ಬೆಂಗಳೂರು: ಮುಂದಿನ 24 ಗಂಟೆಯಲ್ಲಿ ಕರಾವಳಿಯ ಹಲವು ಕಡೆಗಳಲ್ಲಿ ಮತ್ತು ಒಳನಾಡಿನ ಕೆಲವು ಕಡೆಗಳಲ್ಲಿ ಗುಡುಗು (Rain News) ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದ್ದು, ಒಳನಾಡಿನಲ್ಲಿ ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ. ಇರುವ ಸಾಧ್ಯತೆ (Weather report) ಇದೆ.
ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಕೊಡಗು, ಶಿವಮೊಗ್ಗ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಒಳನಾಡಿನಲ್ಲಿ ಲಘು ಮಳೆ
ಉತ್ತರ ಒಳನಾಡಿನ ಜಿಲ್ಲೆಯಾದ ಬೀದರ್, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಆಗಲಿದೆ. ಉಳಿದ ಭಾಗಗಳಲ್ಲಿ ಲಘುವಾಗಿ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಒಳನಾಡಿನ ಜಿಲ್ಲೆಯಾದ ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಮೈಸೂರು, ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಅತಿ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ ಆಗೊಮ್ಮೆ ಈಗೊಮ್ಮೆ ಸೂರ್ಯ ದರ್ಶನ ಕೊಟ್ಟರೆ, ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಮಳೆ ಜತೆಗೆ ಗುಡುಗು ಇರಲಿದೆ. ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇದನ್ನೂ ಓದಿ: Road Accident : ಅಪಘಾತದಲ್ಲಿ ಯುವಕ ಸಾವು; ಸುದ್ದಿ ತಿಳಿದು ಸ್ನೇಹಿತನಿಗೆ ಹೃದಯಾಘಾತ!
ಮೂಲ್ಕಿಯಲ್ಲಿ ಭಾರಿ ಮಳೆ ದಾಖಲು
ರಾಜ್ಯದಲ್ಲಿ ಶನಿವಾರ (ಆ.19) ನೈರುತ್ಯ ಮುಂಗಾರು ಕರಾವಳಿಯಲ್ಲಿ ಚುರುಕಾಗಿತ್ತು ಹಾಗೂ ಒಳನಾಡಿನಲ್ಲಿ ಸಾಮಾನ್ಯವಾಗಿತ್ತು. ಕರಾವಳಿಯ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಮಳೆಯಾಗಿದೆ. ಭಾರಿ ಮಳೆಯು ಮೂಲ್ಕಿಯಲ್ಲಿ 13 ಹಾಗೂ ಪಣಂಬೂರು 11, ಮಂಗಳೂರು ವಿಮಾನ ನಿಲ್ದಾಣ , ಕ್ಯಾಸಲ್‌ರ‍್ಯಾಕ್ ತಲಾ 9 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಕಾರ್ಕಳ 8, ಮಂಕಿ, ಮಣಿ, ಉಡುಪಿ ತಲಾ 7 ಸೆಂ.ಮೀನಷ್ಟು ಮಳೆಯಾಗಿದೆ.
ಉಳಿದಂತೆ ಉಪ್ಪಿನಂಗಡಿ 6, ಕೋಟ, ಕುಂದಾಪುರ, ಗೇರ್ಸೊಪ್ಪ ತಲಾ 5 ಹಾಗೂ ಪುತ್ತೂರಿನಲ್ಲಿ 4 ಸೆಂ.ಮೀ ಮಳೆಯಾಗಿದೆ. ಹೊನ್ನಾವರ, ಕದ್ರಾ, ಸಿದ್ದಾಪುರ, ಮಂಗಳೂರು, ಶೃಂಗೇರಿ, ಕೊಟ್ಟಿಗೆಹಾರ, ರಾಯಲ್ಪಾಡು, ಜಯಪುರ, ಕಳಸ, ಬಿ ದುರ್ಗದಲ್ಲಿ ತಲಾ 3 ಸೆಂ.ಮೀ ಮಳೆಯಾಗಿದೆ. ಸುಳ್ಯ, ಕೊಲ್ಲೂರು, ಕಿರವತ್ತಿ, ಶಿರಾಲಿ, ಮಂಠಾಳ, ಲೋಂಡಾ ಹಾಗೂ ಭಾಗಮಂಡಲ, ಪೊನ್ನಂಪೇಟೆ, ನಾಪೋಕ್ಲು, ಸೋಮವಾರಪೇಟೆ , ಬಾಳೆಹೊನ್ನೂರು, ಹುಣಸೂರು, ಹುಂಚದಕಟ್ಟೆ, ಹಾಸನ, ಬೇಲೂರಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ.
ಯಲ್ಲಾಪುರ, ಹಳಿಯಾಳ, ಅಂಕೋಲಾ, ಕುಮಟಾ, ಗಂಗಾವತಿ, ಚಿಂಚೋಳಿ , ಸಿಂದಗಿ, ಬೇವೂರು, ಅಣ್ಣಿಗೆರೆ ಆರ್ಸ್ , ಹುಮನಾಬಾದ್, ಎನ್ ಆರ್ ಪುರ, ತುಮಕೂರು ಸೇರಿ ಕೊಪ್ಪ, ಕಮ್ಮರಡಿ, ಮಾಲೂರು, ಟಿ ನರಸೀಪುರ , ಚಿಕ್ಕನಹಳ್ಳಿ ಆಸ್ , ಸಂತೇಬೆನ್ನೂರು , ಚಿತ್ರ ಹಿರೀ , ತಾಳಗುಪ್ಪ, ಆನವಟ್ಟಿ, ಬೆಂಗಳೂರು HAL ವಿಮಾನ ನಿಲ್ದಾಣ, ಬೆಂಗಳೂರು ನಗರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ