Site icon Vistara News

Nita Ambani Fitness Secret: 60ರಲ್ಲೂ ಬಳ್ಳಿಯಂತೆ ಬಳುಕುವ ನೀತಾ ಅಂಬಾನಿ ಫಿಟ್‌ನೆಸ್‌ ಸಿಕ್ರೆಟ್‌ ಹೀಗಿದೆ!

Nita Ambani Fitness Secret


ಮುಂಬೈ: ಅಂಬಾನಿ ಕುಟುಂಬದ ಮುಖ್ಯ ಸದಸ್ಯೆ, ರಿಲಯನ್ಸ್ ಇಂಡಸ್ಟ್ರೀಸ್‍ನ ನಿರ್ದೇಶಕಿ ಮತ್ತು ರಿಲಯನ್ಸ್ ಫೌಂಡೇಶನ್ ಮತ್ತು ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್‍ನ ಅಧ್ಯಕ್ಷೆ-ಸಂಸ್ಥಾಪಕಿ ನೀತಾ ಅಂಬಾನಿಯವರು ಖ್ಯಾತ ಉದ್ಯಮಿ ಮುಖೇಶ್ ಅಂಬಾನಿಯ ಪತ್ನಿ ಎಂಬ ವಿಚಾರ ಎಲ್ಲರಿಗೂ ತಿಳಿದೆ ಇದೆ. ನೀತಾ ಅಂಬಾನಿ ತಮ್ಮ ಮಗ ಅನಂತ್ ಅಂಬಾನಿಯವರ ವಿವಾಹ ಮಾರಂಭಕ್ಕೆ ತಯಾರಿ ನಡೆಸುತ್ತಿರುವಾಗ ಅವರ ಫಿಟ್‍ನೆಸ್ ಎಲ್ಲರ ಗಮನ ಸೆಳೆದಿದೆ. 60 ವರ್ಷದ ನೀತಾ ಅಂಬಾನಿಯವರ ಫಿಟ್‍ನೆಸ್ (Nita Ambani Fitness secret )ಕಂಡು ಅನೇಕರು ದಂಗಾಗಿದ್ದಾರೆ. ಹಾಗಾದ್ರೆ ಅವರ ಫಿಟ್‍ನೆಸ್ ರಹಸ್ಯ ತಿಳಿದುಕೊಳ್ಳಿ.

ನೀತಾ ಅಂಬಾನಿಯವರು ಯಾವುದೇ ಕಠಿಣವಾದ ವ್ಯಾಯಾಮ ಮಾಡದೆ 18 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ತಮ್ಮ ಮಗ ಅನಂತ್ ಅಂಬಾನಿಯವರಿಗೆ ತೂಕ ಇಳಿಸಲು ಬೆಂಬಲ ನೀಡುವ ಮೂಲಕ ಅವರಿಗೆ ಈ ರೀತಿ ತೂಕ ಇಳಿಸಲು ಪ್ರೇರಣೆ ಸಿಕ್ಕಿದೆ ಎನ್ನಲಾಗಿದೆ.

ಅನಂತ್ ಬೊಜ್ಜು ಮತ್ತು ಅಸ್ತಮಾದಿಂದ ಬಳಲುತ್ತಿದ್ದರು. ಅನಂತ್‌ ಅವರನ್ನು ಬೆಂಬಲಿಸಲು, ಅವರ ಜೊತೆಗೆ ತಮ್ಮ ಆಹಾರವನ್ನು ಪದ್ಧತಿಯನ್ನೂ ನೀತಾ ಬದಲಾಯಿಸಿಕೊಂಡರಂತೆ. ಹಾಗಾದ್ರೆ ಅವರ ಫಿಟ್‍ನೆಸ್ ದಿನಚರಿ ಬಗ್ಗೆ ತಿಳಿಯೋಣ.

ಅವರು ತಮ್ಮ ದೈನಂದಿನ ಊಟದಲ್ಲಿ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುತ್ತಾರೆ. ತಾಜಾ ಹಣ್ಣಿನ ರಸಗಳು ಮತ್ತು ಒಣ ಹಣ್ಣುಗಳನ್ನು ಒಳಗೊಂಡಿರುವ ಆರೋಗ್ಯಕರ ಉಪಾಹಾರದೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ. ರಕ್ತ ಶುದ್ಧೀಕರಿಸಲು ಮತ್ತು ಚರ್ಮದ ಸಮಸ್ಯೆಗಳನ್ನು ತಡೆಗಟ್ಟಲು ಪ್ರತಿದಿನ ಡಿಟಾಕ್ಸ್ ನೀರನ್ನು ಕುಡಿಯುತ್ತಾರೆ. ಅವರು ಊಟವನ್ನು ಎಂದಿಗೂ ತಪ್ಪಿಸುವುದಿಲ್ಲವಂತೆ!

ಪ್ರತಿದಿನ ಎರಡು ಲೋಟ ಬೀಟ್ರೂಟ್ ರಸವನ್ನು ಕುಡಿಯುತ್ತಾರಂತೆ. ಯಾಕೆಂದರೆ ಅದಕ್ಕೆ ದೇಹವನ್ನು ನಿರ್ವಿಷಗೊಳಿಸುವ ಗುಣವಿದೆ ಎಂದು ಅವರು ತಿಳಿಸಿದ್ದಾರೆ.

ನೀತಾ ಅಂಬಾನಿ ಮತ್ತು ಅವರ ಪತಿ ಸಾಂಪ್ರದಾಯಿಕ ಗುಜರಾತಿ ಶೈಲಿಯ ಸೂಪ್‍ಗಳು, ಸೊಪ್ಪು ಮತ್ತು ಹಸಿರು ತರಕಾರಿಗಳನ್ನು ಉಪಾಹಾರಕ್ಕೆ ಆದ್ಯತೆ ನೀಡುತ್ತಾರೆ. ಅಲ್ಲದೆ, ಈ ದಂಪತಿ ರೊಟ್ಟಿ, ದಾಲ್ ಮತ್ತು ಬೇಳೆಕಾಳುಗಳನ್ನು ಒಳಗೊಂಡ ಮನೆಯಲ್ಲಿ ತಯಾರಿಸಿದ ಭೋಜನವನ್ನು ಹೆಚ್ಚು ಸೇವಿಸುತ್ತಾರೆ.

ಇದನ್ನೂ ಓದಿ: ರೋಗಿಗಳನ್ನು ನೋಡಿಕೊಳ್ಳುವ ಬದಲು ಕೋತಿಮರಿ ಜೊತೆ ಆಟವಾಡಿದ ನರ್ಸ್‌‌‌ಗಳು! ಕೊನೆಗೆ ಆಗಿದ್ದೇನು?

ಅಷ್ಟೇ ಅಲ್ಲದೇ ನೀತಾ ಅಂಬಾನಿಯವರು ತಮ್ಮ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮವನ್ನು ಹೆಚ್ಚಿಸಲು ಶಾಸ್ತ್ರೀಯ ನೃತ್ಯ ಮತ್ತು ಯೋಗವನ್ನು ಅಳವಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್‌ ಆದ 5 ವಿಡಿಯೊಗಳು ಇಲ್ಲಿವೆ; ಮಿಸ್‌ ಮಾಡದೇ ನೋಡಿ!

ಜಂಕ್ ಫುಡ್ ಮತ್ತು ಆಲ್ಕೋಹಾಲ್‌ನಿಂದ ದೂರವಿರುವುದು ಮತ್ತು ಕಟ್ಟುನಿಟ್ಟಾದ ಸಸ್ಯಾಹಾರಿ ಆಹಾರವನ್ನು ಮಾತ್ರ ಅನುಸರಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಈ ತತ್ವಗಳನ್ನು ಅನುಸರಿಸುವ ಮೂಲಕ ನೀವೂ ಸಹ ವೇಗವಾಗಿ ಫಿಟ್ನೆಸ್ ಸಾಧಿಸಬಹುದು ಎನ್ನುತ್ತಾರೆ ನೀತಾ ಅಂಬಾನಿ.

Exit mobile version