ಸರ್ಕಾರಕ್ಕೆ ಸಂಕಷ್ಟ ತಂದ ಶಿಂಧೆಗೆ ಶಿವಸೇನೆಯಿಂದ ಶಾಕ್‌: ಪೊಲೀಸರಿಗೆ ದೂರು ಕೊಟ್ಟ ಶಾಸಕನ ಪತ್ನಿ - Vistara News

ದೇಶ

ಸರ್ಕಾರಕ್ಕೆ ಸಂಕಷ್ಟ ತಂದ ಶಿಂಧೆಗೆ ಶಿವಸೇನೆಯಿಂದ ಶಾಕ್‌: ಪೊಲೀಸರಿಗೆ ದೂರು ಕೊಟ್ಟ ಶಾಸಕನ ಪತ್ನಿ

Maharashtra Political Crisis: ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರವೀಗ ಅಲ್ಲಾಡುತ್ತಿದೆ. ಇಲ್ಲಿ ಶಿವಸೇನೆ ನಾಯಕ ಏಕನಾಥ್‌ ಶಿಂದೆ ಒಂದಷ್ಟು ಶಾಸಕರನ್ನು ಕರೆದುಕೊಂಡು ರೆಸಾರ್ಟ್‌ ಸೇರಿದ್ದಾರೆ.

VISTARANEWS.COM


on

Eknath Shinde
ಏಕನಾಥ್‌ ಶಿಂಧೆ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಮಹಾರಾಷ್ಟ್ರ ಮಹಾ ವಿಕಾಸ ಅಘಾಡಿ ಸರ್ಕಾರಕ್ಕೆ ಅಪಾಯ ತಂದೊಡ್ಡಿ ಸುಮಾರು 21 ಶಾಸಕರೊಂದಿಗೆ ಗುಜರಾತ್‌ನ ಸೂರತ್‌ನಲ್ಲಿರುವ ರೆಸಾರ್ಟ್‌ ಸೇರಿರುವ ಬಂಡಾಯ ಸಚಿವ ಏಕನಾಥ್‌ ಶಿಂಧೆಯನ್ನು ಶಿವಸೇನೆ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ತೆಗೆದುಹಾಕಲಾಗಿದೆ. ಮಹಾರಾಷ್ಟ್ರದ ನಗರಾಭಿವೃದ್ಧಿ ಸಚಿವರೂ ಆಗಿರುವ ಏಕನಾಥ್‌ ಶಿಂದೆ ಮಹಾ ಸರ್ಕಾರದ ಪಾಲಿಗೆ ಖಳನಾಯಕನಾಗುವ ಮಾದರಿಯ ಬೆಳವಣಿಗೆಗಳು ನಡೆಯುತ್ತಿವೆ. ಜೂ.20ರಂದು ವಿಧಾನಪರಿಷತ್‌ ಚುನಾವಣೆ ನಡೆದು, ಬಿಜೆಪಿಯ ನಾಲ್ವರು ಅಭ್ಯರ್ಥಿಗಳು ಗೆದ್ದ ಬೆನ್ನಲ್ಲೇ ಶಿಂದೆ ತಮ್ಮ ಆಪ್ತರೊಟ್ಟಿಗೆ ರೆಸಾರ್ಟ್ ಹೊಕ್ಕಿದ್ದಾರೆ. ಬಿಜೆಪಿ ಅಧಿಕಾರ ಇರುವ ರಾಜ್ಯಕ್ಕೇ ಹೋಗಿ ಅವರು ರೆಸಾರ್ಟ್ ಹೊಕ್ಕಿದ್ದರಿಂದ ಅವರೆಲ್ಲ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ಅನುಮಾನವೂ ಹೆಚ್ಚಾಗಿದೆ.

ದೂರು ಕೊಟ್ಟ ಶಾಸಕನ ಪತ್ನಿ
ಏಕನಾಥ್‌ ಶಿಂಧೆಯವರೊಂದಿಗೆ ರೆಸಾರ್ಟ್‌ ಸೇರಿದ ಶಿವಸೇನೆ ಶಾಸಕ ನಿತಿನ್‌ ದೇಶ್‌ಮುಖ್‌ ಪತ್ನಿ ಪ್ರಂಜಲಿ ಅವರು ಅಕೋಲಾ ಠಾಣೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ʼನನ್ನ ಪತಿ ಸಂಪರ್ಕಕ್ಕೆ ಸಿಗುತ್ತಿಲ್ಲ. ಜೂ.19ರಂದು ಸಂಜೆ 7ಗಂಟೆಗೆ ಅವರ ಬಳಿ ಕೊನೇಬಾರಿಗೆ ಮಾತನಾಡಿದ್ದೇನೆ. ನಂತರ ಫೋನ್‌ ಸಂಪರ್ಕ ಸಾಧ್ಯವಾಗುತ್ತಿಲ್ಲ. ಸ್ವಿಚ್‌ ಆಫ್‌ ಬರುತ್ತಿದೆ. ಬಹುಶಃ ಅವರ ಜೀವಕ್ಕೆ ಅಪಾಯ ಇರಬಹುದುʼ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಶಾಸಕ ನಿತಿನ್‌ ದೇಶ್‌ಮುಖ್‌ ಅವರು ಬಾಲಾಪುರ್‌ ವಿಧಾನಸಭೆ ಸಭೆ ಶಾಸಕರಾಗಿದ್ದಾರೆ.

ನಿನ್ನೆ ಸಂಜೆಯಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಬಗ್ಗೆ ಶಿವಸೇನೆ ಸಂಸದ ಸಂಜಯ್‌ ರಾವತ್‌ ಪ್ರತಿಕ್ರಿಯೆ ನೀಡಿದ್ದಾರೆ. ʼಉದ್ಧವ್‌ ಠಾಕ್ರೆ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದೇ ರೀತಿ ಹಿಂದೆ ಮಧ್ಯಪ್ರದೇಶದಲ್ಲಿ ಮಾಡಿತ್ತು. ರಾಜಸ್ಥಾನದಲ್ಲಿ ಒಮ್ಮೆ ಪ್ರಯತ್ನ ಮಾಡಿ ವಿಫಲಗೊಂಡಿತು. ಮಹಾರಾಷ್ಟ್ರದಲ್ಲೂ ಬಿಜೆಪಿಗೆ ಸರ್ಕಾರ ಉರುಳಿಸಲು ಸಾಧ್ಯವಿಲ್ಲ. ನಮ್ಮ ಶಿವಸೇನೆಯಲ್ಲಿ ನಿಷ್ಠರಿದ್ದಾರೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದ ಮೈತ್ರಿ ಸರಕಾರ: ಉರುಳುವುದೇ? ಉಳಿಯುವುದೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Narendra Modi: ಡ್ರಮ್‌, ಜಾಗಟೆ ಬಾರಿಸಿ, ಹಾಡು ಹಾಡಿ; ಮತದಾನ ಹೆಚ್ಚಿಸಲು ಸ್ತ್ರೀಯರಿಗೆ ಕರೆ ಕೊಟ್ಟ ಮೋದಿ

Narendra Modi: ವಾರಾಣಸಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಬೇಕು. ಇದಕ್ಕಾಗಿ ಮಹಿಳೆಯರು ಕೈಜೋಡಿಸಬೇಕು. ಮತದಾನ ನಡೆಯುವ ದಿನ ಸುಮಾರು 20-25 ಮಹಿಳೆಯರು ಒಗ್ಗೂಡಿ ಮತಗಟ್ಟೆಗಳ ಬಳಿ ತೆರಳಿ. ಡ್ರಮ್‌ ಹಾಗೂ ತಟ್ಟೆಗಳನ್ನು ಬಾರಿಸಿ, ಹಾಡು ಹಾಡಿ ಎಂಬುದಾಗಿ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಜೂನ್‌ 1ರಂದು ವಾರಾಣಸಿಯಲ್ಲಿ ಮತದಾನ ನಡೆಯಲಿದೆ.

VISTARANEWS.COM


on

Narendra Modi
Koo

ವಾರಾಣಸಿ: ಲೋಕಸಭೆ ಚುನಾವಣೆಯ (Lok Sabha Election 2024) 5 ಹಂತದ ಮತದಾನ ಮುಕ್ತಾಯವಾಗಿದೆ. ಇದರೊಂದಿಗೆ ದೇಶಾದ್ಯಂತ 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯವಾದಂತಾಗಿದೆ. ಇನ್ನೂ ಎರಡು ಹಂತದ ಮತದಾನ ಬಾಕಿ ಇರುವ ಕಾರಣ ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿ ಎಲ್ಲ ಪಕ್ಷಗಳ ಪ್ರಮುಖ ನಾಯಕರು, ಅಭ್ಯರ್ಥಿಗಳು ಪ್ರಚಾರ ಕೈಗೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ, ಮತದಾನ ಪ್ರಮಾಣ ಹೆಚ್ಚಿಸಲು ಮಹಿಳೆಯರಿಗೆ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. “ಡ್ರಮ್‌ ಹಾಗೂ ತಟ್ಟೆಗಳನ್ನು ಬಾರಿಸುವ ಮೂಲಕ ಮತದಾನ ಹೆಚ್ಚಿಸಿ” ಎಂದು ವಾರಾಣಸಿ (Varanasi) ಮಹಿಳೆಯರಿಗೆ ಮೋದಿ ಸಲಹೆ ನೀಡಿದ್ದಾರೆ.

“ವಾರಾಣಸಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಬೇಕು. ಇದಕ್ಕಾಗಿ ಮಹಿಳೆಯರು ಕೈಜೋಡಿಸಬೇಕು. ಮತದಾನ ನಡೆಯುವ ದಿನ ಸುಮಾರು 20-25 ಮಹಿಳೆಯರು ಒಗ್ಗೂಡಿ ಮತಗಟ್ಟೆಗಳ ಬಳಿ ತೆರಳಿ. ಡ್ರಮ್‌ ಹಾಗೂ ತಟ್ಟೆಗಳನ್ನು ಬಾರಿಸಿ, ಹಾಡು ಹಾಡಿ. ಬೆಳಗ್ಗೆ 10 ಗಂಟೆಯೊಳಗೆ ಮತಗಟ್ಟೆಯ ಬಳಿ ಹೀಗೆ ಮಾಡಿದರೆ ಖಂಡಿತವಾಗಿಯೂ ಹೆಚ್ಚಿನ ಪ್ರಮಾಣದ ಮತದಾನ ದಾಖಲಾಗುತ್ತದೆ. ಪ್ರತಿಯೊಂದು ಮತಗಟ್ಟೆಗಳಲ್ಲೂ ಹೆಣ್ಣುಮಕ್ಕಳು ಹೀಗೆ ಮಾಡುವ ಮೂಲಕ ಮತದಾನದ ಜಾಗೃತಿ ಮೂಡಿಸಬೇಕು” ಎಂದು ವಾರಾಣಸಿಯಲ್ಲಿ ಮಹಿಳೆಯರಿಗೆ ಮೋದಿ ಕರೆ ನೀಡಿದ್ದಾರೆ.

ಇಂಡಿಯಾ ಒಕ್ಕೂಟದ ವಿರುದ್ಧ ವಾಗ್ದಾಳಿ

ವಾರಾಣಸಿಯಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ನರೇಂದ್ರ ಮೋದಿ ಅವರು ಇಂಡಿಯಾ ಒಕ್ಕೂಟದ ವಿರುದ್ಧ ವಾಗ್ದಾಳಿ ನಡೆಸಿದರು. “ಇಂಡಿಯಾ ಒಕ್ಕೂಟವು ಎಂದಿಗೂ ಮಹಿಳಾ ವಿರೋಧಿ ಮನಸ್ಥಿತಿ ಹೊಂದಿದೆ. ಅವರು ಮಹಿಳೆಯರಿಗೆ ಮೀಸಲಾತಿ ನೀಡುವುದನ್ನು ವಿರೋಧಿಸಿದರು. ಇಂಡಿಯಾ ಒಕ್ಕೂಟದ ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ, ಮಹಿಳೆಯರಿಗೇ ಹೆಚ್ಚು ತೊಂದರೆಯಾಗುತ್ತದೆ. ಹೆಣ್ಣುಮಕ್ಕಳಿಗೆ ತೊಂದರೆಯಾದರೆ, ಹುಡುಗರು ಎಂದ ಮೇಲೆ ತಪ್ಪು ಮಾಡುತ್ತಾರೆ ಎಂದು ಹೇಳುತ್ತಾರೆ. ಆದರೆ, ಯೋಗಿ ಆದಿತ್ಯನಾಥ್‌ ಅವರು ಸಿಎಂ ಆದ ಮೇಲೆ ತಪ್ಪು ಮಾಡುವ ಹುಡುಗರಿಗೆ ತಕ್ಕ ಪಾಠ ಕಲಿಸಿದ್ದಾರೆ. ಇದರಿಂದ ನಮ್ಮ ಸಹೋದರ-ಸಹೋದರಿಯರು ಸುರಕ್ಷಿತವಾಗಿದ್ದಾರೆ” ಎಂದರು.

ನರೇಂದ್ರ ಮೋದಿ ಅವರು 2014ರಿಂದಲೂ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇವರ ವಿರುದ್ಧ ಈ ಬಾರಿ ಕಾಂಗ್ರೆಸ್‌ ಅಜಯ್‌ ರಾಯ್‌ ಅವರನ್ನು ಕಣಕ್ಕಿಳಿಸಿದೆ. ಅಖಿಲ ಭಾರತ ಹಿಂದು ಮಹಾಸಭಾ (ABHM) ಪಕ್ಷದಿಂದ ಮಂಗಳಮುಖಿಯಾಗಿರುವ ಕಿನ್ನಾರ್‌ ಮಹಾಮಂಡಲೇಶ್ವರ್‌ ಹೇಮಾಂಗಿ ಸಖಿ ಅವರು ಕೂಡ ಸ್ಪರ್ಧಿಸುತ್ತಿದ್ದಾರೆ. ಬಿಎಸ್‌ಪಿಯು ಅಥರ್‌ ಜಮಾಲ್‌ ಲರಿ ಅವರಿಗೆ ಟಿಕೆಟ್‌ ನೀಡಿದೆ. ಕ್ಷೇತ್ರದಲ್ಲಿ ಜೂನ್‌ 1ರಂದು ಮತದಾನ ನಡೆಯಲಿದೆ. ವಾರಾಣಸಿ ಲೋಕಸಭೆ ಕ್ಷೇತ್ರದಲ್ಲಿ 19.62 ಲಕ್ಷ ಮತದಾರರಿದ್ದಾರೆ. ಇವರಲ್ಲಿ 10.65 ಲಕ್ಷ ಪುರುಷರಿದ್ದರೆ, 8.97 ಲಕ್ಷ ಮಹಿಳೆಯರಿದ್ದಾರೆ. 135 ಮಂಗಳಮುಖಿಯರೂ ಮತದಾನ ಮಾಡಲಿದ್ದಾರೆ.

ಇದನ್ನೂ ಓದಿ: Narendra Modi: ಅಂಬೇಡ್ಕರ್‌ ಇರದಿದ್ದರೆ ಮೀಸಲಾತಿ ಜಾರಿಗೆ ನೆಹರು ಬಿಡುತ್ತಿರಲಿಲ್ಲ ಎಂದ ಮೋದಿ!

Continue Reading

ದೇಶ

ಐಎಎಸ್‌ ಆಫೀಸರ್‌ ಆಗಿರುವ ಮಾಜಿ ಪತ್ನಿಯಿಂದ ನನ್ನ ಮನೆಗೆ ವಿದ್ಯುತ್‌ ಕಟ್; ಇದು ಐಪಿಎಸ್‌ ಆಫೀಸರ್‌ ಅಳಲು!

ತಮಿಳುನಾಡಿನಲ್ಲಿ ಐಎಎಸ್‌ ಅಧಿಕಾರಿಯಾಗಿರುವ ಬೀಲಾ ವೆಂಕಟೇಶನ್‌ ಹಾಗೂ ಐಪಿಎಸ್‌ ಅಧಿಕಾರಿ ರಾಜೇಶ್‌ ದಾಸ್‌ ಅವರು ಮಾಜಿ ಪತಿ-ಪತ್ನಿಯಾಗಿದ್ದು, ಇವರು ವಿಚ್ಛೇದನದ ಬಳಿಕವೂ ಜಗಳ ಮುಂದುವರಿಸಿದ್ದಾರೆ. ಅಧಿಕಾರಿಗಳಿಬ್ಬರ ಜಗಳವು ಬೀದಿಗೆ ಬಂದಿರುವುದೇಕೆ? ಇವರ ಆರೋಪಗಳು ಏನೇನು ಎಂಬುದರ ಮಾಹಿತಿ ಇಲ್ಲಿದೆ.

VISTARANEWS.COM


on

Tamil Nadu Officers
Koo

ಚೆನ್ನೈ: ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಇನ್ನು, ಮದುವೆಯಾದ ಬಳಿಕ, ಹೊಂದಾಣಿಕೆಯಾಗದೆ, ಉಂಡು ಮಲಗಿದ ಮೇಲೂ ಜಗಳ ಮುಂದುವರಿಯು ಕಾರಣದಿಂದ ವಿಚ್ಛೇದನ ಪಡೆದವರು ತಮ್ಮ ಮಾಡಿಗೆ ತಾವು ಇರುತ್ತಾರೆ. ಆದರೆ, ತಮಿಳುನಾಡಿನಲ್ಲಿ (Tamil Nadu) ಐಎಎಸ್‌ ಅಧಿಕಾರಿಯಾಗಿರುವ ಬೀಲಾ ವೆಂಕಟೇಶನ್‌ (Beela Venkatesan) ಹಾಗೂ ಐಪಿಎಸ್‌ ಅಧಿಕಾರಿ ರಾಜೇಶ್‌ ದಾಸ್‌ (Rajesh Das) ಅವರು ಮಾಜಿ ಪತಿ-ಪತ್ನಿಯಾಗಿದ್ದು, ಇವರು ವಿಚ್ಛೇದನದ ಬಳಿಕವೂ ಜಗಳ ಮುಂದುವರಿಸಿದ್ದಾರೆ. “ಐಎಎಸ್‌ ಅಧಿಕಾರಿಯಾಗಿರುವ ಮಾಜಿ ಪತ್ನಿಯು ನನ್ನ ಮನೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾಳೆ” ಎಂಬುದಾಗಿ ರಾಜೇಶ್‌ ದಾಸ್‌ ಆರೋಪಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

“ನಾನು ಮನೆಯಲ್ಲಿ ಇದ್ದಾಗಲೇ ಮೇ 20ರಂದು ಮನೆಯ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ. ತಮಿಳುನಾಡು ಉತ್ಪಾದನೆ ಮತ್ತು ವಿತರಣೆ ನಿಗಮದ (TANGEDCO) ಅಧಿಕಾರಿಗಳು ನನ್ನ ಅಭಿಪ್ರಾಯವನ್ನೂ ಪಡೆಯದೆ ವಿದ್ಯುತ್‌ ಕಡಿತಗೊಳಿಸಲಾಗಿದೆ. ನನ್ನ ಮನೆಯ ವಿದ್ಯುತ್‌ ಶುಲ್ಕವನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡಲಾಗಿದೆ. ವಿದ್ಯುತ್‌ ಕಡಿತಗೊಳಿಸುವ ಕುರಿತು ಕೋರ್ಟ್‌ ಆದೇಶವೂ ಇಲ್ಲ. ಹೀಗಿದ್ದರೂ, ಇಂಧನ ಇಲಾಖೆ ಕಾರ್ಯದರ್ಶಿ ಆಗಿರುವ, ನನ್ನ ಮಾಜಿ ಪತ್ನಿ ಬೀಲಾ ವೆಂಕಟೇಶನ್‌ ಅವರೇ ವಿದ್ಯುತ್‌ ಕಡಿತಗೊಳಿಸಿದ್ದಾರೆ” ಎಂಬುದಾಗಿ ರಾಜೇಶ್‌ ದಾಸ್‌ ಅವರು ಆರೋಪಿಸಿದ್ದಾರೆ.

ವಿಚ್ಛೇದನಕ್ಕೂ ಮೊದಲು ರಾಜೇಶ್‌ ದಾಸ್ ಹಾಗೂ ಬೀಲಾ ವೆಂಕಟೇಶನ್.‌

ಬೀಲಾ ವೆಂಕಟೇಶನ್‌ ಪ್ರತಿಕ್ರಿಯೆ ಏನು?

ರಾಜೇಶ್‌ ದಾಸ್‌ ಅವರ ಆರೋಪಗಳಿಗೆ ಬೀಲಾ ವೆಂಕಟೇಶನ್‌ ಅವರು ಪ್ರತಿಕ್ರಿಯಿಸಿದ್ದು, ಅವರ ಆರೋಪಗಳನ್ನು ನಿರಾಕರಿಸಿದ್ದಾರೆ. “ಕಳೆದ ಮೂರು ತಿಂಗಳಿಂದ ಮನೆಯಲ್ಲಿ ಯಾರೂ ಇಲ್ಲ. ಆದರೆ, ನನ್ನ ಹೆಸರಿನಲ್ಲಿ ವಿದ್ಯುತ್‌ ಬಿಲ್‌ ಬರುತ್ತದೆ, ಆ ಜಾಗವೂ ನನ್ನ ಹೆಸರಲ್ಲೇ ಇದೆ. ಹಾಗಾಗಿ, ನಾನು ಅನವಶ್ಯಕವಾಗಿ ದುಡ್ಡು ವ್ಯಯಿಸಲು ಇಚ್ಛಿಸುವುದಿಲ್ಲ. ರಾಜೇಶ್‌ ದಾಸ್‌ ಅವರೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬ ಕುರಿತು ದಾಖಲೆ ಕೊಡಿ, ನೋಂದಣಿ ಬದಲಾಯಿಸಿಕೊಳ್ಳಿ ಎಂಬುದಾಗಿ ಮನವಿ ಮಾಡಿದರೂ ದಾಖಲೆ ಸಲ್ಲಿಸಿಲ್ಲ. ಅವರು ದಾಖಲೆ ನೀಡದ ಕಾರಣ ಅಧಿಕಾರಿಗಳು ತಮ್ಮ ಕರ್ತವ್ಯ ಮಾಡಿದ್ದಾರೆ” ಎಂದಿದ್ದಾರೆ.

ತಮಿಳುನಾಡು ಮಾಜಿ ಡಿಜಿಪಿ ಆಗಿರುವ ರಾಜೇಶ್‌ ದಾಸ್‌ ಅವರು ತಮ್ಮ ಅಧೀನದಲ್ಲಿ ಕೆಲಸ ಮಾಡುವ ಮಹಿಳಾ ಐಪಿಎಸ್‌ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಅಪರಾಧಿ ಎಂದು ಅಧೀನ ನ್ಯಾಯಾಲಯವು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ಅವರು ಮದ್ರಾಸ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಇವರ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ ನಿರಾಕರಿಸಿತ್ತು. ಆದರೆ, ಇವರ ಬಂಧನಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಮೇ 17ರಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಇದನ್ನೂ ಓದಿ: Viral Video: ಅಬ್ಬಾ…ಇವರೆಂಥಾ ರಾಕ್ಷಸರು! ಸೊಸೆ ಮೇಲೆ ಅತ್ತೆ, ನಾದಿನಿಯಿಂದ ಅಟ್ಯಾಕ್‌; ವಿಡಿಯೋ ವೈರಲ್‌

Continue Reading

ದೇಶ

Porsche Crash: 2 ಕಾರು, 4 ನಗರ, 1 ಸಿಮ್‌ ಕಾರ್ಡ್;‌ ಮಗ ಕಾರು ಗುದ್ದಿದ ಬಳಿಕ ಅಪ್ಪನ ಪ್ಲಾನ್‌ ಏನು? ಇಲ್ಲಿದೆ ಭೀಕರ ಮಾಹಿತಿ

Porsche Crash: ಪುಣೆಯಲ್ಲಿ ಮಗನು ಬೈಕ್‌ಗೆ ಕಾರು ಗುದ್ದಿಸಿ, ಇಬ್ಬರ ಸಾವಿಗೆ ಕಾರಣವಾದ ಪ್ರಕರಣ ಸುದ್ದಿಯಾಗುತ್ತಲೇ ಉದ್ಯಮಿ ವಿಶಾಲ್‌ ಅಗರ್ವಾಲ್‌ ತಲೆಮರೆಸಿಕೊಂಡರು. ಮೊದಲು ಪುಣೆಯ ತಮ್ಮ ನಿವಾಸಕ್ಕೆ ತೆರಳಿದ ಅವರು, ಅಲ್ಲಿಂದ ಡೌಂಡ್‌ನಲ್ಲಿರುವ ಫಾರ್ಮ್‌ಹೌಸ್‌ಗೆ ಹೋದರು. ಅಲ್ಲಿಂದ, ಕೊಲ್ಹಾಪುರಕ್ಕೆ ಪರಾರಿಯಾದರು. ಇಷ್ಟಾದರೂ ಅವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು. ಹೇಗೆ ಅಂತೀರಾ? ಮುಂದೆ ಓದಿ.

VISTARANEWS.COM


on

Porsche Crash
Koo

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ 17 ವರ್ಷದ ಬಾಲಕನು ಮದ್ಯಪಾನ ಮಾಡಿ ಪೋರ್ಶೆ ಕಾರು ಚಲಾಯಿಸಿ, ಅಪಘಾತದಲ್ಲಿ (Porsche Crash) ಇಬ್ಬರ ಸಾವಿಗೆ ಕಾರಣವಾದ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದೆ. ಅಪ್ರಾಪ್ತನ ಕೈಗೆ ಕಾರು ಕೊಟ್ಟ ಹಿನ್ನೆಲೆಯಲ್ಲಿ 17 ವರ್ಷದ ಬಾಲಕನ ತಂದೆ ವಿಶಾಲ್‌ ಅಗರ್ವಾಲ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಬೆನ್ನಲ್ಲೇ, ಅಪಘಾತದ ಬಳಿಕ (Pune Accident) ಪೊಲೀಸರಿಂದ ರಕ್ಷಿಸಿಕೊಳ್ಳಲು ವಿಶಾಲ್‌ ಅಗರ್ವಾಲ್‌ (Vishal Agarwal) ಯಾವ ರೀತಿ ಪ್ಲಾನ್‌ ಮಾಡಿದ್ದರು ಎಂಬುದರ ಕುರಿತು ಸ್ಫೋಟಕ ಮಾಹಿತಿ ಲಭ್ಯವಾಗಿದೆ.

ಪುಣೆಯಲ್ಲಿ ಮಗನು ಬೈಕ್‌ಗೆ ಕಾರು ಗುದ್ದಿಸಿ, ಇಬ್ಬರ ಸಾವಿಗೆ ಕಾರಣವಾದ ಪ್ರಕರಣ ಸುದ್ದಿಯಾಗುತ್ತಲೇ ಉದ್ಯಮಿ ವಿಶಾಲ್‌ ಅಗರ್ವಾಲ್‌ ತಲೆಮರೆಸಿಕೊಂಡರು. ಮೊದಲು ಪುಣೆಯ ತಮ್ಮ ನಿವಾಸಕ್ಕೆ ತೆರಳಿದ ಅವರು, ಅಲ್ಲಿಂದ ಡೌಂಡ್‌ನಲ್ಲಿರುವ ಫಾರ್ಮ್‌ಹೌಸ್‌ಗೆ ಹೋದರು. ಅಲ್ಲಿಂದ, ಕೊಲ್ಹಾಪುರಕ್ಕೆ ಪರಾರಿಯಾದ ಅವರು ಅಲ್ಲಿ ಗೆಳೆಯನನ್ನು ಭೇಟಿಯಾದರು. ಅಲ್ಲಿ, ಪೊಲೀಸರಿಂದ ಪರಾರಿಯಾಗಲು ಮತ್ತೊಂದು ಯೋಜನೆ ರೂಪಿಸಿದರು ಎಂದು ತಿಳಿದುಬಂದಿದೆ.

ಅಪಘಾತದ ಭೀಕರ ವಿಡಿಯೊ

ಪೊಲೀಸರನ್ನು ದಾರಿ ತಪ್ಪಿಸಲು ಪ್ಲಾನ್‌ ಮಾಡಿದ ವಿಶಾಲ್‌ ಅಗರ್ವಾಲ್‌, ತಮ್ಮ ಕಾರು ಚಾಲಕನಿಗೆ ವಾಹನ ಕೊಟ್ಟು, ಆತನನ್ನು ಮುಂಬೈಗೆ ಕಳುಹಿಸಿದರು. ಇನ್ನು ಗೆಳೆಯನ ಕಾರಿನಲ್ಲಿ ವಿಶಾಲ್‌ ಅಗರ್ವಾಲ್‌ ಸಂಭಾಜಿನಗರಕ್ಕೆ ತೆರಳಿದರು. ಇದರ ಮಧ್ಯೆಯೇ, ಒಂದು ಸಿಮ್‌ ಕಾರ್ಡ್‌ ಬದಲಿಸಿದ ಅವರು, ಕುಟುಂಬಸ್ಥರಿಗೆ ಕರೆ ಮಾಡಿ, ಮುಂಬೈಗೆ ಬರುತ್ತಿದ್ದೇನೆ ಎಂಬುದಾಗಿ ಸುಳ್ಳು ಹೇಳಿದ್ದಾರೆ. ಕುಟುಂಬಸ್ಥರನ್ನು ಪೊಲೀಸರು ವಿಚಾರಣೆ ನಡೆಸಿದರೂ ಸಿಗಬಾರದು ಎಂಬುದು ಅಗರ್ವಾಲ್‌ ಪ್ಲಾನ್‌ ಆಗಿತ್ತು ಎನ್ನಲಾಗಿದೆ.

ಚಾಣಾಕ್ಷತನ ಮೆರೆದ ಪೊಲೀಸರು

ವಿಶಾಲ್‌ ಅಗರ್ವಾಲ್‌ ಇಷ್ಟೆಲ್ಲ ಯೋಜನೆ ರೂಪಿಸಿದರೂ ಪುಣೆ ಕ್ರೈಂ ಬ್ರ್ಯಾಂಚ್‌ ಪೊಲೀಸರು ಸಂಭಾಜಿನಗರದಲ್ಲಿ ವಿಶಾಲ್‌ ಅಗರ್ವಾಲ್‌ ಅವರನ್ನು ಬಂಧಿಸಿದರು. ಸಿಸಿಟಿವಿ ಕ್ಯಾಮೆರಾ ಹಾಗೂ ವಿಶಾಲ್‌ ಅಗರ್ವಾಲ್‌ ಗೆಳೆಯನ ಕಾರಿನ ಜಿಪಿಎಸ್‌ ಟ್ರ್ಯಾಕ್‌ ಮಾಡಿ, ಕೊನೆಗೂ ಅವರನ್ನು ಬಂಧಿಸಿದ್ದಾರೆ. ಸಂಭಾಜಿ ನಗರದ ಲಾಡ್ಜ್‌ನಲ್ಲಿ ಇರುವ ಮಾಹಿತಿ ಪಡೆದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು. ರಿಯಲ್‌ ಎಸ್ಟೇಟ್‌ ಉದ್ಯಮಿಯಾಗಿರುವ ವಿಶಾಲ್‌ ಅಗರ್ವಾಲ್‌ ವಿರುದ್ಧ ಪೊಲೀಸರು ಎಫ್‌ಐಆರ್‌ ಕೂಡ ದಾಖಲಿಸಿದ್ದಾರೆ.

ಇದನ್ನೂ ಓದಿ: ಕುಡಿದು ಕಾರು ಓಡಿಸಿ ಇಬ್ಬರ ಜೀವ ತೆಗೆದ ಅಪ್ರಾಪ್ತನ ತಂದೆಯನ್ನು ಬಂಧಿಸಿದ ಪೊಲೀಸರು; ಬಾರ್‌ ಮಾಲೀಕನ ವಿರುದ್ಧವೂ ಕ್ರಮ

Continue Reading

ಪ್ರಮುಖ ಸುದ್ದಿ

Narendra Modi: ಅಂಬೇಡ್ಕರ್‌ ಇರದಿದ್ದರೆ ಮೀಸಲಾತಿ ಜಾರಿಗೆ ನೆಹರು ಬಿಡುತ್ತಿರಲಿಲ್ಲ ಎಂದ ಮೋದಿ!

Narendra Modi: ಬಿಹಾರದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಇದೇ ವೇಳೆ ಅವರು ಮೀಸಲಾತಿ ವಿಷಯ ಪ್ರಸ್ತಾಪಿಸಿದರು. “ಡಾ.ಬಿ.ಆರ್.ಅಂಬೇಡ್ಕರ್ ಅವರು ಇರದಿದ್ದರೆ ಮೀಸಲಾತಿ ಜಾರಿಗೊಳಿಸಲು ಜವಾಹರ ಲಾಲ್‌ ನೆಹರು ಬಿಡುತ್ತಿರಲಿಲ್ಲ” ಎಂದು ಆರೋಪಿಸಿದ್ದಾರೆ.

VISTARANEWS.COM


on

Narendra Modi
Koo

ಪಟನಾ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕಾಂಗ್ರೆಸ್‌ ವಿರುದ್ಧ ಪ್ರತಿ ರ‍್ಯಾಲಿಯಲ್ಲೂ ವಾಗ್ದಾಳಿ, ಆರೋಪ, ಟೀಕೆ, ವ್ಯಂಗ್ಯ ಮಾಡುತ್ತಿದ್ದಾರೆ. ಈಗ, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಜವಾಹರ ಲಾಲ್‌ ನೆಹರು (Jawaharlal Nehru) ಅವರನ್ನು ಪ್ರಸ್ತಾಪಿಸಿ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ. ಬಿಹಾರದ ಮೋತಿಹರಿಯಲ್ಲಿ ನಡೆದ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಮೋದಿ, “ಅಂಬೇಡ್ಕರ್‌ ಅವರು ಇರದಿದ್ದರೆ ಜವಾಹರ ಲಾಲ್‌ ನೆಹರು ಅವರು ಮೀಸಲಾತಿ ಜಾರಿಗೊಳಿಸಲು ಬಿಡುತ್ತಿರಲಿಲ್ಲ” ಎಂದಿದ್ದಾರೆ.

“ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗದವರಿಗೆ (OBC) ಮೀಸಲಾತಿ ನೀಡಲು ಜವಾಹರಲಾಲ್‌ ನೆಹರು ಅವರಿಗೆ ಸುತಾರಾಂ ಇಷ್ಟವಿರಲಿಲ್ಲ. ಇದೇ ಕಾರಣಕ್ಕಾಗಿ ಆಗಿನ ಮುಖ್ಯಮಂತ್ರಿಗಳಿಗೆ ತಮ್ಮ ಅಭಿಪ್ರಾಯವನ್ನು ತಿಳಿಸಿ ಪತ್ರ ಬರೆದಿದ್ದರು. ಹಾಗೊಂದು ವೇಳೆ, ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಇರದಿದ್ದರೆ, ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗಳಿಗೆ ಮೀಸಲಾತಿ ನೀಡಲು ಜವಾಹರ ಲಾಲ್‌ ನೆಹರು ಅವರು ಬಿಡುತ್ತಿರಲಿಲ್ಲ” ಎಂದು ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

“ಕಾಂಗ್ರೆಸ್‌ನಿಂದ ಆಯ್ಕೆಯಾದ ಪ್ರಧಾನಿಗಳು ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಯವರಿಗೆ ದ್ರೋಹ ಎಸಗಿದರು. ಇಂದಿರಾ ಗಾಂಧಿ ಆಗಲಿ, ರಾಜೀವ್‌ ಗಾಂಧಿ ಇರಲಿ, ಇವರೆಲ್ಲ ಮೀಸಲಾತಿಯನ್ನು ವಿರೋಧಿಸಿದವರೇ. ಕಾಂಗ್ರೆಸ್‌ನಿಂದ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಯವರಿಗೆ ಎಂದಿಗೂ ಗೌರವ ಸಿಕ್ಕಿಲ್ಲ. ಇಂತಹ ಕಾಂಗ್ರೆಸ್‌ ನಾಯಕರು ಈಗ, ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಿಸುತ್ತದೆ. ಮೀಸಲಾತಿಯನ್ನು ಕಿತ್ತು ಎಸೆಯಲಾಗುತ್ತಿದೆ ಎಂಬುದಾಗಿ ಸುಳ್ಳು ಹರಡುತ್ತಿದ್ದಾರೆ” ಎಂದು ಹೇಳಿದರು.

“ತುಳಿತಕ್ಕೊಳಗಾದ ಸಮುದಾಯಗಳ ಹಕ್ಕುಗಳ ರಕ್ಷಣೆಗೆ ಬಿಜೆಪಿಯು ಬದ್ಧವಾಗಿದೆ. ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಸಮುದಾಯದವರ ಹಕ್ಕುಗಳನ್ನು ಎನ್‌ಡಿಎ ಸರ್ಕಾರವು ರಕ್ಷಿಸುತ್ತಿದೆ. ಆದರೆ, ಇಂಡಿಯಾ ಒಕ್ಕೂಟವು ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಹೊರಟಿದೆ. ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವುದನ್ನು ಅಂಬೇಡ್ಕರ್‌ ಅವರೂ ವಿರೋಧಿಸಿದ್ದರು. ಆದರೆ, ಮತ ಬ್ಯಾಂಕ್‌ಗಾಗಿ ಕಾಂಗ್ರೆಸ್‌ ಸೇರಿ ಇಂಡಿಯಾ ಒಕ್ಕೂಟದ ಪಕ್ಷಗಳು ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಯವರಿಗೆ ದ್ರೋಹ ಎಸಗುತ್ತಿವೆ” ಎಂದು ತಿಳಿಸಿದರು.

ಇದನ್ನೂ ಓದಿ: ‘ಪುರಿ ಜಗನ್ನಾಥನೇ ಮೋದಿಯ ಭಕ್ತ’ ಹೇಳಿಕೆ; ಪ್ರಾಯಶ್ಚಿತ್ತವಾಗಿ ಸಂಬಿತ್‌ ಪಾತ್ರಾ 3 ದಿನ ಉಪವಾಸ!

Continue Reading
Advertisement
Legal action if drought relief money is credited to farmers loans says Dr Sushila
ಯಾದಗಿರಿ56 seconds ago

Yadgiri News: ಬರ ಪರಿಹಾರದ ಹಣ ರೈತರ ಸಾಲಕ್ಕೆ ಜಮಾ ಮಾಡಿಕೊಂಡರೆ ಕಾನೂನು ಕ್ರಮ: ಡಿಸಿ

Shree Bevinalamma Devi Jaladhi Mahotsav celebration in koratagere taluk
ತುಮಕೂರು3 mins ago

Tumkur News: ವಿಜೃಂಭಣೆಯಿಂದ ನಡೆದ ಶ್ರೀ ಬೇವಿನಳಮ್ಮ ದೇವಿ ಜಲಧಿ ಮಹೋತ್ಸವ

udupi Shree Bhandarakeri math annual award programme in bengaluru
ಕರ್ನಾಟಕ5 mins ago

Bengaluru News: ಸಮಾಜಕ್ಕೆ ಸಂತೋಷ ನೀಡುವ ವ್ಯಕ್ತಿತ್ವ ರೂಪಿಸಿಕೊಳ್ಳಿ: ಪೇಜಾವರ ಶ್ರೀ

5 foreign coins found in anjanadri temple hundi counting
ಕರ್ನಾಟಕ7 mins ago

Koppala News: ಅಂಜನಾದ್ರಿ ದೇಗುಲ ಹುಂಡಿ ಎಣಿಕೆ; 5‌ ವಿದೇಶಿ ನಾಣ್ಯಗಳು ಪತ್ತೆ

IPL 2024
ಪ್ರಮುಖ ಸುದ್ದಿ26 mins ago

IPL 2024 : ಮುಂಬೈ ಕಳಪೆ ಪ್ರದರ್ಶನಕ್ಕೆ ಪಾಂಡ್ಯ ಅಲ್ಲ ರೋಹಿತ್​ ಕಾರಣ ಎಂದ ಹರ್ಭಜನ್ ಸಿಂಗ್​

Narendra Modi
ದೇಶ33 mins ago

Narendra Modi: ಡ್ರಮ್‌, ಜಾಗಟೆ ಬಾರಿಸಿ, ಹಾಡು ಹಾಡಿ; ಮತದಾನ ಹೆಚ್ಚಿಸಲು ಸ್ತ್ರೀಯರಿಗೆ ಕರೆ ಕೊಟ್ಟ ಮೋದಿ

Janardhan Reddy
ರಾಜಕೀಯ36 mins ago

Janardhan Reddy: ಮಡದಿಗಾಗಿ ಮರವೇರಿ ಮಾವು ಕಿತ್ತುಕೊಟ್ಟ ರೆಡ್ಡಿ: ವಿಡಿಯೊ ವೈರಲ್

Harbhajan Singh
ಕ್ರೀಡೆ59 mins ago

Harbhajan Singh : ಭಾರತ ತಂಡದ ಕೋಚ್ ಆಗಲು ಉತ್ಸಾಹ ತೋರಿದ ಹರ್ಭಜನ್​ ಸಿಂಗ್​

Tamil Nadu Officers
ದೇಶ1 hour ago

ಐಎಎಸ್‌ ಆಫೀಸರ್‌ ಆಗಿರುವ ಮಾಜಿ ಪತ್ನಿಯಿಂದ ನನ್ನ ಮನೆಗೆ ವಿದ್ಯುತ್‌ ಕಟ್; ಇದು ಐಪಿಎಸ್‌ ಆಫೀಸರ್‌ ಅಳಲು!

Rameshwaram Cafe Blast
ಕರ್ನಾಟಕ2 hours ago

Rameshwaram Cafe Blast: ಹುಬ್ಬಳ್ಳಿ ಸೇರಿ 4 ರಾಜ್ಯಗಳ ಹಲವೆಡೆ ಎನ್‌ಐಎ ದಾಳಿ; 11 ಶಂಕಿತ ಉಗ್ರರು ವಶಕ್ಕೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ4 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು9 hours ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು10 hours ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 day ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

ಟ್ರೆಂಡಿಂಗ್‌