Site icon Vistara News

Weather report : ರಾಜ್ಯದಲ್ಲಿ ಮಳೆಯಾಟ ಆಟಕ್ಕುಂಟು ಆದರೆ ಲೆಕ್ಕಕ್ಕಿಲ್ಲ..

Girls walking in rain

ಬೆಂಗಳೂರು: ರಾಜ್ಯದ ಹಲವೆಡೆ ಮಳೆರಾಯ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾನೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಪ್ರತ್ಯೇಕ ಕಡೆಗಳಲ್ಲಿ ಭಾರಿ ಮಳೆಯಾಗುವ (Weather report) ನಿರೀಕ್ಷೆ ಇದೆ. ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಮಳೆಯಾಟ (Rain News) ಆಟಕ್ಕುಂಟು ಲೆಕ್ಕಿಲ್ಲ ಎಂಬಂತೆ ಆಗಿದೆ.

ದಕ್ಷಿಣ ಒಳನಾಡಲ್ಲಿ ಸಣ್ಣದೊಂದು ಮಳೆ

ದಕ್ಷಿಣ ಒಳನಾಡಿನ ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಮೈಸೂರು, ಭಾಗದಲ್ಲಿ ಚದುರಿದಂತೆ ಮಳೆಯಾಗಲಿದೆ. ಉಳಿದಂತೆ ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಮತ್ತು ಮಂಡ್ಯ ಅತಿ ಕಡಿಮೆ ಮಳೆಯಾಗಲಿದೆ.

ಮಲೆನಾಡಿನ ಕೊಡಗು ಜಿಲ್ಲೆಯಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ. ಹಾಸನ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಲಘು ಮಳೆಯಾಗಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಈ ನಾಲ್ಕು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಐಎಂಡಿ ಯೆಲ್ಲೋ ಅಲರ್ಟ್‌ ನೀಡಿದೆ.

ಇದನ್ನೂ ಓದಿ: Cylinder blast : ಸಿಲಿಂಡರ್‌ ಸ್ಫೋಟ; 7 ದಿನಗಳು ನರಳಾಡಿ ಪ್ರಾಣಬಿಟ್ಟ ಮಹಿಳೆ

ಸೆ.22ರ ಶುಕ್ರವಾರ ನೈರುತ್ಯ ಮುಂಗಾರು ಉತ್ತರ ಒಳನಾಡಿನಲ್ಲಿ ಚುರುಕಾಗಿತ್ತು, ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ಭಾರಿ ಮಳೆಯು ಬಿಳಗಿಯಲ್ಲಿ 10 ಹಾಗೂ ಮಂಠಾಳ 9, ಖಜೂರಿ 8 ಹಾಗೂ ಕಲಬುರಗಿ, ಸುತ್ತೂರಲ್ಲಿ ತಲಾ 7 ಸೆಂ. ಮೀ ಮಳೆಯಾಗಿದೆ.

ಅಡಕಿ, ಚಿತ್ತಾಪುರ, ಸೇಡಂ, ಸುಲೇಪೇಟ, ಬುಕ್ಕಪಟ್ಟಣ, ಕೊಟ್ಟಿಗೆಹಾರ, ಹೊಸಕೋಟೆಯಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ. ಮಹಾಲಿಂಗಪುರ, ಕಲಬುರ್ಗಿ AWS, ಚಿಂಚೋಳಿ, ಗುಂಡಗುರ್ತಿ, ಕೋಲಾರದಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ. ಕದ್ರಾ, ರಬಕವಿ, ಹುಮನಾಬಾದ್, ಮಹಾಗೋವಾ, ಕಮಲಾಪುರ, ಜಾಲಹಳ್ಳಿ, ಮುದಗಲ್ ಹಾಗೂ ಚಿಕ್ಕಬಳ್ಳಾಪುರ , ಸಿ ಆರ್ ಪಟ್ನಾದಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ.

ಮಂಕಿ, ಗೋಕರ್ಣ, ಗಬ್ಬೂರು , ಶಹಾಪುರ, ಹುಣಸಗಿ, ನಾರಾಯಣಪುರ ಎಚ್‌ಎಂಎಸ್ , ಆಲಮಟ್ಟಿ ಎಚ್‌ಎಂಎಸ್, ತಾಳಿಕೋಟೆ , ಆಳಂದ , ಸೇಡಬಾಳ ಹಾಗೂ ಭಾಲ್ಕಿ, ದೇವನಹಳ್ಳಿ, ಕಳಸ, ಯಗಟಿ, ಮಾಲೂರು, ಚಾಮರಾಜನಗರ, ಮಂಡ್ಯದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಪುತ್ತೂರು Hms, ಹೊನ್ನಾವರ, ಕುಮಟಾ, ಕಾರವಾರ, ಹಳಿಯಾಳ , ಕಕ್ಕೇರಿ, ಶೋರಾಪುರ, ಕೆಂಬಾವಿ, ವಿಜಯಪುರ, ನೆಲೋಗಿ, ಯೆಡ್ವಾಡ ಕೂಡಲಸಂಗಮ, ಮಧುಗಿರಿ, ಚಿಕ್ಕನಹಳ್ಳಿ AWS , ರಾಯಲ್ಪಾಡು, ಟಿ ನರಸೀಪುರ ಸೋಮವಾರಪೇಟೆ, ಹಾರಂಗಿ, ಚಿಂತಾಮಣಿ, ಮೈಸೂರು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version