ಬೆಂಗಳೂರು: ಬೆಳಗಾವಿ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿರುವ ಯಮಕನಮರಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರು ಗೆಲುವ ಸಾಧಿಸಿದ್ದಾರೆ. ಬಿಜೆಪಿಯ ಬಸವರಾಜ್ ಹುಂದ್ರಿ ಅವರು ಸಮೀಪದ ಪ್ರತಿಸ್ಪರ್ಧಿಯಾಗಿದ್ದಾರೆ. ಮೂರನೇ ಸ್ಥಾನದಲ್ಲಿ ಜನತಾ ದಳದ ಅಷ್ಟಗಿ ಮಾರುತಿ ಮಲ್ಲಪ್ಪ ಅವರಿದ್ದಾರೆ. ಸತೀಶ್ ಜಾರಕಿಹೊಳಿ ಅವರು 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ. ಜೆಡಿಎಸ್‌ನ ಜತೆಗೆ ತ್ರಿಕೋನ
2023ರ ಚುನಾವಣೆ ಅಭ್ಯರ್ಥಿಗಳು
ಹಾಲಿ ಶಾಸಕ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಅವರು ಮತ್ತೆ ಕಣದಲ್ಲಿದ್ದರು. ಬಿಜೆಪಿಯಿಂದ ಬಸವರಾಜ್ ಹುಂದ್ರಿ ಹಾಗೂ ಜೆಡಿಎಸ್‌ನಿಂದ ಮಾರುತಿ ಅಷ್ಟಗಿ ಕಣದಲ್ಲಿದ್ದರು.
2018ರ ಚುನಾವಣಾ ಫಲಿತಾಂಶ ಏನಾಗಿತ್ತು?
2008ರಲ್ಲಿ ರಚನೆಯಾದ ಹೊಸ ಪರಿಶಿಷ್ಟ ಪಂಗಡಕ್ಕೆ ಮಿಸಲಾದ ಕ್ಷೇತ್ರವಿದು. ಅಂದಿನಿಂದಲೂ ಈ ಕೇತ್ರವು ಜಾರಕಿಹೊಳಿ ಕುಟುಂಬದ ಹಿಡಿತದಲ್ಲಿದೆ. ಅಸಲಿಗೆ, ಸತೀಶ್ ಜಾರಕಿಹೊಳಿ ಅವರು ಈ ಕ್ಷೇತ್ರವನ್ನು ಕಳೆದ ಮೂರು ಚುನಾವಣೆಯಲ್ಲಿ ಸತತವಾಗಿ ಪ್ರತಿನಿಧಿಸುತ್ತಿದ್ದಾರೆ. 2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಸತಿಶ್ ಜಾರಕಿಹೊಳಿ ಅವರು, 73512 ಮತಗಳನ್ನು ಪಡೆದುಕೊಂಡರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ಅಷ್ಟಗಿ ಮಾರುತಿ ಮಲ್ಲಪ್ಪ ಅವರು 70662 ಮತಗಳನ್ನು ಪಡೆದು ಕೊಂಡು ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದರು.