ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ಶುಭ ಸುದ್ದಿಯಿದೆ. ಕಳೆದೆರಡು ದಿನಗಳಲ್ಲಿ ಸಿಕ್ಕಾಪಟ್ಟೆ ಏರಿಕೆಯಾಗಿದ್ದ ಬಂಗಾರದ ಬೆಲೆಯಲ್ಲಿ ಆಗಸ್ಟ್ 25ರಂದು ಯಾವುದೇ ಏರಿಕೆ ಕಂಡಿಲ್ಲ. ಹೀಗಾಗಿ ಬಂಗಾರ ಖರೀದಿ ಮಾಡಲು ಯೋಜನೆ ರೂಪಿಸಿಕೊಂಡವರಿಗೆ ಶುಭ ಸುದ್ದಿ ಸಿಕ್ಕಂತಾಗಿದೆ. ಬೆಂಗಳೂರಿನಲ್ಲಿ ಆಗಸ್ಟ್ 25ರಂದು ಒಂದು ಗ್ರಾಮ್ 22 ಕ್ಯಾರೆಟ್ ಚಿನ್ನಕ್ಕೆ 5,450 ರೂಪಾಯಿಗಳಿದ್ದರೆ, ಒಂದು ಗ್ರಾಮ್ 24 ಕ್ಯಾರೆಟ್ ಚಿನ್ನಕ್ಕೆ 5945 ರೂಪಾಯಿ ಇದೆ. ಇದು ಆಗಸ್ಟ್ 2ರದ್ದೇ ಬೆಲೆಯಾಗಿರುವ ಕಾರಣ ಯಾವುದೇ ವ್ಯತ್ಯಾಸ ಉಂಟಾಗಿಲ್ಲ.
ಆಗಸ್ಟ್ 21ರಿಂದ ಆರಂಭಗೊಂಡಂತೆ ಆಗಸ್ಟ್ 24ರವರೆಗೆ ಬಂಗಾರದ ಬೆಲೆಯಲ್ಲಿ ಸಿಕ್ಕಾಪಟ್ಟೆ ಏರಿಕೆಯಾಗಿತ್ತು. ಅದರಲ್ಲೂ ಆಗಸ್ಟ್ 24ರಂದು ಗರಿಷ್ಠ ಶೇ. 22ರಷ್ಟು ಬೆಲೆ ಏರಿಕೆ ಕಂಡಿತ್ತು. ಆಗಸ್ಟ್ 23ರ 5430 ರೂಪಾಯಿಂದ 5450 ರೂಪಾಯಿಗೆ ಏರಿಕೆ ಆಗಿತ್ತು. ಆದರ, ಆಗಸ್ಟ್ 25ರಂದು ಯಾವುದೇ ಏರಿಕೆ ಕಂಡಿಲ್ಲ.
ಆಗಸ್ಟ್ 20ರಿಂದ 21ಕ್ಕೆ ಶೇಕಡಾ 5, ಆ. 21ರಿಂದ 22ಕ್ಕೆ ಶೇಕಡಾ 6, ಆಗಸ್ಟ್ 22ರಿಂದ 23ಕ್ಕೆ ಶೇಕಡಾ 10ರಷ್ಟು ಬೆಲೆ ಏರಿಕೆ ಕಂಡಿತ್ತು. ಸತತವಾಗಿ ಬೆಲೆ ಏರಿಕೆ ಕಂಡ ಹಿನ್ನಲೆಯಲ್ಲಿ ಚಿನ್ನದ ಮೇಲಿನ ಹೂಡಿಕೆದಾರರು ಖುಷಿ ಪಟ್ಟಿದ್ದಾರೆ. ಆದರೆ ಅಗತ್ಯಕ್ಕೆ ಚಿನ್ನ ಖರೀದಿ ಮಾಡಲು ಮುಂದಾಗಿದ್ದವರು ಆತಂಕಕ್ಕೆ ಒಳಗಾಗಿದ್ದರು. ಇದೀಗ ಖರೀದಿದಾರರ ಆತಂಕ ಕಡಿಮೆಯಾಗಿದೆ.
ಬೆಲೆ ಏರಿಕೆ
ಈ ಬೆಲೆ ಏರಿಳಿತಗಳು ಪ್ರತಿಷ್ಠಿತ ಆಭರಣ ತಯಾರಕರ ಒಳಹರಿವು ಸೇರಿದಂತೆ ವಿವಿಧ ಅಂಶಗಳಿಂದ ಪ್ರಭಾವಿತವಾಗುತ್ತವೆ. ಜಾಗತಿಕ ಚಿನ್ನದ ಬೇಡಿಕೆ, ರಾಷ್ಟ್ರಗಳಾದ್ಯಂತ ಕರೆನ್ಸಿ ಮೌಲ್ಯಗಳು, ಬಡ್ಡಿದರಗಳು ಮತ್ತು ಸರ್ಕಾರದ ಚಿನ್ನದ ವ್ಯಾಪಾರ ನಿಯಂತ್ರಣಗಳಂತಹ ಅಂಶಗಳು ಈ ಬದಲಾವಣೆಗಳಿಗೆ ಕಾರಣವಾಗುತ್ತವೆ. ಇದಲ್ಲದೆ, ಜಾಗತಿಕ ಆರ್ಥಿಕತೆಯ ಸ್ಥಿತಿ ಮತ್ತು ಇತರ ಕರೆನ್ಸಿಗಳ ವಿರುದ್ಧ ಯುಎಸ್ ಡಾಲರ್ ಬಲದಂತಹ ಜಾಗತಿಕ ಘಟನೆಗಳು ಸಹ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರುತ್ತವೆ.
ಇದನ್ನೂ ಓದಿ: Gold Rate Today: ಎರಡು ದಿನಗಳಿಂದ ಚಿನ್ನದ ಬೆಲೆ ಏರಿಕೆ; ಇಂದು ಇಷ್ಟಿದೆ ನೋಡಿ
ಅತಿ ಹೆಚ್ಚು ಬೇಡಿಕೆ ಭಾರತದಲ್ಲಿ
ಭಾರತ ವಿಶ್ವದಲ್ಲಿಯೇ ಎರಡನೆಯ ಅತಿ ದೊಡ್ಡ ಬಂಗಾರದ ( Gold rate ) ಮಾರುಕಟ್ಟೆಯಾಗಿದೆ. ಚೀನಾ ಬಿಟ್ಟರೆ ಅತಿ ಹೆಚ್ಚು ಚಿನ್ನ ಕೊಳ್ಳುವ ದೇಶ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಜನ ಸಂಖ್ಯೆಯ ಹೆಚ್ಚಳ, ವಿವಾಹ ಸಮಾರಂಭಗಳ ಏರಿಕೆ, ಹಬ್ಬಗಳ ಸಂಭ್ರಮ, ಜನರ ಆದಾಯದಲ್ಲಿ ಏರಿಕೆ, ನಗರೀಕರಣ ಮೊದಲಾದ ಕಾರಣಗಳಿಂದ ಚಿನ್ನದ ಖರೀದಿ ಗಣನೀಯ ಏರಿಕೆಯಾಗುತ್ತಿದೆ. ಈ ಟ್ರೆಂಡ್ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ತನ್ನ ವರದಿಯಲ್ಲಿ ತಿಳಿಸಿದೆ. ಈ ವರದಿ ಹಲವು ಸ್ವಾರಸ್ಯಕರ ಅಂಶಗಳನ್ನು ಬಹಿರಂಗಪಡಿಸಿದೆ.
ಜ್ಯುವೆಲ್ಲರಿ ರಫ್ತು
ಭಾರತದಿಂದ ಇತ್ತೀಚಿನ ವರ್ಷಗಳಲ್ಲಿ ಜ್ಯುವೆಲ್ಲರಿ ರಫ್ತು ಕೂಡ ಗಣನೀಯ ಏರಿಕೆಯಾಗುತ್ತಿದೆ. 2015ರಲ್ಲಿ 7.6 ಶತಕೋಟಿ ಡಾಲರ್‌ನಷ್ಟಿದ್ದ ಜ್ಯುವೆಲ್ಲರಿ ರಫ್ತು 2020ರಲ್ಲಿ ಕೋವಿಡ್-19 ಬರುವುದಕ್ಕೆ ಮುನ್ನ ೧೨.೪ ಶತಕೋಟಿ ಡಾಲರ್‌ಗೆ ಏರಿಕೆಯಾಗಿತ್ತು. ಭಾರತೀಯ ಜ್ಯುವೆಲ್ಲರಿಗಳನ್ನು ಹೊಸ ಮಾರುಕಟ್ಟೆಗೆ ರಫ್ತು ಮಾಡಬೇಕಾದ ಅಗತ್ಯವೂ ಇದೆ. ಈಗ ಜ್ಯುವೆಲ್ಲರಿ ರಫ್ತಿನ 90% ಪಾಲು ಕೂಡ ಕೇವಲ ಐದು ದೇಶಗಳಿಗೆ ಹೋಗುತ್ತಿದೆ.