Site icon Vistara News

Elon-Musk: ಪ್ರಪಂಚದ ಅತಿ ಶ್ರೀಮಂತ ಎಲಾನ್ ಮಸ್ಕ್‌ಗೆ 11ನೇ ಮಗು! ಇವರಿಗೆ ಪತ್ನಿಯರೆಷ್ಟು?

Elon-Musk

ವಾಷಿಂಗ್ಟನ್: ಪ್ರಪಂಚದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಎಲಾನ್‌ ಮಸ್ಕ್‌ (Elon-Musk ) ಮುಖದಲ್ಲಿ ಈಗ ತಂದೆಯಾದ ಖುಷಿ ಕಾಣಿಸುತ್ತಿದೆ. ಖ್ಯಾತ ಇಂಜಿನಿಯರ್, ಕೈಗಾರಿಕಾ ತಜ್ಞ, ಖಾಸಗಿ ಬಾಹ್ಯಾಕಾಶ ನೌಕೆ ’ಸ್ಪೇಸ್-ಎಕ್ಸ್’ ನ ಸಂಸ್ಥಾಪಕ, ಕಾರ್ಯ ನಿರ್ವಾಹಕ ಅಧ್ಯಕ್ಷ, ‘ಟೆಸ್ಲಾ’ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಎಲಾನ್‌ ಮಸ್ಕ್‌ ಅವರು ಇತ್ತೀಚೆಗೆ 11ನೇ ಮಗುವಿನ ತಂದೆ(Father)ಯಾಗಿದ್ದಾರೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್‌ (Viral) ಆಗಿದೆ.

ಎಲಾನ್ ಮಸ್ಕ್ ಅವರ ಪತ್ನಿ ನ್ಯೂರಾಲಿಂಕ್ ನ ವಿಶೇಷ ಯೋಜನೆಗಳ ಮುಖ್ಯಸ್ಥೆ ಶಿವನ್ ಝೆಲಿನ್ ಮೂರನೇ ಮಗುವಿಗೆ ಜನ್ಮ ನೀಡಿದ್ದಾರೆ. ಆ ಮೂಲಕ ಎಲೋನ್ ಮಸ್ಕ್ 11 ಮಕ್ಕಳಿಗೆ ತಂದೆಯಾಗಿದ್ದಾರೆ. ಈ ದಂಪತಿಗೆ ಈಗಾಗಲೇ 2021ರಲ್ಲಿ ಅವಳಿ ಮಕ್ಕಳು ಜನಿಸಿದ್ದು, ಇದೀಗ ಮೂರನೇ ಮಗುವಿಗೆ ಝೆಲಿನ್ ತಾಯಿಯಾಗಿದ್ದಾಳೆ.

ಮಾಹಿತಿ ಪ್ರಕಾರ ಎಲಾನ್ ಮಸ್ಕ್ ಅವರು ಮೂರು ಬೇರೆ ಬೇರೆ ಮಹಿಳೆಯರಿಂದ 11 ಮಕ್ಕಳನ್ನು ಪಡೆದಿದ್ದಾರೆ. ಅದರಲ್ಲಿ ಇಬ್ಬರು ಪತ್ನಿಯರು ಹಾಗೂ ಇನ್ನೊಬ್ಬರು ಅವರ ಕಂಪನಿಯ ಉದ್ಯೋಗಿ ಎನ್ನಲಾಗಿದೆ. ಎಲಾನ್ ಮಸ್ಕ್ ಅವರಿಗೆ ಮಕ್ಕಳನ್ನು ಪಡೆಯುವುದೆಂದರೆ ಬಹಳ ಇಷ್ಟವಾಗಿದ್ದರಿಂದ ಅವರು ತನ್ನ ಉದ್ಯೋಗಿಗಳೊಂದಿಗೂ ದೈಹಿಕ ಸಂಪರ್ಕ ಹೊಂದುತ್ತಿದ್ದರು ಎಂಬುದು 2013ರಲ್ಲಿ ಸ್ಪೇಸ್ ಎಕ್ಸ್‌ನಲ್ಲಿ ಉದ್ಯೋಗ ಬಿಟ್ಟ ಮಹಿಳೆಯೊಬ್ಬರಿಂದ ತಿಳಿದುಬಂದಿದೆ. ಅಲ್ಲದೇ ಇವರು ಯಾವಾಗಲೂ ಜನಸಂಖ್ಯೆಯಲ್ಲಿನ ಒಟ್ಟಾರೆ ಕುಸಿತದ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸುತ್ತಿದ್ದರು. ಹಾಗಾಗಿ ಅವರು ಜನಸಂಖ್ಯೆಯ ಹೆಚ್ಚಿಸಲು ಈ ಮೂಲಕ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ ಎಂಬ ವ್ಯಾಖ್ಯಾನ ಕೇಳಿ ಬಂದಿದೆ!

ಎಲಾನ್ ಮಸ್ಕ್ ಅವರ 11 ಮಕ್ಕಳಲ್ಲಿ ಐವರು ಅವರ ಮೊದಲ ಹೆಂಡತಿ ಜಸ್ಟಿನ್‌ಗೆ ಜನಿಸಿದವರು. ಮೂವರು ಮಕ್ಕಳು ಸಿಂಗರ್ ಗ್ರಿಮ್ಸ್ ಗೆ ಜನಿಸಿದವರು ಹಾಗೂ ಇನ್ನೂ ಮೂವರು ಮಕ್ಕಳು ಝೆಲಿನ್‌ಗೆ ಜನಿಸಿದವರಾಗಿದ್ದಾರೆ. ವಾಸ್ತವಿಕವಾಗಿ ಇದುವರೆಗೆ ಎಲಾನ್ ಮಸ್ಕ್ 13 ಮಕ್ಕಳ ತಂದೆ. ಅದರಲ್ಲಿ ಹಿರಿಯ ಮಗು ಹುಟ್ಟಿದ 10 ವಾರಕ್ಕೆ ಸತ್ತು ಹೋಗಿದೆಯಂತೆ. ಇನ್ನೊಂದು ಮಗುವಿನ ಬಗ್ಗೆ ಅವರು ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಹಾಗಾಗಿ ಎಲಾನ್ ಮಸ್ಕ್ ಅವರಿಗೆ ಅಧಿಕೃತವಾಗಿ ಸದ್ಯ 11 ಮಕ್ಕಳು!

ಎಲಾನ್ ಮತ್ತು ಜಸ್ಟಿ ಮಕ್ಕಳು:

ಜಸ್ಟಿನ್ ವಿಲ್ಸನ್ ಅವರು ಎಲಾನ್ ಮಸ್ಕ್‌ ಅವರ ಮೊದಲ ಪತ್ನಿ. ಇವರಿಗೆ ಐವರು ಮಕ್ಕಳಿದ್ದಾರೆ. ಮೊದಲಿಬ್ಬರು ಅವಳಿ ಗಂಡು ಮಕ್ಕಳು ಕ್ಸೇವಿಯರ್ ಮತ್ತೆ ಗ್ರಿಫಿನ್ (2004). ಉಳಿದ ಮೂವರು ಕೂಡ ಗಂಡು ಮಕ್ಕಳೇ ಆಗಿದ್ದು, ಅವರು ಹೆಸರು ಕಾಯ್, ಸ್ಯಾಕ್ಸನ್ ಮತ್ತು ಡಾಮಿಯನ್(2006). ಈ ಮೂವರು ಒಟ್ಟಿಗೆ ಜನಿಸಿದ್ದಾರೆ. ಇವರ ಮೊದಲ ಮಗು ನೆವಾಡಾ ಅಲೆಕ್ಸಾಂಡರ್ ಮಸ್ಕ್ 2002ರಲ್ಲಿ ಜನಿಸಿದ್ದು, ತೀರಿಹೋಗಿದೆ. ಅಲ್ಲದೇ ಕ್ಸೇವಿಯರ್ 2004ರಲ್ಲಿ ಗಂಡು ಮಗುವಾಗಿ ಜನಿಸಿದ್ದು, 2022ರಲ್ಲಿ ತನ್ನ ಹೆಸರು ಮತ್ತು ಲಿಂಗವನ್ನು ಬದಲಾಯಿಸಿ ವಿವಿಯನ್ ಎಂದು ಹೆಸರಿಟ್ಟುಕೊಂಡಿದ್ದಾಳೆ, ಈಕೆ ತಂದೆಯಿಂದ ದೂರವಿದ್ದಾಳೆ.

ಎಲೋನ್ ಮತ್ತು ಗ್ರಿಮ್ಸ್ ಮಕ್ಕಳು:

ಗಾಯಕಿ ಗ್ರಿಮ್ಸ್ ಮತ್ತು ಎಲೋನ್ ಅವರಿಗೆ ಮೂವರು ಮಕ್ಕಳಿದ್ದಾರೆ. ಅವರು ಹೆಸರು ಎಕ್ಸ್ ಎಇಎ-12 (2020)ಮತ್ತು ಟೆಕ್ನೋ ಮೆಕಾನಿಕಸ್ ಮಸ್ಕ್ (2023) ಎಂಬ ಇಬ್ಬರು ಗಂಡುಮಕ್ಕಳು ಹಾಗೂ ಮಗಳ ಹೆಸರು ಆಕ್ಸಾ ಡಾರ್ಕ್ ಸೈಡೆರಲ್ ಮಸ್ಕ್(2021).

ಇದನ್ನೂ ಓದಿ: ನಿವೃತ್ತಿಯಾದ ಪೊಲೀಸ್‌ ನಾಯಿಗೆ ಬೀಳ್ಕೊಟ್ಟಿದ್ದು ಹೇಗೆ? ವಿಡಿಯೊ ನೋಡಿ!

ಎಲೋನ್ ಮತ್ತು ಶಿವನ್ ಝೆಲಿನ್ ಮಕ್ಕಳು:

ನ್ಯೂರಾಲಿಂಕ್‌ನ ವಿಶೇಷ ಯೋಜನೆಗಳ ಮುಖ್ಯಸ್ಥೆ ಶಿವನ್ ಝೆಲಿನ್ ಅವರಿಗೆ ಮೂವರು ಮಕ್ಕಳಿದ್ದಾರೆ. ಇಬ್ಬರು ಅವಳಿ ಮಕ್ಕಳು 2021ರಲ್ಲಿ ಜನಿಸಿದ್ದು, ಹೆಸರು ತಿಳಿದುಬಂದಿಲ್ಲ. ಈ ವರ್ಷ 2024ರಲ್ಲಿ ಅವರು ಮೂರನೇ ಮಗುವಿಗೆ ಜನ್ಮ ನೀಡಿದ್ದಾರೆ.

Exit mobile version