Site icon Vistara News

Assault Case: ಹುಬ್ಬಳ್ಳಿಯಲ್ಲಿ ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ

assault in hubli

ಹುಬ್ಬಳ್ಳಿ: ನಗರದಲ್ಲಿ ಯುವಕನನ್ನು ಬೆತ್ತಲೆಗೊಳಿಸಿ ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್​ಸ್ಟಾಗ್ರಾಮ್‌ನಲ್ಲಿ ಬೈದು, ಮೆಸೇಜ್ ಹಾಕಿದ್ದ ಎಂಬ ಕಾರಣಕ್ಕೆ ಯುವಕನ ಮೇಲೆ ಮೂವರು ಪುಂಡರು ಹಲ್ಲೆ ನಡೆಸಿದ್ದಾರೆ.

ಯುವಕನ ಬಟ್ಟೆ ತೆಗೆಸಿ, ಬೆತ್ತಲೆಗೊಳಿಸಿ ಹಲ್ಲೆ ಮಾಡಿರುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಸೆಟ್ಲಮೆಂಟ್, ಗಬ್ಬೂರು ಏರಿಯಾದ ರೌಡಿಗಳಾದ ಪ್ರಜ್ವಲ್ ಗಾಯಕವಾಡ, ಮಂಜುನಾಥ್ ಅಂಗಡಿ ಮತ್ತು ಮಂಜುನಾಥ್​ ಎಂಬುವವರು ಹಲ್ಲೆ ಆರೋಪಿಗಳಾಗಿದ್ದಾರೆ.

ಹಲ್ಲೆ ವೇಳೆ ಯುವಕ ಅಳುತ್ತಾ ಕೈ ಮುಗಿದು ಬೇಡಿಕೊಂಡರೂ ಬಿಡದೆ ಹೊಡೆದಿರುವ ಕಿರಾತಕರು ಹಲ್ಲೆ ನಡೆಸಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ | Murder Case : ಯುವ ಬ್ರಿಗೇಡ್‌ ಸದಸ್ಯನ ಹತ್ಯೆ ಹಿಂದೆ ಕಾಂಗ್ರೆಸ್‌ ನಾಯಕರು; ಸಿಕ್ಕಿತು ಪ್ರಬಲ ಸಾಕ್ಷ್ಯ

ಪ್ರಕರಣದ ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಸಂತೋಶ್ ಬಾಬು ಪ್ರತಿಕ್ರಿಯಿಸಿ, ಹುಬ್ಬಳ್ಳಿಯಲ್ಲಿ ಯುವಕನ ಮೇಲೆ ಹಲ್ಲೆ ಮಾಡಿರುವುದು ವಿಡಿಯೊ ಮೂಲಕ ಗಮನಕ್ಕೆ ಬಂದಿದೆ. ವಿಡಿಯೊದಲ್ಲಿ ಇರುವವರ ಹೆಸರು ಸಂದೀಪ್. ಆತ ಇನ್‌ಸ್ಟಾಗ್ರಾಮ್‌ನಲ್ಲಿ ಕೆಟ್ಟದಾಗಿ ಬೈದಿದ್ದ. ಆದರೆ, ಇದುವೆರಗೂ ಸಂದೀಪ್ ದೂರು ಕೊಟ್ಟಿಲ್ಲ. ಮೂರ್ನಾಲ್ಕು ತಿಂಗಳ ಹಿಂದೆ ಘಟನೆ‌ ನಡೆದಿದೆ. ಹುಬ್ಬಳ್ಳಿಯ ಸೆಟ್ಲಮೆಂಡ್‌ನಲ್ಲಿ ಘಟನೆ ನಡೆದಿದೆ ಎಂಬ ಅನುಮಾನ ಇದೆ ಎಂದು ತಿಳಿಸಿದ್ದಾರೆ.

ಪೊಲೀಸರು ಈ ತರಹದ ಘಟನೆ ಆಗುವ ಮುಂಚೆ ಎಚ್ಚೆತ್ತಕೊಳ್ಳಬೇಕಿತ್ತು. ಈ ಸಂಬಂಧ ಒಟ್ಟು ಐದು ಜನರನ್ನು ವಶಕ್ಕೆ ಪಡೆಯಲಾಗಿದೆ. ವಿಡಿಯೊದಲ್ಲಿ ಇರುವ ಸಂದೀಪ್‌ಗಾಗಿ ಹುಡುಕಾಡುತ್ತಿದ್ದೇವೆ. ಪ್ರಜ್ವಲ್, ವಿನಾಯಕ್, ಗಣೇಶ್, ಸಚಿನ್, ಮಂಜುನಾಥ ಎಂಬುವವರನ್ನು ವಶಕ್ಕೆ ಪಡೆದು ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Exit mobile version