ಮುಂಬೈ : ಮಕ್ಕಳ ಮದುವೆಯೆಂದರೆ ಎಲ್ಲಾ ತಂದೆ-ತಾಯಿಗೂ ಸಂಭ್ರಮವಿರುತ್ತದೆ. ಇನ್ನು ಶ್ರೀಮಂತ ಮನೆತನದ ಮಕ್ಕಳ ಮದುವೆಯೆಂದರೆ ಕೇಳಬೇಕಾ…? ತಮ್ಮ ಶ್ರೀಮಂತಿಕೆಯನ್ನು ತೋರ್ಪಡಿಸುವುದಕ್ಕಾದರೂ ಅದ್ಧೂರಿಯಿಂದ ಮದುವೆ ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ, ಹಲವಾರು ಶ್ರೀಮಂತ ಮನೆತನದವರ ಮದುವೆಗಳು ಬಹಳ ಅದ್ಧೂರಿ (Grand Marriage)ಯಾಗಿ ನಡೆದಿದ್ದು, ಅದರ ಬಗ್ಗೆ ಇಲ್ಲಿದೆ ಮಾಹಿತಿ.
ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದೆ ಹೆಸರಾದ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆ ಜುಲೈ 12, 2024ರಂದು ಮುಂಬೈನಲ್ಲಿ ರಾಧಿಕಾ ಮರ್ಚೆಂಟ್ ಅವರ ಜೊತೆ ನಿಶ್ಚಯವಾಗಿದ್ದು, ಇದು ಅತ್ಯಂತ ದುಬಾರಿ ರಿ ಮದುವೆ ಎಂದು ಊಹಿಸಲಾಗಿದೆ.
1. ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್: 700 ಕೋಟಿ ರೂ. ಖರ್ಚು
ಬಿಲಿಯನೇರ್ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಅವರು ಆನಂದ್ ಪಿರಮಾಲ್ ಅವರನ್ನು ವಿವಾಹವಾಗಿದ್ದು, ಸುಮಾರು ಒಂದು ವಾರಗಳ ಕಾಲ ನಡೆದ ಈ ಮದುವೆಗೆ ಅಂದಾಜು 700 ಕೋಟಿ ರೂ. ಖರ್ಚು ಮಾಡಲಾಗಿದೆ ಎನ್ನಲಾಗಿದೆ. ಉದಯಪುರ, ಇಟಲಿಯ ಲೇಕ್ ಕೊಮೊ ಮತ್ತು ಮುಂಬೈನಲ್ಲಿ ನಡೆದ ಈ ಉತ್ಸವದಲ್ಲಿ ಜಗತ್ತಿನ ಅನೇಕ ಸೂಪರ್ ಸ್ಟಾರ್‌ಗಳು ಭಾಗವಹಿಸಿದ್ದರು. ಮತ್ತು ವಿವಾಹ ಸಮಾರಂಭವು ಲೇಕ್ ಪಿಚೋಲಾದ ಖಾಸಗಿ ದ್ವೀಪದಲ್ಲಿ ನಡೆಯಿತು.
2. ಸುಶಾಂತ್ ರಾಯ್ ಮತ್ತು ಸೀಮಂತೋ ರಾಯ್: 554 ಕೋಟಿ ರೂ. ಖರ್ಚು
2004ರಲ್ಲಿ ಸಹಾರಾ ಗ್ರೂಪ್‌ನ ಮಾಜಿ ಅಧ್ಯಕ್ಷ ಉದ್ಯಮಿ ಸುಬ್ರತಾ ರಾಯ್ ಅವರ ಪುತ್ರರಾದ ಸುಶಾಂತ್ ರಾಯ್ ಮತ್ತು ಸೀಮಾಂತೋ ರಾಯ್ ಅವರ ವಿವಾಹಕ್ಕೆ ಅಂದಾಜು 554 ಕೋಟಿ ರೂ. ಖರ್ಚುಮಾಡಲಾಗಿದೆ ಎನ್ನಲಾಗಿದೆ. ಲಕ್ನೋದ ಸಹಾರಾ ಕ್ರೀಡಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರು ಮತ್ತು ಕ್ರೀಡಾಕೂಟದವರು ಸೇರಿದಂತೆ 11,000ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ್ದರು.
3. ಬ್ರಹ್ಮಣಿ ರೆಡ್ಡಿ ಮತ್ತು ರಾಜೀವ್ ರೆಡ್ಡಿ: 500 ಕೋಟಿ ರೂ. ಖರ್ಚು
ಮಾಜಿ ರಾಜಕಾರಣಿ, ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಅವರ ಪುತ್ರಿ ಬ್ರಹ್ಮಣಿ ರೆಡ್ಡಿ ಮತ್ತು ರಾಜೀವ್ ರೆಡ್ಡಿ ಅವರ ವಿವಾಹಕ್ಕೆ ಸುಮಾರು 500 ಕೋಟಿ ರೂಪಾಯಿ (74 ಮಿಲಿಯನ್ ಡಾಲರ್) ವೆಚ್ಚವಾಗಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ಅರಮನೆಯಲ್ಲಿ ನಡೆದ ಐದು ದಿನಗಳ ಆಚರಣೆಯಲ್ಲಿ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಸೇರಿದಂತೆ ಸುಮಾರು 50,000 ಮಂದಿ ಭಾಗವಹಿಸಿದ್ದರು.
4. ಸೃಷ್ಟಿ ಮಿತ್ತಲ್ ಮತ್ತು ಗುಲ್ರಾಜ್ ಬೆಹ್ಲ್: 500 ಕೋಟಿ
ಸ್ಟೀಲ್ ಉದ್ಯಮಿ ಪ್ರಮೋದ್ ಮಿತ್ತಲ್ ಅವರ ಪುತ್ರಿ ಸೃಷ್ಟಿ ಮಿತ್ತಲ್ ಅವರು ಇನ್‌ವೆಸ್ಟ್‌ಮೆಂಟ್ ಬ್ಯಾಂಕರ್ ಗುಲ್ರಾಜ್ ಬೆಹ್ಲ್ ಅವರನ್ನು 2013 ರಲ್ಲಿ ಸ್ಪೇನ್‌ನ ಬಾರ್ಸಿಲೋನಾದಲ್ಲಿ ಮದುವೆಯಾದರು. ಇದು ಮೂರು ದಿನಗಳ ಅದ್ದೂರಿ ಮದುವೆಯಾಗಿದ್ದು, ಈ ಕಾರ್ಯಕ್ರಮಕ್ಕೆ ಸುಮಾರು 500 ಕೋಟಿ ರೂ. ಖರ್ಚುಮಾಡಲಾಗಿದೆ ಎನ್ನಲಾಗಿದೆ. ಮದುವೆಯಲ್ಲಿ 500 ಅತಿಥಿಗಳು ಭಾಗವಹಿಸಿದ್ದರು ಮತ್ತು ಪ್ರಸಿದ್ಧ ಸ್ಪ್ಯಾನಿಷ್ ಪ್ರಸಿದ್ಧ ಬಾಣಸಿಗ ಸೆರ್ಗಿ ಅರೋಲಾ ಸಿದ್ಧಪಡಿಸಿದ ಮೆನು ಮತ್ತು 60 ಕೆಜಿ, ಬೃಹತ್ ವಿವಾಹ ಕೇಕ್ ಅನ್ನು ಕತ್ತರಿಸಲಾಗಿತ್ತು. ಈ ವಿವಾಹ ಸಮಾರಂಭವು ಬೆಟ್ಟದ ಮೇಲಿರುವ ನ್ಯಾಷನಲ್ ಮ್ಯೂಸಿಯಂ ಆಫ್ ಕ್ಯಾಟಲಾನ್ ಆರ್ಟ್‌ನಲ್ಲಿ ನಡೆಯಿತು.
5. ವಾಣಿಶಾ ಮಿತ್ತಲ್ ಮತ್ತು ಅಮಿತ್ ಭಾಟಿಯಾ: 240 ಕೋಟಿ ರೂ.
2004ರಲ್ಲಿ ಸ್ಟೀಲ್ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಪುತ್ರಿ ವಾಣಿಶಾ ಮಿತ್ತಲ್ ಮತ್ತು ಲಂಡನ್ ಬ್ಯಾಂಕರ್ ಅಮಿತ್ ಭಾಟಿಯಾ ಅವರ ವಿವಾಹವು ಆರು ದಿನಗಳ ಕಾಲ ಪ್ಯಾರಿಸ್‌ನಲ್ಲಿ ಅದ್ದೂರಿಯಾಗಿ ಆಚರಿಸಲಾಗಿತ್ತು. ಈ ಉತ್ಸವದಲ್ಲಿ ಬಾಲಿವುಡ್ ತಾರೆಯರಾದ ಶಾರುಖ್ ಖಾನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರು ಆಗಮಿಸಿದ್ದರು. ಪ್ರಸಿದ್ಧ ಕವಿ ಜಾವೇದ್ ಅಖ್ತರ್ ವಿವಾಹಪೂರ್ವ ಸಮಾರಂಭಗಳಿಗಾಗಿ ನಾಟಕವನ್ನು ಸಹ ಬರೆದಿದ್ದಾರೆ. ಮುಖ್ಯ ವಿವಾಹವು 17 ನೇ ಶತಮಾನದ ಚಾಟೌ ಡಿ ವಾಕ್ಸ್-ಲೆ-ವಿಕಾಮ್ಟೆಯಲ್ಲಿ ನಡೆಯಿತು, ಈ ಮದುವೆಗಾಗಿ ಎಸ್ಟೇಟ್‌ನ ಉದ್ಯಾನಗಳಲ್ಲಿನ ಕೊಳದ ಮೇಲೆ ಭವ್ಯವಾದ ಮಂಟಪವನ್ನು ನಿರ್ಮಿಸಲಾಗಿತ್ತು.
6. ಸೋನಮ್ ವಾಸ್ವಾನಿ ಮತ್ತು ನವೀನ್ ಫ್ಯಾಬಿಯಾನಿ: 210 ಕೋಟಿ ರೂ. ಖರ್ಚು
2017 ರಲ್ಲಿ, ಸ್ಟಾಲಿಯನ್ ಗ್ರೂಪ್ ಸಂಸ್ಥಾಪಕ ಸುನಿಲ್ ವಾಸ್ವಾನಿ ಅವರ ಪುತ್ರಿ ಸೋನಮ್ ವಾಸ್ವಾನಿ ಮತ್ತು ಮುಂಬೈ ಮೂಲದ ಉದ್ಯಮಿ ನವೀನ್ ಫ್ಯಾಬಿಯಾನಿ ಅವರ ವಿವಾಹವು ಆಸ್ಟ್ರಿಯಾದ ವಿಯೆನ್ನಾದಲ್ಲಿ ಸುಮಾರು 210 ಕೋಟಿ ರೂ.ಗಳ (30 ಮಿಲಿಯನ್ ಡಾಲರ್) ವೆಚ್ಚದಲ್ಲಿ ಅದ್ಧೂರಿಯಾಗಿ ನೇರವೇರಿತ್ತು. ಉತ್ಸವಗಳು ಪಲೈಸ್ ಫೆರ್ಸ್ಟೆಲ್, ಪಲೈಸ್ ಲಿಚೆನ್ಸ್ಟೇನ್ ಪಾರ್ಕ್ ಮತ್ತು ಬೆಲ್ವೆಡೆರೆ ಅರಮನೆಯಲ್ಲಿ ನಡೆದವು.
7. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ: 100 ಕೋಟಿ ರೂ. ಖರ್ಚು
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ 2017ರ ಡಿಸೆಂಬರ್ ನಲ್ಲಿ ಇಟಲಿಯ ಟಸ್ಕನಿಯಲ್ಲಿರುವ ಲೇಕ್ ಕೊಮೊದಲ್ಲಿ ವಿವಾಹವಾದರು. ಕೆಲವು ದಿನಗಳ ನಂತರ ಮುಂಬೈನಲ್ಲಿ ನಡೆದ ಅವರ ವಿವಾಹ ಆರತಕ್ಷತೆ ಕೂಡ ಹೆಚ್ಚು ಅದ್ದೂರಿಯಾಗಿ ನಡೆಯಿತು, ಇದರಲ್ಲಿ ಸೆಲೆಬ್ರಿಟಿಗಳು ಮತ್ತು ಕ್ರಿಕೆಟಿಗರು ಭಾಗವಹಿಸಿದ್ದರು ಮತ್ತು ಪಿಎಂ ಮೋದಿ ಕೂಡ ಇವರ ಕಾರ್ಯಕ್ರಮಕ್ಕೆ ಭಾಗವಹಿಸಿದ್ದರು.
8. ಅಡೆಲ್ ಸಾಜನ್ ಮತ್ತು ಸನಾ ಖಾನ್: 100 ಕೋಟಿ ರೂ. ಖರ್ಚು
ದುಬೈ ಉದ್ಯಮಿ ಅಡೆಲ್ ಸಾಜನ್ ಅವರು ನಟಿ ಸನಾ ಖಾನ್ ಅವರನ್ನು ಕ್ರೂಸ್‌ನಲ್ಲಿ ಅದ್ದೂರಿಯಾಗಿ ವಿವಾಹವಾದರು. ಇವರ ವಿವಾಹಕ್ಕೆ 100 ಕೋಟಿ ರೂ.ಗಳ ಖರ್ಚಾಗಿದೆ ಎಂದು ಊಹಿಸಲಾಗಿದೆ. ಬಾರ್ಸಿಲೋನಾದಿಂದ ಫ್ರಾನ್ಸ್ ಮೂಲಕ ಇಟಲಿಗೆ ಪ್ರಯಾಣಿಸುತ್ತಿದ್ದ ಕೋಸ್ಟಾ ಫಾಸಿನೋಸಾ ಕ್ರೂಸ್ ಹಡಗಿನಲ್ಲಿ ದಂಪತಿಗಳು ವಿವಾಹ ವಿಧಿಯನ್ನು ಆಚರಿಸಿದ್ದಾರೆ.
9. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ: 77 ಕೋಟಿ ರೂ. ಖರ್ಚು
ಆರು ವರ್ಷಗಳ ಡೇಟಿಂಗ್ ನಂತರ, ಬಾಲಿವುಡ್ ದಂಪತಿಗಳಾದ ರಣವೀರ್‌ಸಿಂಗ್ ಮತ್ತು ದೀಪಿಕಾ ಪಡುಕೋಣೆ 2018 ರ ನವೆಂಬರ್ ನಲ್ಲಿ ಇಟಲಿಯ ಲೇಕ್ ಕ್ಯಾಮೊದಲ್ಲಿ ವಿವಾಹವಾದರು, ಅವರ ವಿವಾಹ ಸಮಾರಂಭಗಳು ಸಿಂಧಿ ಮತ್ತು ಕೊಂಕಣಿ ಸಂಪ್ರದಾಯಗಳಲ್ಲಿ ನಡೆದವು. ಇವರ ಮದುವೆಯ ಖರ್ಚು 77 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
10. ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ
ಮುಕೇಶ್ ಅಂಬಾನಿ ಅವರ ಹಿರಿಯ ಮಗ ಆಕಾಶ್ ಅಂಬಾನಿ ಅವರು ವಜ್ರದ ಉದ್ಯಮಿಯ ಪುತ್ರಿ ಶ್ಲೋಕಾ ಮೆಹ್ತಾ ಅವರನ್ನು 2019 ರಲ್ಲಿ ಮುಂಬೈನಲ್ಲಿ ಅದ್ದೂರಿಯಾಗಿ ವಿವಾಹವಾದರು. ಈ ಮದುವೆಯಲ್ಲಿ ಬಹಳ ವರ್ಣರಂಜಿತ ಅಲಂಕಾರಗಳನ್ನು ಮಾಡಲಾಗಿತ್ತು. ಆದರೆ ಮದುವೆಯ ಖರ್ಚಿನ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ.
ಇದನ್ನೂ ಓದಿ: ದಳಪತಿ ವಿಜಯ್‌ಗೆ ಭುಜದ ಮೇಲಿನ ಕೈ ತೆಗೆಯಲು ಹೇಳಿದ ಹುಡುಗಿ; ವಿಡಿಯೊ ವೈರಲ್