ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವಂತೆ ಹೊಸ ವಿವಾದಗಳು ಸೃಷ್ಟಿಯಾಗುತ್ತಿರುವ ಬೆನ್ನಿಗೇ, ಕಳೆದ ಚುನಾವಣೆ ನಂತರ ತಣ್ಣಗಾಗಿದ್ದ ಟಿಪ್ಪು ವಿವಾದ ಮರು ಜೀವ ಪಡೆದಿದೆ. ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿಗಳನ್ನು ಆಹ್ವಾನಿಸದ ಕುರಿತು ಜೆಡಿಎಸ್ ಅಸಮಾಧಾನಗೊಂಡಿದೆ, ಮತಾಂತರಿತರಿಗೆ ಮೀಸಲಾತಿ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ, ಬೆಂಗಳೂರಿನಲ್ಲಿ ದಿನೇದಿನೇ ವಿದ್ಯಾರ್ಥಿಗಳ ಆತ್ಮಹತ್ಯೆ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕ ಸೃಷ್ಟಿಸಿದೆ, ಹಿಮಾಚಲ ಪ್ರದೇಶದಲ್ಲಿ ಚುನಾವಣೆ ಮುಕ್ತಾಯವಾಗಿದೆ, ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. Suicide | ನಗರದಲ್ಲಿ ಹೆಚ್ಚಾಯ್ತು ಮಕ್ಕಳ ಆತ್ಮಹತ್ಯೆ; 72 ಗಂಟೆಯಲ್ಲಿ ಮೂವರ ಮೃತ್ಯು; ತಿಂಗಳಿಗೆ 300ರಂತೆ ಸಾವಿನ ಕದ ತಟ್ಟುತ್ತಿರುವ ಮಂದಿ!
ರಾಜಧಾನಿ ನಗರ ಭಾಗದಲ್ಲಿ ಮಕ್ಕಳು ಆತ್ಮಹತ್ಯೆ (Suicide) ಯತ್ನ ಪ್ರಕರಣಗಳು ಹೆಚ್ಚಾಗುತ್ತಿವೆ. ಚಿಕ್ಕ ಪುಟ್ಟ ವಿಷಯಕ್ಕೂ ಸಾಯುವ ಯೋಚನೆ ಮಾಡುತ್ತಿರುವವರಲ್ಲಿ ವಿದ್ಯಾರ್ಥಿಗಳ ಸಹಿತ ಯುವಜನತೆಯೇ ಪಾಲೇ ಹೆಚ್ಚಿದೆ. ಶಾಲೆಯಲ್ಲಿ ಬೈದರು ಎಂಬ ಕಾರಣಕ್ಕೆ ಒಬ್ಬ ವಿದ್ಯಾರ್ಥಿ, ಮೊಬೈಲ್ ಸಿಗಲಿಲ್ಲ ಎಂಬುದಕ್ಕೆ ವಿದ್ಯಾರ್ಥಿನಿ, ತಂದೆ ಬೈದಿದ್ದಕ್ಕೆ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರೋಗ್ಯ ಇಲಾಖೆ ಸಂಗ್ರಹಿಸಿರುವ ಅಂಕಿ-ಅಂಶದಲ್ಲಿ ವಿಷಯ ಬಹಿರಂಗವಾಗಿದ್ದು, ದಿನಕ್ಕೆ ಸರಾಸರಿ 10 ಮಂದಿ ಆತ್ಮಹತ್ಯೆಗೆ ಯತ್ನಿಸುತ್ತಿರುವುದು ಕಂಡು ಬಂದಿದೆ. ಇದು ಬೆಂಗಳೂರಿನ ಟಾಪ್ ಐದು ಸರ್ಕಾರಿ ಆಸ್ಪತ್ರೆಗಳಲ್ಲಿ ಕಂಡುಬರುತ್ತಿರುವ ಆತ್ಮಹತ್ಯೆ ಯತ್ನ ಪ್ರಕರಣಗಳು ಮಾತ್ರವೇ ಆಗಿದೆ. ಇನ್ನು ಉಳಿದ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳಲ್ಲಿ ಕಂಡುಬರುವ ಪ್ರಕರಣಗಳು ಲೆಕ್ಕಕ್ಕೆ ಸಿಕ್ಕಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Modi In Bengaluru | CM ಫೋನ್ ಮಾಡಿ 3 ಗಂಟೆಯ ನಂತರ ಎಚ್.ಡಿ. ದೇವೇಗೌಡರಿಗೆ ಬಂತಾ ಇನ್ವಿಟೇಷನ್?
ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಆಹ್ವಾನಿಸದೇ ಇರುವುದನ್ನು ಜೆಡಿಎಸ್ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಶನಿವಾರವೂ ಎಂಟು ಸರಣಿ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಹರಿಹಾಯ್ದಿದೆ. ರಧಾನಿ ಸ್ಥಾನಕ್ಕೇರಿದ ಮೊದಲ ಹಾಗೂ ಇಲ್ಲಿವರೆಗಿನ ಏಕೈಕ ಕನ್ನಡಿಗ ಎಂಬ ಹೆಗ್ಗಳಿಕೆ ಹೊಂದಿರುವ ದೇವೇಗೌಡರನ್ನು ಆಹ್ವಾನಿಸದೇ ಇರುವುದಕ್ಕೆ ಶುಕ್ರವಾರ ಸರಣಿ ಟ್ವೀಟ್ ಮೂಲಕ ಹರಿಹಾಯ್ದಿದ್ದ ಜೆಡಿಎಸ್, ಶನಿವಾರವೂ ಮುಂದುವರಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Modi In Bengaluru | ಅಧಿಕಾರದಲ್ಲಿ ಗೂಟ ಹೊಡ್ಕೊಂಡು ಕೂತಿರ್ತೀರ?: ಕೆಂಪೇಗೌಡರ ಪ್ರತಿಮೆ ಎದುರು BJP ವಿರುದ್ಧ ಗುಡುಗಿದ ಶರವಣ
3. ಹಿಂದು ವಿವಾದ ಬೆನ್ನಲ್ಲೇ ಟಿಪ್ಪು ಪ್ರತಿಮೆಯ ಕಿಡಿ; ಕಾಂಗ್ರೆಸ್ ನಾಯಕರಿಗೆ ಚೆಲ್ಲಾಟ, ಡಿಕೆಶಿಗೆ ಸಂಕಟ!
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೃಷ್ಟಿಸಿದ ಹಿಂದೂ ವಿವಾದ ತಣಿಯುವ ಮೊದಲೇ ಕಾಂಗ್ರೆಸ್‌ಗೆ ಈಗ ಟಿಪ್ಪು ಅಗ್ನಿ ಪರೀಕ್ಷೆ ಎದುರಾಗಿದೆ. ಮೈಸೂರಿನಲ್ಲಿ ಟಿಪ್ಪು ಪ್ರತಿಮೆ ಸ್ಥಾಪಿಸುವುದಾಗಿ ಶಾಸಕ ತನ್ವೀರ್ ಸೇಠ್ ಘೋಷಿಸಿರುವ ಬೆನ್ನಿಗೇ ಸಿದ್ದರಾಮಯ್ಯ, ಎಂ.ಬಿ. ಪಾಟೀಲ್, ಚಲುವರಾಯಸ್ವಾಮಿ ಸೇರಿದಂತೆ ಕಾಂಗ್ರೆಸ್‌ನ ಕೆಲವು ಕಾಂಗ್ರೆಸ್ ನಾಯಕರು ಟಿಪ್ಪು ಪ್ರತಿಮೆ ಪರವಾಗಿ ಮಾತನಾಡಿದ್ದಾರೆ. ಇದು ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. ಕ್ರೈಸ್ತ, ಇಸ್ಲಾಂಗೆ ಮತಾಂತರಗೊಂಡ ದಲಿತರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಲು ಸಾಧ್ಯವೇ ಇಲ್ಲ: ಸುಪ್ರೀಂಗೆ ಹೇಳಿದ ಕೇಂದ್ರ ಸರ್ಕಾರ
ಹಿಂದು ಧರ್ಮದಲ್ಲಿರುವ ದಲಿತರು ಇಸ್ಲಾಂ, ಕ್ರೈಸ್ತರಾಗಿ ಮತಾಂತರಗೊಂಡ ಬಳಿಕವೂ ಅವರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ಕೊಟ್ಟು, ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ತಿಳಿಸಿದೆ. ಆ ಎರಡು ಧರ್ಮಗಳಲ್ಲಿ ಹಿಂದುಳಿದ ವರ್ಗವಾಗಲೀ, ಶೋಷಣೆಯಾಗಲೀ ಇಲ್ಲದ ಕಾರಣ, ಹಿಂದು ಧರ್ಮದಿಂದ ಅಲ್ಲಿಗೆ ಮತಾಂತರಗೊಂಡವರಿಗೆ ಪರಿಶಿಷ್ಟ ಜಾತಿ ಸ್ಥಾನಮಾನವನ್ನಾಗಲೀ, ಮೀಸಲಾತಿಯನ್ನಾಗಲೀ ವಿಸ್ತರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. ವಿಸ್ತಾರ Special | ಕನ್ನಡಿಗ ಅರುಣ್ ಯೋಗಿರಾಜ್ ನಿರ್ಮಿಸಿದ ನೇತಾಜಿ ಪ್ರತಿಮೆ ತನ್ನದು ಎಂದ ರಾಜಸ್ಥಾನಿ ಶಿಲ್ಪಿ !
ನವದೆಹಲಿಯ ಕರ್ತವ್ಯಪಥದಲ್ಲಿ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್‌ಚಂದ್ರ ಬೋಸ್ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದು ಎಲ್ಲರಿಗೂ ತಿಳಿದೇ ಇದೆ. ಇದೇ ವರ್ಷದ ಸೆಪ್ಟೆಂಬರ್ 8 ರಂದು ಲೋಕಾರ್ಪಣೆಗೊಂಡ ಪ್ರತಿಮೆಯನ್ನು ಕನ್ನಡಿಗ, ಮೈಸೂರಿನ ಯುವ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಾಣ ಮಾಡಿದ್ದು ಎನ್ನುವುದೂ ಪ್ರಚಾರವಾಗಿದೆ. ಆದರೆ, ನೇತಾಜಿ ಪ್ರತಿಮೆಯನ್ನು ತಾನೇ ನಿರ್ಮಿಸಿದ್ದು ಎಂದು ರಾಜಸ್ಥಾನ ಮೂಲದ ಶಿಲ್ಪಿ ಹೇಳಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಕುರಿತು ಸ್ವತಃ ಅರುಣ್ ಯೋಗಿರಾಜ್ ವ್ಯಗ್ರರಾಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ಸವಿಸ್ತಾರ ಅಂಕಣ | ಇವರೆಲ್ಲ ತಮ್ಮನ್ನು ತಾವು ʼಸಂವಿಧಾನದ ಕಾಲಾಳುʼ ಎಂದುಕೊಂಡಿರುವುದೇ ವಿಪರ್ಯಾಸ
ಕಾಂಗ್ರೆಸ್‌ನ ಹಿರಿಯ ನಾಯಕರು, ಯಮಕನಮರಡಿ ಶಾಸಕರು, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಸತೀಶ್ ಜಾರಕಿಹೊಳಿ ಅವರು ಹಿಂದೂ ಪದದ ಅರ್ಥವನ್ನು ವ್ಯಾಖ್ಯಾನಿಸಲು ಮುಂದಾಗಿದ್ದಾರೆ. ವಿಕಿಪೀಡಿಯಾದಲ್ಲಿ ಓದಿದ್ದ ಇಲ್ಲವೇ ಯಾರೋ-ಏನೋ ಓದಿದ ಒಂದಿಷ್ಟು ಸಂಗತಿಗಳ ಮೂಲಕ, ಹಿಂದೂ ಪದದ ಹುಟ್ಟನ್ನೇ ಕಟಕಟೆಗೆ ಎಳೆದಿದ್ದಾರೆ!
ಭಾರತದಲ್ಲಿ ಎಲ್ಲ ಚಿಂತನೆಗಳಿಗೂ ಅವಕಾಶವಿದೆ. ಹಿಂದೂ ಧರ್ಮದ ಕುರಿತು ಪ್ರಶ್ನೆ ಎತ್ತಿದ ಕೂಡಲೆ ಅವರೊಬ್ಬ ʻದೇಶ ವಿರೋಧಿ’, ʻಹಿಂದೂ ವಿರೋಧಿ’ ಎಂದು ಜರಿಯಬೇಕಿಲ್ಲ. ಆದರೆ, ಇಷ್ಟು ದೊಡ್ಡ ಸಮಾಜದ ಅಸ್ತಿತ್ವವನ್ನೇ ಪ್ರಶ್ನಿಸುವ ಮುನ್ನ ಸಿದ್ಧತೆಯೂ ಇರಬೇಕಲ್ಲ? ಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ.
7. Himachal Pradesh Polls | ಹಿಮಾಚಲದಲ್ಲಿ ಚುನಾವಣೆ ಅಂತ್ಯ, ಶೇ.65ರಷ್ಟು ಮತದಾನ
ಹಿಮಾಚಲ ಪ್ರದೇಶದಲ್ಲಿ ಶನಿವಾರ ಶಾಂತಿಯುತವಾಗಿ ಮತದಾನ (Himachal Pradesh Polls) ನಡೆದಿದ್ದು, ಸಂಜೆ 5 ಗಂಟೆವರೆಗೆ ಶೇ.65.92ರಷ್ಟು ಮತದಾನ ದಾಖಲಾಗಿದೆ. ಬೆಳಗ್ಗೆಯಿಂದಲೇ ಮತದಾರರು ಮತಗಟ್ಟೆಗಳಿಗೆ ತೆರಳಿ ಹಕ್ಕು ಚಲಾಯಿಸಿದರು. ಇದರೊಂದಿಗೆ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದ್ದು, ಡಿಸೆಂಬರ್ 8ರಂದು ಪ್ರಕಟವಾಗುವ ಫಲಿತಾಂಶ ಕುತೂಹಲ ಕೆರಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Team India | ಯುವ ಆಟಗಾರರಿಗೆ ಆದ್ಯತೆ, ಹಿರಿಯರಿಗೆ ಕೊಕ್; ಬಿಸಿಸಿಐ ಯೋಜನೆ ರೆಡಿ
ಇಂಗ್ಲೆಂಡ್ ವಿರುದ್ಧದ ವಿಶ್ವ ಕಪ್ ಸೆಮಿಫೈನಲ್‌ನಲ್ಲಿ ಭಾರತ ತಂಡದ (Team India) ಸೋಲು ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಬಿಸಿಸಿಐ ಅನ್ನು ತಲ್ಲಣಗೊಳಿಸಿದೆ. ಹೀಗಾಗಿ ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಹಾಗೂ ಚುಟುಕು ಕ್ರಿಕೆಟ್‌ನಲ್ಲಿ ಉತ್ತಮ ತಂಡವೊಂದನ್ನು ರಚಿಸಲು ಬಿಸಿಸಿಐ ಯೋಜನೆ ರೂಪಿಸಿಕೊಂಡಿದೆ. ಅದಕ್ಕಾಗಿ ಮುಂದಿನ ವರ್ಷದಲ್ಲಿ ಹಿರಿಯ ಆಟಗಾರರಿಗೆ ತಂಡದಿಂದ ಕೊಕ್ ಕೊಟ್ಟು, ಯುವ ಆಟಗಾರರನ್ನು ಸೇರ್ಪಡೆಗೊಳಿಸುವುದಕ್ಕಾಗಿ ತಂತ್ರ ರೂಪಿಸಿಕೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Doctor Death | ಲ್ಯಾಂಡ್ ಜಿಹಾದ್‌ಗೆ ಬಲಿಯಾದರೇ ಗಡಿನಾಡ ದಂತವೈದ್ಯ?
ಗಡಿನಾಡಿನಲ್ಲಿ ಸದ್ದಿಲ್ಲದೆ ನಡೆಯುತ್ತಿರುವ ʻಲ್ಯಾಂಡ್ ಜಿಹಾದ್ʼಗೆ ಗಡಿನಾಡ ದಂತ ವೈದ್ಯ, ಬದಿಯಡ್ಕದ ಡಾ.ಕೃಷ್ಣಮೂರ್ತಿ ಬಲಿಯಾದರೇ ಎಂಬ ಅನುಮಾನ ಮೂಡಿದೆ. ಈ ಬಗ್ಗೆ ಸಾರ್ವಜನಿಕ ಪ್ರತಿಭಟನೆ ನಡೆದಿದ್ದು, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ.
ಮಂಗಳೂರು ಗಡಿ ಭಾಗದ ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಕಳೆದ 30 ವರ್ಷಗಳಿಂದ ದಂತ ವೈದ್ಯರಾಗಿ ಖ್ಯಾತಿ ಗಳಿಸಿದ್ದ ಡಾ.ಕೃಷ್ಣಮೂರ್ತಿ ಅವರು ನವೆಂಬರ್ 8ರಂದು ನಾಪತ್ತೆಯಾಗಿ ನ.10ರಂದು ಶವವಾಗಿ ಪತ್ತೆಯಾಗಿದ್ದರು. ಉಡುಪಿ ಜಿಲ್ಲೆ ಕುಂದಾಪುರದ ಹಟ್ಟಿಯಂಗಡಿ ಬಳಿ ರೈಲ್ವೇ ಹಳಿಯಲ್ಲಿ ಶವ ಪತ್ತೆಯಾಗಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. ವಾರದ ವ್ಯಕ್ತಿ ಚಿತ್ರ | ರಾಮ್- ಅನಿಲ್ ಸುತಾರ್ ಶಿಲ್ಪಿಗಳ ಖ್ಯಾತಿ ಜಗದಗಲ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ನಿರ್ಮಾಣವಾಗಿರುವ 108 ಅಡಿ ಎತ್ತರದ ಭವ್ಯ ಕೆಂಪೇಗೌಡ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದರು. ಈ ಪ್ರತಿಮೆಯ ಸೃಷ್ಟಿಯ ಹಿಂದಿನ ಕರ್ತೃ ಅನಿಲ್ ಸುತಾರ್. ಶಿಲ್ಪಿಯಾಗಿ ಜಗತ್ತಿನಾದ್ಯಂತ ದೊಡ್ಡ ಹೆಸರು ಮಾಡಿರುವ ರಾಮ ಸುತಾರ್ ಅವರ ಪುತ್ರ. ಅವರ ಬಗ್ಗೆ ಇಲ್ಲಿದೆ ವ್ಯಕ್ತಿಚಿತ್ರ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳು
🔴 Youth attacked| ಶೌಚಾಲಯಕ್ಕೆ ಹೋಗುವ ಮಹಿಳೆಯರ ವಿಡಿಯೊ ಮಾಡಿದ ಕಾಮುಕನಿಗೆ ಧರ್ಮದೇಟು
🔴 Suicide | ಜೀವನದಲ್ಲಿ ಜಿಗುಪ್ಸೆಗೊಂಡು ರೈಲಿಗೆ ತಲೆಕೊಟ್ಟ ವ್ಯಕ್ತಿ; ಮೋಸ ಹೋಗಿದ್ದಕ್ಕೆ ಉಪನ್ಯಾಸಕಿ ಆತ್ಮಹತ್ಯೆ
🔴 Kantara Movie | ʻವರಾಹ ರೂಪಂʼ ಹಾಡು ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್‌ನಿಂದ ಡಿಲೀಟ್!
🔴 ಧವಳ ಧಾರಿಣಿ ಅಂಕಣ | ರಾಮಾಯಣದಲ್ಲಿ ಗುಣಗೌರವಗಳಿಗೆ ಮೆರುಗನ್ನಿತ್ತ ಪಾತ್ರ ಸುಮಿತ್ರೆ
🔴 Blackmail | ಖಾಸಗಿ ವಿಡಿಯೊ: ಸಿಸಿಬಿ ಪೊಲೀಸರ ಹೆಸರಿನಲ್ಲಿ ಗೆಳೆಯನಿಗೇ ಖೆಡ್ಡಾ! 15 ಲಕ್ಷ ರೂ., ಚಿನ್ನ ಸುಲಿಗೆ!