Site icon Vistara News

Business Ideas: 20 ದೇಶಗಳಿಗೆ ಮಣ್ಣಿನ ಪಾತ್ರೆಗಳ ರಫ್ತು; ವರ್ಷಕ್ಕೆ 5 ಕೋಟಿ ರೂ. ಗಳಿಸುತ್ತಿದೆ ಈ ಕುಟುಂಬ!

Business Ideas


ಮಣ್ಣಿನ ಮಡಿಕೆ(Business Ideas)ಗಳನ್ನು ಬಹಳ ಹಿಂದಿನ ಕಾಲದಲ್ಲಿ ಬಳಸುತ್ತಿದ್ದರು. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಇಂದಿನ ಕಾಲದಲ್ಲಿ ಮಣ್ಣಿನ ಮಡಿಕೆಗಳ ಬದಲು ಸ್ಟೀಲ್, ಅಲ್ಯೂಮಿನಿಯಂ, ಕಬ್ಬಿಣ, ನಾನ್‌ಸ್ಟಿಕ್ ಮುಂತಾದ ಪಾತ್ರೆಗಳನ್ನು ಬಳಸುತ್ತಾರೆ. ಇದರಿಂದ ಅನೇಕ ಕುಂಬಾರರು ಮತ್ತು ಕುಶಲಕರ್ಮಿಗಳಿಗೆ ಜೀವನ ಸಾಗಿಸಲು ಬಹಳ ಕಷ್ಟಕರವಾಗಿದೆ. ಆದರೆ ರಾಜಸ್ಥಾನದ ಹೃದಯಭಾಗದಲ್ಲಿರುವ ಕುಟುಂಬವೊಂದು ಮಣ್ಣಿನ ಮಡಿಕೆ ತಯಾರಿಸುವ ಕಂಪನಿಯೊಂದನ್ನು ಶುರು ಮಾಡಿದ್ದು, ವರ್ಷಕ್ಕೆ 5 ಕೋಟಿ ರೂ. ಗಳಿಸುತ್ತಿದ್ದಾರಂತೆ!

ಈ ಕುಟುಂಬದವರು ಮಣ್ಣಿನ ಪಾತ್ರೆಗಳು ಮತ್ತು ಕಿಚನ್‍ವೇರ್‌ಗಳನ್ನು ತಯಾರಿಸುವಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಮಧ್ಯವರ್ತಿಗಳ ಸಮಸ್ಯೆಯನ್ನು ನಿವಾರಿಸಲು ಅವರ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರೊಂದಿಗೆ ತಲುಪಿಸುವ ಮೂಲಕ ಕುಂಬಾರರು ಮತ್ತು ಕುಶಲಕರ್ಮಿಗಳ ಜೀವನೋಪಾಯವನ್ನು ಪುನರುಜ್ಜೀವನಗೊಳಿಸುವುದು ಈ ಕುಟುಂಬದ ಉದ್ದೇಶವಾಗಿದೆ. ನೂರಕ್ಕೂ ಹೆಚ್ಚು ಕುಶಲಕರ್ಮಿಗಳೊಂದಿಗೆ ಪಾಲುದಾರರಾಗುವ ಮೂಲಕ, ಈ ಕುಟುಂಬದವರ ಕಂಪನಿಯು ವರ್ಷಪೂರ್ತಿ ಉದ್ಯೋಗಾವಕಾಶಗಳನ್ನು ಒದಗಿಸಿದೆ. ಇತ್ತೀಚೆಗೆ, ಶಾರ್ಕ್ ಟ್ಯಾಂಕ್ ಸೀಸನ್ 2ರಲ್ಲಿ ಈ ಕಂಪನಿ ಬ್ರಾಂಡ್ ಹೂಡಿಕೆದಾರನ್ನು ಆಕರ್ಷಿಸಿತ್ತು. ಹಾಗಾಗಿ ಅವರು ಈ ಕಂಪೆನಿಯ ಜೊತೆಗೆ 50 ಲಕ್ಷ ರೂ.ಗಳ ಒಪ್ಪಂದವನ್ನು ಪಡೆದುಕೊಂಡಿತು ಎನ್ನಲಾಗಿದೆ.

ಈ ಕಂಪನಿಯ ವ್ಯವಸ್ಥಾಪಕ ದತ್ತಾತ್ರೇಯ ಅವರು ಈ ಬಗ್ಗೆ ಮಾತನಾಡಿ ಮಾಹಿತಿ ನೀಡಿದ್ದಾರೆ. ಅವರು ತಿಳಿಸಿದಂತೆ ಅವರಿಗೆ ಉದ್ಯಮಿಯಾಗುವ ಯೋಜನೆ ಇರಲಿಲ್ಲ. ಅವರ ಕುಟುಂಬದಲ್ಲಿ ಯಾರೂ ಉದ್ಯಮಿಯಾಗಲು ಬಯಸಿರಲಿಲ್ಲ. ಆದರೆ ಈಗ ಕಾರ್ಪೊರೇಟ್ ಜಗತ್ತಿನಲ್ಲಿ ಸಂತೋಷದಿಂದ ಕೆಲಸ ಮಾಡುತ್ತಿರುವುದಾಗಿ ಅವರು ಸಂತೋಷದಿಂದ ಹೇಳಿಕೊಂಡಿದ್ದಾರೆ.

ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಅವರಿಗೆ ಈ ಉದ್ಯಮ ಮಾಡುವ ಯೋಚನೆ ಬಂದಿದೆ. ಹಲವಾರು ಕುಂಬಾರರು ತಮ್ಮ ಕರಕುಶಲ ವಸ್ತುಗಳನ್ನು ಪ್ರವಾಸಿಗರಿಗೆ ಮಾರಾಟ ಮಾಡುತ್ತಿರುವುದನ್ನು ದತ್ತಾತ್ರೆಯ ಅವರು ನೋಡಿದ್ದಾರೆ. ಲಾಕ್‍ಡೌನ್‍ನಿಂದಾಗಿ, ಅವರು ಜೀವನೋಪಾಯಕ್ಕಾಗಿ ಹೆಣಗಾಡುತ್ತಿರುವುದನ್ನು ಕಂಡು ದತ್ತಾತ್ರೆಯ ಅವರ ಕುಟುಂಬದವರು ಸೇರಿ ಅವರಿಗೆ ಸಹಾಯ ಮಾಡಿದ್ದಾರೆ. ಆ ಮೂಲಕ ಅವರು 2020ರಲ್ಲಿ ಈ ವ್ಯವಹಾರವನ್ನು ನೊಂದಾಯಿಸಿಕೊಂಡು ದೇಶದ ಹಲವಡೆ ಮಣ್ಣಿನ ಪಾತ್ರೆಗಳನ್ನು ಮಾರಾಟ ಮಾಡಲು ಶುರು ಮಾಡಿದ್ದಾರೆ ಎಂಬುದಾಗಿ ಅವರು ತಿಳಿಸಿದ್ದಾರೆ.

ಅಲ್ಲದೇ 2023ರಲ್ಲಿ ಅವರು ತಮ್ಮ ಕೆಲಸವನ್ನು ತೊರೆದು ವ್ಯವಹಾರಕ್ಕೆ ಸಂಪೂರ್ಣವಾಗಿ ತೊಡಗಿಕೊಳ್ಳಲು ನಿರ್ಧರಿಸಿದರು. ಆದರೆ ಈ ವ್ಯವಹಾರ ಮಾಡಲು ಹಲವು ಸಮಸ್ಯೆಗಳನ್ನು ಅವರು ಎದುರಿಸಿದ್ದಾರೆ. ನಂತರ ಉತ್ಪನ್ನಗಳನ್ನು ಪಟ್ಟಿ ಮಾಡುವುದರಿಂದ ಮಾರ್ಕೆಟಿಂಗ್‍ವರೆಗೆ ಎಲ್ಲವನ್ನೂ ಕಲಿಯಲು ಅವರು ಯೂಟ್ಯೂಬ್‌ನಲ್ಲಿ ಮಾಹಿತಿ ಕಲೆ ಹಾಕಿದ್ದಾರೆ.

ನಂತರ ಅವರು ರಾಜಸ್ಥಾನ ಮತ್ತು ಅದರಾಚೆ ಇರುವ 120ಕ್ಕೂ ಹೆಚ್ಚು ಕುಶಲಕರ್ಮಿಗಳೊಂದಿಗೆ ಸಹಯೋಗ ಮಾಡಿಕೊಂಡು ಈ ವ್ಯವಹಾರ ಮುಂದುವರಿಸಿದ್ದಾರೆ, ಮತ್ತು ಈ ಕುಶಲಕರ್ಮಿಗಳು ನುರಿತ ಕುಶಲಕರ್ಮಿಗಳಾಗಿದ್ದು, ಅವರಲ್ಲಿ ಅನೇಕರು ರಾಷ್ಟ್ರಪತಿ ಪ್ರಶಸ್ತಿಗಳು ಅಥವಾ ಯುನೆಸ್ಕೋ ಪ್ರಶಂಸೆಗಳಿಂದ ಗೌರವ ಪಡೆದುಕೊಂಡವರಾಗಿದ್ದರು. ಅಲ್ಲದೇ ಕುಶಲಕರ್ಮಿಗಳಲ್ಲಿ ಮುಖ್ಯವಾಗಿ ಮಹಿಳೆಯರು, ಉತ್ಪಾದನೆಯ ಪ್ರತಿಯೊಂದು ಅಂಶದಲ್ಲೂ ಪ್ರಮುಖ ಪಾತ್ರ ವಹಿಸಿದ್ದಾರೆ.

ಈ ಕಂಪನಿಯು ಬಟ್ಟಲುಗಳು, ವೈನ್ ಗ್ಲಾಸ್ , ಕುಕ್ಕರ್‌ಗಳು, ಅಡುಗೆ ಮಡಕೆಗಳು, ಸಾಸ್ ಪ್ಯಾನ್‌ಗಳು, ತವಾ (ಫ್ರೈಯಿಂಗ್ ಪ್ಯಾನ್), ಕಡಾಯಿ (ವೋಕ್), ಮಣ್ಣಿನ ಹಂಡಿ (ಅಡುಗೆ ಬೇಸಿನ್), ಚಹಾ ಲೈಟ್ ಹೋಲ್ಡರ್‌ಗಳು, ವಿಗ್ರಹಗಳು ಮತ್ತು ಹೆಚ್ಚಿನವುಗಳನ್ನು ಜೇಡಿಮಣ್ಣನ್ನು ಬಳಸಿ ತಯಾರಿಸುತ್ತಾರೆ. ಹಾಗೆಯೇ ಕುಶಲಕರ್ಮಿಗಳಿಗೆ ಬೇಡಿಕೆಯ ಆಧಾರದ ಮೇಲೆ ವಸ್ತುಗಳನ್ನು ತಯಾರಿಸಲು ಆದೇಶಿಸಲಾಗುತ್ತದೆ. ನಂತರು ಅವರು ಉತ್ಪನ್ನಗಳನ್ನು ಸಂಗ್ರಹಿಸಿ ಅದರ ಗುಣಮಟ್ಟದ ತಪಾಸಣೆ ಮಾಡಿ ನಂತರ ಅವುಗಳನ್ನು ಪ್ಯಾಕ್ ಮಾಡಿ ಗ್ರಾಹಕರಿಗೆ ಕಳುಹಿಸುತ್ತಾರೆ ಎಂಬುದಾಗಿ ಅವರು ಹೇಳಿದ್ದಾರೆ.

ಇದನ್ನೂ ಓದಿ: ಪತ್ನಿಗೆ ಮಕ್ಕಳಾಗಿಲ್ಲ ಎಂದು ಮಾವನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ!

ಅಷ್ಟೇ ಅಲ್ಲದೇ ಕುಂಬಾರರಿಗೆ ಉತ್ತಮ ಆದಾಯ ನೀಡುವುದಲ್ಲದೇ ಯುವ ಪೀಳಿಗೆಯನ್ನು ಕೂಡ ಈ ಕುಟುಂಬ ವ್ಯವಹಾರದಲ್ಲಿ ಸಹಕರಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಅವರು ಪ್ರಸ್ತುತ 65ಕ್ಕೂ ಹೆಚ್ಚು ರೀತಿಯ ಅಡುಗೆ ಪಾತ್ರೆಗಳನ್ನು ಮಾರಾಟ ಮಾಡುತ್ತಾರೆ ಎಂದು ದತ್ತಾತ್ರೇಯ ಮಾಹಿತಿ ನೀಡಿದ್ದಾರೆ. ಪ್ರತಿಯೊಂದು ಉತ್ಪನ್ನವು ಸಾಂಪ್ರದಾಯಿಕ ಕಲಾತ್ಮಕತೆ ಮತ್ತು ಆಧುನಿಕ ಸಂವೇದನೆಗಳ ಮಿಶ್ರಣವನ್ನು ಪ್ರತಿಬಿಂಬಿಸುತ್ತದೆ, ಮತ್ತು ಆರೋಗ್ಯದ ಬಗ್ಗೆ ಕಾಳಜಿ ಇರುವವರಿಗೆ ಇದನ್ನು ಮಾರಾಟ ಮಾಡುತ್ತೇವೆ. ಯಾಕೆಂದರೆ ಸಾಂಕ್ರಾಮಿಕ ರೋಗವು ರಾಷ್ಟ್ರವನ್ನು ದಾಳಿ ಮಾಡಿದ ನಂತರ, ಜನರು ಆರೋಗ್ಯಕರ ಜೀವನಶೈಲಿಯತ್ತ ಬದಲಾವಣೆ ಮಾಡಿಕೊಳ್ಳುತ್ತಿರುವುದನ್ನು ಅವರು ಗಮನಿಸಿರುವುದಾಗಿ ತಿಳಿಸಿದ್ದಾರೆ. ಅವರ ಕಂಪೆನಿಯಿಂದ ಈ ವಸ್ತುಗಳನ್ನು ಪ್ರಸ್ತುತ 20 ದೇಶಗಳಿಗೆ ರಫ್ತು ಮಾಡುತ್ತಿದ್ದಾರೆ ಮತ್ತು ಭಾರತದ ದೆಹಲಿ, ಹೈದರಾಬಾದ್ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

Exit mobile version