ) ಕಾಂಬಿನೇಷನ್‌ನಲ್ಲಿ ಗೆದ್ದುಬರಬಹುದು ಎಂದು ಲೆಕ್ಕ ಹಾಕಿದ್ದಾರೆ. ಪೂರ್ಣ ವಿಶ್ಲೇಷಣೆಗಾಗಿ ಕ್ಲಿಕ್‌ ಮಾಡಿ.

3. Medicine price | ಡಯಾಬಿಟಿಸ್‌ ನಿಯಂತ್ರಣಕ್ಕೆ ಬಳಸುವ ಔಷಧಗಳ ದರ ಶೀಘ್ರ ಇಳಿಕೆ
ದೈನಂದಿನ ಬಳಕೆಯಲ್ಲಿರುವ ಹಲವಾರು ಔಷಧಗಳ ದರಗಳಲ್ಲಿ ಶೀಘ್ರ ( Medicine price ) ಇಳಿಕೆಯಾಗಲಿದೆ. ಡಯಾಬಿಟಿಸ್‌ (ಮಧುಮೇಹ), ಎಚ್‌ಐವಿ, ಹೆಪಟೈಟಿಸ್‌ ಸಿ ಚಿಕಿತ್ಸೆಯಲ್ಲಿ ಬಳಸುವ ಔಷಧಗಳು, ಕಾಂಡೋಮ್‌ ಸೇರಿದಂತೆ ಗರ್ಭ ನಿರೋಧಕಗಳ ದರಗಳಲ್ಲಿ ಇಳಿಕೆಯಾಗಲಿದೆ. ಸರ್ಕಾರವು ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿಯನ್ನು (NLEM) ಬಿಡುಗಡೆಗೊಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Swabhimani hindu| ಸತೀಶ್‌ ಜಾರಕಿಹೊಳಿ ತವರಲ್ಲೇ ನಡೆಯಲಿದೆ ಸೂಲಿಬೆಲೆ ನೇತೃತ್ವದ ನಾನೂ ಹಿಂದು ಸಮಾವೇಶ!
ಹಿಂದು ಶಬ್ದದ ಉತ್ಪತ್ತಿಯ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೊಳಗಾದ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರ ತವರಾದ, ಅವರು ಕಣವಾದ ಯಮಕನ ಮರಡಿಯಲ್ಲೇ ದೊಡ್ಡದೊಂದು ಸಮಾವೇಶಕ್ಕೆ ವೇದಿಕೆ ಅಣಿಯಾಗಿದೆ. ಹಿಂದು ಶಬ್ದಕ್ಕೆ ಪರ್ಶಿಯನ್‌ ಭಾಷೆಯಲ್ಲಿ ಕೀಳು ಎಂಬ ಅರ್ಥವಿದೆ ಎಂದು ಹೇಳಿದ್ದ ಸತೀಶ್‌ ಜಾರಕಿಹೊಳಿ ವಿರುದ್ಧ ಬಿಜೆಪಿಯ ನಾಯಕ, ಸಚಿವ ಸುನಿಲ್‌ ಕುಮಾರ್‌ ಮೊದಲ ದಿನವೇ ನಾನು ಸ್ವಾಭಿಮಾನಿ ಹಿಂದು ಎಂಬ ಆಂದೋಲನ ಆರಂಭಿಸಿದ್ದರು. ಮರುದಿನ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆದಿತ್ತು. ಇದರ ನಡುವೆ ಸತೀಶ್‌ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ವಿಷಾದ ಸೂಚಿಸಿದ್ದರು. ಅದಾದ ಬಳಿಕ ಬಿಜೆಪಿ ಈ ವಿಚಾರದಲ್ಲಿ ಸ್ವಲ್ಪ ತಣ್ಣಗಾಗಿದೆ. ಆದರೆ, ಈಗ ಈ ವಿಚಾರವನ್ನು ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ಎತ್ತಿಕೊಂಡಂತೆ ಕಾಣುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. T20 World Cup | ಪಾಕಿಸ್ತಾನ ತಂಡವನ್ನು ಮಣಿಸಿದ ಇಂಗ್ಲೆಂಡ್‌ ಟಿ20 ವಿಶ್ವ ಚಾಂಪಿಯನ್‌
ಫೈನಲ್‌ ಹಣಾಹಣಿಯಲ್ಲಿ ಪಾಕಿಸ್ತಾನ ವಿರುದ್ಧ ೫ ವಿಕೆಟ್‌ಗಳ ಗೆಲುವು ಸಾಧಿಸಿದ ಇಂಗ್ಲೆಂಡ್‌ ತಂಡ ಟಿ೨೦ ವಿಶ್ವ ಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಆಂಗ್ಲರ ಪಡೆಗೆ ಇದು ಎರಡನೇ ಚುಟುಕು ಕ್ರಿಕೆಟ್‌ನ ವಿಶ್ವ ಕಪ್‌ ಆಗಿದ್ದು, ಈ ಹಿಂದೆ ೨೦೧೦ರಲ್ಲಿ ಇಂಗ್ಲೆಂಡ್‌ ತಂಡ ಚಾಂಪಿಯನ್‌ಪಟ್ಟ ಅಲಂಕರಿಸಿತ್ತು. ಅದೇ ರೀತಿ ೧೨ ವರ್ಷಗಳ ಅವಧಿಯಲ್ಲಿ ಮೂರನೇ ವಿಶ್ವ ಕಪ್‌ ಟ್ರೋಫಿ ಗೆದ್ದಂತಾಗಿದೆ. ೨೦೧೯ರಲ್ಲಿ ಇಯಾನ್‌ ಮಾರ್ಗನ್‌ ನೇತೃತ್ವದ ಇಂಗ್ಲೆಂಡ್ ತಂಡ ಏಕ ದಿನ ವಿಶ್ವ ಕಪ್‌ ಗೆದ್ದಿತ್ತು. ಹಾಲಿ ನಾಯಕ ಜೋಸ್‌ ಬಟ್ಲರ್‌ಗೆ ಚೊಚ್ಚಲ ನಾಯಕತ್ವದಲ್ಲೇ ವಿಶ್ವ ಕಪ್‌ ಲಭಿಸಿದ್ದು, ಈ ಮೂಲಕವೂ ಅವರು ದಾಖಲೆ ಮಾಡಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Nalini Sriharan | ರಾಜೀವ್‌ ಗಾಂಧಿ ಹತ್ಯೆ ಕೇಸ್‌ನಲ್ಲಿ ಜೈಲಿನಿಂದ ಹೊರಬಂದ ನಳಿನಿ ಶ್ರೀಹರನ್‌ ಹೇಳಿದ್ದೇನು?
ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ (Rajiv Gandhi Assassination) ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ನಳಿನಿ ಶ್ರೀಹರನ್‌ (Nalini Sriharan) ಸೇರಿ ಆರು ಜನರನ್ನು ಸುಪ್ರೀಂ ಕೋರ್ಟ್‌ ಆದೇಶದಂತೆ ಶನಿವಾರ (ನವೆಂಬರ್‌ 12) ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ. ನಳಿನಿ ಶ್ರೀಹರನ್‌ ಜತೆಗೆ ಆಕೆಯ ಪತಿ ಮುರುಗನ್, ಸಂತನ್‌, ರಾಬರ್ಟ್, ಪಯಾಸ್ ಹಾಗೂ ಜಯಕುಮಾರ್ ಎಂಬುವರನ್ನು ತಮಿಳುನಾಡಿನ ಜೈಲುಗಳಿಂದ ಬಂಧಮುಕ್ತಗೊಳಿಸಲಾಗಿದೆ.
ಮಾಜಿ ಪ್ರಧಾನಿಯ ಹತ್ಯೆ ಪ್ರಕರಣದಲ್ಲಿ 31 ವರ್ಷ ಜೈಲು ಶಿಕ್ಷೆ ಅನುಭವಿಸಿದ ಬಳಿಕ ಬಿಡುಗಡೆಯಾಗಿ ಬಂದ ನಳಿನಿ ಶ್ರೀಹರನ್‌ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. “ಜೈಲಿನಿಂದ ಹೊರಬಂದಿರುವುದು ನನಗೆ ಹೊಸ ಜೀವನ ಸಿಕ್ಕಂತಾಗಿದೆ” ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ಪಂಚಪೀಠಗಳು, ಕೈ, ಕಮಲ ಪಕ್ಷಗಳ ವಿರುದ್ಧ ಅಸಮಾಧಾನದ ವಿಡಿಯೋ ವೈರಲ್; ಸತ್ಯ ಹೇಳಿದ್ದೇನೆ‌ ಎಂದ ವಚನಾನಂದ ಶ್ರೀ
ಪಂಚಪೀಠಗಳು, ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ಅಸಮಾಧಾನದ ವಿಡಿಯೋ ವೈರಲ್ ವಿಚಾರಕ್ಕೆ ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಪ್ರತಿಕ್ರಿಯಿಸಿದ್ದು, ನಾನು ಸತ್ಯವನ್ನೇ ಹೇಳಿದ್ದೇನೆ. ಹೇಳಿದ್ದರಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ನಮ್ಮ ಭಕ್ತರು ಕೇಳಿದ ಪ್ರಶ್ನೆಗೆ ನಾನು ಉತ್ತರ ಕೊಟ್ಟಿದ್ದೇನೆ. ಇದರಲ್ಲಿ ಯಾವುದೇ ರೀತಿಯ ವಿವಾದ ಇಲ್ಲ ಎಂದು ತಿಳಿಸಿದ್ದಾರೆ.
ಗದಗ ಜಿಲ್ಲೆಯ ಯಳವತ್ತಿ ಗ್ರಾಮದಲ್ಲಿ ಶನಿವಾರ ನಡೆದ ಸಭೆಯಲ್ಲಿ ಪಂಚಪೀಠಾಧಿಪತಿಗಳ ವಿರುದ್ಧ ವಚನಾನಂದ ಸ್ವಾಮೀಜಿ ಆಕ್ರೋಶ ಹೊರಹಾಕಿದ್ದ ವಿಡಿಯೊ ವೈರಲ್‌ ಆಗಿತ್ತು. ರಾಜ್ಯದಲ್ಲಿ 3-4 ಸಾವಿರ ಮಠಗಳು ಇದ್ದವು. ಎಲ್ಲ ಮಠಗಳ ಶ್ರೀಗಳು ಇದ್ದರು. ಅವರಿಗೆ ದಾನ ಧರ್ಮ ಮಾಡುತ್ತಿದ್ದೆವು. ಅವರೇ ನಮ್ಮ ಗುರುಗಳು ಎಂದು ತಿಳಿದುಕೊಂಡಿದ್ದೆವು. ಹೀಗಿದ್ದ ಮೇಲೆಯೂ ಮತ್ತೆ ಪಂಚಮಸಾಲಿ ಪೀಠ ಮಾಡಬೇಕಿತ್ತು ಎಂಬುದನ್ನು ವಿವರಿಸಿದ್ದ ಅವರು, ಮೀಸಲಾತಿಗಾಗಿಯೇ ಪಂಚಮಸಾಲಿ ಜಗದ್ಗುರು ಪೀಠ ಸ್ಥಾಪನೆಯಾಗಿತ್ತು ಎಂದು ವಿಡಿಯೋದಲ್ಲಿ ಹೇಳಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. ಸಾಕು ನಾಯಿಗಳು ಕಚ್ಚಿದರೆ ಅದರ ಮಾಲೀಕರಿಗೆ 10 ಸಾವಿರ ರೂ.ದಂಡ; ನೊಯ್ಡಾದಲ್ಲಿ ಶೀಘ್ರದಲ್ಲೇ ಈ ನಿಯಮ ಜಾರಿ !
ನೊಯ್ಡಾದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕುನಾಯಿಗಳ ದಾಳಿ ಹೆಚ್ಚುತ್ತಿದೆ. ಉತ್ತರ ಪ್ರದೇಶದ ಗ್ರೇಟರ್​ ನೊಯ್ಡಾದಲ್ಲಿ ಸೆಕ್ಯೂರಿಟಿ ಗಾರ್ಡ್​​ವೊಬ್ಬರಿಗೆ, ಮನೆಯೊಂದರಲ್ಲಿ ಸಾಕಿದ ನಾಯಿ ಕಚ್ಚಿತ್ತು. ಬೀದಿ ನಾಯಿಗಳು ಬಿಡಿ, ಒಬ್ಬರ ಮನೆಯಲ್ಲಿ ಸಾಕಿದ ನಾಯಿ, ಇನ್ನೊಂದು ಮನೆಯವರನ್ನು ಕಚ್ಚುವುದು, ದಾರಿ ಹೋಕರ ಮೇಲೆ ದಾಳಿಮಾಡುವುದೆಲ್ಲ ಇಲ್ಲಿ ಹೆಚ್ಚಾಗುತ್ತಿದೆ. ಹೀಗಾಗಿ ನೊಯ್ಡಾ ಆಡಳಿತ ಅಲ್ಲಿ ನಾಯಿ-ಬೆಕ್ಕು ಸಾಕುವ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ತಂದಿದೆ. ‘ಯಾರೇ ಸಾಕಿದ ನಾಯಿ-ಬೆಕ್ಕುಗಳು ಇನ್ನೊಬ್ಬರ ಮೇಲೆ ದಾಳಿ ಮಾಡುವುದು, ಕಚ್ಚುವುದು ಮಾಡಿದರೆ, ಅವುಗಳ ಮಾಲೀಕರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಲು ನೊಯ್ಡಾ ಪ್ರಾಧಿಕಾರದ ಸಿಇಒ ರಿತು ಮಹೇಶ್ವರಿ ನಿರ್ಧರಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ಉಸಿರು ನಿಲ್ಲಿಸಿದ ಮೇಲೆ ಇಬ್ಬರ ಜೀವ ಉಳಿಸಿದ 18 ತಿಂಗಳ ಮಗು; ದಿಕ್ಕೇ ತೋಚದ ಸಮಯದಲ್ಲೂ ಸಾರ್ಥಕ ಹೆಜ್ಜೆ ಇಟ್ಟ ಪಾಲಕರು
18 ತಿಂಗಳ ಪುಟ್ಟ ಮಗು ಮಹಿರಾ, ತಾನು ಜೀವ ಬಿಟ್ಟು, ಇಬ್ಬರು ರೋಗಿಗಳನ್ನು ಬದುಕಿಸಿದೆ. ಹರ್ಯಾಣದ ಮೇವಾತ್​​​ನ ಈ ಹೆಣ್ಣು ಮಗು ನವೆಂಬರ್​ 6ರಂದು ಬಾಲ್ಕನಿಯಿಂದ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿತ್ತು. ಮಗುವನ್ನು ದೆಹಲಿಯ ಏಮ್ಸ್​ಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಯ ನಂತರವೂ ಅದು ಸುಧಾರಿಸಿಕೊಳ್ಳಲಿಲ್ಲ. ಈ ಮಗುವಿಗೆ ಮಿದುಳು ನಿಷ್ಕ್ರಿಯ(Brain Dead)ವಾಗಿದೆ ಎಂದು ನವೆಂಬರ್​ 11ರಂದು ವೈದ್ಯರು ತಿಳಿಸಿದರು. ವೈದ್ಯರ ಮಾತಿನಿಂದ ಕುಟುಂಬಕ್ಕೆ ದಿಗಿಲಾಯಿತು. ದಿಕ್ಕೇ ತೋಚದಂತೆ ಕುಳಿತಿದ್ದ ಪಾಲಕರು ಆ ಹೊತ್ತಲ್ಲೂ ಒಂದು ಮಹತ್ವದ ನಿರ್ಧಾರ ಮಾಡಿ, ಮಗುವಿನ ಅಂಗಾಂಗ ದಾನ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Dallas Airshow | ಡಲ್ಲಾಸ್ ಏರ್​ಶೋನಲ್ಲಿ ದುರಂತ; 2ನೇ ವಿಶ್ವಯುದ್ಧ ಕಾಲದ ವಿಮಾನಗಳ ಡಿಕ್ಕಿ, 6 ಮಂದಿ ಸಾವು
ಟೆಕ್ಸಾಸ್​ನ ಡಲ್ಲಾಸ್​​ ಎಕ್ಸಿಕ್ಯೂಟಿವ್​ ಏರ್​ಪೋರ್ಟ್​​ನಲ್ಲಿ ನಡೆದ ವೈಮಾನಿಕ ಹಾರಾಟ ಪ್ರದರ್ಶನದ ವೇಳೆ ಎರಡು ವಿಮಾನಗಳು ಡಿಕ್ಕಿಹೊಡೆದು ದೊಡ್ಡ ಅವಘಡ ನಡೆದಿದೆ. ಈ ಘಟನೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. 2ನೇ ವಿಶ್ವಯುದ್ಧದ ಸ್ಮರಣಾರ್ಥವಾಗಿ ಈ ಏರ್​ಶೋ ನಡೆದಿತ್ತು. (ಇದನ್ನು ಅಮೆರಿಕದ ಪ್ರೀಮಿಯರ್​ ವರ್ಲ್ಡ್​​ ವಾರ್​ ಏರ್​ಶೋ ಎಂದೇ ಕರೆಯಲಾಗುತ್ತದೆ). ಸುಮಾರು 40 ವಿಮಾನಗಳು ವೈಮಾನಿಕ ಹಾರಾಟ ಪ್ರದರ್ಶನ ನಡೆಸುತ್ತಿದ್ದವು. ವೀಕೆಂಡ್ ಆಗಿದ್ದರಿಂದ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

🔴 Election 2023 | 25 ಕ್ಷೇತ್ರಗಳಲ್ಲಿ ಶ್ರೀರಾಮ ಸೇನೆಯ ಪ್ರಖರ ಹಿಂದುತ್ವವಾದಿಗಳ ಸ್ಪರ್ಧೆ: ಮುತಾಲಿಕ್‌ ಘೋಷಣೆ
🔴 Bengaluru airport | ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಮೊದಲ ಬಾರಿಗೆ 3 ಫುಲ್‌ ಬಾಡಿ ಸ್ಕ್ಯಾನರ್‌ ಅಳವಡಿಕೆ
🔴 ಶಬ್ದಸ್ವಪ್ನ ಅಂಕಣ | ಗೋಕರ್ಣವೆಂಬ ಸ್ಮೃತಿ ಸಮುದ್ರ
🔴 ಪೋಸ್ಟ್‌ ಬಾಕ್ಸ್‌ 143 ಅಂಕಣ | ಪ್ರತಿಕ್ರಿಯೆಯಲ್ಲ, ಕ್ರಿಯೆಯಾಗು ಒಂದು ದಿನ
🔴 ಮುಸಲ್ಮಾನರಿಗೆ ಅಬ್ದುಲ್‌ ಕಲಾಂ ಬೇಕಿಲ್ಲ; ಟಿಪ್ಪುವೇ ಅವರಿಗೆ ಹೀರೊ: ಡಾ. ಎಸ್‌. ಎಲ್‌. ಭೈರಪ್ಪ ಆಕ್ರೋಶ

Exit mobile version