Site icon Vistara News

Karnataka Election 2023: ಕಾಂಗ್ರೆಸ್‌ ಪೇಯ್ಡ್‌ ಎಂಜಿನ್‌ ಬಿಡಿ, ಬಿಜೆಪಿ ಡಬಲ್ ಎಂಜಿನ್ ಕೈಹಿಡಿಯಿರಿ: ಯೋಗಿ ಆದಿತ್ಯನಾಥ ಕರೆ

Yogi Adityanath

Yogi Adityanath's 'Ram Naam Satya' Warning To Those Involved In Crimes

ಗಂಗಾವತಿ (ಕೊಪ್ಪಳ): ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ತುಷ್ಟೀಕರಣ ಮಾಡುತ್ತಿದೆ. ಕರ್ನಾಟಕವನ್ನು ಸಂಕಷ್ಟಕ್ಕೀಡು ಮಾಡಿದೆ. ನಮ್ಮ ಡಬಲ್ ಎಂಜಿನ್ ಸರ್ಕಾರದಿಂದ ಸಶಕ್ತೀಕರಣಕ್ಕೆ ನಮ್ಮ ಅಭಿಯಾನ ನಡೆದಿದೆ. ಯುವ ಕಲ್ಯಾಣ, ಕೃಷಿ ಕಲ್ಯಾಣ, ಗ್ರಾಮೀಣ ಕಲ್ಯಾಣ, ನಗರ ಕಲ್ಯಾಣ ನಡೆದಿದೆ. ಈ ಚುನಾವಣೆಯಲ್ಲಿ (Karnataka Election 2023) ಕಾಂಗ್ರೆಸ್‌ ಪೇಯ್ಡ್‌ ಎಂಜಿನ್‌ ಕೈ ಬಿಟ್ಟು, ನಮ್ಮ ಡಬಲ್ ಎಂಜಿನ್ ಸರ್ಕಾರವನ್ನು ತನ್ನಿ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanath) ಹೇಳಿದರು.

ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿರುವ ಅವರು, ನಗರದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿ, ರೈಲ್ವೇ, ಏರ್‌ಪೋರ್ಟ್‌, ಸುಂದರ ನಗರ, ಸ್ವಚ್ಛ ನಗರ, ಐಐಟಿ, ಏಮ್ಸ್ ನಮ್ಮ ಕೆಲಸವಾಗಿದೆ. ಕಾಂಗ್ರೆಸ್ ಪೇಯ್ಡ್‌ ಎಂಜಿನ್‌ ಸರ್ಕಾರವಾಗುತ್ತದೆ. ಒಂದು ಯೋಜನೆ ಮಾಡಲು ಕಾಂಗ್ರೆಸ್‌ನವರಿಗೆ ಐದು ವರ್ಷ ಬೇಕು. ಅವರ ಪಂಚ ವಾರ್ಷಿಕ ಯೋಜ‌ನೆಯು ಐದು ವರ್ಷಕ್ಕೆ ನಿಂತು ಹೋಗುತ್ತದೆ. ನಾವು ಯೋಜನೆ ಮಾಡುತ್ತೇವೆ. ಜಾರಿ ಮಾಡಿ ನಾವೇ ಉದ್ಘಾಟನೆ ಮಾಡುತ್ತೇವೆ ಎಂದು ಯೋಗಿ ಆದಿತ್ಯನಾಥ ಹೇಳಿದರು.

ಭಾರತದ ಪ್ರಗತಿಗೆ ಶ್ರಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಐಟಿ ಕೌಶಲ್ಯವನ್ನು ಅಭಿವೃದ್ಧಿಪಡಿಸಿದರು. ಬೆಂಗಳೂರು ಜಗತ್ತಿನಲ್ಲಿ ಐಟಿ ಹಬ್ ಮಾಡುತ್ತಿದ್ದಾರೆ. ಭಾರತ ವಿಕಾಸಕ್ಕೆ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಲ್ಲಿ ಐಟಿ ಕೌಶಲ್ಯ ಹೆಚ್ಚಿದೆ. ಕರ್ನಾಟಕ ವಿಕಾಸವಾದರೆ ಭಾರತ ವಿಕಾಸ ಆಗುತ್ತದೆ. ತಕ್ಷ ಶಿಲಾ, ನಲಂದಾದಂತೆ ಬೆಂಗಳೂರು ಐಟಿ ಕೌಶಲ್ಯ ಬೆಳಗುತ್ತಿದೆ. ಇಲ್ಲಿನ ಯುವ ಸಮೂಹಕ್ಕೆ ಅಭಿನಂದನೆ ಸಲ್ಲಿಸುವೆ. ಭಾರತದ ಪ್ರಗತಿ ಯೋಜನೆ ರೂಪಿಸಲಾಗುತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದರು.

ಇದನ್ನೂ ಓದಿ: Karnataka Election: ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿರುವ ನನಗೆ ಕಾಂಗ್ರೆಸ್ ಧಮ್ಕಿ ಹಾಕುತ್ತಿದೆ; ಪ್ರಧಾನಿ ನರೇಂದ್ರ ಮೋದಿ

ಜಗತ್ತು ಭಾರತದತ್ತ ನೋಡುತ್ತಿದೆ

ಪ್ರಧಾನಿ ನರೇಂದ್ರ ಮೋದಿ ಅವರು ಏಕ ಭಾರತ – ಶ್ರೇಷ್ಠ ಭಾರತ ಎಂದಿದ್ದಾರೆ. ಮೋದಿ ಅವರು 140 ಕೋಟಿ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ. ಭಾರತ ಇಂದು ಬದಲಾಗುತ್ತಿದೆ. ಜಗತ್ತಿನಲ್ಲಿ ಭಾರತಕ್ಕೆ ದೊಡ್ಡ ಶಕ್ತಿ ಬಂದಿದೆ. ಮನ್ ಕೀ ಬಾತ್‌ನಲ್ಲಿ ಯೂನೆಸ್ಕೋ ಪ್ರತಿನಿಧಿ ಸಂತಸ ವ್ಯಕ್ತಪಡಿಸಿದ್ದಾರೆ. ಯೂನೆಸ್ಕೋ ಅಭಿನಂದಿಸುತ್ತಿದೆ ಎಂದರೆ ಭಾರತಕ್ಕೆ ಅಂತ ಶಕ್ತಿ ಇದೆ ಎಂದು ಅರ್ಥ. ಭಾರತದ ತಾಕತ್ತು ಜಗತ್ತಿಗೆ ಗೊತ್ತಾಗಿದೆ. ಜಗತ್ತು ಭಾರತದತ್ತ ನೋಡುತ್ತಿದೆ. ಜಿ 20 ಶೃಂಗಸಭೆಯ ನೇತೃತ್ವವನ್ನು ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲಿ ಭಾರತ ವಹಿಸಿದೆ ಎಂದು ಯೋಗಿ ಆದಿತ್ಯನಾಥ ಹೇಳಿದರು.

ಕೊರೊನಾದಲ್ಲಿ ಮೋದಿ ಕಾರ್ಯ ಶ್ಲಾಘನೀಯ. ಉಚಿತ ಚಿಕಿತ್ಸೆ, ಉಚಿತ ಔಷಧಿ, ಉಚಿತ ಪಡಿತರ ನೀಡಿ ಭಾರತ ಕಾಪಾಡಿದರು. ಮೂರು ವರ್ಷ ಭಾರತದ ಜನರನ್ನು ಸಂಕಷ್ಟದಿಂದ ಕಾಪಾಡಿದರು ಎಂದು ಯೋಗಿ ಆದಿತ್ಯನಾಥ ಹೇಳಿದರು.

ಉತ್ತರ ಪ್ರದೇಶದಲ್ಲಿ ಈಗ ಏನಾಗಿದೆ? ಜನರು ನಮ್ಮ‌ ಮೇಲೆ ವಿಶ್ವಾಸ ಮಾಡಿದರು. ಡಬಲ್ ಎಂಜಿನ್ ಸರ್ಕಾರದಿಂದ ನಾವು ಅಧಿಕಾರಕ್ಕೆ ಬಂದೆವು. ಆಗ ಉತ್ತರ ಪ್ರದೇಶದಲ್ಲಿ ಎರಡ್ಮೂರು ದಿನಕ್ಕೊಮ್ಮೆ ಗಲಭೆಗಳಾಗುತ್ತಿದ್ದವು. ಈಗ 8 ವರ್ಷದಿಂದ ಯುಪಿ ಶಾಂತಿಯುತವಾಗಿ ಇದೆ. ರೈತರು ಶಾಂತಿವಾಗಿದ್ದಾರೆ, ಸುಖ – ಸಮೃದ್ಧಿ ನೆಲೆಸಿದೆ. ಇದೆಲ್ಲ ಸಾಧ್ಯವಾಘಿದ್ದು, ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಹಾಗೂ ನಮ್ಮ ಡಬಲ್ ಎಂಜಿನ್ ಸರ್ಕಾರದಿಂದ ಎಂದು ಯೋಗಿ ಆದಿತ್ಯನಾಥ ಹೇಳಿದರು.

ಕಾಂಗ್ರೆಸ್ ಪಿಎಫ್ಐ ಅನ್ನು ಬಚಾವ್ ಮಾಡಿತು. ನಾವು ಅದನ್ನು ಬ್ಯಾನ್ ಮಾಡಿ ಕ್ರಮ ಕೈಗೊಂಡಿದ್ದೇವೆ. ಇದು ಡಬಲ್‌ ಎಂಜಿನ್ ಸರ್ಕಾರದಿಂದ ಸಾಧ್ಯ. ಅನ್ನದಾತರಿಗೆ ನರೇಂದ್ರ ಮೋದಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಜಾರಿ ಮಾಡಿದರು. ಯುವಕರಿಗೆ ಆದ್ಯತೆ ನೀಡಿದರು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದರು ಎಂದು ಯೋಗಿ ಆದಿತ್ಯನಾಥ ಹೇಳಿದರು.

ಇದನ್ನೂ ಓದಿ: Karnataka Election 2023: ನಾನು ಫಿಟ್‌ ಇದ್ದೇನೆ, ನನ್ನೊಂದಿಗೆ ರನ್ನಿಂಗ್‌ ರೇಸ್‌ಗೆ ಬನ್ನಿ; ಮೋದಿಗೆ ಸಿದ್ದರಾಮಯ್ಯ ಸವಾಲು

ಅಂಜನಾದ್ರಿ-ಅಯೋಧ್ಯಾಗೆ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಇದೆ

ನರೇಂದ್ರ ಮೋದಿ ಅವರು ರಾಮ, ಸುಗ್ರೀವರೊಡನೆ ಹನುಮಂತನನ್ನು ಜೋಡಿಸಿದರು. ಉತ್ತರ ದಕ್ಷಿಣ ಜೋಡಿಸುವ ಕೆಲಸವಾಯಿತು. ಈಗ ಅಯೋಧ್ಯಾ , ಅಂಜನಾದ್ರಿ ಜೋಡಿಸುವ ಕೆಲಸವಾಗುತ್ತಿದೆ. ಇದು ಸಂತ ಶರಣರ ನೆಲ. ಕರ್ನಾಟಕದಲ್ಲಿ ವಿಜಯ ನಗರ ಸಾಮ್ರಾಜ್ಯ ದೊಡ್ಡದಿದೆ. ನಾವು ಅದನ್ನು ಸ್ಮರಿಸಬೇಕಿದೆ. 2024ರಲ್ಲಿ ರಾಮ ಮಂದಿರವನ್ನು ಪೂರ್ಣ ಮಾಡುತ್ತೇವೆ. ರಾಮಮಂದಿರ ಉದ್ಘಾಟನೆಗೆ ನಾನು ನಿಮ್ಮನ್ನು ಆಮಂತ್ರಿಸಲು ಬರಲಿರುವೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವು 120 ಕೋಟಿ ರೂಪಾಯಿ ಅನುದಾನವನ್ನು ನೀಡಿ ಅಂಜನಾದ್ರಿ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಿದೆ. ಅಂಜನಾದ್ರಿ-ಅಯೋಧ್ಯಾಗೆ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಇದೆ. ಅದನ್ನು ಚಾಲನೆ ನೀಡುತ್ತೇವೆ ಎಂದು ಯೋಗಿ ಆದಿತ್ಯನಾಥ ಹೇಳಿದರು.

Exit mobile version