Site icon Vistara News

ವಿಸ್ತಾರ TOP 10 NEWS : ಕೇಂದ್ರದ ಅಕ್ಕಿಗೂ ಕೊಕ್ಕೆ, ದಾಂಪತ್ಯಕ್ಕೆ ಹುಳಿ ಹಿಂಡಿದ ಟೊಮ್ಯಾಟೊ.. ಹೀಗೆ ಪ್ರಮುಖ ಸುದ್ದಿಗಳು

Vistara top 10 July 13

1.ಅನ್ನಭಾಗ್ಯದ ಅಕ್ಕಿಗೆ ಮತ್ತೊಂದು ಕಂಟಕ: ಈ ಬಾರಿ ಕೇಂದ್ರ ಕೊಟ್ಟಿದ್ದೇ 3 ಕೆಜಿ?
ಜುಲೈ ತಿಂಗಳಲ್ಲಿ ರಾಜ್ಯದ ಪಡಿತರದಾರರಿಗೆ ಸಿಕ್ಕಿದ್ದು ಮೂರು ಕೆಜಿ ಅಕ್ಕಿ ಮಾತ್ರ. ಕೇಂದ್ರ ಸರ್ಕಾರ ಐದು ಕೆಜಿ ಕೊಟ್ಟರೂ ಸಿದ್ದರಾಮಯ್ಯ ಸರ್ಕಾರ ಅದಕ್ಕೂ ಕನ್ನ ಹಾಕಿ ಕಡಿತ ಮಾಡಿದೆ ಎಂದು ಬಿಜೆಪಿ ಆರೋಪಿಸಿದರೆ, ಇದಕ್ಕೆ ತಿರುಗೇಟು ನೀಡಿರುವ ಸಿದ್ದರಾಮಯ್ಯ ಅವರು ಕೇಂದ್ರ ಕೊಟ್ಟಿದ್ದೇ ಮೂರು ಕೆಜಿ ಎಂದಿದ್ದಾರೆ.
ಬೊಮ್ಮಾಯಿ ಆಪಾದನೆ : ಈ ಬಾರಿ ಪಡಿತರದಲ್ಲಿ 5 ಕೆಜಿ ಅಕ್ಕಿಯೂ ಇಲ್ಲ, ಬರೀ 3 ಕೆಜಿ ಮಾತ್ರ!
ಸಿದ್ದರಾಮಯ್ಯ ತಿರುಗೇಟು: ಕೇಂದ್ರದ ಅಕ್ಕಿಗೂ ಬಿತ್ತಾ ಕತ್ತರಿ?; ಈ ಬಾರಿ 3 KG ಅಕ್ಕಿ ಏಕೆ? ಸ್ಪಷ್ಟನೆ ನೀಡಿದ ಸಿಎಂ

2.ಗರ್ಭಿಣಿ, ಬಾಣಂತಿಯರಿಗೆ ಕೊಳೆತ ಮೊಟ್ಟೆ ಭಾಗ್ಯ: ಅಂಗನವಾಡಿ ಅವ್ಯವಸ್ಥೆ ವಿರುದ್ಧ ಜನಾಕ್ರೋಶ ಸ್ಫೋಟ
ಒಂದು ಕಡೆ ರಾಜ್ಯ ಸರ್ಕಾರ ರಾಜ್ಯ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಅಂದರೆ 1ರಿಂದ 10ನೇ ತರಗತಿಯ ಎಲ್ಲ ಮಕ್ಕಳಿಗೆ ವಾರಕ್ಕೆ ಎರಡು ಮೊಟ್ಟೆ ವಿತರಿಸುವ ಪ್ಲ್ಯಾನ್‌ ಪ್ರಕಟಿಸಿದೆ. ಅದರ ನಡುವೆಯೇ ರಾಜ್ಯದ ಕೆಲವೆಡೆ ಅಂಗನವಾಡಿಗಳಿಗೆ ಪೂರೈಸಲಾಗುತ್ತಿರುವ ಮೊಟ್ಟೆ ಕಳಪೆಯಾಗಿದೆ (Rotten Eggs) ಎಂಬ ಆರೋಪ ಕೇಳಿಬಂದಿದ್ದು, ಜನಾಕ್ರೋಶ ಜೋರಾಗಿದೆ. ಇದು ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಅವರ ಗಮನಕ್ಕೂ ಬಂದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. ರೇಟ್‌ ಕಾರ್ಡ್‌ ಕಂಪನ: ವರ್ಗಾವಣೆ ದಂಧೆ ಸಾಬೀತಾದ್ರೆ ರಾಜಕೀಯ ನಿವೃತ್ತಿ ಅಂದ ಸಿಎಂ
ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆದ ವರ್ಗಾವಣೆಗಳಲ್ಲಿ ದಂಧೆ ನಡೆದಿದೆ ಎಂದು ಸಾಬೀತು ಮಾಡಿದರೆ ರಾಜಕೀಯ ನಿವೃತ್ತಿ ಆಗುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭಾ ಅಧಿವೇಶನದಲ್ಲಿ ಘೋಷಿಸಿದ್ದಾರೆ ಮತ್ತು ಭ್ರಷ್ಟಾಚಾರದ ಆರೋಪ ಮಾಡಿದ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರಿಗೆ ಸವಾಲು ಹಾಕಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. ದಾಂಪತ್ಯಕ್ಕೆ ಹುಳಿ ಹಿಂಡಿದ ಟೊಮ್ಯಾಟೋ: ಸಾಂಬಾರಿಗೆ ಟೊಮ್ಯಾಟೊ ಹಾಕಿದ್ದಕ್ಕೆ ಸಿಟ್ಟು!
ಟೊಮ್ಯಾಟೊ ಬೆಲೆ ಗಗನಕ್ಕೇರಿದೆ. ದೇಶದ ಬಹುತೇಕ ನಗರಗಳಲ್ಲಿ ಒಂದು ಕೆ.ಜಿ ಟೊಮ್ಯಾಟೊ ಬೆಲೆ 100 ರೂ. ದಾಟಿದೆ. ಇದರಿಂದಾಗಿ ತೋಟಕ್ಕೆ ನುಗ್ಗಿ ಟೊಮ್ಯಾಟೊ ಕಳ್ಳತನ ನಡೆದಿದೆ. ಟೊಮ್ಯಾಟೊ ಮಾರಾಟ ಮಾಡುವವರು ಕಳ್ಳರ ಭಯಕ್ಕೆ ಸಿಸಿಟಿವಿ ಅಳವಡಿಸಿದ್ದಾರೆ. ಬೌನ್ಸರ್‌ಗಳನ್ನು ಕೂಡ ನೇಮಿಸಿಕೊಂಡಿದ್ದಾರೆ. ಟೊಮ್ಯಾಟೊ ಬೆಲೆ ಇಷ್ಟೆಲ್ಲ ಅವಾಂತರ ಮಾಡಿದೆ. ಇದರ ಬೆನ್ನಲ್ಲೇ, ಟೊಮ್ಯಾಟೊ ವಿಚಾರಕ್ಕಾಗಿ ಗಂಡ-ಹೆಂಡತಿ ಜಗಳವಾಡಿದ್ದಾರೆ. ಜಗಳದ ಬಳಿಕ ಹೆಂಡತಿ ಮನೆ ಬಿಟ್ಟು ಹೋಗಿದ್ದು, ಪತಿ ಕಂಗಾಲಾಗಿದ್ದಾನೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಬೆಂಗಳೂರಿನಲ್ಲೊಂದು ಕೇರಳ ಸ್ಟೋರಿ: ಸ್ನೇಹಿತ ಪತ್ನಿಯನ್ನೇ ಪಟಾಯಿಸಿದ ಸಲ್ಮಾನ್‌ ಖಾನ್‌
ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ ಎಂದು ಕುಟುಂಬದೊಳಗೆ ಪ್ರವೇಶ ಮಾಡಿದ ವ್ಯಕ್ತಿಯೊಬ್ಬ ತನ್ನ ಗೆಳೆಯನ ಹೆಂಡತಿಯನ್ನೇ ಹಾರಿಸಿಕೊಂಡು ಹೋಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಲ್ಮಾನ್‌ ಎಂಬಾತನ ಮೇಲೆ ಈಗ ಈ ಗಂಭೀರ ಆರೋಪ ಬಂದಿದ್ದು, ಇದೊಂದು ಲವ್‌ ಜಿಹಾದ್‌ (Love jihad) ಪ್ರಕರಣವೆಂಬ ಚರ್ಚೆಯೂ ಜೋರಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ವಿಸ್ತಾರ Explainer: ಚಂದ್ರಯಾನ 3ಕ್ಕೆ ಕ್ಷಣಗಣನೆ; ಶುಕ್ರವಾರ ಮಧ್ಯಾಹ್ನ 2.35ಕ್ಕೆ ನೆಗೆತ
ಭಾರತದ ಇಸ್ರೊ (ISRO) ಸಂಸ್ಥೆಯ ಚಂದ್ರಯಾನ ಸರಣಿಯ (moon mission) ಮೂರನೇ ಸಾಹಸವಾದ ಚಂದ್ರಯಾನ- 3 ಜುಲೈ 14ರಂದು ತನ್ನ ಯಾನವನ್ನು ಚಂದ್ರನೆಡೆಗೆ ಆರಂಭಿಸಲಿದೆ. ಇದಕ್ಕೆ ವಿಶೇಷತೆಯೂ ಇದೆ. ಇದುವರೆಗೂ ಮಾನವ ಹಾರಿಬಿಟ್ಟ ನೌಕೆಗಳಲ್ಲಿ ಯಾವುದೂ ಚಂದಿರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಿರಲಿಲ್ಲ. ಚಂದ್ರಯಾನ-3 ತಿಂಗಳಿನ ದಕ್ಷಿಣ ಧ್ರುವದಲ್ಲಿ ಹೆಜ್ಜೆಯೂರಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ: ಚಂದ್ರಯಾನ ಯಶಸ್ವಿಗಾಗಿ ತಿರುಪತಿ ದೇಗುಲಕ್ಕೆ ತೆರಳಿ ಪ್ರಾರ್ಥಿಸಿದ ಇಸ್ರೊ ವಿಜ್ಞಾನಿಗಳು

7. ದೆಹಲಿಯಲ್ಲಿ ಯಮುನೆ ಅಬ್ಬರ; ಅರವಿಂದ ಕೇಜ್ರಿವಾಲ್‌ ನಿವಾಸದ ಬಳಿಯೇ ಪ್ರವಾಹ
ಭಾರಿ ಮಳೆಗೆ ಉತ್ತರ ಭಾರತದ ಹಲವು ರಾಜ್ಯಗಳು ಸಂಕಷ್ಟಕ್ಕೆ ಸಿಲುಕಿವೆ. ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ, ದೆಹಲಿ, ಪಂಜಾಬ್‌, ಹರಿಯಾಣ ಸೇರಿ ಹಲವು ರಾಜ್ಯಗಳಲ್ಲಿ ವರುಣನ ಆರ್ಭಟ ಗುರುವಾರವೂ ಮುಂದುವರಿದಿದೆ. ಇನ್ನು ದೆಹಲಿಯಲ್ಲಂತೂ ಪ್ರವಾಹದ ಭೀತಿ ಹೆಚ್ಚಾಗಿದೆ. ಯಮುನಾ ನದಿಯ ನೀರಿನ ಪ್ರಮಾಣವು ಕಳೆದ 45 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದ ಕಾರಣ ಪ್ರವಾಹದ ಭೀತಿ ಎದುರಾಗಿದೆ. ಅದರಲ್ಲೂ, ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನಿವಾಸದ ಬಳಿಯೇ ಪ್ರವಾಹ ಉಂಟಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ: ಭಾರಿ ಮಳೆ ಎಫೆಕ್ಟ್‌: 700 ರೈಲುಗಳ ಸಂಚಾರ ಸ್ಥಗಿತ

8. ಎರಡು ದಿನಗಳ ಫ್ರಾನ್ಸ್‌ ಪ್ರವಾಸಕ್ಕಾಗಿ ಪ್ಯಾರೀಸ್‌ ತಲುಪಿದ ಮೋದಿ
ಎರಡು ದಿನಗಳ ಫ್ರಾನ್ಸ್ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಪ್ಯಾರಿಸ್‌ಗೆ (Paris) ಬಂದಿಳಿದರು. ಈ ವೇಳೆ, ಅವರಿಗೆ ಭವ್ಯ ಸ್ವಾಗತವನ್ನು ನೀಡಲಾಯಿತು. ಎರಡು ದಿನಗಳ ಈ ಭೇಟಿ ವೇಳೆ ಫ್ರಾನ್ಸ್ ಜತೆಗೆ ಅವರು ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ. ಅಲ್ಲದೇ, ಫ್ರೆಂಚ್ ನ್ಯಾಷನಲ್ ಡೇ (French National Day) ಆಚರಣೆಯಲ್ಲಿ ಅವರು ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ: ಮೋದಿ ವಿಶೇಷ ಸಂದರ್ಶನ: ಜಾಗತಿಕ ನಾಯಕತ್ವ ವಹಿಸಲು ಭಾರತ ಸಿದ್ಧ: ನರೇಂದ್ರ ಮೋದಿ

8 ರಾಹುಲ್‌, ಪ್ರಿಯಾಂಕಾ ಗಾಂಧಿಯನ್ನು ರಾಜ್ಯದಿಂದಲೇ ಕಣಕ್ಕಿಳಿಸಿ ಗೆಲ್ಲಿಸಲು ಕಾಂಗ್ರೆಸ್‌ ಪ್ಲ್ಯಾನ್‌
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections) ಕಾಂಗ್ರೆಸ್‌ ಪಡೆದ ಅಪೂರ್ವ ಗೆಲುವಿನಿಂದ ಸಂತುಷ್ಟವಾಗಿರುವ ಕಾಂಗ್ರೆಸ್‌ ಹೈಕಮಾಂಡ್‌ ಈಗ ಲೋಕಸಭಾ ಚುನಾವಣೆಯಲ್ಲೂ (Parliament Election) ರಾಜ್ಯವನ್ನೇ ಪ್ರಮುಖ ಟಾರ್ಗೆಟ್‌ ಆಗಿ ಇಟ್ಟುಕೊಳ್ಳಲು ಮುಂದಾಗಿದೆ. ಇದರ ಜತೆಗೆ ಕಾಂಗ್ರೆಸ್‌ನ ಹಿರಿಯ ನಾಯಕರಾದ ರಾಹುಲ್‌ ಗಾಂಧಿ (Rahul Gandhi) ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ರಾಜ್ಯದಿಂದಲೇ ಕಣಕ್ಕಿಳಿಸಿ ಗೆಲ್ಲಿಸಲು ಪ್ಲ್ಯಾನ್‌ ನಡೆದಿದೆ ಎಂದು ತಿಳಿದುಬಂದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್‌: ಆರ್‌ ಅಶ್ವಿನ್‌ ಮಹಾಸಾಧನೆ
ಭಾರತದ ಅಗ್ರ ಸ್ಪಿನ್‌ ಬೌಲರ್‌ ರವಿಚಂದ್ರನ್‌ ಅಶ್ವಿನ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 700 ವಿಕೆಟ್‌ ಪಡೆಯುವ ಮೂಲಕ ಆರ್.‌ಅಶ್ವಿನ್‌ ನೂತನ ಸಾಧನೆ ಮಾಡಿದ್ದಾರೆ. ಡೊಮಿನಿಕಾದ ರೆಸೇಯೂನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ (IND vs WI) ವಿಂಡೀಸ್‌ನ ಅಲ್ಜರಿ ಜೋಸೆಫ್‌ ವಿಕೆಟ್‌ ಪಡೆಯುವ ಮೂಲಕ ಅಶ್ವಿನ್‌ 700 ವಿಕೆಟ್‌ ಮೈಲುಗಲ್ಲು ತಲುಪಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಕನ್ನಡ ಧಾರಾವಾಹಿ ಟಿಆರ್‌ಪಿ: ಅಖಾಡಕ್ಕೆ ಹೊಸ ಧಾರಾವಾಹಿ ಎಂಟ್ರಿ; ಅಕ್ಕ ತಂಗಿ ಕಥೆಗೆ 5ನೇ ಸ್ಥಾನವೂ ಇಲ್ಲ
ಈ ವಾರದ ಕನ್ನಡ ಕಿರುತೆರೆಯ ಟಿಆರ್‌ಪಿ (Kannada Serials TRP) ಹೊರಬಿದ್ದಿದೆ. ಈಗ ಜೂನ್​ 30-ಜುಲೈ 6ರವರೆಗಿನ ಟಿಆರ್​ಪಿ ರೇಟಿಂಗ್ ಸಿಕ್ಕಿದೆ.‘ ಪುಟ್ಟಕ್ಕನ ಮಕ್ಕಳು’, ‘ಅಮೃತಧಾರೆ’ ಟಿಆರ್​ಪಿಯಲ್ಲಿ ಭಾರಿ ಏರಿಕೆ ಆಗಿದೆ. ಆದರೆ ಈ ವಾರ ಹೊಸ ಧಾರಾವಾಹಿ ಎಂಟ್ರಿ ಪಡೆದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version