Site icon Vistara News

Yogi Adityanath: ಅಯೋಧ್ಯೆಯಲ್ಲಿ ಕರ್ನಾಟಕ ಅತಿಥಿ ಗೃಹಕ್ಕೆ ಭೂಮಿ ಮಂಜೂರು: ಮಂಡ್ಯದಲ್ಲಿ ಯೋಗಿ ಆದಿತ್ಯನಾಥ ಹೇಳಿಕೆ

yogi adityanath says land allotted for karnataka guest house in ayodhya

#image_title

ಮಂಡ್ಯ: ಭವ್ಯ ರಾಮ ಮಂದಿರ ನಿರ್ಮಾಣ ಆಗುತ್ತಿರುವ ಅಯೋಧ್ಯೆಯಲ್ಲಿ ಕರ್ನಾಟಕದ ಅತಿಥಿ ಗೃಹಕ್ಕೆ ಭೂಮಿ ಮಂಜೂರು ಮಾಡಲಾಗಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ತಿಳಿಸಿದ್ದಾರೆ.

ಮಂಡ್ಯದಲ್ಲಿ ಆಯೋಜಿಸಲಾಗಿದ್ದ ವಿಧಾನಸಭೆ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರ್ನಾಟಕ ಹಾಗೂ ಉತ್ತರ ಪ್ರದೇಶಕ್ಕೆ ಅವಿನಾಭಾವ ಸಂಬಂಧವಿದೆ. ಭಗವಾನ್‌ ಶ್ರೀರಾಮನಿಗೆ ವನವಾಸದಲ್ಲಿ ಅತ್ಯಂತ ಆತ್ಮೀಯ ಸಹವರ್ತಿಯಾಗಿದ್ದ ಹನುಮಾನ್‌ ಜನ್ಮಭೂಮಿ ಕರ್ನಾಟಕ ಎಂದು ಭಾಷಣದ ಆರಂಭದಲ್ಲಿ ಹೇಳಿದರು.

ಕರ್ನಾಟಕದ ಜನರು ಅಯೋಧ್ಯ ರಾಮ ಜನ್ಮಭೂಮಿ ಆಂದೋಲನಕ್ಕೆ ಕೆಲಸ ಮಾಡಿದ್ದೀರ. 2024ರ ಜನವರಿಗೆ ಮಂದಿರ ನಿರ್ಮಾಣ ಪೂರ್ಣವಾಗುತ್ತದೆ. ಮೋದಿ ಅವರ ಕೈಯಿಂದ ಮಂದಿರ ಉದ್ಘಾಟನೆ ಆಗುತ್ತದೆ. ಐದು ನೂರು ವರ್ಷದ ನಂತರ ಶ್ರೀರಾಮ ಚಂದ್ರ ತನ್ನದೇ ದೇವಾಲಯದಲ್ಲಿ ಪ್ರತಿಷ್ಠಾಪಿತವಾಗಲಿದ್ದಾನೆ.

ಎಲ್ಲ ಭಾರತೀಯರಿಗೆ ಇದು ಗೌರವದ ಮಾತು. ಈ ಶುಭ ಸಂದರ್ಭಕ್ಕೆ ನಿಮಗೆಲ್ಲರಿಗೂ ಸ್ವಾಗತ. ಆ ಸಮಯದಲ್ಲಿ ಕರ್ನಾಟಕದಲ್ಲಿ ಡಬಲ್‌ ಎಂಜಿನ್‌ ಸರ್ಕಾರ ಇರಲಿದೆ ಎಂದು ಆಶಿಸುತ್ತೇನೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಪ್ರಸ್ತಾವನೆ ಮೇರೆಗೆ ಅತಿಥಿ ಗೃಹಕ್ಕೆ ಭೂಮಿ ನೀಡಿದ್ದೇನೆ. ಅಲ್ಲಿ ಕರ್ನಾಟಕದ್ದೇ ಅತಿಥಿ ಗೃಹದಲ್ಲಿ ಉಳಿಯಬಹುದು ಎಂದರು.

ಭಾಷಣದ ಕೊನೆಯಲ್ಲಿ ʼಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆʼ ಎಂದು ಹೇಳುವ ಮೂಲಕ ನೆರೆದವರಲ್ಲಿ ಸಂಚಲನ ಮೂಡಿಸಿದರು.

ಇದನ್ನೂ ಓದಿ: Yogi Adityanath: ಟೀಂ ಇಂಡಿಯಾದಲ್ಲಿ ಕರ್ನಾಟಕದ ಎಷ್ಟು ಆಟಗಾರರು ಇರಬೇಕು ನಿರ್ಧಾರ ಮಾಡಿ: ಮಂಡ್ಯದಲ್ಲಿ ಯೋಗಿ ಆದಿತ್ಯನಾಥ

Exit mobile version