Site icon Vistara News

flight problems: ವಿಮಾನದಲ್ಲಿ ಕೈಕೊಟ್ಟ ಎಸಿ; ಸೆಕೆ ತಾಳಲಾರದೆ ಬಟ್ಟೆ ಬಿಚ್ಚಿದ ಪ್ರಯಾಣಿಕರು!

Flight issues

ಅಥೆನ್ಸ್‌: ವಿಮಾನವೊಂದು (flight problems) ರನ್‌ವೇಯಲ್ಲಿ ಸಿಲುಕಿಕೊಂಡ ಪರಿಣಾಮ ಅದರಲ್ಲಿದ್ದ ಹಲವಾರು ಮಂದಿ ಪ್ರಯಾಣಿಕರು ಸೆಕೆಯಿಂದ ತತ್ತರಿಸಿದ್ದಾರೆ! ಗ್ರೀಸ್‌ನ ಅಥೆನ್ಸ್‌ನಲ್ಲಿ ಸೋಮವಾರ ತಾಪಮಾನವು 35 ಡಿಗ್ರಿ ಸೆಲಿಯಸ್‌ಗೆ ತಲುಪಿದ ಹಿನ್ನೆಲೆಯಲ್ಲಿ ಕತಾರ್‌ನ (Qatar) ಏರ್‌ವೇಸ್ ಫ್ಲೈಟ್ 204 ಹೊರಡಲು ವಿಳಂಬವಾಗಿದೆ. ಈ ವಿಮಾನದಲ್ಲಿ ಗ್ರೀಕ್ ರಾಜಧಾನಿಯಲ್ಲಿ ನಡೆದ ಮುಯೆ ಥಾಯ್ ಸ್ಪರ್ಧೆಯಿಂದ ಮನೆಗೆ ಹಿಂದಿರುಗುತ್ತಿದ್ದ ಕ್ರೀಡಾಪಟುಗಳೂ ಇದ್ದರು ಎನ್ನಲಾಗಿದೆ.

ಈ ವೇಳೆ ವಿಮಾನದಲ್ಲಿದ್ದ ಎಸಿಯು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಪ್ರಯಾಣಿಕರು ಬೆವರಲು ಪ್ರಾರಂಭಿಸಿದ್ದಾರೆ. ಆಗ ಅವರೆಲ್ಲಾ ಸೆಕೆಯ ಉರಿಯನ್ನು ತಡೆಯಲಾಗದೆ ತಮ್ಮ ಬಟ್ಟೆಗಳನ್ನು ತೆಗೆಯಲು ಶುರು ಮಾಡಿದ್ದರು ಎಂಬುದಾಗಿ ತಿಳಿದುಬಂದಿದೆ.

ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕ್ರೀಡಾಪಟುಗಳಲ್ಲೊಬ್ಬರು ಈ ಘಟನೆಯನ್ನು ವಿಡಿಯೊ ಮಾಡಿ
ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಕೆಲವು ಪ್ರಯಾಣಿಕರು ಈ ಸೆಕೆಯನ್ನು ತಡೆಯಲಾಗದೆ ವಿಮಾನದಿಂದ ಹೊರಗೆ ನಡೆದರೆ, ಕೆಲವರು ಶಾಖವನ್ನು ಸಹಿಸಲಾಗದೆ ತಮ್ಮ ಬಟ್ಟೆಗಳನ್ನು ತೆಗೆಯುತ್ತಿರುವುದು ಕಂಡುಬಂದಿದೆ. ಮೂರು ಗಂಟೆಗಳ ನಂತರ ವಿಮಾನ ಹೊರಟ ಕಾರಣ ಅದು ನಿಗದಿತ ಸಮಯಕ್ಕಿಂತ 16 ಗಂಟೆ ತಡವಾಗಿ ಮಂಗಳವಾರ ಬೆಳಗ್ಗೆ ದೋಹಾದಲ್ಲಿ ಬಂದು ಇಳಿಯಿತು ಎನ್ನಲಾಗಿದೆ.

ಅಥೆನ್ಸ್‌ನಲ್ಲಿ ತಾಪಮಾನ 39 ಡಿಗ್ರಿ ತಲುಪಿದ್ದು, ಬಿಸಿಗಾಳಿ ಬೀಸಲಾರಂಭಿಸಿತ್ತು. ಹಾಗೆಯೇ ಶಾಲೆಗಳನ್ನು ಮುಚ್ಚಲಾಗಿತ್ತು. ಕಸದ ವಿಲೇವಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಇಂತಹ ತಾಪಮಾನ ಏರಿಕೆಯ ನಡುವೆಯೇ ವಿಮಾನದೊಳಗಿನ ಎಸಿ ಹಾಳಾಗಿರುವುದರಿಂದ ಪ್ರಯಾಣಿಕರು ನರಕ ಯಾತನೆ ಅನುಭವಿಸಬೇಕಾಯಿತು.

“2024ರ ಜೂನ್ 10ರ ಸೋಮವಾರ ಅಥೆನ್ಸ್‌ನಿಂದ ದೋಹಾಗೆ ತೆರಳಲು ಕ್ಯೂಆರ್ 204 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ತಾಂತ್ರಿಕ ಸಮಸ್ಯೆಯಿಂದಾಗಿ ವಿಳಂಬವಾಯಿತು. ಕತಾರ್ ಏರ್ ವೇಸ್ ಪ್ರಾಮಾಣಿಕವಾಗಿ ಈ ಬಗ್ಗೆ ಕ್ಷಮೆಯಾಚಿಸುತ್ತದೆ” ಎಂದು ವಿಮಾನಯಾನ ವಕ್ತಾರರು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: Religious Conversion Case: ಹಿಂದೂ ಹುಡುಗಿಯ ಖಾಸಗಿ ಫೋಟೊ ತೆಗೆದು ಬ್ಲ್ಯಾಕ್‌ಮೇಲ್‌; ಮತಾಂತರಕ್ಕೆ ಒತ್ತಡ

“ನಮ್ಮ ಪ್ರಯಾಣಿಕರು, ಸಿಬ್ಬಂದಿಯ ಸುರಕ್ಷತೆ ಮತ್ತು ಸುಖಕರ ಪ್ರಯಾಣಕ್ಕಾಗಿ ನಾವು ಎಲ್ಲಾ ಸಮಯದಲ್ಲೂ ಆದ್ಯತೆ ನೀಡುತ್ತೇವೆ. ಈ ಅನಿರೀಕ್ಷಿತ ಅಡಚಣೆ ಮತ್ತು ಉಂಟಾದ ಅನಾನುಕೂಲತೆಯಿಂದ ಸಮಸ್ಯೆಗೊಳಗಾದ ಪ್ರತಿಯೊಬ್ಬ ಪ್ರಯಾಣಿಕರಲ್ಲಿ ನಾವು ಕ್ಷಮೆ ಯಾಚಿಸುತ್ತೇವೆ” ಎಂದವರು ತಿಳಿಸಿದ್ದಾರೆ.

Exit mobile version