Site icon Vistara News

Wild animals Attack : ಅಡುಗೆ ಕೋಣೆಯಲ್ಲಿ ನಿದ್ದೆಗೆ ಜಾರಿದ ಚಿರತೆ; ಪ್ರವಾಸಿಗರ ಓಡಿಸಿಕೊಂಡು ಹೋದ ಕಾಡಾನೆ

Leopard, elephant spotted

ತುಮಕೂರು/ಮೈಸೂರು: ಆಹಾರ ಅರಸಿ ಕಾಡು ಪ್ರಾಣಿಗಳು (Wild animals Attack) ನಾಡಿನತ್ತ ಹೆಜ್ಜೆ ಹಾಕುತ್ತಿವೆ. ಸದ್ಯ ಕಲ್ಯಾಣ ಮಂಟಪದ ಅಡುಗೆ ಕೋಣೆಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ, ಕ್ಷಣಕಾಲ ಎಲ್ಲರನ್ನು ಆತಂಕಕ್ಕೆ ದೂಡಿತ್ತು. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟ ಬಳಿಯ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ಚಿರತೆ ಕಾಣಿಸಿಕೊಂಡಿತ್ತು.

ಚಿರತೆ ಕಂಡೊಡನೆ ಗಾಬರಿಯಾದ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಫಾರಿಗರು ಜಸ್ಟ್‌ ಮಿಸ್ಟ್

ಸಫಾರಿ ವಾಹನಗಳ‌ನ್ನು ಕಾಡಾನೆಯೊಂದು ಅಟ್ಟಾಡಿಸಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ‌ ನಾಗರಹೊಳೆ ಕುಟ್ಟ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಸಫಾರಿಗೆ ತೆರಳಿದ್ದ ಪ್ರವಾಸಿಗರ ಕ್ಯಾಮೆರಾ ಕಾಡಾನೆ ದಾಳಿ ಸೆರೆಯಾಗಿದೆ.

ರಸ್ತೆ ಬದಿ ಆಹಾರ ಸೇವಿಸುತ್ತಾ ನಿಂತಿದ್ದ ಕಾಡಾನೆ ಒಮ್ಮೆಲೆ ಖಾಸಗಿ ವಾಹನ ನೋಡಿ‌ ಓಡಿ ಬಂದಿದೆ. ಬಳಿಕ ಅಲ್ಲೆ ಇದ್ದ ಸಫಾರಿ ವಾಹನದ ಮೇಲೆ ದಾಳಿಗೆ ಮುಂದಾಗಿ ವಾಪಸ್‌ ಬಂದಿದೆ. ರಸ್ತೆ ಬದಿಗೆ ಹೋಗುವಂತೆ ಬಂದು ಎದುರಿನಲ್ಲಿದ್ದ ಮತ್ತೊಂದು ಸಫಾರಿ ವಾಹನದ ಬಳಿಗೂ ಓಡಿಸಿಕೊಂಡು ಹೋಗಿದೆ. ಆಗ ಚಾಲಕ ವಾಹನವನ್ನು ಹಿಮ್ಮುಖವಾಗಿ ಚಲಿಸಿದ ಬಳಿಕ ವಾಪಸ್ಸು ಹೋಗಿದೆ. ‌

ಇದನ್ನೂ ಓದಿ: Namma Metro : ಗಣೇಶ ಹಬ್ಬಕ್ಕೆ ಕೆಂಗೇರಿ-ಚಲ್ಲಘಟ್ಟ, ಬೈಯಪ್ಪನಹಳ್ಳಿ- ಕೆಆರ್‌ಪುರಂ ಮುಕ್ತ ಸಂಚಾರ!

ಪಾರಿವಾಳಗಳ ರುಂಡ ಕತ್ತರಿಸಿ ವಿಕೃತಿ

ಹುಬ್ಬಳ್ಳಿಯ ಗೋಕುಲ ರಸ್ತೆಯ ಯಾವಗಲ್ ಪ್ಲಾಟ್‌ನಲ್ಲಿ ಕೆಲ ದುಷ್ಕರ್ಮಿಗಳು ಪಾರಿವಾಳಗಳ ಕುತ್ತಿಗೆ ಕತ್ತರಿಸಿ ಹತ್ಯೆ ಮಾಡಿದ್ದಾರೆ. ಮನೆಯಲ್ಲಿ ಸಾಕಿದ್ದ 23 ಪಾರಿವಾಳಗಳ ರುಂಡ ಕತ್ತರಿಸಿದ್ದಾರೆ.

ರಾಹುಲ್ ದಾಂಡೇಲಿ ಅವರಿಗೆ ಸೇರಿದ 23 ಪಾರಿವಾಳಗಳ ಕುತ್ತಿಗೆಯನ್ನು ದುಷ್ಟರು ಚಾಕುವಿನಿಂದ ಕಟ್‌ ಮಾಡಿದ್ದಾರೆ. ಕಳೆದ ಆರು ತಿಂಗಳಿಂದ ರಾಹುಲ್‌ ಪಾರಿವಾಳ ಸಾಕಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಪಾರಿವಾಳ ಹತ್ಯೆ ಮಾಡಿ ಪರಾರಿ ಆಗಿದ್ದಾರೆ.

ಹಳೇ ದ್ವೇಷದ ಹಿನ್ನೆಲೆಯಲ್ಲಿ ಪಾರಿವಾಳಗಳನ್ನು ಕೊಂದಿರುವ ಶಂಕೆ ವ್ಯಕ್ತವಾಗಿದ್ದು, ಈ ಕೃತ್ಯ ಎಸಗಿದವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version