Site icon Vistara News

Pakistan Begger: ಪಾಕಿಸ್ತಾನವೇ ಒಂದು ಭಿಕ್ಷುಕ ದೇಶ! ಆದರೆ ಅಲ್ಲಿಯ ಈ ಭಿಕ್ಷುಕ ಎಷ್ಟು ಶ್ರೀಮಂತ ನೋಡಿ!

Pakistan Begger

ಪಾಕಿಸ್ತಾನ : ಭಿಕ್ಷುಕರು ಎಂದಾಗ ಅವರ ಬಳಿ ಏನೂ ಇಲ್ಲ ಎಂಬ ಭಾವನೆ ಹಲವರಲ್ಲಿ ಮೂಡುವುದು ಸಹಜ. ಯಾಕೆಂದರೆ ಅವರು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಪ್ರತಿದಿನ ಮನೆ ಮನೆಯಲ್ಲಿ ಭಿಕ್ಷೆ ಬೇಡುತ್ತಾರೆ. ಅದರಿಂದ ಬಂದ ಹಣದಿಂದ ಅವರ ಆ ದಿನದ ಹೊಟ್ಟೆ ಕೂಡ ತುಂಬುವುದಿಲ್ಲ. ಹಾಗಾಗಿ ಭಿಕ್ಷುಕರಲ್ಲಿ ಶ್ರೀಮಂತ ವ್ಯಕ್ತಿ ಇದ್ದಾನೆ ಎಂದರೆ ಯಾರೂ ಕೂಡ ನಂಬುವುದಿಲ್ಲ. ಆದರೆ ಪಾಕಿಸ್ತಾನ (Pakistan Begger) ದಲ್ಲಿ ಒಬ್ಬ ಶ್ರೀಮಂತ ಭಿಕ್ಷುಕ ಸಿಕ್ಕಿದ್ದಾನೆ. ಅವನ ಆಸ್ತಿ, ಅವನು ಮಾಡಿರುವ ಇನ್ಸೂರೆನ್ಸ್‌ ಬಗ್ಗೆ ಕೇಳಿದರೆ ನೀವು ಶಾಕ್ ಆಗುತ್ತೀರಿ.

ಪಾಕಿಸ್ತಾನದ ಆರ್ಥಿಕತೆ ಬಹಳ ಹದಗೆಟ್ಟಿದೆ. ದಿನದಿಂದ ದಿನಕ್ಕೆ ಪಾಕಿಸ್ತಾನದಲ್ಲಿ ಹಣದುಬ್ಬರ ಸಮಸ್ಯೆ ಹೆಚ್ಚಾಗುತ್ತಿದೆ. ಪಾಕಿಸ್ತಾನ ಸರ್ಕಾರ ತಮ್ಮ ಅಗತ್ಯಗಳಿಗಾಗಿ ನೆರೆಹೊರೆಯ ದೇಶಗಳಿಂದ ಸಾಲ ಪಡೆಯುತ್ತಿದೆ. ಇಂತಹ ಬಡ ದೇಶದಲ್ಲಿ ಶ್ರೀಮಂತ ಭಿಕ್ಷುಕನಿದ್ದಾನೆ ಎಂದರೆ ಎಲ್ಲರಿಗೂ ಆಶ್ಚರ್ಯವಾಗುದಂತೂ ಸಹಜ. ಆತನ ಬಗ್ಗೆ ತಿಳಿಯಿರಿ.

ಪಾಕಿಸ್ತಾನದಲ್ಲಿ ಒಬ್ಬ ಶ್ರೀಮಂತ ಭಿಕ್ಷುಕನಿದ್ದು, ಆತನನ್ನು ʼಪಾಕಿಸ್ತಾನದ ಅಂಬಾನಿʼ ಎಂದು ಕರೆಯುತ್ತಾರಂತೆ. ಆತನ ಆಸ್ತಿ ಕೋಟಿಗಟ್ಟಲೆ ಇದೆಯಂತೆ. ಆತ ತನ್ನ ಮಕ್ಕಳನ್ನು ದೊಡ್ಡ ಶಾಲೆಗೆ ಸೇರಿಸುವುದರ ಜೊತೆಗೆ ಒಟ್ಟು ಒಂದು ಕೋಟಿ ರೂ. ವಿಮೆಯನ್ನು ಮಾಡಿಸಿದ್ದಾನಂತೆ!

ಪಾಕಿಸ್ತಾನದ ಎಆರ್ ವೈ ಸುದ್ದಿ ಕೇಂದ್ರದ ಪ್ರಕಾರ ಪಾಕಿಸ್ತಾನದ ಶ್ರೀಮಂತ ಭೀಕ್ಷುಕನ ಹೆಸರು ಶೌಕತ್ ಬಿಹಾರಿ. ಅವನು ಪಾಕಿಸ್ತಾನದ ಮುಲ್ತಾನ್ ನಗರದ ಪಂಜಾಬ್ ಪ್ರಾಂತ್ಯದಲ್ಲಿ ನೆಲೆಸಿದ್ದಾನೆ. ಫೆಡರಲ್ ಬೋರ್ಡ್ ಆಫ್ ರೆವಿನ್ಯೂ, ಪಾಕಿಸ್ತಾನದ ಉನ್ನತ ತೆರಿಗೆ ಸಂಗ್ರಹಣಾ ಸಂಸ್ಥೆ, ಅಕ್ಟೋಬರ್ 2021ರಲ್ಲಿ ಶೌಕತ್‌ನ ಬ್ಯಾಂಕ್ ಖಾತೆಯಲ್ಲಿ 1.7 ಮಿಲಿಯನ್ (17 ಲಕ್ಷ ರೂ.) ಇತ್ತು ಎಂದು ವರದಿ ಮಾಡಿದೆ. ಇತರ ಹಲವು ಕಡೆಯೂ ಆತ ಹಣ ಹೂಡಿಕೆ ಮಾಡಿದ್ದಾನಂತೆ. ಆತ ಪ್ರತಿದಿನ ಕನಿಷ್ಠ 1000 ರೂ. ಭಿಕ್ಷೆ ಬೇಡುತ್ತಾನೆ ಎಂಬುದಾಗಿ ತಿಳಿದುಬಂದಿದೆ. ಹಾಗೆಯೇ, ಆತ ತನ್ನ ಆರ್ಥಿಕ ಸ್ಥಿತಿಯ ಬಗ್ಗೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳನ್ನೂ ಹಾಕುತ್ತಾನಂತೆ.

ಇದನ್ನೂ ಓದಿ: 20 ತಿಂಗಳ ಮಗುವಿಗೆ ಸಿಗರೇಟ್ ಸೇದಿಸಲು, ಮದ್ಯ ಕುಡಿಸಲು ಯತ್ನಿಸಿದ ತಾಯಿ!

ಪಾಕಿಸ್ತಾನದಂತೆ ಭಾರತದಲ್ಲಿಯೂ ಕೂಡ ಶ್ರೀಮಂತ ಭಿಕ್ಷುಕರಿದ್ದಾರೆ. ಬಾಲ್ಯದಿಂದಲೂ ಮುಂಬೈನಲ್ಲಿ ಭಿಕ್ಷೆ ಬೇಡುತ್ತಿರುವ ಭರತ್ ಜೈನ್ ಎಂಬಾತ 40 ವರ್ಷಗಳಿಂದ ಭಿಕ್ಷೆ ಬೇಡಿ 7 ಕೋಟಿ ರೂ. ಮೌಲ್ಯ ಆಸ್ತಿ ಮಾಡಿದ್ದಾನಂತೆ!

Exit mobile version