ಯಾದಗಿರಿ: ಛತ್ರಪತಿ ಶಿವಾಜಿ ಮಹಾರಾಜರ ಫೋಟೋ ತಿರುಚಿ (Dishonor To Shivaji) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅವಮಾನ ಮಾಡಿದ ಪ್ರಕರಣ ಯಾದಗಿರಿಯಲ್ಲಿ ನಡೆದಿದೆ. ಅವಮಾನ ಮಾಡಿದ ಯುವಕರನ್ನು ಬಂಧಿಸಬೇಕು ಎಂದು ಹಿಂದೂ ಕಾರ್ಯಕರ್ತರು ದೂರು ನೀಡಿದ್ದಾರೆ.
ಈ ಕುರಿತು ಆರೋಪಿಗಳಿಬ್ಬರ ವಿರುದ್ಧ ನಗರ ಠಾಣೆಯಲ್ಲಿ ಐಪಿಸಿ 295(A) ಪ್ರಕರಣ ದಾಖಲಾಗಿದೆ. ಅರ್ಸನ್ ಶೇಕ್ ಹಾಗೂ ಶೇಕ್ ಇರ್ಫಾನ್ ಎಂಬ ಇಬ್ಬರು ಈ ಕೃತ್ಯ ಎಸಗಿದ್ದಾರೆ ಎಂದು ದೂರು ದಾಖಲಾಗಿದೆ.
ಅವಮಾನ ಮಾಡಲು ಇವರು ಶಿವಾಜಿ ಮಹಾರಾಜರು (Chatrapati shivaji) ಹಾಗೂ ಟಿಪ್ಪು ಸುಲ್ತಾನ್ (Tipu sultan) ಫೋಟೋವನ್ನು ಬಳಸಿಕೊಂಡಿದ್ದಾರೆ. ಟಿಪ್ಪುವಿನ ಕಾಲ ಬುಡದಲ್ಲಿ ಶಿವಾಜಿ ಇರುವಂತೆ ಎಡಿಟ್ ಮಾಡಲಾಗಿದೆ. ಅಂಬಾಭವಾನಿ ದೇವಿಯ ಮುಂದೆ ಶಿವಾಜಿ ಮಂಡಿಯೂರಿ ಪ್ರಾರ್ಥಿಸುತ್ತಿರುವ ಚಿತ್ರವನ್ನು ಕತ್ತರಿಸಿ, ಟಿಪ್ಪು ಸುಲ್ತಾನ್‌ನ ಮುಂದೆ ಮಂಡಿಯೂರಿ ಕುಳಿತು ಪ್ರಾರ್ಥಿಸುತ್ತಿರುವಂತೆ ಕೂರಿಸಿ ಎಡಿಟ್ ಮಾಡಲಾಗಿದೆ.
ಈ ಚಿತ್ರವನ್ನು ಯುವಕರು ತಮ್ಮ ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಹಾಕಿ ಅವಮಾನ ಮಾಡಿ ಅದರ ವಿಡಿಯೋ ಕೂಡ ಹರಿಬಿಟ್ಟಿದ್ದಾರೆ. ಈ ಮೂಲಕ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆಯಾಗುವ ರೀತಿ ವರ್ತಿಸಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ.
ಈ ಕುರಿತು ದೂರು ನೀಡಲು ಆಗಮಿಸಿದ ಹಿಂದೂ ಸಂಘಟನೆ ಯುವಕರು ತಡರಾತ್ರಿಯವರೆಗೂ ಯಾದಗಿರಿ ನಗರ ಠಾಣೆ ಮುಂದೆ ಜಮಾಯಿಸಿದರು. ಶಿವಕುಮಾರ ಎಂಬವರು ದೂರು ನೀಡಿದ್ದು, ತಡರಾತ್ರಿ ಆರೋಪಿಗಳಿಬ್ಬರ ವಿರುದ್ಧ ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇದನ್ನೂ ಓದಿ: Wagh Nakh: ಭಾರತಕ್ಕೆ ಛತ್ರಪತಿ ಶಿವಾಜಿ ಮಹಾರಾಜರ ‘ವಾಘ ನಖ’ ಆಯುಧ ವಾಪಸ್! ಏನಿದರ ಮಹತ್ವ?