Site icon Vistara News

ವಿಸ್ತಾರ TOP 10 NEWS | ಯೋಗ ದಿನದ ಶೀರ್ಷಾಸನದಿಂದ ಅಘಾಡಿ ಸರ್ಕಾರ ತಲೆಕೆಳಕಾಗುವವರೆಗೆ ಪ್ರಮುಖ ಸುದ್ದಿಗಳು

vistara top 10 21102021

ಬೆಂಗಳೂರು: ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳು ಕೊನೆಗೂ ಅಭ್ಯರ್ಥಿಯನ್ನು ಅಂತಿಮಗೊಳಿಸಿವೆ. ಆದರೆ ಆಡಳಿತಾರೂಢ ಪಕ್ಷದ ಅಭ್ಯರ್ಥಿ ಕುತೂಹಲ ಇನ್ನೂ ಮುಂದುವರಿದಿದೆ. ನಟ ದಿಗಂತ್‌ ಸೊಮರ್‌ಸಾಲ್ಟ್‌ ವೇಳೆಗೆ ಗಂಭೀರ ಗಾಯಗೊಂಡಿದ್ದರೆ, ರಾಹುಲ್‌ ಗಾಂಧಿ ಇ.ಡಿ. ವಿಚಾರಣೆ ಪ್ರತಿಭಟಿಸಿ ಕಾಂಗ್ರೆಸ್‌ ಬೀದಿಗಿಳಿದಿದೆ. ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

೧. Yoga Day 2022 | ಜಗತ್ತಿನ ಸರ್ವ ಸಮಸ್ಯೆಗಳ ಪರಿಹಾರಕ್ಕೆ ಯೋಗವೇ ಪರಮೋಚ್ಚ ಮಂತ್ರ ಎಂದ ಮೋದಿ
ಜಗತ್ತಿನ ಸರ್ವ ಸಮಸ್ಯೆಗಳಿಗೆ ಯೋಗವೊಂದೇ ಮಂತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅದು ವೈಯಕ್ತಿಕ ಸಮಸ್ಯೆಯೇ ಇರಲಿ, ಜಾಗತಿಕ ಸಮಸ್ಯೆಯೇ ಇರಲಿ ಅದಕ್ಕೆ ಯೋಗದಲ್ಲಿ ಪರಿಹಾರವಿದೆ ಎಂದು ಮೈಸೂರಿನಲ್ಲಿ ಎಂಟನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಹೇಳಿದರು.(ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)
ಯೋಗ ದಿನ ಯಶಸ್ವಿಗೊಳಿಸಿ ದೆಹಲಿಗೆ ತೆರಳಿದ ಮೋದಿ (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೨. ಸರ್ಕಾರಕ್ಕೆ ಸಂಕಷ್ಟ ತಂದ ಶಿಂಧೆಗೆ ಶಿವಸೇನೆಯಿಂದ ಶಾಕ್‌: ಪೊಲೀಸರಿಗೆ ದೂರು ಕೊಟ್ಟ ಶಾಸಕನ ಪತ್ನಿ
ಮಹಾರಾಷ್ಟ್ರ ಮಹಾ ವಿಕಾಸ ಅಘಾಡಿ ಸರ್ಕಾರಕ್ಕೆ ಅಪಾಯ ತಂದೊಡ್ಡಿ ಸುಮಾರು 21 ಶಾಸಕರೊಂದಿಗೆ ಗುಜರಾತ್‌ನ ಸೂರತ್‌ನಲ್ಲಿರುವ ರೆಸಾರ್ಟ್‌ ಸೇರಿರುವ ಬಂಡಾಯ ಸಚಿವ ಏಕನಾಥ್‌ ಶಿಂಧೆಯನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ತೆಗೆದುಹಾಕಲಾಗಿದೆ. ಮಹಾರಾಷ್ಟ್ರದ ನಗರಾಭಿವೃದ್ಧಿ ಸಚಿವರೂ ಆಗಿರುವ ಏಕನಾಥ್‌ ಶಿಂದೆ ಮಹಾ ಸರ್ಕಾರದ ಪಾಲಿಗೆ ಖಳನಾಯಕನಾಗುವ ಮಾದರಿಯ ಬೆಳವಣಿಗೆಗಳು ನಡೆಯುತ್ತಿವೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೩. ರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಯಶ್ವಂತ್‌ ಸಿನ್ಹಾ ಆಯ್ಕೆ
ಹಾಲಿ ತೃಣಮೂಲ ಕಾಂಗ್ರೆಸ್‌ನಲ್ಲಿರುವ ಹಿರಿಯ ರಾಜಕಾರಣಿ, ಮಾಜಿ ಕೇಂದ್ರ ಸಚಿವ ಯಶ್ವಂತ್‌ ಸಿನ್ಹಾ ಅವರು ಜುಲೈ ೧೮ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗ ಜಂಟಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ದೆಹಲಿಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ನಡೆದ ೧೭ ಪಕ್ಷ್ಗಗಳ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೪. Diganth Actor | ಸೊಮರ್‌ಸಾಲ್ಟ್‌ ವೇಳೆ ನಟ ದಿಗಂತ್‌ ಕತ್ತಿಗೆ ಗಂಭೀರ ಪೆಟ್ಟು
ಗೋವಾದ ಸಮುದ್ರ ತಟದಲ್ಲಿ ಸೊಮರ್‌ಸಾಲ್ಟ್‌ (somersault) ಹೊಡೆಯುವ ವೇಳೆ ದಿಗಂತ್‌ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ. ಕುಟುಂಬದ ಜತೆ ನಟ ದಿಗಂತ್‌ (Diganth Actor) ಗೋವಾ ಪ್ರವಾಸಕ್ಕೆ ತೆರಳಿದ್ದರು. ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿರುವ ಬಗ್ಗೆ ದಿಗಂತ್ ಆಪ್ತರಿಂದ ತಿಳಿಯಲ್ಪಟ್ಟಿದೆ. ಕೆಲವೇ ಗಂಟೆಗಳಲ್ಲಿ ಏರ್‌ಲಿಪ್ಟ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಿಗಂತ್ ಅವರನ್ನು ಕುಟುಂಬಸ್ಥರು ಕರೆತರಲಿದ್ದಾರೆ ಎಂದು ಹೇಳಲಾಗಿದೆ.(ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)
ದಿಗಂತ್‌ ಗಾಯಗೊಂಡಿರುವ ಸೊಮರ್‌ಸಾಲ್ಟ್‌ ಎಂದರೆ ಏನು? ಅಪಾಯವೇನು? (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೫. ಹೊಸ ಮಾದರಿಯ ಯುದ್ಧ ಎದುರಿಸಲು ಅಗ್ನಿಪಥ್‌ ಅಸ್ತ್ರ; ಎನ್‌ಎಸ್‌ಎ ಅಜಿತ್‌ ದೋವಲ್‌ ಪ್ರತಿಪಾದನೆ
ಅಗ್ನಿಪಥ್‌ ಸ್ವತಂತ್ರ ಯೋಜನೆಯಲ್ಲ. ಇದನ್ನು ಏಕಾಏಕಿ ಜಾರಿಗೊಳಿಸಿದ್ದೂ ಅಲ್ಲ. ಹಲವು ವರ್ಷಗಳಿಂದ ಈ ಬಗ್ಗೆ ಅಧ್ಯಯನ ನಡೆಸಿ, ಸಮಗ್ರವಾಗಿ ಪರಿಶೀಲಿಸಿ ಘೋಷಣೆ ಮಾಡಲಾಗಿದೆ. ಯೋಜನೆ ವಾಪಸ್‌ ಪಡೆಯುವ ಪ್ರಶ್ನೆಯೇ ಇಲ್ಲ. ಹಿಂಸಾತ್ಮಕ ಪ್ರತಿಭಟನೆಯನ್ನು ಸಹಿಸಿಕೊಳ್ಳುವುದೂ ಇಲ್ಲ ಎಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಹೇಳಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೬. ಬೆಂಗಳೂರಲ್ಲಿ ಗೆದ್ದರು ಸಿಎಂ ಬಸವರಾಜ ಬೊಮ್ಮಾಯಿ: ಇನ್ನು ದೆಹಲಿ ದಂಡಯಾತ್ರೆ
ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನಗಳ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಫಲರಾಗಿದ್ದಾರೆ. ವರಿಷ್ಠರ ಮನದಲ್ಲಿ ತಮ್ಮ ಮೇಲೆ ಸದಭಿಪ್ರಾಯ ಮೂಡಿಸುವಲ್ಲಿ ಯಶಸ್ವಿಯಾಗಿರುವ ಬೊಮ್ಮಾಯಿ ಅವರು, ೨೦೨೩ರ ಚುನಾವಣೆಗೆ ನಾಯಕತ್ವ ಕಾಯ್ದುಕೊಳ್ಳುವಲ್ಲಿಯೂ ಯಶಸ್ಸು ಕಾಣುತ್ತಾರೆಯೇ ಎಂಬ ಕುರಿತ ವಿಶ್ಲೇಷಣೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೭. Text book | ಮರುಪರಿಷ್ಕೃತ ಪಠ್ಯಪುಸ್ತಕ ಹಿಂಪಡೆಯಲು ಸಿಎಂಗೆ ಹೆಚ್‌.ಡಿ. ದೇವೇಗೌಡ ಪತ್ರ
ರಾಜ್ಯಾದ್ಯಂತ ಶಾಲೆಗಳು ಶುರುವಾಗಿ ತಿಂಗಳು ಕಳೆದರೂ ಪಠ್ಯಪುಸ್ತಕದ ವಾದ-ವಿವಾದ ಮಾತ್ರ ನಿಂತಿಲ್ಲ. ಕನ್ನಡಪರ ಸಂಘಟನೆಗಳಿಂದ ಹಿಡಿದು ವಿರೋಧ ಪಕ್ಷದ ನಾಯಕರು, ಹತ್ತಾರು ಸಾಹಿತಿಗಳು ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. ಈಗ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮರು ಪರಿಷ್ಕರಣೆಗೊಂಡ ಪಠ್ಯಪುಸ್ತಕಗಳನ್ನು ಹಿಂಪಡೆಯುವಂತೆ ಸಿಎಂ ಬಸವರಾಜ ಬೊಮ್ಮಯಿ ಅವರಿಗೆ ಪತ್ರವನ್ನು ಬರೆದಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೮. ಮುಂದುವರಿದ ರಾಹುಲ್‌ ಗಾಂಧಿ ವಿಚಾರಣೆ; ಪ್ರತಿಭಟನೆಗೆ ದೆಹಲಿಗೆ ಹೋದ ರಾಜ್ಯ ಕಾಂಗ್ರೆಸ್‌ ನಾಯಕರು
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇ.ಡಿ. ವಿಚಾರಣೆ ಇಂದು ಐದನೇ ದಿನವೂ ನಡೆಯುತ್ತಿದೆ. ಜೂ. ೨೩ಕ್ಕೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಇ.ಡಿ. ಅಧಿಕಾರಿಗಳ ಎದುರು ಹಾಜರಾಗಬೇಕು. ಇನ್ನು ರಾಹುಲ್‌ ಗಾಂಧಿಗೆ ಇಂದು ಕೂಡ ಇ.ಡಿ.ಯಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯಿಲ್ಲ. ಅದು ನಾಳೆಗೂ ಮುಂದುವರಿಯಬಹುದು. ಇದೆಲ್ಲದರ ಮಧ್ಯೆ ಇಂದು ದೆಹಲಿಯಲ್ಲಿ ಕಾಂಗ್ರೆಸ್‌ ತೀವ್ರ ಪ್ರತಿಭಟನೆ ನಡೆಸಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೯. England tour | ಕೊರೊನಾ ಸೋಂಕು: ಅಶ್ವಿನ್‌ಗೆ ಇಂಗ್ಲೆಂಡ್‌ ವಿಮಾನ ಮಿಸ್‌
ಭಾರತ ತಂಡದ ಹಿರಿಯ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ಗೆ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ (England tour) ಮೊದಲು ನಡೆಯುವ ಅಭ್ಯಾಸ ಪಂದ್ಯದಲ್ಲಿ ಭಾಗಹಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಅವರು ಕೊರೊನಾ ಸೋಂಕಿಗೆ ಒಳಗಾಗಿರುವ ಅವರಿಗೆ ಟೀಮ್‌ ಇಂಡಿಯಾ ಜತೆ ಪ್ರಯಾಣ ಮಾಡಲು ಸಾಧ್ಯವಾಗಿಲ್ಲ. ಅವರ ಆರ್‌ಟಿಪಿಸಿಆರ್‌ ವರದಿ ಪಾಸಿಟಿವ್‌ ಬಂದ ಕಾರಣ ಇಂಗ್ಲೆಂಡ್‌ ವಿಮಾನ ಮಿಸ್‌ ಆಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೧೦. ಬ್ಯಾಂಕೇತರ ಸಂಸ್ಥೆಗಳು ಪ್ರಿಪೇಯ್ಡ್‌ ವ್ಯಾಲೆಟ್‌ಗಳ ಮೂಲಕ ಸಾಲ ವಿತರಿಸಕೂಡದು ಎಂದ ಆರ್‌ಬಿಐ
ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ, ಪ್ರಿಪೇಯ್ಡ್‌ ಪೇಮೆಂಟ್‌ ಇನ್‌ಸ್ಟ್ರುಮೆಂಟ್‌ಗಳಿಗೆ ( Prepaid Payment Instruments-PPIs) ಸಂಬಂಧಿಸಿ ನೀಡಿರುವ ಸೂಚನೆಯಲ್ಲಿ, ಜುಲೈ ೧ರಿಂದ ಬ್ಯಾಂಕೇತರ ಸಂಸ್ಥೆಗಳು ಇಂಥ ವ್ಯಾಲೆಟ್‌ ಮತ್ತು ಪ್ರಿಪೇಯ್ಡ್‌ ಕಾರ್ಡ್‌ಗಳ ಮೂಲಕ ಸಾಲ ವಿತರಿಸುವಂತಿಲ್ಲ ಎಂದು ತಿಳಿಸಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

Exit mobile version