ದೆಹಲಿ: ನಟಿ ಕಂಗನಾ ರಣಾವತ್ ಸಿನಿಮಾ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನಟಿ. ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಕಂಗನಾ ರಾಜಕೀಯ ರಂಗವನ್ನು ಪ್ರವೇಶಿಸಿ ಸೈ ಎನಿಸಿಕೊಂಡಿದ್ದಾರೆ. 2024ರ ಲೋಕಸಭೆಯ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿಯಿಂದ ಜಯಗಳಿಸಿದ ನಟಿ ಕಂಗನಾ ರಣಾವತ್ (Kangana Ranaut) ಅವರು ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದ್ದಾರೆ.
ಸಿನಿಮಾ ರಂಗದಿಂದ ರಾಜಕೀಯಕ್ಕೆ ಕಾಲಿಟ್ಟ ನಟಿ ಸಂಸದೆಯಾದ ಕಾರಣ ಹಲವು ರೀತಿಯ ಸವಲತ್ತುಗಳನ್ನು ಹೊಂದಿರುತ್ತಾರೆ. ಹಾಗಾದ್ರೆ ಅವರ ಸಂಬಳ ಮತ್ತು ಸವಲತ್ತುಗಳ ಬಗ್ಗೆ ತಿಳಿಯೋಣ:
ತಿಂಗಳ ಸಂಬಳ: ಸಂಸದರು ತಿಂಗಳಿಗೆ 1 ಲಕ್ಷ ರೂ. ಮೂಲ ವೇತನವನ್ನು ಪಡೆಯುತ್ತಾರೆ. ಹಣದುಬ್ಬರ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚಗಳನ್ನು ಭರಿಸಲು 2018ರಲ್ಲಿ ವೇತನ ಹೆಚ್ಚಳ ಮಾಡಿದ ನಂತರ ಈ ಮೊತ್ತವನ್ನು ನೀಡಲಾಗುತ್ತಿದೆ.
ಸವಲತ್ತುಗಳ ವಿವರ ಹೀಗಿದೆ:
- ಕ್ಷೇತ್ರ ಭತ್ಯೆ : ಕಂಗನಾ ಅವರಿಗೆ ತಮ್ಮ ಕ್ಷೇತ್ರದಲ್ಲಿ ಕಚೇರಿಗಳನ್ನು ನಿರ್ವಹಿಸಲು ಮತ್ತು ಮತದಾರರೊಂದಿಗೆ ಸಂವಹನ ಸಾಧಿಸುವ ವೆಚ್ಚವನ್ನು ಭರಿಸಲು ಕ್ಷೇತ್ರ ಭತ್ಯೆಯಾಗಿ ತಿಂಗಳಿಗೆ 70,000 ರೂ. ನೀಡುತ್ತಾರೆ.
- ದೈನಂದಿನ ಭತ್ಯೆ : ಸಂಸತ್ತಿನ ಅಧಿವೇಶನಗಳು ಮತ್ತು ಸಮಿತಿ ಸಭೆಗಳಲ್ಲಿ ದಿಲ್ಲಿಯಲ್ಲಿದ್ದಾಗ ಕಂಗನಾ ಅವರು ವಸತಿ, ಆಹಾರ ಮತ್ತು ಇತರ ವೆಚ್ಚಗಳಿಗಾಗಿ 2000 ರೂ. ದೈನಂದಿನ ಭತ್ಯೆಯಾಗಿ ಪಡೆಯುತ್ತಾರೆ.
- ಪ್ರಯಾಣ ಭತ್ಯೆ : ಎಲ್ಲಾ ಸಂಸದರು ತಮಗೆ ಹಾಗೂ ತಮ್ಮ ಕುಟುಂಬದವರಿಗೆ ವರ್ಷಕ್ಕೆ 34 ಬಾರಿ ಉಚಿತ ದೇಶಿಯ ವಿಮಾನ ಪ್ರಯಾಣವನ್ನು ಪಡೆಯಲು ಅರ್ಹರಾಗಿರುತ್ತಾರೆ. ಅವರು ಅಧಿಕೃತ ಮತ್ತು ವೈಯಕ್ತಿಕ ಉದ್ದೇಶಗಳಿಗಾಗಿ ಉಚಿತ ಪ್ರಥಮ ದರ್ಜೆ ರೈಲು ಪ್ರಯಾಣವನ್ನು ಸಹ ಪಡೆಯುತ್ತಾರೆ ಮತ್ತು ತಮ್ಮ ಕ್ಷೇತ್ರಗಳಲ್ಲಿ ರಸ್ತೆಯಲ್ಲಿ ಪ್ರಯಾಣಿಸಲು ಮೈಲೇಜ್ ಭತ್ಯೆವನ್ನು ಪಡೆಯಬಹುದು.
- ವಸತಿ: ಸಂಸದರಿಗೆ ಅವರ 5 ವರ್ಷದ ಆಡಳಿತ ಅವಧಿಯಲ್ಲಿ ಬಂಗಲೆಗಳು, ಪ್ಲ್ಯಾಟ್ಗಳು ಅಥವಾ ಹಾಸ್ಟೆಲ್ ಕೊಠಡಿಗಳು ಹಾಗೂ ಬಾಡಿಗೆ ಮುಕ್ತ ವಸತಿಯನ್ನು ಒದಗಿಸಲಾಗುವುದು. ಒಂದು ವೇಳೆ ಅಧಿಕೃತ ವಸತಿ ಸೌಕರ್ಯವನ್ನು ಬಳಸದವರಿಗೆ ತಿಂಗಳಿಗೆ 2,00,000 ರೂ. ವಸತಿ ಭತ್ಯೆವನ್ನು ಪಡೆಯಬಹುದು.
- ವೈದ್ಯಕೀಯ ಸೌಲಭ್ಯ : ಕಂಗನಾ ಮತ್ತು ಅವರ ಕುಟುಂಬದವರು ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (CCHS) ಅಡಿಯಲ್ಲಿ ಉಚಿತ ವೈದ್ಯಕೀಯ ಸೇವೆಯನ್ನು ಪಡೆಯುತ್ತಾರೆ. ಇದರಿಂದ ಸರ್ಕಾರಿ ಅಥವಾ ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ.
- ಇತರೆ: ಸಂಸದರಿಗೆ ವರ್ಷಕ್ಕೆ 1,50,000 ರೂ.ನಷ್ಟು ಉಚಿತ ದೂರವಾಣಿ ಕರೆಗಳನ್ನು ನೀಡಲಾಗುತ್ತದೆ ಮತ್ತು ಅವರು ತಮ್ಮ ನಿವಾಸದಲ್ಲಿ ಮತ್ತು ಕಚೇರಿಗಳಲ್ಲಿ ಉಚಿತ ಹೈಸ್ಪೀಡ್ ಇಂಟರ್ನೆಟ್ ಸಂಪರ್ಕಗಳನ್ನು ಪಡೆಯಬಹುದಾಗಿದೆ. ಹಾಗೆಯೇ ಅವರಿಗೆ ವರ್ಷಕ್ಕೆ 50,000 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಮತ್ತು 4,000 ಕಿಲೋ ಲೀಟರ್ನಷ್ಟು ನೀರನ್ನು ಉಚಿತವಾಗಿ ನೀಡಲಾಗುತ್ತದೆ.
ಇದನ್ನೂ ಓದಿ: Terror attack: ಮಗುವಿಗಾಗಿ ಪ್ರಾರ್ಥಿಸಲು ಹೋಗಿದ್ದ ದಂಪತಿ; ಪತ್ನಿ ಎದುರೇ ಉಗ್ರರ ಗುಂಡಿಗೆ ಬಲಿಯಾದ ಪತಿ