Site icon Vistara News

Crocodile Attack: ಕಾಲುವೆ ಬಳಿ ಕುಳಿತಿದ್ದ ವೃದ್ಧನ ಮರ್ಮಾಂಗವನ್ನೇ ಕಚ್ಚಿಕೊಂಡು ಹೋದ ಮೊಸಳೆ!

Crocodile Attack

ಮಳೆಗಾಲದಲ್ಲಿ ಎಲ್ಲಾ ನದಿ ಕೊಳ್ಳಗಳು ತುಂಬಿ ಹರಿಯುತ್ತಿದ್ದ ಕಾರಣ ಅದರಲ್ಲಿ ವಾಸವಾಗಿದ್ದ ಜಲಚರ ಜೀವಿಗಳು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿ ಬರುತ್ತವೆ. ಹಾಗಾಗಿ ಜನರು ನದಿ, ಹೊಳೆಯ ಕಡೆಯಲ್ಲಿ ನಡೆದಾಡುವಾಗ ಎಚ್ಚರದಿಂದಿರುವುದು ಅಗತ್ಯ. ಇದೀಗ ಉತ್ತರ ಪ್ರದೇಶದ ಕುಶಿನಗರದಲ್ಲಿ ವೃದ್ಧರೊಬ್ಬರು ಬುಧ್ವಾ ಅರಣ್ಯದ ಬಳಿಯ ಗಂಡಕ್ ಕಾಲುವೆಯ ದಡದಲ್ಲಿ ಮೊಸಳೆ(Crocodile Attack) ಕಚ್ಚಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ.

60 ವರ್ಷದ ವ್ಯಕ್ತಿ ಶೌಚಕ್ಕಾಗಿ ಬುಧ್ವಾ ಅರಣ್ಯದ ಬಳಿಯ ಗಂಡಕ್ ಕಾಲುವೆಯ ದಡದಲ್ಲಿ ಕುಳಿತಿದ್ದಾಗ ಮೊಸಳೆ ನೀರಿನಿಂದ ಹೊರಬಂದು ದಾಳಿ ಮಾಡಿದೆ. ತನ್ನ ಜೀವ ಉಳಿಸಿಕೊಳ್ಳುವ ಪ್ರಯತ್ನದಲ್ಲಿ, ವ್ಯಕ್ತಿ ಎದ್ದು ನಿಂತಾಗ ಮೊಸಳೆ ಅವರ ಮರ್ಮಾಂಗವನ್ನೇ ಕಚ್ಚಿ ಎಳೆದಿದ್ದರಿಂದ ಆ ಭಾಗ ಕಾಲುವೆ ಪಾಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಆ ವೇಳೆ ವ್ಯಕ್ತಿಯ ಕಿರುಚಾಟವನ್ನು ಕೇಳಿದ ಗ್ರಾಮಸ್ಥರು ಸಹಾಯಕ್ಕೆ ಬಂದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಆದರೆ ಅವರ ಸ್ಥಿತಿ ಗಂಭೀರವಾಗಿರುವುದರಿಂದ ವೈದ್ಯರು ಅವರನ್ನು ಗೋರಖ್ಪುರದ ಆಸ್ಪತ್ರೆಗೆ ಕರೆದೊಯ್ಯಲು ಹೇಳಿದ್ದಾರೆ. ಹಾಗಾಗಿ ಅಲ್ಲಿ ಅವರು ಪ್ರಸ್ತುತ ತುರ್ತು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಭಾರೀ ಮಳೆಯಿಂದಾಗಿ, ಹೆಚ್ಚಿನ ಮೊಸಳೆಗಳು ಆಹಾರ ಅಥವಾ ಆಶ್ರಯಕ್ಕಾಗಿ ನೀರಿನಿಂದ ಹೊರಬರುವ ಸಾಧ್ಯತೆ ಇರುವುದರಿಂದ ಸರೋವರಗಳು ಮತ್ತು ನದಿಗಳ ಬಳಿ ಹೋಗದಂತೆ ಅರಣ್ಯ ಇಲಾಖೆ ಜನರಿಗೆ ಎಚ್ಚರಿಕೆ ನೀಡಿದೆ. ಹಾಗೂ ಮೊಸಳೆಗಳು ಎಲ್ಲಿಯಾದರೂ ಕಂಡುಬಂದರೆ ತಕ್ಷಣ ಮಾಹಿತಿ ತಿಳಿಸುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ:  ‘ಸಿತಾರೆ ಜಮೀನ್ ಪರ್’ ಬಿಡುಗಡೆಗೂ ಮುನ್ನ ವೈರಲ್ ಆಗುತ್ತಿದೆ ‘ತಾರೆ ಜಮೀನ್ ಪರ್’ ಚಿತ್ರದ ಈ ವಿಡಿಯೊ!

ಇದು ಈ ವರ್ಷ ಉತ್ತರ ಪ್ರದೇಶದಲ್ಲಿ ಮೊಸಳೆಯು ಮನುಷ್ಯ ಮೇಲೆ ದಾಳಿ ನಡೆಸಿದ ಎರಡನೇ ಪ್ರಕರಣವಾಗಿದೆ. ಇದಕ್ಕೂ ಮೊದಲು ಜೂನ್ 28ರಂದು ದುಧ್ವಾ ಹುಲಿ ಮೀಸಲು ಪ್ರದೇಶದ ಬಫರ್ ಅರಣ್ಯ ಪ್ರದೇಶದ ಮೋಹನಾ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಯುವಕನೊಬ್ಬ ಮೊಸಳೆಯ ದಾಳಿಯಿಂದ ಸಾವನ್ನಪಿದ್ದ.

Exit mobile version