Site icon Vistara News

ಮದುವೆಯಾಗಲು ಹೆಣ್ಣು ಸಿಗಲಿಲ್ಲ ಎಂದು ನೊಂದ ಯುವಕ ಆತ್ಮಹತ್ಯೆಗೆ ಶರಣು

Suicide

ಕೊರಟಗೆರೆ(ತುಮಕೂರು): ಮದುವೆಯಾಗಲು ಹೆಣ್ಣು ಸಿಗಲಿಲ್ಲ ಎನ್ನುವ ಹತಾಶೆಯಿಂದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಜೋನಿಗರಹಳ್ಳಿಯ
ಹೇಮಂತ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ದಿವಂಗತ ರಮೇಶ್ ಆಚಾರ್ಯ ಎಂಬವರ ಮಗ.

ಹೇಮಂತನ ವಯಸ್ಸು ಇನ್ನೂ ೨೮. ಆತ ತೋವಿನಕೆರೆಯಲ್ಲಿ ಮೊಬೈಲ್ ಅಂಗಡಿ ಹೊಂದಿದ್ದಾನೆ. ಈತನಿಗೆ ಮದುವೆ ಮಾಡಲು ಕಳೆದ ನಾಲ್ಕು ವರ್ಷಗಳಿಂದ ಹೆಣ್ಣು ಹುಡುಕಲಾಗುತ್ತಿತ್ತು. ಆದರೆ, ಎಲ್ಲಿಯೂ ಹುಡುಗಿ ಸೆಟ್‌ ಆಗಿರಲಿಲ್ಲ. ನಾನಾ ಕಾರಣಗಳನ್ನು ನೀಡಿ ಹುಡುಗಿಯರು ಆತನನ್ನು ರಿಜೆಕ್ಟ್‌ ಮಾಡುತ್ತಿದ್ದರು. ಆತನಿಗೆ ಸರಿ ಹೊಂದುವ ಸಂಬಂಧಗಳು ಕೂಡಿ ಬರಲೇ ಇಲ್ಲ.

ಈ ಬಗ್ಗೆ ಮನೆಯಲ್ಲಿ ನಿತ್ಯ ಮಾತುಕತೆ ನಡೆಯುತ್ತಿತ್ತು. ಮನೆಯಲ್ಲಿ ಬೇಸರ ವ್ಯಕ್ತವಾಗುತ್ತಿತ್ತು. ಹೇಮಂತ್‌ಗೂ ಈ ಬಗ್ಗೆ ತುಂಬ ಬೇಸರವಿತ್ತು. ಬದುಕು ಸಾಗಿಸಬಹುದಾದಷ್ಟು ವ್ಯವಸ್ಥೆ ಇದೆ. ಆದರೆ, ಇನ್ನೂ ಹುಡುಗಿ ಸಿಕ್ಕಿಲ್ಲ ಎಂದು ಆತ ಹತಾಶೆಗೆ ಒಳಗಾಗಿದ್ದ. ಈ ಹತಾಶೆ ವಿಪರೀತಕ್ಕೆ ಹೋಗಿ ಈಗ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಿಜವೆಂದರೆ, ಹೇಮಂತ್‌ ವಯಸ್ಸು ಇನ್ನೂ ೨೮. ಮದುವೆಯಾಗುವ ಪ್ರಾಯ ಮೀರಿತು ಎಂದೇನಿಲ್ಲ. ಆದರೆ, ಅದೇ ಒಂದು ನೋವಾಗಿ ಹೇಮಂತ್‌ನನ್ನು ಕಾಡಿದ್ದು ಸಾವಿನ ಕಡೆಗೆ ತಳ್ಳಿದೆ. ಮುಂದೆ ಖಂಡಿತವಾಗಿಯೂ ಹೆಣ್ಣು ಸಿಗುತ್ತದೆ ಎಂದು ಭರವಸೆ ಮೂಡಿಸಿದ್ದರೆ ಹೇಮಂತ್‌ ಬದುಕುಳಿಯುತ್ತಿದ್ದನೋ ಏನೋ. ಆದರೆ ಈ ಎಲ್ಲವೂ ಮುಗಿದು ಹೋಗಿದೆ.

ಇದನ್ನೂ ಓದಿ| ಮದುವೆಯಾದ ಮೂರೇ ತಿಂಗಳಲ್ಲಿ ವಧು ಆತ್ಮಹತ್ಯೆ, ಪ್ರಿಯಕರನಿಂದ ದೂರ ಮಾಡಿದ್ದಕ್ಕೆ ಬೇಸರ

Exit mobile version