1. Aero India 2023: ಏರೋ ಇಂಡಿಯಾದಿಂದ ಕರ್ನಾಟಕದ ಯುವಕರಿಗೆ ಹೆಚ್ಚಿನ ಉದ್ಯೋಗ: ರಕ್ಷಣಾ ಸಚಿವ ರಾಜನಾಥ್ ಸಿಂಗ್
ಬೆಂಗಳೂರಿನಲ್ಲಿ ಏರೋ ಇಂಡಿಯಾ ಆಯೋಜನೆ ಆಗುತ್ತಿರುವುದು ಇಲ್ಲಿನ ಕೌಶಲ್ಯಯುತ ಯುವಕರಿಗೆ ಉದ್ಯೋಗ ಸೃಜನೆ ಮಾಡಲು ಪೂರಕವಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರದಿಂದ ಆರಂಭವಾಗಲಿರುವ ಏರೋ ಇಂಡಿಯಾ 2023ರ (Aero India 2023) ಕಾರ್ಯಕ್ರಮದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಏರೋ ಇಂಡಿಯಾವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದು, ಈಗಾಗಲೆ ಭಾನುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದಾರೆ. ಒಟ್ಟು ಐದು ದಿನ ನಡೆಯುವ ಏರೋ ಇಂಡಿಯಾದಲ್ಲಿ ಮೊದಲ ಮೂರು ದಿನ ಉದ್ಯಮಗಳಿಗೆ ಮಾತ್ರ ಸೀಮಿತವಾಗಿದ್ದು, ಫೆಬ್ರವರಿ 16 ಹಾಗೂ 17ರಂದು ಸಾರ್ವಜನಿಕರ ವೀಕ್ಷಣೆಗೂ ಅವಕಾಶವಿರುತ್ತದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. Appointments of Governors: ಆಂಧ್ರಕ್ಕೆ ನಿವೃತ್ತ ಜಡ್ಜ್, ಕನ್ನಡಿಗ ಅಬ್ದುಲ್ ನಜೀರ್ ರಾಜ್ಯಪಾಲ, ಒಟ್ಟು 12 ಗವರ್ನರ್ ನೇಮಕ
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಹಾಗೂ ಕನ್ನಡಿಗರಾದ ಎಸ್ ಅಬ್ದುಲ್ ನಜೀರ್ (S Abdul Nazeer) ಅವರನ್ನು ಆಂಧ್ರ ಪ್ರದೇಶದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಮತ್ತೊಂದೆಡೆ, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರ ರಾಜೀನಾಮೆಯನ್ನು ಅಂಗೀಕರಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಜಾರ್ಖಂಡ್ ರಾಜ್ಯಪಾಲರಾಗಿದ್ದ ರಮೇಶ್ ಬೈಸ್ ಅವರನ್ನು ಮಹಾರಾಷ್ಟ್ರಕ್ಕೆ ರಾಜ್ಯಪಾಲರಾಗಿ ನಿಯೋಜಿಸಲಾಗಿದೆ. ವಿವಿಧ ರಾಜ್ಯಗಳಿಗೆ 12 ರಾಜ್ಯಪಾಲರು ಮತ್ತು ಒಬ್ಬರು ಲೆಫ್ಟಿನೆಂಟ್ ಗೌವರ್ನರ್ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Justice Nazeer: ಆಂಧ್ರದ ನೂತನ ರಾಜ್ಯಪಾಲ ನ್ಯಾ. ಅಬ್ದುಲ್ ನಜೀರ್; ಅಯೋಧ್ಯೆ ತೀರ್ಪಿನಿಂದ ಗಮನ ಸೆಳೆದ ಕರಾವಳಿಯ ಸರಳ ಸಜ್ಜನ ಸಾಧಕ
3. JDS Politics: ಕಾಂಗ್ರೆಸ್ ಕಡೆ ಹೊರಟ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ಅಶೋಕ್ ಬಾಣಾವರ JDS ಅಭ್ಯರ್ಥಿ: ಎಚ್.ಡಿ. ಕುಮಾರಸ್ವಾಮಿ ಘೋಷಣೆ
ಪಕ್ಷದೊಂದಿಗೆ ಸುಮಾರು ಎರಡು ವರ್ಷದಿಂದ ಅಂತರ ಕಾಯ್ದುಕೊಂಡು ಕಾಂಗ್ರೆಸ್ ಕಡೆಗೆ ವಾಲಲು ಸಿದ್ಧವಾಗಿರುವ ಅರಸೀಕೆರೆ ಜೆಡಿಎಸ್(JDS Politics) ಶಾಸಕ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ಕುರುಬ ಸಮುದಾಯದ ಅಶೋಕ್ ಭಾಣಾವರ (ಬಿ.ಎಸ್. ಅಶೋಕ್) ಅವರನ್ನು ಅಭ್ಯರ್ಥಿಯಾಗಿ ಎಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: JDS Politics: ಕೆಂಪು ಗುಲಾಬಿ ಪ್ರಸಾದ ಆಗಿದೆ; ಅರಕಲಗೂಡು ಗೆದ್ದರೆ ಜೆಡಿಎಸ್ ಅಧಿಕಾರಕ್ಕೆ: ಎಚ್.ಡಿ. ರೇವಣ್ಣ ಪುತ್ರರಿಬ್ಬರ ಭವಿಷ್ಯವಾಣಿ
4. Pakistan economic crisis : ಪಾಕಿಸ್ತಾನ 2024ರ ಮಾರ್ಚ್ ವೇಳೆಗೆ ದಿವಾಳಿ ಸಂಭವ : ವರದಿ
ಪಾಕಿಸ್ತಾನ ಮುಂದಿನ 6 ತಿಂಗಳಿನಲ್ಲಿ ಸಾಲದ ಮರು ಪಾವತಿಗೆ ವಿಫಲವಾಗುವ ಹಾಗೂ 2024ರ ಮಾರ್ಚ್ ವೇಳೆಗೆ ದಿವಾಳಿಯಾಗುವ ನಿರೀಕ್ಷೆ ಇದೆ ಎಂದು ಬ್ಲೂಮ್‌ಬರ್ಗ್ ವರದಿ ತಿಳಿಸಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಐಎಂಎಫ್ (International monetary fund) ಜೂನ್ ಅಂತ್ಯದ ತನಕ ನೆರವು ನೀಡಲಿದೆ. ಆದರೆ 2024ರ ಏಪ್ರಿಲ್‌ನಲ್ಲಿ ಪಾಕಿಸ್ತಾನ ದೊಡ್ಡ ಮೊತ್ತದ ಡಾಲರ್ ಸಾಲವನ್ನು ಮರು ಪಾವತಿಸಬೇಕಾಗುತ್ತದೆ. ಇದು ಭಾರಿ ಸವಾಲಾಗಿ ಪರಿಣಮಿಸಲಿದೆ. ಪಾಕಿಸ್ತಾನ ಈಗ 5.6 ಶತಕೋಟಿ ಡಾಲರ್ (ಅಂದಾಜು 45,360 ಕೋಟಿ ರೂ.) ವಿದೇಶಿ ವಿನಿಮಯ ಸಂಗ್ರಹವನ್ನು (Foreign exchange reserve) ಹೊಂದಿದೆ. ಇದು 6 ತಿಂಗಳಿನ ತನಕ ಸಾಲದ ನಿರ್ವಹಣೆಗೆ ಸಾಕು. ಬಳಿಕ ಸುಸ್ತಿಸಾಲಗಾರನಾಗುವ (default) ಅಪಾಯ ಇದೆ ಎಂದು ಬ್ಲೂಮ್‌ಬರ್ಗ್ ವರದಿ ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. ಭಾರತದಲ್ಲೂ ಭೂಕಂಪ?; ಟರ್ಕಿ-ಸಿರಿಯಾದಲ್ಲಿ 3ದಿನ ಮೊದಲೇ ಪ್ರಬಲ ಭೂಕಂಪದ ಎಚ್ಚರಿಕೆ ಕೊಟ್ಟಿದ್ದ ಡಚ್ ಸಂಶೋಧಕ ಹೇಳೋದೇನು?
ಡಚ್ ಸಂಶೋಧಕ ಫ್ರಾಂಕ್ ಹೂಗರ್ಬೀಟ್ಸ್ ಈಗ ಮತ್ತೊಂದು ಅಂದಾಜು ಮಾಡಿದ್ದಾರೆ. ಅತಿಶೀಘ್ರದಲ್ಲೇ ಭಾರತ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲೂ ಭೂಕಂಪನ ಉಂಟಾಗಬಹುದು ಎಂದು ಹೇಳಿದ್ದು, ಆ ವಿಡಿಯೊ ಕೂಡ ವೈರಲ್ ಆಗುತ್ತಿದೆ. ಅಫ್ಘಾನಿಸ್ತಾನ ಭೂಕಂಪನದ ಕೇಂದ್ರಬಿಂದು ಆಗಬಹುದು. ಅದು ಪಾಕಿಸ್ತಾನ ಮತ್ತು ಭಾರತದ ಮೇಲೆ ಪ್ರಭಾವ ಬೀರಬಹುದು ಎಂದು ಅವರು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Turkey Earthquake: ಟರ್ಕಿಯಲ್ಲಿ ಪವಾಡ, ಕಟ್ಟಡದ ಅವಶೇಷಗಳಲ್ಲಿ 128 ತಾಸಿದ್ದೂ ಬದುಕಿದ 2 ತಿಂಗಳ ಶಿಶು
ಪ್ರಬಲ ಭೂಕಂಪದಿಂದ (Turkey Earthquake) ಟರ್ಕಿ ಹಾಗೂ ಸಿರಿಯಾ ಈಗ ಮಸಣದಂತಾಗಿವೆ. ಇದುವರೆಗೆ ಮೃತಪಟ್ಟವರ ಸಂಖ್ಯೆ ೨೮ ಸಾವಿರ ದಾಟಿದೆ. ನೂರಾರು ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿದವರ ರಕ್ಷಣೆ ಕಾರ್ಯ ಮುಂದುವರಿದಿದೆ. ಆದಾಗ್ಯೂ, ಹಲವಾರು ಗಂಟೆಗಳ ಕಾಲ ಅವಶೇಷಗಳ ಅಡಿ ಸಿಲುಕಿದ ಕೆಲವೇ ಕೆಲವರು ಬದುಕುಳಿದಿದ್ದಾರೆ. ಇದೇ ರೀತಿ, ಅವಶೇಷಗಳ ಅಡಿಯಲ್ಲಿ ಐದು ದಿನ ಅಂದರೆ ೧೨೮ ಗಂಟೆ ಇದ್ದ ಎರಡು ತಿಂಗಳ ಹಸುಗೂಸೊಂದು ಪವಾಡಸದೃಶವಾಗಿ ಬದುಕುಳಿದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Women’s T20 World Cup : ವಿಶ್ವ ಕಪ್ ಗೆದ್ದರೆ ಭಾರತ ಮಹಿಳೆಯರ ಕ್ರಿಕೆಟ್ ತಂಡದ ಭವಿಷ್ಯವೇ ಬದಲಾಗುವುದು
ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ನಡೆಯುತ್ತಿರುವ ಮಹಿಳೆಯರ ಟಿ20 ವಿಶ್ವ ಕಪ್ನಲ್ಲಿ (Women’s T20 World Cup) ಭಾರತ ತಂಡಕ್ಕೆ ಟ್ರೋಫಿ ಗೆಲ್ಲುವ ಎಲ್ಲ ಅವಕಾಶಗಳಿವೆ. ಒಂದು ವೇಳೆ ಗೆದ್ದರೆ ಮಹಿಳೆಯರ ಕ್ರಿಕೆಟ್ನ ಸ್ವರೂಪವೇ ಬದಲಾಗುವುದು ಎಂಬುದಾಗಿ ಭಾರತ ತಂಡದ ಮಾಜಿ ಆಟಗಾರ ಹಾಗೂ ಮಾಜಿ ಕೋಚ್ ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ. ಮಹಿಳೆಯರ ವಿಶ್ವ ಕಪ್ಗೆ ಈಗಾಗಲೇ ಆರಂಭಗೊಂಡಿದ್ದು, ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯ ಫೆಬ್ರವರಿ 12ರಂದು ನಡೆಯಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Karnataka Election: ಅಹಿಂದ, ಮರಾಠದವರು ಶೇ. 74 ಇದ್ದೇವೆ; ನಾವೆಲ್ಲರೂ ಒಟ್ಟಾದರೆ ಏನಾಗತ್ತೆ?: ರಮೇಶ್ ಜಾರಕಿಹೊಳಿ
ಬೆಳಗಾವಿಯ ಮೂರು ಕ್ಷೇತ್ರದಲ್ಲಿ ಅಹಿಂದ, ಮರಾಠ ಸೇರಿದರೆ ಶೇಕಡಾ 74ರಷ್ಟು ಮತಗಳು ಆಗುತ್ತವೆ. ಇಲ್ಲಿ ಬಂದು ದೊಡ್ಡ ದೊಡ್ಡ ಮಾತನಾಡಿ ಹೋಗುತ್ತೀರಲ್ಲವೇ? ನಾವು ಒಂದಾದರೆ ಅವರ ಪರಿಸ್ಥಿತಿ ಏನಾಗುತ್ತದೆ? ಅಹಿಂದ ಇರಬಹುದು, ಮರಾಠ ಇರಬಹುದು ನಾವು ಒಂದು ಟಿಕೆಟ್ ಕೇಳುತ್ತೇವೆ. ಆರು ಪರ್ಸೆಂಟ್ ಇದ್ದವರು 50 ಟಿಕೆಟ್ ಕೇಳುತ್ತಾರೆ. ಚುನಾವಣೆ (Karnataka Election) ಆಗಲಿ ಈ ಸಮುದಾಯವನ್ನು ಒಗ್ಗೂಡಿಸುವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkhiholi) ಗುಡುಗಿದರು. ಈ ಮೂಲಕ ತಮ್ಮ ಎದುರಾಳಿಗಳಿಗೆ ತಿರುಗೇಟು ನೀಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Shivamogga Airport: ತಮ್ಮ ಹೆಸರು ಬೇಡ ಎಂದು ಬಿ.ಎಸ್. ಯಡಿಯೂರಪ್ಪ ಪುನರುಚ್ಛಾರ: ರಾಷ್ಟ್ರಕವಿ ಕುವೆಂಪು ಹೆಸರನ್ನು ಸೂಚಿಸಿದ ಮಾಜಿ ಸಿಎಂ
ಇದೇ ತಿಂಗಳು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ(Shivamogga Airport) ತಮ್ಮ ಹೆಸರನ್ನು ನಾಮಕರಣ ಮಾಡುವುದು ಬೇಡ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪುನರುಚ್ಛರಿಸಿದ್ದು, ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Pathaan Movie: ವಿಶ್ವಾದ್ಯಂತ 924 ಕೋಟಿ ರೂ. ಬಾಚಿದ ಪಠಾಣ್: ಚಿತ್ರತಂಡದಿಂದ ಅಧಿಕೃತ ಘೋಷಣೆ
ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಅಭಿನಯದ ಪಠಾಣ್ ಸಿನಿಮಾ (Pathaan Movie) ಈವರೆಗೂ 924 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಭಾರತದಲ್ಲಿ 572 ಕೋಟಿ ರೂ. ಹಾಗೂ ವಿದೇಶಗಳಲ್ಲಿ 352 ಕೋಟಿ ರೂ. ಲಾಭ ಮಾಡಿದೆ ಈ ಮಾಹಿತಿಯನ್ನು ಸ್ವತಃ ನಿರ್ಮಾಣ ಸಂಸ್ಥೆಯೇ ನೀಡಿದೆ. ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.