Site icon Vistara News

POCSO ACT | ಏನಿದು ಪೋಕ್ಸೋ ಕಾಯಿದೆ, ಅಪರಾಧಿಗಳಿಗೆ ಶಿಕ್ಷೆ ಏನು?

Pocso

ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪವನ್ನು ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಎದುರಿಸುತ್ತಿದ್ದಾರೆ. ಅವರ ವಿರುದ್ಧ ಪೋಕ್ಸೋ (ಲೈಂಗಿಕ ದೌರ್ಜನ್ಯದ ವಿರುದ್ಧ ಮಕ್ಕಳ ರಕ್ಷಣೆ- POCSO ACT) ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪೋಕ್ಸೋ ಕಾಯಿದೆ ಎಂದರೇನು, ಯಾವುದು ಅಪರಾಧ, ಕಾಯಿದೆಯ ಲಕ್ಷಣಗಳೇನು, ಉದ್ದೇಶಗಳೇನು, ಯಾವಾಗ ಈ ಕಾಯಿದೆ ಅನ್ವಯವಾಗುತ್ತದೆ, ತಿದ್ದುಪಡಿಗಳೇನು ಎಂಬಿತ್ಯಾದಿ ಮಾಹಿತಿಯು ಇಲ್ಲಿದೆ….

ಏನಿದು ಪೋಕ್ಸೋ ಕಾಯಿದೆ?
2012ರ Protection of Children from Sexual Offences Act ಅನ್ನು ಸಂಕ್ಷಿಪ್ತವಾಗಿ ಪೋಕ್ಸೋ (POCSO ACT) ಕಾಯಿದೆ ಎಂದು ಕರೆಯಲಾಗುತ್ತಿದೆ. ಮಕ್ಕಳ ಹಿತರಕ್ಷಣೆಗಾಗಿ ಈ ಕಾಯಿದೆಯನ್ನು ಜಾರಿಗೆ ತರಲಾಯಿತು. ಅದರಲ್ಲೂ ವಿಶೇಷವಾಗಿ ಮಕ್ಕಳನ್ನು ಎಲ್ಲ ರೀತಿಯ ಲೈಂಗಿಕ ದೌರ್ಜನ್ಯ, ಅಪರಾಧಗಳಿಂದ ಪಾರು ಮಾಡುವುದು ಕಾಯಿದೆಯ ಮುಖ್ಯ ಉದ್ದೇಶವಾಗಿದೆ. ಈ ಕಾಯಿದೆ ಯಾವುದೇ ಲಿಂಗತಾರತಮ್ಯ ಮಾಡುವುದಿಲ್ಲ. ಬಾಲಕಿ ಮತ್ತು ಬಾಲಕ ಇಬ್ಬರನ್ನು ಲೌಂಗಿಕ ದೌರ್ಜನ್ಯದ ಸಂತ್ರಸ್ತರು ಎಂದು ಪರಿಗಣಿಸುತ್ತದೆ.

ಯಾವುದರಿಂದ ರಕ್ಷಣೆ?: ಬಾಲಕಿ/ಬಾಲಕ ವಿರುದ್ಧ ಲೈಂಗಿಕ ದೌರ್ಜನ್ಯ, ಲೈಂಗಿಕ ಪೀಡನೆ, ಪೋರ್ನೋಗ್ರಫಿ, ಲೈಂಗಿಕ ಹಿಂಸೆಗಳಿಂದ ರಕ್ಷಣೆ ಮಾಡಲಾಗುತ್ತದೆ.

ಮಕ್ಕಳ ಹಕ್ಕುಗಳ ವಿಶ್ವಸಂಸ್ಥೆಯ ಒಪ್ಪಂದಕ್ಕೆ (UNCRC) ಭಾರತವೂ ಸಹಿ ಮಾಡಿದೆ. ಸ್ನೇಹಿ ಕಾರ್ಯವಿಧಾನವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿಯೇ ಪೋಕ್ಸೋ ಕಾಯಿದೆಯನ್ನು ಜಾರಿಗೊಳಿಸಲಾಗಿದೆ. ಜತೆಗೆ ಭಾರತದ ಸಂವಿಧಾನದ 15 (3) ನೇ ವಿಧಿಯ ಅಗತ್ಯವನ್ನೂ ಈ ಕಾಯಿದೆ ಪೂರೈಸುತ್ತದೆ.

ಈ ಕಾಯಿದೆ ಲಕ್ಷಣಗಳೇನು?

ಗೌಪ್ಯತೆ ಕಾಪಾಡಬೇಕು
ಪೋಕ್ಸೋ ಕಾಯಿದೆಯ ಸೆಕ್ಷನ್ 23ರ ಪ್ರಕಾರ, ಸಂತ್ರಸ್ತರ ಗುರುತನ್ನು ಬಿಟ್ಟುಕೊಡಬಾರದು. ಈ ಕಾಯಿದೆ ಅನುಸಾರ ಸ್ಥಾಪಿತವಾದ ವಿಶೇಷ ಕೋರ್ಟು ಅನುಮತಿ ಇಲ್ಲದ ಹೊರತು ಸಂತ್ರಸ್ತರ ಮಾಹಿತಿಯನ್ನು ಬಹಿರಂಗಪಡಿಸುವಂತಿಲ್ಲ. ಒಂದೊಮ್ಮೆ ಈ ಸೆಕ್ಷನ್ ಉಲ್ಲಂಘನೆಯಾದರೆ, ಶಿಕ್ಷಾರ್ಹ ಅಪರಾಧ ಎನಿಸಿಕೊಳ್ಳುತ್ತದೆ. ಒಳ್ಳೆಯ ಕಾರಣಕ್ಕಾದರೂ ಮಾಹಿತಿ ಬಹಿರಂಗ ಮಾಡಿದ್ದರೂ ಶಿಕ್ಷೆ ತಪ್ಪುವುದಿಲ್ಲ. ಮಾಧ್ಯಮಗಳು ಮಾತ್ರವಲ್ಲದೇ ಸೋಷಿಯಲ್ ಮೀಡಿಯಾಗಳಲ್ಲೂ ಮಾಹಿತಿ ಸೋರಿಕೆಯಾಗುವಂತಿಲ್ಲ.

ಮಕ್ಕಳ ಸ್ನೇಹಿ ವಿಚಾರಣಾ ಪ್ರಕ್ರಿಯೆ
-ಪೋಕ್ಸೋ ಕಾಯಿದೆಯು ಮಕ್ಕಳ ಸ್ನೇಹಿ ವಿಚರಣಾ ಪ್ರಕ್ರಿಯೆಗಳನ್ನು ಖಚಿತಪಡಿಸುತ್ತದೆ.ಸಂತ್ರಸ್ತ ಮಕ್ಕಳನ್ನು
-ವಿಚಾರಣೆಗೊಳಪಡಿಸುವ ಪೊಲೀಸ್ ಅಧಿಕಾರಿ ಸಮವಸ್ತ್ರ ಧರಿಸುವಂತಿಲ್ಲ.
-ವಿಚಾರಣೆ ಸಂದರ್ಭದಲ್ಲಿ ಸಂತ್ರಸ್ತ ಬಾಲಕ/ಬಾಲಕಿ ಆರೋಪಿಯ ಸಂಪರ್ಕಕ್ಕೆ ಬರದಂತೆ ನೋಡಿಕೊಳ್ಳಬೇಕು.
-ಮಗುವನ್ನು ರಾತ್ರಿ ವೇಳೆ ಪೊಲೀಸ್ ಠಾಣೆಯಲ್ಲಿ ಇರಿಸಿಕೊಳ್ಳುವಂತಿಲ್ಲ.
-ಮಗುವಿನ ಮಾಹಿತಿ ಗೌಪ್ಯತೆಯನ್ನುತನಿಖಾಧಿಕಾರಿ ಕಾಪಾಡಬೇಕು.
-ಮಗು ಯಾರನ್ನು ನಂಬುತ್ತದೆಯೋ ಅಂಥವರ ಸಮ್ಮುಖದಲ್ಲೇ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು. ಉದಾಹರಣೆಗೆ ತಂದೆ ತಾಯಿ ಸಮ್ಮುಖದಲ್ಲಿ.
-ಎಲೆಕ್ಟ್ರಾನಿಕ್ ಸಾಧನಗಳಾದ ಆಡಿಯೋ ಮತ್ತು ವಿಡಿಯೋಗಳ ಮೂಲಕ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು.
-ಅಗತ್ಯ ಇದ್ದರೆ ಅನುವಾದಕರು ಮತ್ತು ವ್ಯಾಖ್ಯಾನಕಾರರ ಸಾಹಯವನ್ನು ಪಡೆದುಕೊಳ್ಳಬೇಕು.
-ವಿಚಾರಣೆ ವೇಳೆ ನಿಯಮಿತವಾಗಿ ವಿರಾಮಗಳನ್ನು ತೆಗೆದುಕೊಳ್ಳಬೇಕು.
-ವಿಚಾರಣಾ ಕೋರ್ಟ್‌ಗೆ ಪದೇ ಪದೇ ಮಗುವನ್ನು ಕರೆಯಬಾರದು, ಈ ಬಗ್ಗೆ ವಿಶೇಷ ಕೋರ್ಟ್ ನಿಗಾವಹಿಸಬೇಕಾಗುತ್ತೆ.
-ವಿಚಾರಣೆ ವೇಳೆ ಸಂತ್ರಸ್ತ ಮಗುವಿಗೆ ಆಕ್ರಮಣಕಾರಿ ಪ್ರಶ್ನೆಗಳನ್ನು ಕೇಳುವಂತಿಲ್ಲ.

ಕೇಸ್ ವಿಲೇವಾರಿ ಅವಧಿ?
ಪೋಕ್ಸೋ ಕಾಯಿದೆಯ ಸೆಕ್ಷನ್ 35ರ ಪ್ರಕಾರ, ಪ್ರಕರಣದ ವಿಚಾರಣೆಗೆ ನಿರ್ದಿಷ್ಟ ಅವಧಿಯನ್ನು ನಿಗದಿಪಡಿಸಲಾಗಿದೆ. ಮಗುವಿನ ಹೇಳಿಕೆ ದಾಖಲು: ಅಪರಾಧ ನಡೆದಿದೆ ಎಂಬುದು ಗೊತ್ತಾದ ದಿನ(ಕೇಸ್ ದಾಖಲಾದ)ದಿಂದ 30 ದಿನಗಳ ಒಳಗೆ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು.ಅಪರಾಧ ನಡೆದಿದೆ ಎಂದು ಗೊತ್ತಾದ ದಿನದಿಂದ ಒಂದು ವರ್ಷದೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಬೇಕು.

ತಿದ್ದುಪಡಿ ಬಳಿಕ ಶಿಕ್ಷೆಯ ಪ್ರಮಾಣ

ಇದನ್ನೂ ಓದಿ | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ 20 ವರ್ಷ ಜೈಲು, ₹50 ಸಾವಿರ ದಂಡ

Exit mobile version