Site icon Vistara News

Karnataka Election: ಮುಸ್ಲಿಮರಿಗೆ ಮೀಸಲಾತಿ ವಾಪಸ್ ನೀಡಿ, ಲಿಂಗಾಯತ-ಒಕ್ಕಲಿಗರಿಗೆ ಮೀಸಲು ಹೆಚ್ಚಿಸುತ್ತೇವೆ: ಸಿದ್ದು ಭರವಸೆ

siddaramaiah stopped all new projects and payments of corporations

ರಾಯಚೂರು, ಕರ್ನಾಟಕ: ಬಿಜೆಪಿ ಈಗ ಅಧಿಕಾರಕ್ಕೆ ಏರುವ ಭ್ರಮೆಯಲ್ಲಿದೆ. ಆದರೆ, ಕರ್ನಾಟಕ ಜನರು ತೀರ್ಮಾನ ಮಾಡಿದ್ದು, ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಲಿದ್ದಾರೆ. ಮೋದಿ ನೂರು ಸಾರಿ ಬಂದ್ರು ಏನೂ ಆಗುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಗೆಲ್ಲಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಹೇಳಿದರು. ಅಲ್ಲದೇ, ಮೀಸಲಾತಿ ಹೆಚ್ಚಳದ ಗಿಮಿಕ್ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಮೀಸಲಾತಿ ವಾಪಸ್ ನೀಡಿ, ಲಿಂಗಾಯತ ಮತ್ತು ಒಕ್ಕಲಿಗರಿಗೆ ಮೀಸಲು ಹೆಚ್ಚಿಸುತ್ತೇವೆ ಎಂದು ಅವರು ಭರವಸೆ ನೀಡಿದರು(Karnataka Election 2023).

ರಾಯಚೂರಿನಲ್ಲಿ ಆಯೋಜಿಸಲಾಗಿದ್ದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಇದು ರಾಜ್ಯ ವಿಧಾನಸಭಾ ಚುನಾವಣೆ. ಲೋಕಸಭಾ ಚುನಾವಣೆ ಅಲ್ಲ. ೨೨೪ ಕ್ಷೇತ್ರದಲ್ಲಿ ಬಿಜೆಪಿ ಯಾರಿಗಾದ್ರೂ ಮುಸ್ಲಿಂಮರಿಗೆ,ಕ್ರಿಶ್ಚಿಯನನ್ನರಿಗೆ ಟಿಕೆಟ್ ಕೊಟ್ಟಿದ್ದಾರಾ? ಕೊಟ್ಟಿಲ್ಲ ಅಲ್ವಾ… ಹಾಗಿದ್ದರೆ ಸಬ್ ಸಾತ್ ಸಬ್ ಕಾ ವಿಕಾಸ್ ಹೇಗಾಗುತ್ತೆ? ಮೋದಿ ಗುಜರಾತ್ ನಲ್ಲಿ‌ ಗೆದ್ದಿದ್ದಾರೆ. ಆದರೆ ಪಂಜಾಬ್, ರಾಜಸ್ಥಾನ, ತಮಿಳುನಾಡು ಸೇರಿ ಹಲವೆಡೆ ಗೆದ್ರಾ..? ಮೋದಿ ಮಾಯಾ ಮಂತ್ರ ಮಾಡ್ತಾರಾ..? ಮೋದಿ ಕೇಳಿ ಮತ ಹಾಕ್ತಾರಾ..? ನಾನು ಉಡಾಫೆಯಿಂದ ಹೇಳ್ತಿಲ್ಲ ರಾಜ್ಯಾದ್ಯಂತ ಸುತ್ತಾಡಿದ್ದೇನೆ. ಎಲ್ಲ ಕಡೆ ಕಾಂಗ್ರೆಸ್ ಪರ ಗಾಳಿ ಇದೆ. ಹೋದಲ್ಲೆಲ್ಲಾ 15-20 ಸಾವಿರ ಜನ ಸೇರ್ತಾರೆ. ಅವರು ಉತ್ಸಾಹದಿಂದ ಬಂದಿರೊ ಜನ ಅದು ಎಂದರು.

ಎಸ್ ಸಿ/ಎಸ್ ಟಿ ಅವ್ರಿಗೆ ಒಳ ಮೀಸಲಾತಿ, ಸದಾಶಿವ ಆಯೋಗ ತೀರ್ಮಾನ ಮಾಡಿದ್ದೇವೆ ಅಂತಾರೆ. ವೀರಶೈವ ಲಿಂಗಾಯತ, ಒಕ್ಕಲಿಗರಿಗೆ ಹೆಚ್ಚಳ ಮಾಡಿದ್ದೇವೆ. ಹೇಗೆ ಮಾಡಿದ್ರಿ ಅದನ್ನ? ಮುಸಲ್ಮಾನರದ್ದು ಕಡಿಮೆ ಮಾಡಿ, ನಮಗೆ ಹೆಚ್ಚಳ ಮಾಡಿ ಕೊಡಿ ಅಂದ್ರಾ..? ಮುಸಲ್ಮಾನರ 4% ರದ್ದು ಮಾಡಿ, ಲಿಂಗಾಯತ, ಒಕ್ಕಲಿಗರಿಗೆ ಹಂಚಿದ್ದಿರಲ್ವಾ.. ? ಅದು ಅನ್ಯಾಯ ಅಲ್ವಾ.. ಎಂದು ಸಿದ್ದಾರಾಮಯ್ಯ ಅವರು ಪ್ರಶ್ನಿಸಿದರು.

ಇದನ್ನೂ ಓದಿ: Karnataka Election: ಉತ್ತರ ಪ್ರದೇಶ ಮಾದರಿ ಎಂದ ಯೋಗಿಗೆ ಸಿದ್ದರಾಮಯ್ಯ 10 ಸವಾಲು; ಇದೇನಾ ಮಾದರಿ?

ನಾವೇ ನಾಗಮೋಹನ್ ದಾಸ್ ರಿಪೋರ್ಟ್ ಮಾಡಿದ್ದು. ಆದ್ರೆ ಇಂಪ್ಲೀಮೆಂಟ್ ಮಾಡಿಲ್ಲ.. ವಾಲ್ಮೀಕಿ ಸ್ವಾಮಿಜಿ ಇನ್ನೂರಕ್ಕೂ ಹೆಚ್ಚು ದಿನ ಉಪವಾಸ ಕುಳಿತ್ರು. ಆದ್ರೀಗ ಕೋರ್ಟ್ ನಲ್ಲಿ ಏನಾಗಿದೆ? ಒಳ ಮೀಸಲಾತಿ ಮಾಡಿದ್ದಿವಿ ಅಂತ ಟೋಪಿ ಹಾಕಿದ್ದಾರೆ.. ಯಾರು ವಿರೋಧ ಮಾಡಿದ್ದಾರೋ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಆಯ್ತು ಆದ್ರೆ ಅಫಿಡವಿಟ್ ಹಾಕಬೇಕಿತ್ತಲ್ಲ ಹಾಕಿಲ್ಲ.. ಇದೆಲ್ಲಾ ಪಾಲಿಟಿಕಲ್‌ ಗಿಮಿಕ್. ಮೀಸಲಾತಿ ಹೆಚ್ಚಳ ಅನ್ನೋದೇ ಚೀಟ್(ಮೋಸ).. ನಾವು ಅಧಿಕಾರಕ್ಕೆ ಬಂದ್ರೆ ಮುಸಲ್ಮಾನರ 4% ಮೀಸಲಾತಿ ವಾಪಸ್ ಕೊಡುತ್ತೇವೆ.. ಲಿಂಗಾಯತ, ಒಕ್ಕಲಿಗರು ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಸಿದ್ದಾರಾಮಯ ಹೇಳಿದರು.

Exit mobile version