Site icon Vistara News

ಹೊಲದಲ್ಲಿ ತುಂಡಾಗಿ ಬಿದ್ದ ವಿದ್ಯುತ್‌ ತಂತಿ ತುಳಿದು ಮಹಿಳೆ ಸಾವು, ಮೆಸ್ಕಾಂ ವಿರುದ್ಧ ಸ್ಥಳೀಯರು ಗರಂ

chikkamagaluru

ಚಿಕ್ಕಮಗಳೂರು: ತಾಲೂಕಿನ ಬಂಡಿಹಳ್ಳಿ ಗ್ರಾಮದಲ್ಲಿ ಹೊಲದಲ್ಲಿ ತುಂಡಾಗಿ ಬಿದ್ದ ವಿದ್ಯುತ್‌ ತಂತಿ ತುಳಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಬಂಡಿಹಳ್ಳಿಯ ಗಿರಿಜಮ್ಮ (೫೬) ಮೃತ ದುರ್ದೈವಿ.

ಗಿರಿಜಮ್ಮ ಅವರ ಪತಿ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಅವರಿಗಾಗಿ ಊಟ ತೆಗೆದುಕೊಂಡು ಹೋಗಿದ್ದರು ಗಿರಿಜಮ್ಮ. ಊಟ ಕೊಟ್ಟು ವಾಪಸ್‌ ಬರುತ್ತಿದ್ದಾಗ ಹೊಲದಲ್ಲಿ ತುಂಡಾಗಿ ಬಿದ್ದಿದ್ದ ತಂತಿಯನ್ನು ತುಳಿದು ಅವರು ಮೃತಪಟ್ಟಿದ್ದಾರೆ.
ಈ ಘಟನೆ ಸ್ಥಳೀಯವಾಗಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಊರಿನವರು ಸೇರಿ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಹೊಲದಲ್ಲಿ ಸೇರಿದ ಜನರು ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದರು. ಸ್ಥಳೀಯ ಮುಖಂಡರು ಆಗಮಿಸಿ ಅಧಿಕಾರಿಗಳನ್ನು ಕರೆಸಿಕೊಂಡರು. ಮೆಸ್ಕಾಂನಿಂದ ಪ್ರಮಾದವಾಗಿದೆ ಎಂದು ಒಪ್ಪಿಕೊಂಡ ಅಧಿಕಾರಿಗಳು ತಕ್ಷಣದ ಪರಿಹಾರವಾಗಿ ಒಂದು ಲಕ್ಷ ರೂ. ಚೆಕ್‌ ನೀಡಲಾಗುವುದು ಎಂದರು. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿ ಬಳಿ ಲಾರಿಗಳ ಮುಖಾಮುಖಿ ಡಿಕ್ಕಿ
ಹುಬ್ಬಳ್ಳಿ ಹೊರವಲಯದ ತಾರಿಹಾಳ ಬೈಪಾಸ್ ರಸ್ತೆಯಲ್ಲಿಯಲ್ಲಿ ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ನಡೆದು ಚಾಲಕರಿಗೆ ಗಂಭೀರ ಗಾಯಗಳಾಗಿವೆ. ಪೂನಾ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅವಘಡದಲ್ಲಿ ಢಿಕ್ಕಿಯ ರಭಸಕ್ಕೆ ಒಂದು ಲಾರಿ ಜಮೀನಿಗೆ ಉರುಳಿ ಬಿದ್ದಿದ್ದರೆ, ಇನ್ನೊಂದು ರಸ್ತೆ ಬದಿ ಕುಸಿದು ನಿಂತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ | Accident In Bangalore | ಜೀವ ಉಳಿಸಬೇಕಾದ ಆ್ಯಂಬುಲೆನ್ಸ್‌ನಿಂದ ಅಪಘಾತ : ದ್ವಿಚಕ್ರ ವಾಹನ ಚೂರುಚೂರು

Exit mobile version