Site icon Vistara News

Online Shopping Fraud: ಅಮೆಜಾನ್‌ನಲ್ಲಿ 55,000 ರೂ. ಮೊಬೈಲ್ ಫೋನ್ ಆರ್ಡರ್ ಮಾಡಿದವನಿಗೆ ಸಿಕ್ಕಿದ್ದು ಟೀ ಕಪ್!

Amazoan Fraud


ಮುಂಬೈ: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತಮಗೆ ಬೇಕಾದ ವಸ್ತುಗಳನ್ನು ಮಾರುಕಟ್ಟೆಗೆ ಹೋಗಿ ಖರೀದಿಸುವ ಬದಲು ಆನ್‌ಲೈನ್ ಆ್ಯಪ್‌ಗಳಲ್ಲೇ ಆರ್ಡರ್ ಮಾಡಿ ಖರೀದಿಸುತ್ತಾರೆ. ಇದರಿಂದ ಅವರ ಕೆಲಸ ಸುಲಭವಾಗುತ್ತದೆ ನಿಜ ಆದರೆ ಅವರಿಗೆ ಇದರ ಮೋಸದ ಬಗ್ಗೆ ಅರಿವಿರುವುದಿಲ್ಲ. ಅದರಲ್ಲೂ ಅಮೆಜಾನ್ (Online Shopping Fraud) ಆನ್‌ಲೈನ್ ಡೆಲಿವರಿ ಆ್ಯಪ್ ಬಗ್ಗೆ ಈ ಹಿಂದೆ ಹಲವು ದೂರು ಕೇಳಿ ಬಂದಿತ್ತು. ಇದೀಗ ಅಮೆಜಾನ್ ಬಗ್ಗೆ ಮತ್ತೊಂದು ದೂರು ದಾಖಲಾಗಿದೆ.

ಅಮೆಜಾನ್ ಆ್ಯಪ್‌ನಲ್ಲಿ ಹೈ ಎಂಡ್ ಮೊಬೈಲ್ ಫೋನ್ ಆರ್ಡರ್ ಮಾಡಿದ ಮುಂಬೈ ವ್ಯಕ್ತಿಗೆ ಅದರ ಬದಲು ಅರ್ಧ ಡಜನ್ ಟೀ ಕಪ್ ಡೆಲಿವರಿ ಆಗಿದೆ. ಹೀಗಾಗಿ ಆ ವ್ಯಕ್ತಿ ಇ-ಕಾಮರ್ಸ್ ದೈತ್ಯ ಅಮೆಜಾನ್ ವಿರುದ್ಧ ದೂರು ದಾಖಲಿಸಿದ್ದಾರೆ.
ಸಂಸ್ಥೆಯೊಂದರಲ್ಲಿ ಡೆಪ್ಯೂಟಿ ಎಂಜಿನಿಯರ್ ಆಗಿರುವ ಅಮರ್ ಚವಾಣ್ ಅವರು ಅಮೆಜಾನ್‌ನಿಂದ ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಮೊಬೈಲ್ ಫೋನ್ ಅನ್ನು ಆರ್ಡರ್ ಮಾಡಿ ಜುಲೈ 13ರಂದು ಆನ್‌ಲೈನ್‌ನಲ್ಲಿ 54,999 ರೂ.ಗಳನ್ನು ಪಾವತಿಸಿದ್ದಾರೆ. ಎರಡು ದಿನಗಳ ನಂತರ, ಪಾರ್ಸೆಲ್ ಬಂದಿತು. ಆದರೆ ಅವರು ಅದನ್ನು ತೆರೆದಾಗ ಆರು ಚಹಾ ಕಪ್‌ಗಳನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ.

ಈ ಬಗ್ಗೆ ಅವರು ಅಮೆಜಾನ್ ಮತ್ತು ಮಾರಾಟಗಾರ ಸಂಸ್ಥೆಯನ್ನು ಸಂಪರ್ಕಿಸಿದರು, ಆದರೆ ಯಾವುದೇ ತೃಪ್ತಿಕರ ಉತ್ತರ ಸಿಗಲಿಲ್ಲ. ಹಾಗಾಗಿ ಅವರು ವಂಚನೆ ಆರೋಪದ ಮೇಲೆ ಅಮೆಜಾನ್ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಅಮೆಜಾನ್‌ನಿಂದ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ ಎನ್ನಲಾಗಿದೆ.

ಆದರೆ, ಅಮೆಜಾನ್ ನಲ್ಲಿ ಇಂತಹ ಹಗರಣಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ವ್ಯಕ್ತಿಯೊಬ್ಬ ಇ-ಕಾಮರ್ಸ್ ಸೈಟ್ ಅಮೆಜಾನ್‌ನಲ್ಲಿ ‘ವಿವೋ ವೈ20ಎ’ ಮೊಬೈಲ್‌ಗಾಗಿ ಆರ್ಡರ್ ಮಾಡಿದ್ದಾನೆ. ಆದರೆ ಡೆಲಿವರಿ ಆದ ವಸ್ತು ಕಂಡು ಶಾಕ್ ಆಗಿದ್ದಾನೆ. ಅದರಲ್ಲಿ ಮೊಬೈಲ್ ಬದಲು ಸಾಬೂನು ಸಿಕ್ಕಿದೆ. ತಕ್ಷಣ ಆನ್ಲೈನ್ ಅಪ್ಲಿಕೇಶನ್‌ನ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಿದ್ದಾರೆ. ಆದರೆ ಅವರಿಂದ ಯಾವುದೇ ಸಹಾಯ ಸಿಗದ ಕಾರಣ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಬಟ್ಟೆ ಹರಿದುಕೊಂಡು ಪುರುಷನ ಮೇಲೆ ಮುಗಿಬಿದ್ದ ಮಹಿಳೆ! ಅಬ್ಬಾ, ಎಂಥ ಜಗಳಗಂಟಿ ಎಂದ ನೆಟ್ಟಿಗರು!

ಅಲ್ಲದೇ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಮೆಜಾನ್ ಕಂಪನಿಯಿಂದ ಪ್ರತಿಕ್ರಿಯೆ ಬಂದಿತ್ತು ಹಣ ವಾಪಸ್ ಕೊಡಲಾಗಿದೆ ಎಂದು ಬರೆಯಲಾಗಿದೆ. ಅಷ್ಟೇ ಅಲ್ಲದೇ ಬೆಂಗಳೂರಿನ ದಂಪತಿ ಎಕ್ಸ್ ಬಾಕ್ಸ್ ಕಂಟ್ರೋಲರ್ ಎನ್ನುವ ಪ್ರಾಡಕ್ಟ್ ಅನ್ನು ಅಮೆಜಾನ್‌ನಲ್ಲಿ ಆರ್ಡರ್ ಮಾಡಿದ್ದರು. ಅಮೆಜಾನ್ ಸಂಸ್ಥೆ ಪಾರ್ಸಲ್ ಅನ್ನು ಡೆಲಿವರಿ ಮಾಡಿತ್ತು. ಆದರೆ ಪಾರ್ಸಲ್ ಓಪನ್ ಮಾಡಿದರೆ ಬಾಕ್ಸ್ ನಿಂದ ಜೀವಂತ ನಾಗರಹಾವು ಹೊರ ಬಂದಿದೆ.

Exit mobile version