ಬೆಂಗಳೂರು: ದೇಶದ ರಾಜಕೀಯ, ಸಾಮಾಜಿಕ ವಲಯದಲ್ಲಿ ಅನೇಕ ವರ್ಷಗಳಿಂದ ಕೇಳಿಬರುತ್ತಿದ್ದ ʼಪಿಎಫ್‌ಐ ಬ್ಯಾನ್ʼ ಆಗ್ರಹಕ್ಕೆ ಕೇಂದ್ರ ಸರ್ಕಾರ ಕೊನೆಗೂ ಸ್ಪಂದಿಸಿದೆ. ಈ ಕುರಿತು ದೇಶಾದ್ಯಂತ ಸ್ವಾಗತ ವ್ಯಕ್ತವಾಗಿದ್ದರೂ, ಭವಿಷ್ಯದಲ್ಲಿ ಇಂತಹ ಪರಿಸ್ಥಿತಿ ಎದುರಾಗದಂತೆ ತಡೆಯುವ ಚರ್ಚೆಗೂ ಈ ನಿರ್ಧಾರ ನಾಂದಿ ಹಾಡಿದೆ. ಬಡವರಿಗೆ ಉಚಿತ ಪಡಿತರ ನೀಡುವ ಗರೀಬ್ ಕಲ್ಯಾಣ್ ಯೋಜನೆಯನ್ನು ಕೇಂದ್ರ ಸರ್ಕಾರ ಮೂರು ತಿಂಗಳು ವಿಸ್ತರಿಸಿದೆ. ರೈಲ್ವೆ ಸೇರಿದಂತೆ ಕೇಂದ್ರ ನೌಕರರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಅಯೋಧ್ಯೆಯಲ್ಲಿ ಗಾನಕೋಗಿಲೆ ಲತಾ ಮಂಗೇಷ್ಮರ್ ವೃತ್ತ ಸ್ಥಾಪನೆಯಾಗಿದೆ ಎನ್ನುವುದು ಸೇರಿದಂತೆ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. BANNED | ಪಿಎಫ್‌ಐ, ಸಹ ಸಂಘಟನೆಗಳಿಗೆ ಐದು ವರ್ಷ ನಿಷೇಧ: ಕೇಂದ್ರ ಸರ್ಕಾರ ಘೋಷಣೆ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಅದರ ಸಹ ಸಂಘಟನೆಗಳಿಗೆ ಕೇಂದ್ರ ಸರಕಾರ ಐದು ವರ್ಷಗಳ ಕಾಲ ನಿಷೇಧ ಹೇರಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಇವುಗಳನ್ನು ಕಾನೂನುಬಾಹಿರ ಸಂಘಟನೆಗಳು ಎಂದು ಘೋಷಿಸಲಾಗಿದೆ. ರಿಹಾಬ್ ಇಂಡಿಯಾ ಫೌಂಡೇಷನ್ (ಆರ್‌ಐಎಫ್), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್‌ಐ), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (ಎಐಐಸಿ) ಸೇರಿದಂತೆ ಏಳು ಇತರ ಸಂಘಟನೆಗಳು ಕೂಡ ನಿಷೇಧಿತ ಎಂದು ಕೇಂದ್ರ ಸರಕಾರ ಘೋಷಿಸಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
2. PFI Banned | ಭಯೋತ್ಪಾದನೆ, ದೇಶದ್ರೋಹ, ಸೌಹಾರ್ದಕ್ಕೆ ಧಕ್ಕೆ ಪಿಎಫ್ಐ ನಿಷೇಧಕ್ಕೆ ಕಾರಣ! ಗೆಜೆಟ್ ಡಿಟೇಲ್ಸ್ ಓದಿ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಹಾಗೂ ಅದರ ಸಹವರ್ತಿ ಸಂಸ್ಥೆಗಳ ಮೇಲೆ ನಿಷೇಧ (PFI Banned) ಹೇರಿರುವ ಕೇಂದ್ರ ಸರ್ಕಾರವು, ತಾನು ಕೈಗೊಂಡ ನಿರ್ಧಾರಕ್ಕೆ ಸಂಪೂರ್ಣ ಸಾಕ್ಷ್ಯಗಳನ್ನು ಒದಗಿಸಿದೆ. ಈ ಬಗ್ಗೆ ಹೊರಡಿಸಲಾಗಿರುವ ಗೆಜೆಟ್‌ನಲ್ಲಿ ವಿವರವಾಗಿ ತಿಳಿಸಲಾಗಿದೆ. ಪಿಎಫ್ಐನ ಹುಟ್ಟು, ಅದರ ಉದ್ದೇಶಗಳು, ಸಮಾಜದಲ್ಲಿ ಹೇಗೆ ಶಾಂತಿ ಸೌಹಾರ್ದತೆಯನ್ನು ಹಾಳು ಮಾಡುತ್ತಿತ್ತು, ಹಣ ದುರುಪಯೋಗ, ಉಗ್ರ ಕೃತ್ಯಗಳನ್ನು ನಡೆಸಿರುವುದು ಸೇರಿ ಎಲ್ಲ ಮಾಹಿತಿಯನ್ನು ಗೆಜೆಟ್‌ನಲ್ಲಿ ವಿವರಿಸಲಾಗಿದೆ. ಪಿಎಫ್ಐ ನಿಷೇಧದ ಗೆಜೆಟ್ ನೋಟಿಫಿಕೇಷನ್ ಬಗ್ಗೆ ಓದಲು ಇಲ್ಲಿ ಕ್ಲಿಕ್ ಮಾಡಿ.
3. ವಿಸ್ತಾರ Explainer | PFI BANNED | ಪಿಎಫ್‌ಐ ಹುಟ್ಟಿದ್ದು ಏಕೆ? ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ಹೇಗೆ?
ಹಲವಾರು ರಾಜ್ಯಗಳಲ್ಲಿ ಭಯೋತ್ಪಾದನೆ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ, ಭಯೋತ್ಪಾದನೆಗೆ ಹಣಕಾಸು ಪೂರೈಕೆ ಮಾಡುತ್ತಿದ್ದ ಕರಾಳ ಸಂಘಟನೆಯ ಕಥೆ ಮುಗಿದಿದೆ. ಸಚಿವಾಲಯದ ಅಧಿಸೂಚನೆಯ ಪ್ರಕಾರ 2016ರಿಂದೀಚೆಗೆ ಕೇರಳ ಮತ್ತು ಕರ್ನಾಟಕದಲ್ಲಿ ನಡೆದ ಸಂಜಿತ್, ವಿ ರಾಮಲಿಂಗಮ್, ನಂದು, ಅಭಿಮನ್ಯು, ಬಿಬಿನ್, ಶರತ್, ಆರ್. ರುದ್ರೇಶ್, ಪ್ರವೀಣ್ ಪೂಜಾರಿ, ಶಶಿಕುಮಾರ್, ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆಯಲ್ಲಿ ಪಿಎಫ್‌ಐ ಕಾರ್ಯಕರ್ತರು ಶಾಮೀಲಾಗಿದ್ದಾರೆ. ಹಾಗಾದರೆ ಪಿಎಫ್‌ಐ ಹುಟ್ಟಿದ್ದು ಹೇಗೆ? ಇದರ ಕರಾಳ ಇತಿಹಾಸ ಏನು? ಇದಕ್ಕೆ ಹಣಕಾಸು ವ್ಯವಸ್ಥೆ ಹೇಗೆ ಆಯಿತು? ಇಲ್ಲಿದೆ ವಿವರ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
4. PFI Banned | ಮುಸ್ಲಿಂ ಸಂಘಟನೆಗಳ ಜತೆ ಚರ್ಚೆ ಬಳಿಕವೇ ಪಿಎಫ್‌ಐ ಬ್ಯಾನ್, ಇದು ಮೋದಿ ಮಾಸ್ಟರ್‌ಪ್ಲ್ಯಾನ್
ಅದು ರಾಮಮಂದಿರ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪೇ ಇರಬಹುದು, ಜಮ್ಮು-ಕಾಶ್ಮೀರದಲ್ಲಿ ೩೭೦ನೇ ವಿಧಿಯನ್ನು ರದ್ದುಗೊಳಿಸಿದ್ದೇ ಇರಬಹುದು, ಪ್ರಮುಖ ತೀರ್ಮಾನ ತೆಗೆದುಕೊಂಡರೆ ಅದರಿಂದ ಉಂಟಾಗುವ ಗಲಭೆಗಳನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಚಾಣಾಕ್ಷತನ ಪ್ರದರ್ಶಿಸಿದೆ. ಅದರಂತೆ, ಪಿಎಫ್‌ಐ (PFI Banned) ನಿಷೇಧಕ್ಕೂ ಮೊದಲು ಕೇಂದ್ರ ಸರ್ಕಾರದ ಪ್ರಮುಖರು ಮುಸ್ಲಿಂ ಸಂಘಟನೆಗಳ ಜತೆ ಮಾತುಕತೆ ನಡೆಸಿ, ನಿಷೇಧದ ಕಾರಣ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
5. CBI RAID: ಡಿ.ಕೆ. ಶಿವಕುಮಾರ್ ಅವರ ನಿವಾಸಗಳ ಮೇಲೆ ಸಿಬಿಐ ದಾಳಿ: ಆಸ್ತಿಪಾಸ್ತಿ ದಾಖಲೆಗಳ ಪರಿಶೀಲನೆ
ಕೇಂದ್ರ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ನಿವಾಸಗಳಿಗೆ ದಾಳಿ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಕನಕಪುರ, ದೊಡ್ಡ ಆಲಹಳ್ಳಿ, ಸಂತೆ ಕೋಡಿಹಳ್ಳಿ ಮನೆ, ಜಮೀನು ಮತ್ತಿತರ ಸ್ಥಳಗಳಿಗೆ ಬುಧವಾರ ತೆರಳಿ ಆಸ್ತಿ-ಪಾಸ್ತಿ ಮತ್ತು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಸಿಬಿಐ ಅಧಿಕಾರಿಗಳು ಕನಕಪುರ ತಹಶೀಲ್ದಾರ್ ಹಾಗೂ ಪೋಲೀಸರ ಜತೆಗೆ ತೆರಳಿದ್ದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
6. ಭಗತ್ ಸಿಂಗ್ 115ನೇ ಜನ್ಮದಿನ | ಗಲ್ಲಿಗೇರುವಾಗಲೂ ನಗುತ್ತಾ ದೇಶವೇ ಮೊದಲೆಂದ ಧೀರ
ಇಂದು ಭಗತ್ ಸಿಂಗ್ ಜನ್ಮದಿನ. ಅವರ ಬಲಿದಾನ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಘಟ್ಟ. ಗಲ್ಲಿಗೇರುವಾಗಲೂ ನಗುನಗುತ್ತಾ ಇದ್ದ ಈ ಧೀರನನ್ನು ನೆನಪಿಸಿಕೊಳ್ಳುವ ದಿನ ಇಂದು. ಈ ಕುರಿತು ಲೇಖಕಿ ಮಯೂರಲಕ್ಷ್ಮಿ ಅವರ ವಿಶೇಷ ಲೇಖನ ಇಲ್ಲಿದೆ. ಕ್ರಾಂತಿಕಾರಿ ಕುರಿತು ತಿಳಿಯಲೇಬೇಕಾದ 10 ಕುತೂಹಲಕಾರಿ ಸಂಗತಿಗಳನ್ನೂ ನೀಡಲಾಗಿದೆ. ಪ್ರಮೋದ ನ.ಗೋ. ಅವರ ವಿಶೇಷ ಲೇಖನ ಇಲ್ಲಿದೆ.
7. ಗರೀಬ್ ಕಲ್ಯಾಣ್ ವಿಸ್ತರಣೆ, ಕೇಂದ್ರ ನೌಕರರಿಗೆ ತುಟ್ಟಿ ಭತ್ಯೆ, ರೈಲ್ವೆ ನೌಕರರಿಗೆ ಸಿಹಿ ಸುದ್ದಿ
ದಸರಾ ಹಬ್ಬಕ್ಕೆ (Dasara Bonus) ರೈಲ್ವೆ ಇಲಾಖೆ ನೌಕರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರದ ನೌಕರರ ತುಟ್ಟಿ ಭತ್ಯೆ (ಡಿಎ) ಯನ್ನು ಶೇ.4ರಷ್ಟು ಏರಿಸಲಾಗಿದೆ. ಪ್ರಧಾನ ಮಂತ್ರಿ ಗ್ರಾಮೀಣ ಕಲ್ಯಾಣ ಅನ್ನ ಯೋಜನೆಯನ್ನು (PMGKAY) ಕೇಂದ್ರ ಸರ್ಕಾರ ಇನ್ನೂ ಮೂರು ತಿಂಗಳವರೆಗೆ ವಿಸ್ತರಿಸಿದೆ. ಸುಮಾರು ೧೧ ಲಕ್ಷ ನಾನ್ ಗೆಜೆಟೆಡ್ ನೌಕರರಿಗೆ (ಸಿ ಹಾಗೂ ಡಿ ದರ್ಜೆಯ ನೌಕರರು) ಕೇಂದ್ರದ ನಿರ್ಧಾರದಿಂದ ಬೋನಸ್ ಸಿಗಲಿದೆ. ಇದಕ್ಕೆ ಕೇಂದ್ರ ಸರ್ಕಾರವು ೧,೯೮೫ ಕೋಟಿ ರೂ. ವ್ಯಯಿಸಲಿದೆ. ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ.
🔴 ಇನ್ನೂ 3 ತಿಂಗಳು ಬಡವರಿಗೆ ಉಚಿತ ಆಹಾರ ಧಾನ್ಯ | PMGKAY ವಿಸ್ತರಿಸಿದ ಕ್ಯಾಬಿನೆಟ್
🔴 ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ 4% ಏರಿಕೆ, ಮೋದಿ ಸಂಪುಟ ನಿರ್ಣಯ
🔴 Dasara Bonus | ರೈಲ್ವೆ ಇಲಾಖೆಯ 11 ಲಕ್ಷ ನೌಕರರಿಗೆ ಕೇಂದ್ರ ಬೋನಸ್, ಇದು ದಸರಾ ಉಡುಗೊರೆ
8. Anil Chauhan | ರಕ್ಷಣಾ ಸಿಬ್ಬಂದಿ ನೂತನ ಮುಖ್ಯಸ್ಥರಾಗಿ ಅನಿಲ್ ಚೌಹಾಣ್ ನೇಮಕ
ದೇಶದ ನೂತನ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (CDS)ರಾಗಿ ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (Anil Chauhan) ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಜನರಲ್ ಬಿಪಿನ್ ರಾವತ್ ಅವರ ಅಗಲಿಕೆಯಿಂದಾಗಿ ತೆರವಾದ ಸ್ಥಾನಕ್ಕೆ ಅನಿಲ್ ಚೌಹಾಣ್ ಅವರನ್ನು ನೇಮಿಸಿ ರಕ್ಷಣಾ ಸಚಿವಾಲಯ ಆದೇಶ ಹೊರಡಿಸಿದೆ.
ದೇಶದ ಸೇನೆಯಲ್ಲಿ ೪೦ ವರ್ಷ ಸೇವೆಗೈದಿರುವ ಅನಿಲ್ ಚೌಹಾಣ್ ಅವರು ಹಲವು ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರ ಕಾರ್ಯಕ್ಷಮತೆ, ಸೇವಾ ಅನುಭವವನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಸಿಡಿಎಸ್ ಆಗಿ ನೇಮಿಸಿದೆ. ಕಳೆದ ಡಿಸೆಂಬರ್‌ನಲ್ಲಿ ಜನರಲ್ ಬಿಪಿನ್ ರಾವತ್ ಅವರು ಸೇನಾ ಹೆಲಿಕಾಪ್ಟರ್ ಪತನವುಂಟಾಗಿ ನಿಧನರಾಗಿದ್ದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
9. Navaratri 2022 | 4ನೇ ದಿನ ಆರಾಧಿಸಲ್ಪಡುವ ದೇವಿ ಯಾರು? ಯಾವ ವರ್ಣದ ವಸ್ತ್ರ ಶ್ರೇಷ್ಠ?
ಎಲ್ಲರಿಗೂ ತಿಳಿದಿರುವಂತೆ ನವರಾತ್ರಿಯ (Navratri 2022) ಒಂಬತ್ತು ದಿನವೂ ದೇವಿಯ ಒಂದೊಂದು ರೂಪಕ್ಕೆ ಆರಾಧನೆ ನಡೆಯುತ್ತದೆ. ನಾಲ್ಕನೇ ದಿನ ದೇವಿಯ ಯಾವ ಸ್ವರೂಪವನ್ನು ಪೂಜಿಸಬೇಕು?, ಯಾವ ವರ್ಣದ ವಸ್ತ್ರವನ್ನು ಧರಿಸಬೇಕು? ಎಂಬ ಮಾಹಿತಿ ಇಲ್ಲಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
🟢 ನವರಾತ್ರಿಯಲ್ಲಿ ಯಾವೆಲ್ಲಾ ಪಾರಾಯಣ ಮಾಡಬಹುದು? ಅನುಸರಿಸಬೇಕಾದ ಕ್ರಮಗಳೇನು?
🔵 ನವರಾತ್ರಿಯ 4ನೇ ದಿನವನ್ನು ರಂಗಾಗಿಸುವ ಹಳದಿ ಬಣ್ಣ
10. Helicopter | 3,250 ರೂ.ಗೆ ಬೆಂಗಳೂರು ಏರ್‌ಪೋರ್ಟ್‌ನಿಂದ ಎಚ್‌ಎಎಲ್‌ಗೆ ಹೆಲಿಕಾಪ್ಟರ್‌ನಲ್ಲಿ ಶೀಘ್ರ ಪಯಣಿಸಿ!
ಮಹಾನಗರಗಳಲ್ಲಿ ಟ್ರಾಫಿಕ್ ರಗಳೆ ತಪ್ಪಿದ್ದಲ್ಲ ಎಂಬಂತಾಗಿದೆ. ಬೆಂಗಳೂರಿನ ಸಂಚಾರ ದಟ್ಟಣೆ ಲೋಕ ವಿಖ್ಯಾತ. ಈ ಸನ್ನಿವೇಶದಲ್ಲಿ ಹೆಲಿಕಾಪ್ಟರ್ ಮೂಲಕ ನಗರದಲ್ಲಿ ಹಾರಾಟ ನಡೆಸಲು ಸಾಧ್ಯವೇ? ಇದಕ್ಕೆ ಉತ್ತರವೆಂಬಂತೆ, ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಚ್‌ಎಎಲ್‌ಗೆ ಹೆಲಿಕಾಪ್ಟರ್ ಸೇವೆ (Helicopter) ಶೀಘ್ರದಲ್ಲಿಯೇ ಆರಂಭವಾಗಲಿದೆ. ಇದರಲ್ಲಿ 3,250 ರೂ. ಟಿಕೆಟ್ ದರ ಕೊಟ್ಟು ನೀವು ಏರ್‌ಪೋರ್ಟ್‌ನಿಂದ ಎಚ್‌ಎಎಲ್‌ಗೆ ಹೆಲಿಕಾಪ್ಟರ್‌ನಲ್ಲಿ ಸಂಚರಿಸಬಹುದು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.