Site icon Vistara News

Anant Radhika Wedding: ಅನಂತ್‌-ರಾಧಿಕಾಗೆ ಗುಜರಾತ್‌ ಜನತೆಯಿಂದ ಅದ್ಧೂರಿ ಸ್ವಾಗತ; ವಿಡಿಯೊ ನೋಡಿ

Anant Radhika Wedding


ಮುಂಬೈ : ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಂಬಾನಿ ಕುಟುಂಬದ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ (Anant Radhika Wedding) ಮರ್ಚಂಟ್‌ ಅವರ ವಿವಾಹ ಸಮಾರಂಭ ಮುಂಬೈನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಇದೀಗ ನವವಿವಾಹಿತ ವಧು ವರರನ್ನು ಗುಜರಾತ್‍ನ ಜಾಮ್‍ನಗರದಲ್ಲಿ ಅಲ್ಲಿನ ನಿವಾಸಿಗಳು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ಬುಧವಾರ ನಗರಕ್ಕೆ ಆಗಮಿಸಿದ ಅವರನ್ನು ಭಾರಿ ಜನಸಮೂಹ, ಹೂವಿನ ದಳಗಳು, ಆರತಿ ಮತ್ತು ಗುಲಾಬಿ ಕಾರ್ಪೆಟ್‍ನೊಂದಿಗೆ ಸ್ವಾಗತಿಸಿದ್ದಾರೆ. ಅವರನ್ನು ಹೃತ್ಪೂರ್ವಕ ಆತಿಥ್ಯದಿಂದ ಸ್ವಾಗತಿಸುವುದನ್ನು ತೋರಿಸುವ ಹಲವಾರು ವಿಡಿಯೊಗಳು ಮತ್ತು ಫೋಟೋಗಳು ಆನ್‍ಲೈನ್‍ನಲ್ಲಿ ವೈರಲ್ ಆಗಿವೆ.

ವಿಡಿಯೊದಲ್ಲಿ, ಸೀರೆ ಉಟ್ಟ ಮಹಿಳೆಯರು ನವದಂಪತಿಗೆ ಆರತಿ ಮಾಡಿದರು ಮತ್ತು ದಂಪತಿಯ ಮೇಲೆ ಗುಲಾಬಿ ದಳಗಳನ್ನು ಎಸೆಯುತ್ತಾ ಆದರದಿಂದ ಸ್ವಾಗತಿಸಿದರು. ಜನರ ಈ ಆತಿಥ್ಯ ಕಂಡು ಅನಂತ್ ಮತ್ತು ರಾಧಿಕಾ ಇಬ್ಬರೂ ಸಂತೋಷದಿಂದ ಅವರಿಗೆ ಕೈಮುಗಿದು ವಂದಿಸಿದರು.

ಹಾಗೇ ಮತ್ತೊಂದು ವಿಡಿಯೊದಲ್ಲಿ ದಂಪತಿ ತಮ್ಮ ಕಾರಿನಿಂದ ಜನರನ್ನು ನಗುತ್ತಾ ಸ್ವಾಗತಿಸುವುದನ್ನು ಚಿತ್ರಿಸಲಾಗಿದೆ. ದೊಡ್ಡ ಜನಸಮೂಹವು ಬೀದಿಗಳಲ್ಲಿ ಜಮಾಯಿಸಿ, ಹೂವಿನ ದಳಗಳನ್ನು ಅವರ ಮೇಲೆ ಸುರಿಸುತ್ತಿರುವುದು ಕಂಡುಬಂದಿದೆ.

ಆ ವೇಳೆ ರಾಧಿಕಾ ಗುಲಾಬಿ ಬಣ್ಣದ ಸೂಟ್ ಧರಿಸಿದ್ದರೆ, ಅನಂತ್ ಕೆಂಪು ಕುರ್ತಾ ಧರಿಸಿದ್ದರು. ಅಲ್ಲದೇ ಇನ್ನೊಂದು ವಿಡಿಯೊದಲ್ಲಿ, ಅವರು ಬರುವ ವಿಮಾನ ನಿಲ್ದಾಣದ ಹೊರಗಿನ ರಸ್ತೆಯನ್ನು ಗುಲಾಬಿ ದಳಗಳಿಂದ ಮುಚ್ಚಲಾಗಿತ್ತು, ಅವರ ಆಗಮನದ ನಿರೀಕ್ಷೆಯಲ್ಲಿ, ಹಲವಾರು ಜನರು ಡ್ರಮ್ ಗಳನ್ನು ನುಡಿಸುತ್ತಿದ್ದರು. ಈ ಮೂಲಕ ಅಂಬಾನಿ ಮನೆತನದ ಅನಂತ್ ಮತ್ತು ರಾಧಿಕಾಗೆ ಜಾಮ್‍ನಗರದ ನಿವಾಸಿಗಳು ವಿಶೇಷ ಮಹತ್ವವನ್ನು ನೀಡಿದ್ದಾರೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಅವರ ವಿವಾಹಪೂರ್ವ ಸಮಾರಂಭಗಳು ಮಾರ್ಚ್ 2024ರಲ್ಲಿ ಜಾಮ್‍ನಗರದಲ್ಲಿ ನಡೆದಿತ್ತು. ಅಲ್ಲದೇ ಅನಂತ್ ಅವರ ಅಜ್ಜಿ ಕೋಕಿಲಾಬೆನ್ ಅಂಬಾನಿ ಜಾಮ್‍ನಗರದಲ್ಲಿ ಜನಿಸಿದರು, ಅಲ್ಲಿಯೇ ಅವರ ಅಜ್ಜ ಧೀರೂಭಾಯಿ ಅಂಬಾನಿ ಮತ್ತು ತಂದೆ ಮುಖೇಶ್ ಅಂಬಾನಿ ತಮ್ಮ ವ್ಯವಹಾರವನ್ನು ಪ್ರಾರಂಭಿಸಿದರು. ಹಾಗಾಗಿ ಜಾಮ್‍ನಗರ ಅಂಬಾನಿ ಮನೆತನಕ್ಕೆ ತುಂಬಾ ಮುಖ್ಯವಾದುದು ಎನ್ನಬಹುದು.

ಇದನ್ನೂ ಓದಿ: 3 ವರ್ಷದ ಅಂಬಾನಿ ಮೊಮ್ಮಗ ವೇದಿಕೆ ಮೇಲೆ ಜಾರಿ ಬಿದ್ದ, ಆದರೆ ಜನರ ಹೃದಯ ಗೆದ್ದ!

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ಎನ್ಕೋರ್ ಹೆಲ್ತ್ಕೇರ್ ಸಿಇಒ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರ ವಿವಾಹ ಜುಲೈ 12ರಂದು ಮುಂಬೈನಲ್ಲಿ ನಡೆದಿತ್ತು.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಭಾರತದಲ್ಲಿ ನಡೆದ ಅತ್ಯಂತ ಅದ್ಧೂರಿ ವಿವಾಹಗಳಲ್ಲಿ ಒಂದು ಎನ್ನಲಾಗಿದೆ.

Exit mobile version