ಬೆಂಗಳೂರು: ಸಾಂಕ್ರಾಮಿಕ ಕೊರೊನಾ ಸೋಂಕು ಕಾಲಿಟ್ಟು 2 ವರ್ಷಗಳು ಕಳೆದರೂ ತೀವ್ರತೆ ಮಾತ್ರ ಕಡಿಮೆ ಆಗಿಲ್ಲ. ಇದೀಗ ನಾಲ್ಕನೇ ಅಲೆ ಏರಿಕೆಗೆ ಕಾರಣವಾಗಬಹುದಾದ ಉಪತಳಿ ಪತ್ತೆಯಾಗಿದ್ದು, ಆತಂಕ ಹೆಚ್ಚಿಸಿದೆ. ರೂಪಾಂತರಿ ಒಮಿಕ್ರಾನ್ ಉಪತಳಿ ಬಿಎ3, ಬಿಎ4 ಹಾಗೂ ಬಿಎ 5 ಪತ್ತೆಯಾಗಿದೆ. ಈ ಕುರಿತು ಆರೋಗ್ಯ ಸಚಿವ ಸುಧಾಕರ್ ಟ್ವೀಟ್ ಮಾಡಿದ್ದು, ಯಾವ ಯಾವ ಉಪತಳಿ ಎಷ್ಟು ತೀವ್ರವಾಗಿದೆ ಎಂಬುದನ್ನು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ | Covid news | ಹೆಚ್ಚಾಗುತ್ತಿದೆ ಕೊರೊನಾ, ಮಕ್ಕಳಿಗೆ ಕೋವಿಡ್ ಬಂತೆಂದು ಬೆಂಗಳೂರಿನ 2 ಶಾಲೆಗಳಿಗೆ ರಜೆ
ಕಳೆದ ವರ್ಷ ಮಾರ್ಚ್‌ನಿಂದ ಡಿಸೆಂಬರ್ ತನಕ ಶೇ.90.7%ರಷ್ಟು ಡೆಲ್ಟಾ ಹಾಗೂ ಈ ವರ್ಷದ ಜನವರಿಯಿಂದ ಏಪ್ರಿಲ್ ತನಕ ಶೇ.87.80% ರಷ್ಟು ಬಳಿಕ ಮೇ ತಿಂಗಳಿನಿಂದ ಜೂನ್ ತನಕ ಶೇ 99.20%ರಷ್ಟು ಒಮಿಕ್ರಾನ್ ರೂಪಾಂತರಿ ಬಾಧಿಸಿದೆ. ಇದೀಗ ನಾಲ್ಕನೇಯದಾಗಿ ಹೊಸ ಪ್ರಕರಣಗಳ ಹೆಚ್ಚಳಕ್ಕೆ ಈಗ ಪತ್ತೆಯಾಗಿರುವ ಒಮಿಕ್ರಾನ್ ಉಪತಳಿಯೇ ಕಾರಣ ಎನ್ನಲಾಗುತ್ತಿದೆ.
ತಜ್ಞರು ನಾಲ್ಕನೇ ಅಲೆಯ ಮುನ್ಸೂಚನೆ ನೀಡಿರುವ ಕಾರಣ ನಿತ್ಯ ನಿಗದಿತ ಸಂಖ್ಯೆಯ ಸ್ಯಾಂಪಲ್‌ಗಳನ್ನು ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಮೇ ಮತ್ತು ಜೂನ್‌ನಲ್ಲಿ ನಡೆದ ವಂಶವಾಹಿ ಪರೀಕ್ಷೆಗಳಲ್ಲಿ ಶೇ.98ರಷ್ಟು ಒಮಿಕ್ರಾನ್ ಬಿಎ 1.1.529, ಬಿಎ1, ಬಿಎ2 ಪತ್ತೆಯಾಗಿತ್ತು. ಶೇ.2ರಷ್ಟು ಒಮಿಕ್ರಾನ್ ಹೊಸ ಉಪತಳಿಗಳಾದ ಬಿಎ3, ಬಿಎ4, ಬಿಎ 5 ಪತ್ತೆಯಾಗಿದೆ. ನಾಲ್ಕನೇ ಅಲೆಯಲ್ಲಿ ಸೋಂಕು ಹೆಚ್ಚಾಗಲು ಬಿಎ3 ಹಾಗೂ ಬಿಎ5 ಉಪತಳಿ ಎಂದು ಅಂದಾಜಿಸಲಾಗಿದೆ.
ಜಿನೋಮ್ ಸೀಕ್ವೇನ್ಸ್‌ನಲ್ಲಿ ಪತ್ತೆಯಾದ ರೂಪಾಂತರಿ
ಉಪತಳಿಗಳು-ಪ್ರಕರಣಗಳ ಸಂಖ್ಯೆ
ಡೆಲ್ಟಾ- 3
ಇತರೆ – 14
ಬಿಎ1.1.529 – 189
ಬಿಎ1 – 1
ಬಿಎ2 – 1964
ಬಿಎ3 – 2
ಬಿಎ4 – 4
ಬಿಎ5 – 38
ಒಟ್ಟು ಪರೀಕ್ಷೆ – 2215
ಮೂರನೇ ಅಲೆಗೆ ಕಾರಣವಾಗಿದ್ದ ಒಮಿಕ್ರಾನ್ ಬಿಎ 1.1.529, ಬಿಎ1 ಪ್ರಕರಣಗಳ ಪ್ರಮಾಣ ಶೇ 8.6% ರಷ್ಟು ಇಳಿಕೆಯಾಗಿದೆ. ಮೇ ತಿಂಗಳಲ್ಲಿ ಬಿಎ2 ಉಪತಳಿ ಪ್ರಮಾಣವು ಶೇ.80 ರಿಂದ ಶೇ.89ಕ್ಕೆ ಹೆಚ್ಚಳವಾಗಿದೆ. ಇದೀಗ ಬಿಎ3, ಬಿಎ4, ಬಿಎ 5 ಉಪತಳಿಗಳು ಪತ್ತೆಯಾಗಿದ್ದು ಎಷ್ಟು ತೀವ್ರವಾಗಿ ಇರಲಿದೆ ಎಂಬುದು ತಿಳಿಯಬೇಕಿದೆ.
ಇದನ್ನೂ ಓದಿ | ಇದು ಕೊರೊನಾ ನಾಲ್ಕನೇ ಅಲೆ ಅಲ್ಲ, ಆದರೆ ಹುಷಾರಾಗಿರಿ ಎಂದ ಸರ್ಕಾರ