Site icon Vistara News

Explainer: ಕೇರಳದಿಂದ Monkeypox ನಮ್ಮಲ್ಲಿಗೂ ಬರಬಹುದಾ? ಬಂದರೆ ಏನು ಮಾಡೋದು? ಬರದಂತೆ ತಡೆ ಹೇಗೆ?

Monkey pox

ನವ ದೆಹಲಿ: ಕಳೆದ ಮೇ ೬ರಂದು ಇಂಗ್ಲೆಂಡ್‌ನಲ್ಲಿ ಪತ್ತೆಯಾಗಿ ಈಗ ಜಗತ್ತಿನ ೨೦ಕ್ಕೂ ಅಧಿಕ ದೇಶಗಳಲ್ಲಿ ಹರಡಿರುವ ಮಂಕಿ ಪಾಕ್ಸ್‌ ವೈರಸ್‌ ಭಾರತಕ್ಕೂ ಪ್ರವೇಶ ಮಾಡಿರುವ ಸಂಶಯಗಳಿವೆ. ವಿದೇಶದಿಂದ ಕೇರಳಕ್ಕೆ ಬಂದ ವ್ಯಕ್ತಿಯೊಬ್ಬರಲ್ಲಿ ಕೆಲವು ಸಂಶಯಿತ ಲಕ್ಷಣಗಳು ಕಾಣಿಸಿಕೊಂಡಿವೆ. ಜಗತ್ತಿನಲ್ಲಿ ಈಗಾಗಲೇ ೧೩೦೦೦ಕ್ಕಿಂತ ಹೆಚ್ಚು ಪ್ರಕರಣಗಳು ಈ ವರ್ಷ ದಾಖಲಾಗಿವೆ. ೧೩ ಸಾವುಗಳೂ ಸಂಭವಿಸಿವೆ. ಹಾಗಿದ್ದರೆ ಈ ರೋಗ ನಮ್ಮ ಮನೆಗೂ ಬಂದರೆ ಏನು ಮಾಡಬಹುದು, ಬರದಂತೆ ಹೇಗೆ ತಡೆಯಬಹುದು ಎಂಬ ಬಗ್ಗೆ ಕೆಲವು ಮಾಹಿತಿಗಳು ಇಲ್ಲಿವೆ.

ಏನಿದು ಮಂಕಿಪಾಕ್ಸ್‌?
ಮೈಮೇಲೆ ಗುಳ್ಳೆಗಳು ಏಳುವ ಸಿಡುಬು ರೋಗ ಕೇಳಿದ್ದೇವಲ್ಲಾ.. ಅದೇ ಜಾತಿಗೆ ಸೇರಿದ ರೋಗ ಇದು. ಇದರ ಮೂಲ ಜೂನೋ ವೈರಸ್‌. ಆಫ್ರಿಕಾದ ಉಷ್ಣವಲಯದ ಭಾಗಗಳಲ್ಲಿ ಇದು ಹೆಚ್ಚು. ಅಲ್ಲಿಂದ ಬೇರೆ ಕಡೆಗೆ ಹರಡುತ್ತದೆ. ಮಂಕಿಪಾಕ್ಸ್‌ ಎಂಬ ಹೆಸರಿದ್ದರೂ ಇದು ಸೋಂಕಿತ ಮಂಗಗಳ ಜತೆಗೆ ಅಳಿಲುಗಳು, ಇಲಿಗಳು ಮತ್ತು ಹೆಗ್ಗಣಗಳಂತಹ ದಂಶಕಗಳಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ. ವೈರಸ್ ಅನ್ನು ಝೂನೋಟಿಕ್ ಎಂದು ಕರೆಯಲಾಗುತ್ತದೆ. ಮನುಷ್ಯರಲ್ಲಿ ಮೊದಲ ಬಾರಿ ಕಂಡುಬಂದಿದ್ದು ೧೯೭೦ರಲ್ಲಿ ಕಾಂಗೋ ಗಣರಾಜ್ಯದಲ್ಲಿ.

ಮಂಕಿ ಪಾಕ್ಸ್‌ ಉಂಟು ಮಾಡುವ ಗುಳ್ಳೆಗಳು ಹೀಗಿರುತ್ತವೆ.

ಮನುಷ್ಯರಲ್ಲಿ ಹೇಗೆ ಹರಡುತ್ತದೆ?

ಏನೇನು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ?

ಇತರ ಸಾಮಾನ್ಯ ಲಕ್ಷಣಗಳು
ಜ್ವರ, ಆಯಾಸ, ತಲೆ ನೋವು, ಮಾಂಸ ಖಂಡಗಳಲ್ಲಿ ನೋವು, ಚಳಿ, ಬೆನ್ನು ನೋವು, ಗಂಟಲು ನೋವು, ಒಣ ಕೆಮ್ಮು, ಉಸಿರಾಟದ ತೊಂದರೆ.

ರೋಗ ಬಂದರೆ ಏನಾಗುತ್ತದೆ?

ಸಣ್ಣ ಕೆಂಪು ಗಾಯ ಗುಳ್ಳೆಯಾಗಿ ಪರಿವರ್ತನೆ ಆಗುವ ಸ್ಥಿತಿಗಳು

ಮಂಕಿ ಪಾಕ್ಸ್‌ ಬಂದೇ ಬಿಟ್ಟರೆ ಏನು ಮಾಡೋಣ?
– ದಿನಕ್ಕೆ ಎರಡು ಬಾರಿ ಜ್ವರ ಎಷ್ಟಿದೆ ಎಂದು ಚೆಕ್‌ ಮಾಡಬೇಕು, ಜ್ವರ ತಲೆಗೇರದಂತೆ ತಣ್ಣಗಿನ ಬಟ್ಟೆ ಇಡಬಹುದು.
– ಜ್ವರ, ಚಳಿ, ಸಣ್ಣ ಕೆಂಪು ಗಾಯ ಕಂಡರೆ ಎಲ್ಲರಿಂದ ದೂರ ಉಳಿಯುವುದು ಉತ್ತಮ.
– ಗಾಯ ಗುಳ್ಳೆಯಾಗಿ ಪರಿವರ್ತನೆಯಾದರೆ ಕೂಡಲೇ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಚಿಕಿತ್ಸೆ ಹೇಗೆ?
ಮಂಕಿ ಪಾಕ್ಸ್‌ಗೆ ಮುಖ್ಯವಾಗಿ ಬೇಕಾಗುವುದು ವಿಶ್ರಾಂತಿ, ಸಾಕಷ್ಟು ಪ್ರಮಾಣದಲ್ಲಿ ನೀರು ಮತ್ತು ವೈದ್ಯರು ಕೊಡುವ ಔಷಧ. ವೈದ್ಯರು ವೈರಲ್‌ ನಿಯಂತ್ರಣ ಔಷಧ ಮತ್ತು ಸಿಡುಬಿಗೆಂದು ನಿಗದಿಯಾಗಿರುವ ವ್ಯಾಕ್ಸಿನಿಯಾ ಗಾಮಾ ಗ್ಲೋಬ್ಯುಲಿನ್‌ ಕೊಡಬಹುದು.
– ಇತ್ತೀಚೆಗಷ್ಟೇ ಅಂದರೆ ೩-೫ ವರ್ಷಕ್ಕೆ ಮೊದಲು ಸಿಡುಬಿನ ಲಸಿಕೆ ಪಡೆದಿದ್ದರೆ ಮಂಕಿ ಪಾಕ್ಸ್‌ ಹೆಚ್ಚು ಗಂಭೀರವಾಗುವುದಿಲ್ಲ. ಹೀಗಾಗಿ ಮಕ್ಕಳಿಗೆ ಹೆಚ್ಚು ಆತಂಕವಿಲ್ಲ.

ಬಾರದಂತೆ ತಡೆಯುವುದು ಹೇಗೆ?
– ಇದು ಪ್ರಾಣಿಗಳ ಮೂಲಕ ಹರಡುವುದರಿಂದ ಪ್ರಾಣಿಗಳಿಂದ ಸ್ವಲ್ಪ ದೂರವಿರುವುದು ಉತ್ತಮ.
– ಸೋಂಕಿ ವ್ಯಕ್ತಿಗಳಿಂದ ದೂರವಿರಿ.
– ಕೈ ಮತ್ತು ಮುಖವನ್ನು ಆಗಾಗ ತೊಳೆದುಕೊಳ್ಳುವುದು ಉತ್ತಮ
_ಮುಖಕ್ಕೆ ಮಾಸ್ಕ್‌ ಮತ್ತು ಕೈಗಳಿಗೆ ಗ್ಲೌಸ್‌ (ಅಗತ್ಯವಿದ್ದಾಗ) ಬಳಸಿ

ಸಲಿಂಗಕಾಮಿಗಳಿಗೆ ಆತಂಕ ಯಾಕೆ?
ಸಲಿಂಗಕಾಮಿಗಳು, ಹೆಚ್ಚಿನ ಲೈಂಗಿಕ ಸಂಪರ್ಕಗಳನ್ನು ಹೊಂದಿರುವವರು ಈ ರೋಗದ ಬಗ್ಗೆ ಹೆಚ್ಚು ಎಚ್ಚರವಾಗಿರಬೇಕು. ʼʼಯುರೋಪ್‌ನಲ್ಲಿ ಎರಡು ಇವೆಂಟ್‌ಗಳಲ್ಲಿ ದೈಹಿಕವಾಗಿ ಅತ್ಯಂತ ನಿಕಟವಾಗಿ ಪಾಲ್ಗೊಂಡವರಲ್ಲಿ ಇದು ಹಬ್ಬಿದೆʼʼ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಎಮರ್ಜೆನ್ಸಿ ವಿಭಾಗದ ಮಾಜಿ ಮುಖ್ಯಸ್ಥ ಡಾ.ಡೇವಿಡ್‌ ಹೈಮನ್‌ ಹೇಳಿದ್ದಾರೆ. ʼʼಈ ಕಾಯಿಲೆ ಯಾರಿಗೂ ಬರಬಹುದು. ಆದರೆ ಈಗಾಗಲೇ ಬಂದವರನ್ನು ಪರೀಕ್ಷಿಸಲಾಗಿ, ಅವರಲ್ಲಿ ಹೆಚ್ಚಿನವರು ಗೇಗಳು ಎಂಬುದು ಕಂಡುಬಂದಿದೆ!

Exit mobile version