Site icon Vistara News

ವಿಸ್ತಾರ TOP 10 NEWS | ಮತಾಂತರ ಕುರಿತು ʼಸುಪ್ರೀಂʼ ಕಳವಳದಿಂದ ದೆಹಲಿ ಯುವತಿಯ ಭೀಭತ್ಸ ಹತ್ಯೆವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 14112022

ಬೆಂಗಳೂರು: ದೇಶಾದ್ಯಂತ ಬಲವಂತದ ಮತಾಂತರ ನಡೆಯುತ್ತಿರುವುದರ ಕುರಿತು ಸುಪ್ರೀಂಕೋರ್ಟ್‌ ಆತಂಕ ವ್ಯಕ್ತಪಡಿಸಿದ್ದು, ಇದು ದೇಶದ ಭದ್ರತೆಗೆ ಅಪಾಯ ಎಂದಿದೆ. ನಂದಿನ ಹಾಲಿನ ದರ ಹೆಚ್ಚಳ ಮಾಡುವ ಕುರಿತು ಒಂದೇ ದಿನದಲ್ಲಿ ಗೊಂದಲ ನಿರ್ಮಾಣವಾಗಿದೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಇ.ಡಿ. ವಿಚಾರಣೆಗೆ ಹಾಜರಾಗಿದ್ದಾರೆ, ನವದೆಹಲಿಯಲ್ಲಿ ಯುವತಿಯ ಭೀಭತ್ಸ ಹತ್ಯೆ ಇಡೀ ದೇಶವನ್ನು ಕಂಗಾಲಾಗಿಸಿದೆ, ಟಿಪ್ಪು ಸುಲ್ತಾನ್‌ ವಿವಾದ ಮತ್ತೊಂದು ತಿರುವು ಪಡೆದಿದೆ, ರಸ್ತೆ ಗುಂಡಿಯಿಂದಾಗಿ ಇಬ್ಬರು ನಿಧನರಾಗಿದ್ದಾರೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Forced religious conversion | ಬಲವಂತದ ಮತಾಂತರದಿಂದ ದೇಶದ ಭದ್ರತೆಗೆ ಅಪಾಯ ಎಂದ ಸುಪ್ರೀಂಕೋರ್ಟ್
ದೇಶದಲ್ಲಿ ಬಲವಂತದ ಧಾರ್ಮಿಕ ಮತಾಂತರ ಆರೋಪ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂಕೋರ್ಟ್‌, ಇದನ್ನು ತಡೆಯದೇ ಇದ್ದರೆ ದೇಶದ ಭದ್ರತೆಗೆ ಅಪಾಯವಾಗಲಿದೆ. ನಾಗರಿಕರಿಗೆ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿಗೆ ಇದರಿಂದ ಧಕ್ಕೆಯಾಗಬಹುದು ಎಂದು ಸೋಮವಾರ ಕಳವಳ ವ್ಯಕ್ತಪಡಿಸಿದೆ. ಬಲವಂತದ ಮತಾಂತರ ( Forced religious conversion ) ತಡೆಯಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಇದು ಸಕಾಲ ಎಂದು ಅದು ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Nandini Milk Price Hike | ನಂದಿನಿ ಹಾಲಿನ ದರ ಏರಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಬ್ರೇಕ್‌
ಕರ್ನಾಟಕ ರಾಜ್ಯ ಹಾಲಿ ಮಹಾ ಮಂಡಳದ (ಕೆಎಂಎಫ್‌) ವತಿಯಿಂದ ಹೊರತರುವ ನಂದಿನ ಹಾಲಿನ ದರವನ್ನು ಏರಿಕೆ ಮಾಡುವ ನಿರ್ಧಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಬ್ರೇಕ್‌ ಹಾಕಿದ್ದಾರೆ. ಕಲಬುರಗಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಹಾಲಿನ ದರ ಬಗ್ಗೆ ಹಲವಾರು ತಿಂಗಳಿಂದ ಚರ್ಚೆಯಾಗಿದೆ. ನವೆಂಬರ್ 20ರ ನಂತರ ಹಾಲು ಒಕ್ಕೂಟದ ಅಧ್ಯಕ್ಷರ ಜತೆ ಸಭೆ ನಡೆಸುತ್ತೇವೆ ಎಂದಿದ್ದಾರೆ. ಅದ್ಯಕ್ಷರ ಮತ್ತು ಅಧಿಕಾರಗಳ ಜತೆ ಸಭೆ ಕರೆದು ಅಂತಿಮ ತಿರ್ಮಾನ ಮಾಡಲಾಗುತ್ತದೆ. ಜನರಿಗೆ ಹೊರೆ ಆಗದಂತೆ ತೀರ್ಮಾನ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Saffron politics| ವಿವೇಕ ಶಾಲೆ ಕೊಠಡಿಗಳಿಗೆ ಕೇಸರಿ ಬಣ್ಣ: ಮುಖ್ಯಮಂತ್ರಿ ಬೊಮ್ಮಾಯಿ ಸಮರ್ಥನೆ
ಸರಕಾರಿ ಶಾಲೆಗಳಲ್ಲಿ ವಿವೇಕ ಕೊಠಡಿಗಳ ಸ್ಥಾಪನೆ ಮತ್ತು ಅದಕ್ಕೆ ಕೇಸರಿ ಬಣ್ಣ ಬಳಿಯುವ ಸರಕಾರದ ತೀರ್ಮಾನ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ನಡುವೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ನಡೆಯನ್ನು ಸಮರ್ಥಿಸಿದ್ದಾರೆ. ರಾಜ್ಯದ ಸರಕಾರಿ ಶಾಲೆ ಮತ್ತು ಪಿಯು ಕಾಲೇಜುಗಳಲ್ಲಿ 8,100 ಹೊಸ ಕೊಠಡಿ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಲಬುರಗಿ ತಾಲೂಕಿನ ಮಡಿಯಾಳ ತಾಂಡಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಚಾಲನೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Delhi Crime | ಲಿವ್ ಇನ್ ಸಂಗಾತಿಯನ್ನು 35 ಭಾಗಗಳಾಗಿ ಕತ್ತರಿಸಿ, 18 ದಿನಗಳ ಕಾಲ ದಿಲ್ಲಿಯ ವಿವಿಧೆಡೆ ಎಸೆದ!
ತನ್ನ ಸಂಗಾತಿಯನ್ನು 35 ಭಾಗಗಳಾಗಿ ಕತ್ತರಿಸಿ, 18 ದಿನಗಳ ಕಾಲ ದಿಲ್ಲಿಯ ವಿವಿಧೆಡೆ ಎಸೆದ ವ್ಯಕ್ತಿಯೊಬ್ಬನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನ ಹೆಸರು ಅಫ್ತಾಬ್ ಅಮೀನ್ ಪೂನಾವಾಲಾ. ಈತ ತನ್ನ ಲಿವ್ ಇನ್ ಪಾರ್ಟನರ್ ಶ್ರದ್ಧಾಳನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ.
ದಿಲ್ಲಿ ಪೊಲೀಸರ ಪ್ರಕಾರ, ಅಫ್ತಾಬ್ ಮತ್ತು ಶ್ರದ್ಧಾ ಇಬ್ಬರು ಲಿವ್ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರು. ಮೇ 18ರಂದು ಇಬ್ಬರ ಮಧ್ಯೆ ಜಗಳವಾಗಿದೆ. ಆಗ ಸಿಟ್ಟಿಗೆದ್ದ ಅಫ್ತಾಬ್, ಶ್ರದ್ಧಾಳನ್ನು ಕೊಲೆ ಮಾಡಿ, ದೇಹವನ್ನು 35 ಭಾಗಗಳಾಗಿ ಕತ್ತರಿಸಿ ಫ್ರಿಡ್ಜ್‌ನಲ್ಲಿಟ್ಟಿದ್ದಾನೆ. ಸುಮಾರು 18 ದಿನಗಳ ಬಳಿಕ ಮಧ್ಯ ರಾತ್ರಿ 2ಕ್ಕೆ ಮನೆಯಿಂದ ಹೊರಟು ದಿಲ್ಲಿಯ ವಿವಿಧೆಡೆ ಶವದ ತುಣುಕುಗಳನ್ನು ಎಸಿದಿದ್ದಾನೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Delhi Crime | ಡೇಟಿಂಗ್‌ ಆ್ಯಪ್‌ನಿಂದ ಅಫ್ತಾಬ್‌ನ ಪರಿಚಯ ಆಯ್ತು, ಜಾಲತಾಣ ಆ್ಯಪ್ ಶ್ರದ್ಧಾ ಕೊಲೆ ಪತ್ತೆಗೆ ಕಾರಣವಾಯ್ತು!

5. ಟಿಪ್ಪು ವಿವಾದ | ಗಿರೀಶ್‌ ಕಾರ್ನಾಡ್‌ ಬರೆದ ಪುಸ್ತಕದಲ್ಲೇನಿದೆ? ಅದರಲ್ಲಿ ಮಹಾರಾಜರ ಬಗ್ಗೆ ಏನು ಹೇಳಲಾಗಿದೆ?
ಟಿಪ್ಪು ಸುಲ್ತಾನ್‌ ಕುರಿತು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬರೆದ ಪುಸ್ತಕ (ನಾಟಕ ರೂಪ) ʼಟಿಪ್ಪುವಿನ ನಿಜಕನಸುಗಳುʼ ಇದೀಗ ವಿವಾದದ ಕೇಂದ್ರಬಿಂದು. ಟಿಪ್ಪು ಸುಲ್ತಾನ ನಿಜವಾಗಲೂ ಎಲ್ಲರೂ ಅಂದುಕೊಂಡಂತೆ ಅಭಿವೃದ್ಧಿ ಶೀಲ, ಸರ್ವಧರ್ಮ ಸಹಿಷ್ಣು ಅಲ್ಲ ಅಂದು ಅಡ್ಡಂಡ ಕಾರ್ಯಪ್ಪ ನಿರೂಪಿಸುವ ಪ್ರಯತ್ನ ಮಾಡಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಐವತ್ತನೇ ವರ್ಷದ ಸಂದರ್ಭದಲ್ಲಿ ಗಿರೀಶ್‌ ಕಾರ್ನಾಡ್‌ ರಚಿಸಿದ್ದ ನಾಟಕ ಟಿಪ್ಪು ಸುಲ್ತಾನ ಕಂಡ ಕನಸು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ಟಿಪ್ಪು ವಿವಾದ| ಮೈಸೂರಿನ ಬಸ್‌ ನಿಲ್ದಾಣದ ಗುಂಬಜ್ ಮೇಲೆ ರಾತ್ರೋರಾತ್ರಿ ಕಳಶ ನಿರ್ಮಾಣ!
ಹೆಚ್ಚಿನ ಓದಿಗಾಗಿ: ಟಿಪ್ಪು ವಿವಾದ| ಟಿಪ್ಪು ಸುಲ್ತಾನ್‌ ಕೈಯಿಂದ ಆ ಮೂರು ದೇವಾಲಯಗಳನ್ನು ರಕ್ಷಿಸಿದ್ದು ಅವನ ಪತ್ನಿ?

6. Pothole | ಬೆಂಗಳೂರಿನಲ್ಲಿ ಹಾಗೂ ಮಂಡ್ಯದಲ್ಲಿ ರಸ್ತೆ ಗುಂಡಿಗೆ ಇಬ್ಬರು ಬೈಕ್‌ ಸವಾರರ ಬಲಿ; ಸಾರ್ವಜನಿಕರ ಆಕ್ರೋಶ
ರಸ್ತೆ ಗುಂಡಿಗಳಿಂದ ಸಾವಿಗೀಡಾಗುವ ವಾಹನ ಸವಾರರ ಸಂಖ್ಯೆ ದಿದೇದಿನೆ ಹೆಚ್ಚಾಗುತ್ತಿದ್ದು, ಬೆಂಗಳೂರಿನಲ್ಲಷ್ಟೆ ಅಲ್ಲದೆ ಮಂಡ್ಯದಲ್ಲೂ ವ್ಯಕ್ತಿಯೊಬ್ಬರು ಕೊನೆಯುಸಿರೆಳೆದಿದ್ದಾರೆ. ಬೆಂಗಳುರಿನ ರಾಜಾಜಿನಗರದ ರಾಜಕುಮಾರ್ ರೋಡ್‌ ಬಳಿ ರಸ್ತೆ ಗುಂಡಿಗೆ (Pothole) ಬೈಕ್‌ ಸವಾರರೊಬ್ಬರು ಮೃತಪಟ್ಟಿದ್ದಾರೆ. ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಸಾತನೂರಿನ ಕುಮಾರ್ (37) ಸಾವಿಗೀಡಾದ ನಿವೃತ್ತ ಯೋಧ. ಕುಮಾರ್‌ ತಮ್ಮ ತಂದೆಯ ಜೊತೆಗೆ ಬೈಕಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮಂಡ್ಯದ ಹೊರ ವಲಯದ ಕಾರಿಮನೆ ಗೇಟ್ ಬಳಿ ರಸ್ತೆ ಗುಂಡಿ ತಪ್ಪಿಸಲು ಯತ್ನಿಸಿದರು. ನಿಯಂತ್ರಣ ತಪ್ಪಿ ಬೈಕ್‌ನಿಂದ ಕೆಳಕ್ಕೆ ಬಿದ್ದ ಯೋಧನ ಮೇಲೆ ಹಿಂದಿನಿಂದ ವೇಗವಾಗಿ ಬಂದ ಲಾರಿ ಹರಿದಿದೆ. ಪರಿಣಾಮ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

7. Suicide | ಸ್ಕೂಲ್‌ನಲ್ಲಿ ಎಲ್ಲರೆದರು ಟೀಚರ್‌ ಬೈದರೆಂದು ನೇಣಿಗೆ ಶರಣಾದ ವಿದ್ಯಾರ್ಥಿನಿ!
ಶಾಲೆಯಲ್ಲಿ ಎಲ್ಲರೆದರು ಟೀಚರ್‌ ಬೈದಿದ್ದಕ್ಕೆ ಅವಮಾನವಾಗಿದೆ ಎಂದು ಭಾವಿಸಿ, ಮನನೊಂದು ಬೆಂಗಳೂರಿನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ನಡೆದಿದೆ. ಬಾಣಸವಾಡಿಯ ಪಿಳ್ಳಾರೆಡ್ಡಿ ನಗರದಲ್ಲಿ ಅಮೃತಾ ಎಂಬಾಕೆ ನೇಣಿಗೆ ಶರಣಾದ ವಿದ್ಯಾರ್ಥಿನಿಯಾಗಿದ್ದಾಳೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. ವಿಸ್ತಾರ Explainer | ಭಾರತಕ್ಕೆ ಮೊದಲ ಬಾರಿಗೆ ಜಿ20 ಶೃಂಗದ ಸಾರಥ್ಯ
ಜಗತ್ತಿನ ಪ್ರಮುಖ 19 ರಾಷ್ಟ್ರಗಳು ಹಾಗೂ ಐರೋಪ್ಯ ಒಕ್ಕೂಟದ ವೇದಿಕೆಯಾದ ಜಿ20ರ ಮುಂದಿನ ಸಾರಥ್ಯವನ್ನು ಭಾರತ ವಹಿಸುತ್ತಿದ್ದು, ಜಾಗತಿಕ ಮಟ್ಟದಲ್ಲಿ ದೇಶ ನಿರ್ಣಾಯಕ ಪಾತ್ರ ವಹಿಸಲು ಅವಕಾಶ ಸೃಷ್ಟಿಯಾಗಿದೆ. 2023ರ ಜಿ20 ಶೃಂಗ ಸಮಾವೇಶ ದಿಲ್ಲಿಯಲ್ಲಿ ನಡೆಯಲಿದೆ. ಈ ಕುರಿತು ವಿಸ್ತಾರ Explainer ಇಲ್ಲಿದೆ.

9. ʼಮೂರು ವಾರ ಸಮಯ ಕೇಳಿದೆ, ಆದರೆ ಕೊಡಲಿಲ್ಲʼ: ಇಡಿ ವಿಚಾರಣೆಗೆ ಹಾಜರಾದ ನಂತರ ಡಿ.ಕೆ. ಶಿವಕುಮಾರ್‌ ಮಾತು
ಯಂಗ್‌ ಇಂಡಿಯಾ ಅಕ್ರಮ ವ್ಯವಹಾರ ಆರೋಪದಕ್ಕೆ ಸಂಬಂದಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ನವದೆಹಲಿಯಲ್ಲಿ ಜಾರಿ ನಿರ್ದೇಶನಾಲಯದ(ಇಡಿ) ವಿಚಾರಣೆಗೆ ಸೋಮವಾರ ಹಾಜರಾದರು. ಸೆಪ್ಟೆಂಬರ್‌ 19ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಈ ಹಿಂದೆ ಸಮನ್ಸ್‌ ನೀಡಿತ್ತು. ಆದರೆ ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿದ್ದರಿಂದ ತೆರಳಿರಲಿಲ್ಲ.
ಇದೀಗ ಸೋಮವಾರ ವಿಚಾರಣೆಗೆ ಹಾಜರಾಗಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಮೂರು ವಾರ ಸಮಯ ಕೇಳಿದ್ದೆ, ಆದರೆ ಅವರು ನೀಡಿಲ್ಲ. ಇವತ್ತೇ ಬರಬೇಕು ಎಂದು ಹೇಳಿದ್ದರು. ಉಜ್ಜಯಿನಿ ಮಹಾಕಾಲೇಶ್ವರ ದೇವಸ್ಥಾನದಿಂದ ನೇರವಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಅದೆಲ್ಲ ಏನೇ ಇರಲಿ, ನಾವು ಸಂಸ್ಥೆಯನ್ನು ಹಾಗೂ ಸಮನ್ಸ್‌ ಅನ್ನು ಗೌರವಿಸುತ್ತೇವೆ. ಅವರ ಎಲ್ಲ ಪ್ರಶೆಗಳಿಗೂ ನಾನು ಉತ್ತರಿಸುತ್ತೇನೆ” ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Goa CM | ನೀವೇ ಜಾಗ ಖರೀದಿಸಿ, ಕನ್ನಡ ಭವನ ನಿರ್ಮಿಸಿಕೊಳ್ಳಿ: ಗೋವಾ ಕನ್ನಡಿಗರಿಗೆ ಸಿಎಂ ಸಾವಂತ್
ಕನ್ನಡ ಭವನ ನಿರ್ಮಿಸಲು ನಮ್ಮ ಸರ್ಕಾರಕ್ಕೆ ಭೂಮಿ ಕೇಳಬೇಡಿ. ನೀವೇ ಭೂಮಿ ಖರೀದಿಸಿ, ಕನ್ನಡ ಭವನವನ್ನು ನಿರ್ಮಾಣ ಮಾಡಿಕೊಳ್ಳಿ ಎಂದು ಗೋವಾ ಮುಖ್ಯಮಂತ್ರಿ (Goa CM) ಪ್ರಮೋದ್ ಸಾವಂತ್ ಅವರು ಗೋವಾ ಕನ್ನಡಿಗರಿಗೆ ಹೇಳಿದ್ದಾರೆ. ಅಖಿಲ ಗೋವಾ ಕನ್ನಡ ಸಂಘವು ನಾರ್ತ್ ಗೋವಾದ ಬಿಚೋಲಿನ್‌ನಲ್ಲಿ ಭಾನುವಾರ ಆಯೋಜಿಸಿದ್ದ 7ನೇ ಸಾಂಸ್ಕೃತಿಕ ಸಮಾವೇಶದಲ್ಲಿ ಮಾತನಾಡಿ ಈ ವಿಷಯ ತಿಳಿಸಿದರು. ಮುಖ್ಯಮಂತ್ರಿಗಳ ಈ ಮಾತುಗಳಿಂದ ಗೋವಾ ಕನ್ನಡಿಗರು ತೀವ್ರ ನಿರಾಸೆಯನ್ನು ಹೊರ ಹಾಕಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಇನ್ನಷ್ಟು ಪ್ರಮುಖ ಸುದ್ದಿಗಳು

🔴 Praveen Nettaru murder | ಮಸೂದ್‌ ಹತ್ಯೆ ಪ್ರತೀಕಾರಕ್ಕೆ ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ: ಎನ್‌ಐಎ ತನಿಖೆ
🔴 Surathkal toll | ಸುರತ್ಕಲ್‌ ಟೋಲ್‌ ಪ್ಲಾಜಾ ರದ್ದು: ನಳಿನ್‌ ಟ್ವೀಟ್‌, ಬಹುದಿನಗಳ ಹೋರಾಟಕ್ಕೆ ಕೊನೆಗೂ ಜಯ
🔴 Satish Jarakiholi | ಸತೀಶ್‌ ಜಾರಕಿಹೊಳಿ ಪರ ಬೃಹತ್‌ ಮೆರವಣಿಗೆ, ಪ್ರತಿಭಟನೆ; ಬಿಜೆಪಿ ವಿರುದ್ಧ ಆಕ್ರೋಶ
🔴 ಗ್ಲೋಕಲ್‌ ಲೋಕ ಅಂಕಣ | ಮೆಟಾವರ್ಸ್ ಮಾಯಾಲೋಕದಲ್ಲಿ ಏನಿದೆ, ಏನಿಲ್ಲ?
🔴 Inflation | ಸಗಟು ಹಣದುಬ್ಬರ 8.39%ಕ್ಕೆ ಇಳಿಕೆ, 18 ತಿಂಗಳಿನ ಬಳಿಕ ಎರಡಂಕಿಗೆ ಬಿತ್ತು ಬ್ರೇಕ್

ಮಕ್ಕಳ ದಿನಾಚರಣೆಯ ಸುದ್ದಿಗಳು

🔵 Children’s Day | ಮಕ್ಕಳ ದಿನಾಚರಣೆಯಂದು ಶ್ರಮದಾನ; ಗುಂಡಿ ಬಿದ್ದ ರಸ್ತೆಗೆ ಮಕ್ಕಳಿಂದ ವರದಾನ
🔵 Children’s Day | ಮಕ್ಕಳಿಗೆ ಈ ಚಂದದ ಪುಸ್ತಕಗಳನ್ನು ಇಂದು ಗಿಫ್ಟ್‌ ಕೊಡಿ
🔵 Children’s Day | ಮಕ್ಕಳು ನೋಡಲೇಬೇಕಾದ ಅತ್ಯುತ್ತಮ ಮಕ್ಕಳ ಚಿತ್ರಗಳಿವು!
🔵 Children’s Day| ಮಕ್ಕಳ ದಿನಕ್ಕೆ ಒಂದು ಕಥೆ | ಕತ್ತೆಯೊಂದಿಗೆ ಪಯಣ!

Exit mobile version