Site icon Vistara News

Actor Yash: ಅಪ್ಪನಿಗೇ ಬೈಸೆಪ್ಸ್‌ ತೋರಿಸಿ ಆ್ಯಟಿಟ್ಯೂಡ್‌ ಪ್ರದರ್ಶಿಸಿದ ಯಶ್‌ ಪುತ್ರ, ಚೋಟಾ ರಾಕಿ ಭಾಯ್‌ ಎಂದ ಜನ

Yash Plays With His Son Yatharv

#image_title

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ (Actor Yash) ಅವರು ಎಷ್ಟೇ ಸಿನಿಮಾಗಳಲ್ಲಿ ಬ್ಯುಸಿ ಆಗಿರಲಿ, ಯಾವುದೇ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿ, ಕುಟುಂಬಸ್ಥರ ಜತೆ, ಅದರಲ್ಲೂ ಮಕ್ಕಳ ಜತೆ ಕಾಲ ಕಳೆಯುವುದನ್ನು ತಪ್ಪಿಸುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಯಶ್‌ ತಮ್ಮ ಪುತ್ರ ಯಥರ್ವ್‌ ಜತೆ ಆಟವಾಡಿದ್ದು, ಇದೇ ವೇಳೆ ಯಶ್‌ ತಮ್ಮ ಬೈಸೆಪ್ಸ್‌ ತೋರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮಗ ಯಥರ್ವ್‌ ಕೂಡ ತನ್ನ ಬೈಸೆಪ್ಸ್‌ ತೋರಿಸಿ ತಂದೆಗೇ ಸವಾಲು ಹಾಕಿದ್ದಾನೆ. ಈ ವಿಡಿಯೊವನ್ನು ಯಶ್‌ ಜಾಲತಾಣಗಳಲ್ಲಿ ಶೇರ್‌ ಮಾಡಿದ್ದು, ವಿಡಿಯೊ ವೈರಲ್‌ ಆಗಿದೆ.

ಯಶ್‌ ಅವರು ತಮ್ಮ ಬೈಸೆಪ್ಸ್‌ ತೋರಿಸಿ ಹೇಗಿದೆ ನೋಡು ಎಂದಿದ್ದಾರೆ. ಆಗ ಅಪ್ಪನ ತೋಳು ಮುಟ್ಟಿದ ಯಥರ್ವ್‌, ತುಂಬ ಮೃದುವಾಗಿದೆ ಎಂದಿದ್ದಾನೆ. ಇದಾದ ಬಳಿಕ ತನ್ನ ಬೈಸೆಪ್ಸ್‌ ತೋರಿಸಿ, ತುಂಬ ಹಾರ್ಡ್‌ ಇದೆ ಎಂದು ಯಥರ್ವ್‌ ಹೇಳಿದ್ದಾನೆ. ಇದಕ್ಕೆ ಯಶ್‌ ನಕ್ಕಿದ್ದಾರೆ. ಅಪ್ಪ ಮುಟ್ಟಿ ನೋಡಿದಾಗಲೂ ನನ್ನ ಬೈಸೆಪ್ಸ್‌ ಹಾರ್ಡ್‌ ಎಂದೇ ಮಗ ಹೇಳಿದ್ದಾನೆ.

ವಿಡಿಯೊ ವೈರಲ್‌ ಆಗುತ್ತಲೇ ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ. ‘ಚೋಟಾ ರಾಕಿ ಭಾಯ್’‌ ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ‘ಆ್ಯಟಿಟ್ಯೂಡ್‌ನಲ್ಲಿ ಯಥರ್ವ್‌ ಅಪ್ಪನಂತೆಯೇ’ ಎಂದು ಹೇಳಿದ್ದಾರೆ. ಹೀಗೆ ನೂರಾರು ಜನ, ನೂರಾರು ರೀತಿ ಪ್ರತಿಕ್ರಿಯಿಸಿದ್ದಾರೆ. ಕೆಜಿಎಫ್‌ ಚಾಪ್ಟರ್‌ ೨ ಸಿನಿಮಾ ಇತಿಹಾಸ ಸೃಷ್ಟಿಸಿದ ಬಳಿಕ ಯಶ್‌ ಇದುವರೆಗೆ ಯಾವುದೇ ಹೊಸ ಸಿನಿಮಾ ಘೋಷಿಸಿಲ್ಲ.

ಇದನ್ನೂ ಓದಿ: Actor Yash: ರಾಕಿಂಗ್‌ ಸ್ಟಾರ್‌ ಯಶ್‌ ಭೇಟಿಗೆ ಹರಿದುಬಂದ ಅಭಿಮಾನಿಗಳ ದಂಡು!

Exit mobile version