Site icon Vistara News

Weather Report: ಮುಂದಿನ 3 ದಿನ ಬಿರುಗಾಳಿ ಸಹಿತ ಭಾರಿ ಮಳೆ ಎಚ್ಚರಿಕೆ; ಈ ಜಿಲ್ಲೆಗಳಿಗೆ ಅಲರ್ಟ್‌ ಘೋಷಣೆ

#image_title

ಬೆಂಗಳೂರು: ರಾಜ್ಯದಲ್ಲಿ ವರುಣಾರ್ಭಟ ಜೋರಾಗಿದ್ದು, ಬೀದರ್‌, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಗುಡುಗು, ಮಿಂಚಿನ ಭಾರಿ (Weather Report) ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Weather update) ಮುನ್ಸೂಚನೆಯನ್ನು ನೀಡಿದೆ.

ಉತ್ತರ ಒಳನಾಡಿನ ಜಿಲ್ಲೆಗಳಾದ ಬೀದರ್‌, ಕಲಬುರಗಿ, ರಾಯಚೂರು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು, ಮಂಡ್ಯ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ನೆಚ್ಚರಿಕೆ ನೀಡಿದೆ. ಉಳಿದಂತೆ ಕೊಪ್ಪಳ, ವಿಜಯಪುರ, ಯಾದಗಿರಿ ಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರದಲ್ಲಿ ಭಾರಿ ಮಳೆಯಾಗಲಿದೆ.

ಜತೆಗೆ ಚಿಕ್ಕಮಗಳೂರು, ಹಾಸನ, ಕೋಲಾರ, ಮೈಸೂರು ಹಾಗೂ ರಾಮನಗರ, ಶಿವಮೊಗ್ಗ, ತುಮಕೂರು ಭಾಗಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಸಂಜೆ ವೇಳೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 32 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕರಾವಳಿಯಲ್ಲೂ ಮಳೆ ಮುಂದುವರಿಯಲಿದೆ.

ರಾಯಚೂರಲ್ಲಿ ಭಾರಿ ಮಳೆ ದಾಖಲು

ಶುಕ್ರವಾರ ಗರಿಷ್ಠ ಉಷ್ಣಾಂಶ 37.3 ಡಿಗ್ರಿ ಸೆಲ್ಸಿಯಸ್‌ ಗದಗಿನಲ್ಲಿ ದಾಖಲಾಗಿದೆ. ರಾಯಚೂರಲ್ಲಿ 7 ಸೆಂ.ಮೀ ಮಳೆಯಾಗಿರುವ ವರದಿ ಆಗಿದೆ. ಕೆಂಭಾವಿ, ಇಳಕಲ್‌ನಲ್ಲಿ ತಲಾ 5 ಸೆಂ.ಮೀ ಮಳೆ ಸುರಿದಿದೆ. ಶೋರಾಪುರ, ಇಂಡಿಯಲ್ಲಿ ತಲಾ 4 ಸೆಂ.ಮೀ ಹಾಗೂ ಸಂತೆಬೆನ್ನೂರು, ಕಾಟಿಕೆರೆ, ಯಗಟಿಯಲ್ಲಿ ತಲಾ 3, ಕುರ್ಡಿ, ಮಾನ್ವಿ, ಗಬ್ಬೂರು, ಮಂಠಾಳ, ಕವಡಿಮಟ್ಟಿ, ಶಹಾಪುರ, ಜೇವರ್ಗಿ ಸೇರಿದಂತೆ ದೇವರಹಿಪ್ಪರಗಿ, ನಾಯಕನಹಟ್ಟಿಯಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.

ಇದನ್ನೂ ಓದಿ: Weather Report: ಬೇಸಿಗೆಯ ಬಿಸಿಲಲ್ಲಿ ತಂಪೆರೆದ ವರುಣ; ರಸ್ತೆ ಮಧ್ಯೆ ಸಿಕ್ಕು ಬೆಂಗಳೂರಿಗರು ಹೈರಾಣ

ಮುದಗಲ್‌, ದೇವದುರ್ಗ, ತಾವರೆಕೆರೆ, ಯಲಬುರ್ಗಾ, ಝಲ್ಕಿ ಕ್ರಾಸ್‌, ನಾಲ್ವತವಾಡ, ನಿಟ್ಟೂರು, ಕಕ್ಕೇರಿ, ಯದ್ರಾಮಿ, ಭಾಗಮಂಡಲ, ಶೃಂಗೇರಿ, ಕೊಪ್ಪ, ಅಜ್ಜಂಪುರ ಹಾಗೂ ಎನ್‌ಆರ್‌ ಪುರ, ತರೀಕೆರೆ, ಹೊಸಪೇಟೆ, ಶಿವಮೊಗ್ಗ, ಚನ್ನಗಿರಿ, ಹೊಳೆ ಹೊನ್ನೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

Exit mobile version