ಬೆಂಗಳೂರು: ರಾಜ್ಯದಲ್ಲಿ ಸುಡುವ ಬಿಸಿಲಿನ (Summer) ನಡುವೆಯೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ (Rain Updates) ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಾಮರಾಜನಗರ, ಕೊಡಗು, ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಧಾರಾಕಾರ (Weather todays Report) ಮಳೆಯಾಗಲಿದೆ.
ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಮತ್ತು ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರಿನಲ್ಲಿ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ. ಸಂಜೆ ವೇಳೆ ಕೆಲವು ಆಯ್ದ ಜಾಗಗಳಲ್ಲಿ ಮಳೆಯಾಗಲಿದೆ.
ಎಲ್ಲೆಲ್ಲಿ ಹೇಗಿದೆ ಉಷ್ಣಾಂಶ ಏರಿಕೆ?
ಗರಿಷ್ಠ ಉಷ್ಣಾಂಶವು ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಜತೆಗೆ ವಾತಾವರಣದಲ್ಲಿ ಬಿಸಿ ಗಾಳಿಯಿಂದ (HeatWaves) ಕೂಡಿರಲಿದೆ. ಗರಿಷ್ಠ ಉಷ್ಣಾಂಶ ಕಲಬುರುಗಿ ಜಿಲ್ಲೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ: Karnataka CM: ಸಿದ್ದರಾಮಯ್ಯ ಸಿಎಂ ಆದ್ರೆ ರಾಜ್ಯದ ಸಮಗ್ರ ಅಭಿವೃದ್ಧಿ: ಬಸವರಾಜ ದೇವರು ಆಗ್ರಹ
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು (ಎಚ್‌ಎಎಲ್) -33.6 ಡಿ.ಸೆ- 21.6 ಡಿ.ಸೆ
ಬೆಂಗಳೂರು ನಗರ – 33.0 ಡಿ.ಸೆ- 23 ಡಿ.ಸೆ
ಬೆಂಗಳೂರು (ಕೆಐಎಎಲ್) 34.4 ಡಿ.ಸೆ- 23 ಡಿ.ಸೆ
ಮಂಗಳೂರು – 35.0 ಡಿ.ಸೆ- 26 ಡಿ.ಸೆ
ಹೊನ್ನಾವರ- 34.0 ಡಿ.ಸೆ- 22.0 ಡಿ.ಸೆ
ಬೆಳಗಾವಿ- 35.0 ಡಿ.ಸೆ- 21.0 ಡಿ.ಸೆ
ಕಲಬುರಗಿ- 41.0 ಡಿ.ಸೆ- 25.0 ಡಿ.ಸೆ
ಕಾರವಾರ- 36.0 ಡಿ.ಸೆ- 26.0 ಡಿ.ಸೆ
ಗದಗ- 37.0 ಡಿ.ಸೆ- 22.0 ಡಿ.ಸೆ
ಚಿತ್ರದುರ್ಗ- 36.0 ಡಿ.ಸೆ- 23.0 ಡಿ.ಸೆ