Site icon Vistara News

Devotee of Lord Rama : ನಾನೂ ರಾಮ ಭಕ್ತ, ಹೊಸ ರಾಮನಗರ ನಿರ್ಮಾಣವೇ ಗುರಿ ಎಂದ ಮುಸ್ಲಿಂ ಶಾಸಕ

Rama nagara MLA Iqbal

Rama nagara MLA Iqbal

ರಾಮನಗರ: ʻನಾನೂ ಕೂಡಾ ಶ್ರೀರಾಮ ದೇವರ ಭಕ್ತನೆ (Devotee of Lord Rama). ನನ್ನ ಗುರಿ ಜನರಿಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಹೊರ ರಾಮ ನಗರವನ್ನು ಕಟ್ಟುವುದುʼ- ಹೀಗೆಂದು ಹೇಳಿದ್ದಾರೆ ರಾಮನಗರ ಕ್ಷೇತ್ರದ ನೂತನ ಶಾಸಕ, ಕಾಂಗ್ರೆಸ್‌ನ ಎಚ್‌.ಎ. ಇಕ್ಬಾಲ್‌ (H.A Iqbal)

ʻರಾಮನಗರದ ಶ್ರೀ ರಾಮ ದೇವರ ಬೆಟ್ಟದಲ್ಲಿ (Sri rama devara Betta) ರಾಮ ಮಂದಿರ ಕಟ್ಟುವ ವಿಚಾರದಲ್ಲಿ ನಾನು ಈಗಲೇ ಏನನ್ನೂ ಹೇಳಲಾಗದು. ಆದರೆ ರಾಮನಗರ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ಕೊಡುತ್ತೇನೆ ಎಂದು ಮಾತ್ರ ಹೇಳಬಲ್ಲೆ. ರಾಮನಗರ ಕಳೆದ 20 ವರ್ಷಗಳಿಂದ ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಈಗ ಜನರು ನನಗೆ ಸೇವೆ ಮಾಡುವ ಅವಕಾಶ ಒದಗಿಸಿದ್ದಾರೆ. ಅದನ್ನು ಬಳಸಿಕೊಂಡು ಸೇವೆ ಮಾಡುತ್ತೇನೆʼʼ ಎಂದು ಇಕ್ಬಾಲ್‌ ಹೇಳಿದರು. ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ನಿಖಿಲ್‌ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದರು.

ಕ್ಷೇತ್ರದಲ್ಲಿ ಹಲವಾರು ರೀತಿಯ ಸಮಸ್ಯೆಗಳಿವೆ. ಅವುಗಳನ್ನು ಹಂತ ಹಂತವಾಗಿ ನಾನು ಪರಿಹಾರ ಮಾಡುತ್ತೇನೆ. ಇಲಾಖೆಗಳ ಅಧಿಕಾರಿಗಳ ಜತೆ ಸಭೆ ಮಾಡುತ್ತೇನೆ. ಜನರಿಗೆ ಆಸರೆ ಮತ್ತು ನೀರನ್ನು ಆದ್ಯತೆಯಲ್ಲಿ ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆʼʼ ಎಂದು ಅವರು ಹೇಳಿದರು.

ʻʻನಾನು ಲಂಚ ತೆಗೆದುಕೊಳ್ಳುವುದಿಲ್ಲ. ರಾಮನಗರದ ಸರ್ಕಾರಿ ಕಚೇರಿಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಲಂಚಾವತಾರ ತಾಂಡವವಾಡುತ್ತಿದೆ ಎಂದು ಕೇಳಿದ್ದೇನೆ. ಅದನ್ನು ನಿಯಂತ್ರಿಸುತ್ತೇನೆ. ಅಭಿವೃದ್ಧಿಯ ವಿಚಾರದಲ್ಲಿ ಎಲ್ಲರೂ ನನಗೆ ಸಹಕಾರ ಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ. ಈ ಹಿಂದೆ ರಾಮನಗರದ ಶಾಸಕರಾಗಿದ್ದ ಅನಿತಾ ಕುಮಾರಸ್ವಾಮಿ ಅವರಿಗೆ ಅಧಿಕಾರ ಮತ್ತು ಹಣದ ಬಗ್ಗೆ ವ್ಯಾಮೋಹವಿರಲಿಲ್ಲ ಎಂದು ಅವರು ಪರೋಕ್ಷವಾಗಿ ಹೇಳಿದರು.

ಜೆಡಿಎಸ್‌ ಗಟ್ಟಿ ನೆಲದಲ್ಲಿ ಕಾಂಗ್ರೆಸ್‌ ವಿಜೃಂಭಣೆ

ನಿಜವೆಂದರೆ ರಾಮನಗರ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆ. 1994ರಲ್ಲಿ ದೇವೇಗೌಡರು ಗೆದ್ದಿದ್ದ ಈ ಕ್ಷೇತ್ರದಲ್ಲಿ 2004ರಿಂದ ಸತತವಾಗಿ ಜೆಡಿಎಸ್‌ ಗೆಲುವು ಸಾಧಿಸುತ್ತಿದೆ. 2004 ಮತ್ತು 2008ರಲ್ಲಿ ಎಚ್‌.ಡಿ. ಕುಮಾರಸ್ವಾಮಿ, 2013ರಲ್ಲಿ ಎಚ್‌ ರಾಜು, 2018ರಲ್ಲಿ ಅನಿತಾ ಕುಮಾರಸ್ವಾಮಿ ಅವರು ಗೆದ್ದಿದ್ದರು.

2018ರಲ್ಲಿ ಅನಿತಾ ಕುಮಾರಸ್ವಾಮಿ ಅವರು ಗೆದ್ದಾಗ ಗೆಲುವಿನ ಅಂತರ 23000 ಮತಗಳಿದ್ದವು. ಅನಿತಾ ಕುಮಾರಸ್ವಾಮಿ ಅವರು 92000 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್‌ನ ಇಕ್ಬಾಲ್‌ ಅವರಿಗೆ 69 ಸಾವಿ ಮತಗಳು ಬಂದಿದ್ದವು.

2023ರ ಚುನಾವಣೆಯಲ್ಲಿ ಇಕ್ಬಾಲ್‌ ಹುಸೇನ್‌ ಅವರಿಗೆ 87 ಸಾವಿರ ಮತಗಳು ಬಂದಿದ್ದರೆ, ನಿಖಿಲ್‌ ಕುಮಾರಸ್ವಾಮಿ ಅವರಿಗೆ 76 ಸಾವಿರ ಮತಗಳು ಬಂದಿದ್ದವು. ಮಗನಿಗೊಂದು ರಾಜಕೀಯ ಭವಿಷ್ಯ ಕೊಡಬೇಕು ಎಂಬ ನೆಲೆಯಲ್ಲಿ ಅನಿತಾ ಕುಮಾರಸ್ವಾಮಿ ಅವರು ತಮ್ಮ ಕ್ಷೇತ್ರವನ್ನು ಬಿಟ್ಟುಕೊಟ್ಟರೂ ನಿಖಿಲ್‌ ಗೆಲುವು ಸಾಧಿಸಲಿಲ್ಲ.

ಈ ಭಾಗದಲ್ಲಿ ಮುಸ್ಲಿಮರ ಮತದ ಒಂದು ಭಾಗ ಕಾಂಗ್ರೆಸ್‌ಗೆ ಬಿದ್ದಿದ್ದರಿಂದ ಈ ಸೋಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: Ramanagara Election Results : ಜೆಡಿಎಸ್‌ ಭದ್ರಕೋಟೆ ರಾಮನಗರದಲ್ಲೇ ನಿಖಿಲ್‌ ಕುಮಾರಸ್ವಾಮಿಗೆ ಸೋಲು!

Exit mobile version