Site icon Vistara News

ವಿಸ್ತಾರ TOP 10 NEWS: ವಿಸ್ತಾರ ಸಮೀಕ್ಷೆಯಲ್ಲಿ ಮೋದಿ ಅಂಕಪಟ್ಟಿಯಿಂದ, ಕುಸ್ತಿಪಟುಗಳ ಬಿಗಿ ಪಟ್ಟಿನವರೆಗಿನ ಪ್ರಮುಖ ಸುದ್ದಿಗಳಿವು

vistara top 10 news vistara survey about modi govt to wrestlers protest and more news

#image_title

1. Loksabha 2024: Vistara Survey: ಮೋದಿ ಸರ್ಕಾರಕ್ಕೆ ಕನ್ನಡಿಗರು ಎಷ್ಟು ಅಂಕ ಕೊಟ್ಟರು?: ಇಲ್ಲಿದೆ ಮೋದಿ ಮಾರ್ಕ್ಸ್‌ ಕಾರ್ಡ್‌
9 ವರ್ಷ ಪೂರೈಸಿದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ. ಮೋದಿ ಸರ್ಕಾರದ 9 ವರ್ಷಗಳ ಆಡಳಿತ ಜನರಿಗೆ ತೃಪ್ತಿ ತಂದಿದ್ಯಾ..? ಕರುನಾಡ ಮಂದಿ BJP ಕಾರ್ಯವೈಖರಿಗೆ ಕೊಡುವ ಮಾರ್ಕ್ಸ್‌ ಎಷ್ಟು..? ಕೇಂದ್ರದ ಪ್ಲಸ್‌ ಪಾಯಿಂಟ್ ಏನು..? ಮೈನಸ್ ಪಾಯಿಂಟ್ ಏನು..? ಈ ಬಗ್ಗೆ ರಾಜ್ಯದ ಎಲ್ಲ ಜಿಲ್ಲೆ, ತಾಲೂಕುಗಳಿಂದ ವಿಸ್ತಾರ ವರದಿಗಾರರು ನಡೆಸಿರುವ ಮೆಗಾ ಸಮೀಕ್ಷೆ ಇಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. ಎಲ್ಲ ಮಹಿಳೆಯರಿಗೂ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣ? ಸಾರಿಗೆ ಸಚಿವರು ಹೇಳಿದ್ದೇನು?
ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಕುರಿತ ಪ್ರಶ್ನೆಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟವಾಗಿ ಉತ್ತರ ನೀಡಿದ್ದಾರೆ. ಯಾವುದೇ ನಿರ್ಬಂಧವಿಲ್ಲ, ರಾಜ್ಯಾದ್ಯಂತ ಎಲ್ಲ ಮಹಿಳೆಯರಿಗೂ ಸರ್ಕಾರಿ ಬಸ್​ಗಳಲ್ಲಿ ಪ್ರಯಾಣ ಉಚಿತವಾಗಿ ಇರುತ್ತದೆ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. ’ಅತ್ತೆ‘ಯೇ ಗೃಹಲಕ್ಷ್ಮಿ, ಅವರು ಪ್ರೀತಿಯಿಂದ 2000 ರೂ. ಸೊಸೆಗೇ ಕೊಡಿ ಎನ್ನಬಹುದು!; ಕಾಂಗ್ರೆಸ್​ ಸಚಿವರ ಸ್ಪಷ್ಟನೆ
ಗೃಹಲಕ್ಷ್ಮೀ ಯೋಜನೆಯಡಿ ಹಣ ಅತ್ತೆಗೆ ಸಲ್ಲಬೇಕೋ, ಸೊಸೆಗೆ ಸಲ್ಲಬೇಕೋ ಎಂಬ ಚರ್ಚೆ ಜೋರಾದ ಬೆನ್ನಲ್ಲೇ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದ ಸಚಿವರಾದ ಸತೀಶ್​ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್​​ಕರ್ ಒಂದು ಸಿಂಪಲ್​ ಉತ್ತರ ಕೊಟ್ಟಿದ್ದಾರೆ. ‘ನಾಳೆ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸುತ್ತೇವೆ. ಈಗಲೇ ತುಂಬ ಏನೂ ಹೇಳುವುದಿಲ್ಲ. ಗೃಹಲಕ್ಷ್ಮೀ ಯೋಜನೆಯನ್ನು ಸರಳವಾಗಿ ಜಾರಿ ಮಾಡುತ್ತೇವೆ. ಮೊದಲು ನಾವು ಅತ್ತೆಗೆ ಹಣ ಕೊಡುತ್ತೇವೆ, ಅತ್ತೆ ಪ್ರೀತಿಯಿಂದ ತನ್ನ ಸೊಸೆಗೇ ಕೊಡಿ ಎಂದರೆ ಸೊಸೆಗೆ ನೀಡುತ್ತೇವೆ’ ಎಂದು ಉತ್ತರಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Textbook Revision: ಹಿಜಾಬ್‌ ಓಕೆ, ಸೂಲಿಬೆಲೆ ಪಠ್ಯಕ್ಕೆ ಕತ್ತರಿ, ಟಿಪ್ಪು ಪಾಠ ಸೇರ್ಪಡೆ: ಸಾಹಿತಿಗಳ ಒತ್ತಾಯ, ಸಿದ್ದರಾಮಯ್ಯ ಏನಂದ್ರು?
ಶಾಲಾ ಪಠ್ಯಪುಸ್ತಕಗಳಿಗೆ ಸಂಬಂಧಿಸಿ ಬಿಜೆಪಿ ಸರ್ಕಾರದ ಅವಧಿಯ ಹಲವು ನಿರ್ಧಾರಗಳಿಗೆ ಬ್ರೇಕ್‌ ಹಾಕಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ಮುಖ್ಯವಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬದಲಾವಣೆ ಮಾಡಿದ ಪಠ್ಯಕ್ರಮಕ್ಕೆ ಖೊಕ್‌ ನೀಡಲು ನಿರ್ಧರಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. DA Hike News : ಸರ್ಕಾರಿ ನೌಕರರಿಗೆ ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳ; ಯಾರ ವೇತನ ಎಷ್ಟು ಹೆಚ್ಚಲಿದೆ?
ರಾಜ್ಯ ಸರ್ಕಾರವು ನಿರೀಕ್ಷೆಯಂತೆಯೇ ಸರ್ಕಾರಿ ನೌಕರರ ತುಟ್ಟಿ ಭತ್ಯೆ (Dearness Allowance) ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದಂತೆ ಶೇ.4 ರಷ್ಟು (DA Hike News) ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ. ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇಕಡ 31 ರಿಂದ ಶೇಕಡ 35 ಕ್ಕೆ ಪರಿಷ್ಕರಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. IPL 2023 : ರವೀಂದ್ರ ಜಡೇಜಾ ಬಿಜೆಪಿ ಕಾರ್ಯಕರ್ತ, ಅದಕ್ಕೆ ಚೆನ್ನೈಗೆ ಗೆಲವು ತಂದುಕೊಟ್ಟರು ಎಂದ ಅಣ್ಣಾಮಲೈ!
ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ (IPL 2023) ಫೈನಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದವರು ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ರವೀಂದ್ರ ಜಡೇಜಾ ಎಂಬುದಾಗಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಐಪಿಎಸ್​ ಅಧಿಕಾರ ಕೆ ಅಣ್ಣಾಮಲೈ ಹೇಳಿದ್ದಾರೆ. ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲ ಮಾತನಾಡಿದ ಅವರು ಮುಂಬೈ ಇಂಡಿಯನ್ಸ್ ತಂಡದ ಐದು ಟ್ರೋಫಿಗಳ ದಾಖಲೆಯನ್ನು ಸರಿಗಟ್ಟುವುದಕ್ಕೆ ಚೆನ್ನೈ ತಂಡಕ್ಕೆ ನಮ್ಮ ಕಾರ್ಯಕರ್ತನೇ ನೆರವು ನೀಡಿದ್ದಾರೆ ಎಂಬುದಾಗಿ ನುಡಿದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Wrestlers Protest: ಕುಸ್ತಿಪಟುಗಳು ಗಂಗಾ ನದಿಗೆ ಪದಕ ಎಸೆಯುವುದನ್ನು ತಡೆದಿದ್ದು ಯಾರು?
ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಶನ್ (WFI) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಭಾನುವಾರ ಅತ್ಯಂತ ಅಮಾನುಷವಾಗಿ ಬಂಧಿಸಿ ಬಳಿಕ ಬಿಡುಗಡೆಗೊಳಿಸಲಾಗಿತ್ತು. ಈ ಘಟನೆ ನಡೆದ ಬಳಿಕ ಕುಸ್ತಿಪಟುಗಳು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದು, ದೇಶಕ್ಕಾಗಿ ತಾವ ಗೆದ್ದ ಪದಕಗಳನ್ನು (Medals) ಹರಿದ್ವಾರ ಗಂಗಾ ನದಿಯಲ್ಲಿ (Ganga River) ಮಂಗಳವಾರ ಸಂಜೆ ವಿಸರ್ಜನೆ ಮಾಡುವುದಾಗಿ ಘೋಷೆಣೆ ಮಾಡಿದ್ದರು. ಅದರಂತೆ, ಸಂಜೆ ಮಂಗಳವಾರ ಕುಸ್ತಿ ಪಟುಗಳ ತಮ್ಮ ಪದಕಗಳೊಂದಿಗೆ ಹರಿದ್ವಾರದ ಗಂಗಾ ನದಿಗೆ ಆಗಮಿಸಿದ್ದರು. ಆದರೆ, ರೈತ ನಾಯಕ ನರೇಶ್ ಟಿಕಾಯತ್ ಅವರ ಕುಸ್ತಿ ಪಟುಗಳಿಂದ ಪದಕಗಳನ್ನು ಕಸಿದುಕೊಂಡು, ಎಸೆಯದಂತೆ ತಡೆದಿದ್ದಾರೆ. ಅಲ್ಲದೇ, ಕುಸ್ತಿ ಪಟುಗಳಿಂದ ಐದು ದಿನಗಳ ಕಾಲಾವಕಾಶವನ್ನೂ ಕೂಡ ಕೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. ಮದುವೆಯಾಗುತ್ತಿದ್ದಂತೆ ಅಸಲಿ ರೂಪ ತೋರಿಸಿದ 2ನೇ ಗಂಡ; ಆತನಿಂದ ಸಿಕ್ಕಿದ್ದು ಗರ್ಭಪಾತದ ಮಾತ್ರೆ, ತಲಾಖ್​​!
ದೇಶದಲ್ಲಿ ತ್ರಿವಳಿ ತಲಾಖ್ (Triple Talaq)​ ನಿಷೇಧವಾಗಿ, ಶಿಕ್ಷಾರ್ಹ ಅಪರಾಧ ಎನ್ನಿಸಿ ಮೂರು ವರ್ಷದ ಮೇಲಾದರೂ ಇನ್ನೂ ಅಲ್ಲೊಂದು-ಇಲ್ಲೊಂದು ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದೀಗ ಮಂಗಳೂರಿನಲ್ಲಿ ಮಹಮ್ಮದ್ ಹುಸೇನ್​ ಎಂಬಾತ ತನ್ನ ಪತ್ನಿ ಶಬಾನಾಗೆ ಮೂರು ಸಲ ತಲಾಖ್​ ಹೇಳಿ, ಹಲ್ಲೆ ನಡೆಸಿದ್ದಾಗಿ ವರದಿಯಾಗಿದೆ. ಸದ್ಯ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಬಾನಾ, ಪತಿ ಹುಸೇನ್​ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Weather Report: ಮುಂದಿನ 3 ದಿನ ಬಿರುಗಾಳಿ ಸಹಿತ ಭಾರಿ ಮಳೆ; ಬೆಂಗಳೂರು ಸೇರಿ ಈ ಜಿಲ್ಲೆಗಳಿಗೆ ಅಲರ್ಟ್‌ ಘೋಷಣೆ
ರಾಜ್ಯದಲ್ಲಿ ವರುಣಾರ್ಭಟ (Rain News) ಜೋರಾಗಿದೆ. ಮುಂದಿನ 48 ಗಂಟೆಯಲ್ಲಿ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಭಾರಿ ಮಳೆಯಾಗುವ ಎಚ್ಚರಿಕೆಯನ್ನು (Rain alert) ಹವಾಮಾನ ಇಲಾಖೆ ನೀಡಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Viral News : ಪ್ರತಿಭಟನೆಯ ಬಿಸಿ, ಕಾರು ಬಿಟ್ಟು ಬೈಕ್‌ನಲ್ಲಿ ಮದುವೆ ಮಂಟಪಕ್ಕೆ ತೆರಳಿದ ವರ!
ಮದುವೆ ಎಂದಾಕ್ಷಣ ದೊಡ್ಡ ದಿಬ್ಬಣ ಸಜ್ಜಾಗಿಬಿಡುತ್ತದೆ. ಸಿಂಗರಿಸಿದ ಕಾರು, ಬಸ್ಸನ್ನೇರಿ ವಧು, ವರರು ಕಲ್ಯಾಣ ಮಂಟಪಕ್ಕೆ ತೆರಳುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವರ ಬಸ್ಸು, ಕಾರನ್ನೆಲ್ಲ ಬಿಟ್ಟು ಬೈಕನ್ನೇರಿ ಮದುವೆ ಮಂಟಪಕ್ಕೆ ಹೋಗಿದ್ದಾನೆ. ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಈ ವರನ ಸುದ್ದಿಯೇ (Viral News) ಹರಿದಾಡುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version