Site icon Vistara News

Elephant attack : ಕಾಡಾನೆ ದಾಳಿಗೆ ವಾಚರ್‌ ಬಲಿ, ಕಂದಕದಲ್ಲಿ ಬಿದ್ದರೂ ಸೊಂಡಿಲಿನಲ್ಲಿ ಮೇಲೆತ್ತಿ ಎಸೆದ ಆನೆ

Elephant attack

#image_title

ಮೈಸೂರು: ಕಾಡಾನೆ ದಾಳಿಗೆ (Elephant attack) ವಾಚರ್ ಒಬ್ಬರು ಪ್ರಾಣ ಕಳೆದುಕೊಂಡ ಘಟನೆ ಎಚ್‌.ಡಿ.ಕೋಟೆ ತಾಲೂಕಿನ ದಡದಹಳ್ಳಿ ಹಾಡಿಯಲ್ಲಿ ಸಂಭವಿಸಿದೆ. ಅರಣ್ಯ ಇಲಾಖೆಯಲ್ಲಿ ವಾಚರ್‌ ಆಗಿರುವ ಹಾಡಿ ನಿವಾಸಿ ಬೊಮ್ಮ ಆನೆ ದಾಳಿಗೆ ಸಿಲುಕಿ ಗಾಯಗೊಂಡಿದ್ದು, ಬಳಿಕ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟರು.

ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕಲ್ಕೆರೆ ಅರಣ್ಯದಲ್ಲಿ ಘಟನೆ ನಡೆದಿದೆ. ಬೊಮ್ಮ ಅವರು ಗಸ್ತಿನಲ್ಲಿದ್ದಾಗ ಕಾಡಾನೆ ಹಠಾತ್ ಎದುರಾಗಿದೆ. ಕಾಡಾನೆಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದ ವೇಳೆ ಬೊಮ್ಮ ಕಂದಕಕ್ಕೆ ಬಿದ್ದಿದ್ದರು. ಆನೆಯಿಂದ ತಪ್ಪಿಸಿಕೊಂಡೆ ಎಂದು ಹೇಳುವಷ್ಟರಲ್ಲಿ ಆನೆ ಅವರನ್ನು ಸೊಂಡಲಿನಿಂದ ಮೇಲಕ್ಕೆಸೆದು ಗಾಯಗೊಳಿಸಿತು. ಬಳಿಕ ಅಲ್ಲಿಂದ ಪರಾರಿಯಾಯಿತು.

ಗಂಭೀರವಾಗಿ ಗಾಯಗೊಂಡಿದ್ದ ಬೊಮ್ಮಾ ಅವರು ಫೋನ್‌ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಸ್ಥಳಕ್ಕೆ ಬರಮಾಡಿಕೊಂಡರು. ಮೈ ಮೂಳೆಗಳು ಮುರಿದು ಗಂಭೀರ ಗಾಯವಾಗಿದ್ದ ಬೊಮ್ಮ. ಅವರನ್ನು ಕೂಡಲೇ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ ಮಾರ್ಗ ಮಧ್ಯದಲ್ಲೇ ಅವರು ಪ್ರಾಣ ಕಳೆದುಕೊಂಡರು.

ಸ್ಥಳಕ್ಕೆ ಅರಣ್ಯ ಇಲಾಖೆ ಸಿಎಫ್​ಒ ರವಿಕುಮಾರ್ ಸೇರಿಸಂತೆ ಸಿಬ್ಬಂದಿ ಪೊಲೀಸರ ಭೇಟಿ ನೀಡಿದ್ದಾರೆ. ಮೃತನ ಕುಟುಂಬಕ್ಕೆ ಜೀವ ವಿಮೆ ಸೇರಿದಂತೆ ಇನ್ನಿತರೆ ಸವಲತ್ತು ಸೇರಿ 35 ಲಕ್ಷ ರೂ. ಪರಿಹಾರ ಕೊಡಿಸುವ ಭರವಸೆ ನೀಡಲಾಗಿದೆ.
ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version