ಯಾದಗಿರಿ: ಕೆರೆಯಲ್ಲಿ ಈಜಾಡಲು ಹೋಗಿ ಮೂವರು ಬಾಲಕರು ದುರ್ಮರಣ ಹೊಂದಿರುವ ಘಟನೆ ಜಿಲ್ಲೆಯ (Yadgir News) ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ನಡೆದಿದೆ. ಬೇಸಿಗೆ ಹಿನ್ನೆಲೆಯಲ್ಲಿ ಬಿಸಿಲಿನ ತಾಪ ತಾಳಲಾರದೆ ಮೂವರು ಸ್ನೇಹಿತರು ಕೆರೆಗೆ ಈಜಾಡಲು ತೆರಳಿದ್ದರು. ಈ ವೇಳೆ ಮೂವರೂ ನೀರು ಪಾಲಾಗಿದ್ದಾರೆ. ಹೈಯಾಳಪ್ಪ (11), ಶರಣಬಸವ (10) ಹಾಗೂ ಅನಿಲ್ (10) ಮೃತ ದುರ್ದೈವಿಗಳು. ಬಾಲಕರ ಮೃತದೇಹಗಳನ್ನು ಸ್ಥಳೀಯರು ಹೊರೆ ತೆಗೆದಿದ್ದಾರೆ.
ಇದನ್ನೂ ಓದಿ | Smuggling Case: ಬ್ಯಾಂಕಾಕ್‌ನಿಂದ ಸ್ಮಗ್ಲಿಂಗ್ ಮಾಡುತ್ತಿದ್ದ 10 ಹಳದಿ ಅನಕೊಂಡ ವಶಕ್ಕೆ, ಆರೋಪಿ ಬಂಧನ
ಮಿಡ್‌ನೈಟ್‌ನಲ್ಲಿ ರಸ್ತೆ ಕಾಣದೆ ಡಿವೈಡರ್‌ಗೆ ಬೈಕ್ ಡಿಕ್ಕಿ; ಹಾರಿ ಬಿದ್ದ ಸವಾರ ಸ್ಥಳದಲ್ಲೇ ಸಾವು
ಉಡುಪಿ: ಬೈಕ್ ಪಲ್ಟಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಉಡುಪಿಯ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಮಸೀದಿ ಸಮೀಪ (Road Accident) ನಡೆದಿದೆ. ವಿಕಾಸ್ ಆಚಾರ್ಯ (22) ಅಪಘಾತದಲ್ಲಿ ಮೃತಪಟ್ಟ ಯುವಕ.
ಕೋಟ ಮಣೂರು ಸುರೇಶ್ ಆಚಾರ್ಯ ಅವರ ಪುತ್ರ ವಿಕಾಸ್ ಸೋಮವಾರ ಮಧ್ಯರಾತ್ರಿ 1:30 ರ ಸುಮಾರಿಗೆ ಸಾಸ್ತಾನದಿಂದ ಕೋಟ ಕಡೆ ಬರುತ್ತಿದ್ದ. ಕೋಟ ಗುಜರಿ ಅಂಗಡಿ ಸಮೀಪ ಬರುವಾಗ ವಿಕಾಸ್‌ಗೆ ಬೈಕ್‌ನ ನಿಯಂತ್ರಣ ತಪ್ಪಿ ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿಯಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಪಲ್ಟಿಯಾಗಿ ಗಂಭೀರ ಗಾಯಗೊಂಡ ವಿಕಾಸ್ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗ ರವಾನಿಸಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ನೀರು ತರುತ್ತಿದ್ದ ಹನುಮ ಮಾಲಾಧಾರಿಗಳಿಗೆ ಬೊಲೆರೋ ಡಿಕ್ಕಿ, 3 ಸಾವು
ರಾಯಚೂರು: ಹನುಮ ಮಾಲಾಧಾರಿಗಳಿಗೆ (Hanuman Devotees) ಬೊಲೇರೋ ವಾಹನ (Bolero Hit) ಡಿಕ್ಕಿಯಾಗಿ ಸ್ಥಳದಲ್ಲಿಯೇ (Road Accident) ಮೂರು ಜನ ಸಾವಿಗೀಡಾಗಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ರಾಯಚೂರಿನ ಶಕ್ತಿನಗರದ ಯಾದವ ನಗರ ಕ್ರಾಸ್ ಬಳಿ ಘಟನೆ ನಡೆದಿದೆ. ಹನುಮಮಾಲಾಧಾರಿಗಳು ಹನುಮಜಯಂತಿ ಪ್ರಯುಕ್ತ ಕೃಷ್ಣಾ ನದಿಗೆ ನೀರು ತರಲು ಬಂದಾಗ ಘಟನೆ ನಡೆದಿದೆ. ಬೆಳಗಿನ ಜಾವ 5 ಗಂಟೆ ಸುಮಾರಿಗೆ ಯಮಸ್ವರೂಪಿ ಬೊಲೆರೋ ಮಾಲಾಧಾರಿಗಳಿಗೆ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ: Kidnap Case : ಅಖಂಡೇಶ್ವರ ಜಾತ್ರೆಗೆ ಹೋದ ಅತಿಥಿ ಶಿಕ್ಷಕಿಯನ್ನು ಅಪಹರಿಸಿದ ಮುಸ್ಲಿಂ ಯುವಕ
ಅಯ್ಯನಗೌಡ (28) ಮಹೇಶ (22), ಉದಯಕುಮಾರ (28) ಮೃತ ದುರ್ದೈವಿಗಳು. ರಮೇಶ ಭೂಷಣ ಎಂಬ ಇಬ್ಬರಿಗೆ ಗಂಭೀರ ಗಾಯವಾಗಿದೆ. ಎಲ್ಲರೂ ರಾಯಚೂರಿನ ಹೆಗಸನಹಳ್ಳಿ ನಿವಾಸಿಗಳು. ಕೋಳಿ ತುಂಬಿಕೊಂಡು ಬರುತ್ತಿದ್ದ ಬುಲೇರೋ ವಾಹನ ಚಾಲಕ ನಿರ್ಲಕ್ಷ್ಯದಿಂದ ಹಾಗೂ ವೇಗವಾಗಿ ಚಲಾಯಿಸಿ ಅಪಘಾತಕ್ಕೆ ಕಾರಣನಾಗಿದ್ದಾನೆ. ಘಟನಾ ಸ್ಥಳಕ್ಕೆ ಶಕ್ತಿ ನಗರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.