Site icon Vistara News

ವಿಸ್ತಾರ TOP 10 NEWS : ಕರ್ನಾಟಕದಲ್ಲಿ ಬಡವರಿಗೆ ಹಕ್ಕುಪತ್ರ ವಿತರಣೆಯಿಂದ, ದೆಹಲಿ ಪರೇಡ್‌ನಲ್ಲಿ ಸಾಮಾನ್ಯರಿಗೆ ಅವಕಾಶದವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-title deeds to poor people and ordinary citizens allowed to republic day parade and more news

1. Modi In Karnataka : ಯಾದಗಿರಿಯ ಪರಂಪರೆ ನಮಗೆಲ್ಲ ಹೆಮ್ಮೆ, ಇದು ತೊಗರಿಯ ಬಟ್ಟಲು: ಪ್ರಧಾನಿ ಮೋದಿ ಶ್ಲಾಘನೆ
ಯಾದಗಿರಿ ಜಿಲ್ಲೆಯ ಪರಂಪರೆ ಹಾಗೂ ಕೃಷಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ಭಾಷಣವನ್ನು ಆರಂಭಿಸಿ ನೆರೆದವರನ್ನು ಸಂತಸಪಡಿಸಿದರು.
“ಕರ್ನಾಟಕದ ಎಲ್ಲ ಸಹೋದರ ಸಹೋದರಿಯರಿಗೆ ನನ್ನ ವಂದನೆಗಳು” ಎಂದ ಪ್ರಧಾನಿ ಮೋದಿ, ಕಣ್ಣು ಹಾಯಿಸಿದ ಕಡೆಯಲ್ಲೆಲ್ಲ ಜನರೇ ಕಾಣುತ್ತಿದ್ದಾರೆ. ಹೆಲಿಪ್ಯಾಡ್‌ನಲ್ಲೂ, ಕಾರ್ಯಕ್ರಮದಲ್ಲಿ, ಪೆಂಡಾಲ್‌ ಹೊರಗೂ ಬಿಸಿಲಿನಲ್ಲಿ ಜನರು ನಿಂತಿದ್ದಾರೆ. ನೀವು ನೀಡುತ್ತಿರುವ ಈ ಪ್ರೀತಿ, ಆಶೀರ್ವಾದವೇ ನಮ್ಮೆಲ್ಲರ ಬಹುದೊಡ್ಡ ಶಕ್ತಿ ಎಂದು ಪ್ರಶಂಸಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Modi In Karnataka : ನಿಮ್ಮ ಒಬ್ಬ ಮಗ ದಿಲ್ಲಿಯಲ್ಲಿದ್ದಾನೆ, ಇನ್ನು ಚಿಂತೆ ಬಿಡಿ : ಬಂಜಾರ ಸಮುದಾಯಕ್ಕೆ ಪ್ರಧಾನಿ ಮೋದಿ ಭರವಸೆ
ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸಮುದಾಯಗಳನ್ನು ಡಬಲ್‌ ಇಂಜಿನ್‌ ಸರ್ಕಾರ ಗುರುತಿಸಿ ಅವರ ಹಕ್ಕುಗಳನ್ನು ನೀಡುತ್ತಿದೆ. ನೀವಿನ್ನು ನಿಶ್ಚಿಂತರಾಗಿರಿ, ನಿಮ್ಮ ಒಬ್ಬ ಮಗ ದೆಹಲಿಯಲ್ಲಿದ್ದಾನೆ ಎಂದು ಬೃಹತ್‌ ಸಂಖ್ಯೆಯಲ್ಲಿ ನೆರೆದಿದ್ದ ಬಂಜಾರ ಸಮುದಾಯಕ್ಕೆ ಪ್ರಧಾನಿ ನರೇಂದ್ರ ಮೋದಿ (Modi In Karnataka) ಭರವಸೆ ನೀಡಿದರು. ಕಲಬುರಗಿಯಲ್ಲಿ 50 ಸಾವಿರಕ್ಕೂ ಹೆಚ್ಚು ಲಂಬಾಣಿ ಕುಟುಂಬಗಳಿಗೆಹಕ್ಕು ಪತ್ರ ನೀಡುವ ಸಲುವಾಗಿ ಕಲಬುರಗಿಯ ಮಳಖೇಡ್‌ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೋದಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. BBC Documentary On Modi | ಮೋದಿ ಕುರಿತು ಬಿಬಿಸಿ ಆಕ್ಷೇಪಾರ್ಹ ಡಾಕ್ಯುಮೆಂಟರಿ, ಅಷ್ಟಕ್ಕೂ ಏನಿದೆ ಇದರಲ್ಲಿ? ಯಾಕಿಷ್ಟು ವಿವಾದ?
2002ರಲ್ಲಿ ಗೋದ್ರಾ ಹತ್ಯಾಕಾಂಡದ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುಪ್ರೀಂ ಕೋರ್ಟ್‌ ಕ್ಲೀನ್‌ ಚಿಟ್‌ ನೀಡಿದೆ. ಹಲವು ವರ್ಷಗಳರೆಗೆ ತನಿಖೆ ನಡೆದು, ವಿಶೇಷ ತನಿಖಾ ಸಂಸ್ಥೆ (SIT) ತನಿಖೆ ನಡೆಸಿ, ವರದಿ ನೀಡಿದ ಬಳಿಕ ಕ್ಲೀನ್‌ ಚಿಟ್‌ ನೀಡಲಾಗಿದೆ. ಆದರೂ, ಗೋದ್ರಾ ಹತ್ಯಾಕಾಂಡವನ್ನು ಇಟ್ಟುಕೊಂಡು ಬ್ರಿಟನ್‌ನ ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ (BBC) India: The Modi Question ಎಂಬ ಡಾಕ್ಯುಮೆಂಟರಿ (BBC Documentary On Modi) ನಿರ್ಮಿಸಿದೆ. ಹಾಗೆಯೇ, ಇದು ವಿವಾದಕ್ಕೆ ಕಾರಣವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಮತ್ತಷ್ಟು ಓದಿಗಾಗಿ: PM Narendra Modi | ಸಿನಿಮಾಗಳ ವಿರುದ್ಧ ಅನಗತ್ಯ ಟೀಕೆ ಬೇಡ: ಬಿಜೆಪಿ ಕಾರ್ಯಕರ್ತರು, ನಾಯಕರಿಗೆ ಮೋದಿ ಕಿವಿಮಾತು

4. Republic Day 2023 | ಪರೇಡ್ ವೀಕ್ಷಣೆಗೆ ಮುಂದಿನ ಆಸನಗಳು ವಿಐಪಿಗಳಿಗಲ್ಲ ಕಾರ್ಮಿಕರು, ರಿಕ್ಷಾವಾಲಾಗಳು, ತರಕಾರಿ ಮಾರುವವರಿಗೆ ಮೀಸಲು!
ಈ ಬಾರಿಯ ಜನವರಿ 26ರಂದು ದಿಲ್ಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ (Republic Day 2023) ಭಿನ್ನವಾಗಿರಲಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಪರೆಡ್ ನಡೆಯುವ ಸಂದರ್ಭದಲ್ಲಿ ಮುಂದಿನ ಸಾಲಿನಲ್ಲಿ ಗಣ್ಯವ್ಯಕ್ತಿಗಳಿಗೆ, ವಿದೇಶಿ ಪ್ರತಿನಿಧಿಗಳಿಗೆ ಆಸನ ಕಲ್ಪಿಸಲಾಗಿರುತ್ತದೆ. ಆದರೆ, ಈ ಬಾರಿ ವಿಶೇಷ ಅತಿಥಿಗಳು ಆಸೀನರಾಗಲಿದ್ದಾರೆ! ಆ ಅತಿಥಿಗಳು ಬೇರೆ ಯಾರೂ ಅಲ್ಲ; ಸೆಂಟ್ರಲ್ ವಿಸ್ತಾಗೆ ದುಡಿದ ಕಾರ್ಮಿಕರು, ರಿಕ್ಷಾವಾಲಾಗಳು, ತರಕಾರಿ ಮಾರಾಟಗಾರರು, ಸಣ್ಣ ದಿನಿಸಿ ವ್ಯಾಪಾರಸ್ಥರು ಮತ್ತು ಅವರ ಕುಟುಂಬಸ್ಥರು. ಇವರೆಲ್ಲ ಮುಂದಿನ ಸಾಲಿನಲ್ಲಿ ಆಸೀನರಾಗಿ, ಪರೇಡ್ ವೀಕ್ಷಿಸಲಿದ್ದಾರೆ! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ವಿಸ್ತಾರ Explainer : Job cuts : ಭಾರತ ಸೇರಿದಂತೆ ಜಗತ್ತಿನಾದ್ಯಂತ ಉದ್ಯೋಗ ಕಡಿತ ಶುರು, ಕಾರಣವೇನು?
ಮೈಕ್ರೊಸಾಫ್ಟ್‌, ಮೆಟಾ, ಅಮೆಜಾನ್‌ ಸೇರಿದಂತೆ ಜಾಗತಿಕ ಮಟ್ಟದ ತಂತ್ರಜ್ಞಾನ ಕಂಪನಿಗಳಲ್ಲಿ ಉದ್ಯೋಗ ಕಡಿತ ಶುರುವಾಗಿದೆ. ಭಾರತವೊಂದರಲ್ಲೇ ಕಳೆದ ವರ್ಷ ಡಿಸೆಂಬರ್‌ನಲ್ಲಿ 17,000 ಟೆಕ್ಕಿಗಳು ಉದ್ಯೋಗ ಕಳೆದುಕೊಂಡಿದ್ದಾರೆ. 2023ರಲ್ಲೂ (Job cuts) ಈ ಟ್ರೆಂಡ್‌ ಮುಂದುವರಿದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Panchamasali reservation | ರಾಜ್ಯ ಸರ್ಕಾರದ ವಿರುದ್ಧ ಮೋದಿಗೆ ಪತ್ರ ಬರೆದ ಸ್ವಾಮೀಜಿ, ಚುನಾವಣೆಯಲ್ಲಿ ನೋಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ
ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ರಾಜ್ಯ ಸರ್ಕಾರವು ತಮಗೆ ಮೀಸಲಾತಿ ಒದಗಿಸುವ ವಿಚಾರದಲ್ಲಿ ಮೀನ ಮೇಷ ಎಣಿಸುತ್ತಿದೆ ಮತ್ತು ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಜನವರಿ ೧೬ರಂದು ಅವರು ಮೋದಿ ಅವರಲ್ಲದೆ, ಬಿಜೆಪಿಯ ಹಿರಿಯ ನಾಯಕರಾದ ಅಮಿತ್‌ ಶಾ ಮತ್ತು ಜೆ.ಡಿ. ನಡ್ಡಾ ಅವರಿಗೆ ಪತ್ರ ಬರೆದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ಭಾರತದ ರಾಜಕಾರಣಿಗಳೂ ನ್ಯೂಜಿಲ್ಯಾಂಡ್​ ಪ್ರಧಾನಿ ಹಾದಿ ತುಳಿಯಬೇಕು; ಜಸಿಂದಾರನ್ನು ಹೊಗಳಿದ ಕಾಂಗ್ರೆಸ್ ನಾಯಕ
ಅಧಿಕಾರ ಬೇಕು ಎನ್ನುವ ರಾಜಕಾರಣಿಗಳ ಮಧ್ಯೆ, ಅಧಿಕಾರ ಸಾಕು ಎನ್ನುತ್ತ ರಾಜೀನಾಮೆ ನೀಡಿದ ನ್ಯೂಜಿಲ್ಯಾಂಡ್​ ಪ್ರಧಾನಮಂತ್ರಿ ಜಸಿಂದಾ ಆರ್ಡರ್ನ್​​ ಅವರನ್ನು ಕಾಂಗ್ರೆಸ್​ ಸಂಸದ, ಹಿರಿಯ ನಾಯಕ ಜೈರಾಮ್​ ರಮೇಶ್​ ಹೊಗಳಿದ್ದಾರೆ. ಭಾರತೀಯ ರಾಜಕಾರಣಿಗಳೂ ಅವರನ್ನು ನೋಡಿ ಕಲಿಯಬೇಕು ಎಂಬ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. ವಿಮಾನದ ತುರ್ತು ನಿರ್ಗಮನ ಬಾಗಿಲು ತೆರೆದರಾ ತೇಜಸ್ವಿ ಸೂರ್ಯ?-ಅಂದು ಜತೆಗಿದ್ದ ಬಿಜೆಪಿ ನಾಯಕ ಅಣ್ಣಾಮಲೈ ಹೇಳಿದ್ದೇನು?
ಡಿಸೆಂಬರ್​ 10ರಂದು ಚೆನ್ನೈನಿಂದ ತಿರುಚಿರಾಪಳ್ಳಿಗೆ ಹೋಗುತ್ತಿದ್ದ, ಇಂಡಿಗೋ 6E ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ಸಂಸದ ತೇಜಸ್ವಿ ಸೂರ್ಯ ತೆರೆದಿದ್ದು ಈಗ ಚರ್ಚೆಯ ವಿಷಯವಾಗಿದೆ. ಈ ಬಗ್ಗೆ ಈತ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದಾರೆ. ಸಂಸದರು ಬುದ್ಧಿವಂತ, ಜವಾಬ್ದಾರಿ ಸ್ಥಾನದಲ್ಲಿ ಇದ್ದಾರೆ. ಅವರು ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆದಿಲ್ಲ. ಆ ತುರ್ತು ನಿರ್ಗಮನದ ದ್ವಾರದ ಸೀಟ್​​ನಲ್ಲಿಯೇ ತೇಜಸ್ವಿ ಸೂರ್ಯ ಕುಳಿತಿದ್ದರು ಎಂದು ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. SSC MTS 2023 : 10 ಸಾವಿರ ಎಂಟಿಎಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ; ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ
ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗವು (ಎಸ್‌ಎಸ್‌ಸಿ) ಕೇಂದ್ರದ ವಿವಿಧ ಸಚಿವಾಲಯ, ಇಲಾಖೆ ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಗ್ರೂಪ್‌ ʼಸಿʼಯ ‘ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌’ (ಎಂಟಿಎಸ್‌) (SSC MTS 2023) ಮತ್ತು ಹವಾಲ್ದಾರ್ ಹುದ್ದೆಗಳ (CBIC & CBN) ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Bengaluru Traffic: ಮುಹೂರ್ತ ಮೀರುವ ಭಯದಲ್ಲಿ ಕಾರಿನಿಂದ ಜಿಗಿದು ಮೆಟ್ರೋಗೆ ಹಾರಿದ ಮದುಮಗಳು!
ರಾಜಧಾನಿ ಬೆಂಗಳೂರಿನ ವಾಹನ ದಟ್ಟಣೆಯನ್ನು (Bengaluru Traffic) ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ಪಾತ್ರ ದೊಡ್ಡದು. ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದ ಮದುಮಗಳೊಬ್ಬಳು ಮುಹೂರ್ತ ಮೀರುವ ಭಯದಲ್ಲಿ ಕಾರಿನಿಂದ ಜಿಗಿದು ಮೆಟ್ರೋಗೆ ಹಾರಿದ ಘಟನೆ ನಡೆದಿದೆ. ಸದ್ಯ ಈ ವಿಡಿಯೊ ಎಲ್ಲೆಡೆ ವೈರಲ್‌ ಆಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Rashmika Mandanna | ಕೊನೆಗೂ ರಕ್ಷಿತ್ ಶೆಟ್ಟಿ- ರಿಷಬ್ ಶೆಟ್ಟಿ ಕುರಿತು ತುಟಿ ಬಿಚ್ಚಿದ ನ್ಯಾಷನಲ್‌ ಕ್ರಷ್!‌ ಏನ್‌ ಹೇಳಿದ್ರು?
  2. Bihar CM | ಬಿಹಾರ ಸಿಎಂ ನಿತೀಶ್‌ ಕುಮಾರ್‌ ಮೆರವಣಿಗೆಗಾಗಿ ಅರ್ಧ ತಾಸು ನಿಂತ ರೈಲುಗಳು!
  3. Swati Maliwal | ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್‌ ಮೇಲೆಯೇ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ
  4. Actress Prema | ನಟಿ ಪ್ರೇಮಾ ಕೊರಗಜ್ಜನ ಮೊರೆ ಹೋಗಿದ್ದೇಕೆ?

Exit mobile version