ಅಜ್ಮೀರ್: ಸಾಮೂಹಿಕ ಅತ್ಯಾಚಾರಕ್ಕೆ (Physical Abuse) ಒಳಗಾಗಿದ್ದರಿಂದ ಶಾಲೆಯ ಬೋರ್ಡ್ ಪರೀಕ್ಷೆಗೆ (board exam) ಹಾಜರಾಗಲು ನನಗೆ ಅವಕಾಶ ನೀಡಲಿಲ್ಲ ಎಂದು ರಾಜಸ್ಥಾನದ (Rajasthan ) 12 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು (student) ಆರೋಪಿಸಿದ್ದಾಳೆ. ಕಳೆದ ವರ್ಷ ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಇದರಿಂದ ಸರಿ ಸುಮಾರು ನಾಲ್ಕು ತಿಂಗಳು ಕಾಲೇಜಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಶಾಲೆಯು ಬೋರ್ಡ್ ಪರೀಕ್ಷೆಗೆ ಹಾಜರಾಗಲು ಬಿಡಲಿಲ್ಲ. ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರವನ್ನು ನೀಡಲಿಲ್ಲ ಎಂದು ಅಜ್ಮೀರ್‌ನ ಖಾಸಗಿ ಶಾಲೆಯ (ajmer private school) ವಿದ್ಯಾರ್ಥಿನಿ ದೂರಿದ್ದಾಳೆ.
ನಾನು ಪರೀಕ್ಷೆಗೆ ಹಾಜರಾದರೆ ವಾತಾವರಣ ಹಾಳಾಗುತ್ತದೆ ಎಂದು ಶಾಲಾ ಅಧಿಕಾರಿಗಳು ಹೇಳಿರುವುದಾಗಿ ವಿದ್ಯಾರ್ಥಿನಿ ದೂರಿನಲ್ಲಿ ಆರೋಪಿಸಿದ್ದಾಳೆ. ಈ ಬಗ್ಗೆ ವಿದ್ಯಾರ್ಥಿನಿ ಬೇರೆ ಶಾಲೆಯ ಶಿಕ್ಷಕರನ್ನು ಸಂಪರ್ಕಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಅವರು ಮಕ್ಕಳ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಲು ಸಲಹೆ ನೀಡಿದರು.
ಇದನ್ನೂ ಓದಿ: Drowned in water : ನೀರಿನಲ್ಲಿ ಕೊಚ್ಚಿ ಹೋದ ತಾಯಿ; ರಕ್ಷಿಸಲು ಹೋದ ಮಕ್ಕಳಿಬ್ಬರು ನೀರುಪಾಲು
ಪ್ರಕರಣ ದಾಖಲು
ಈ ಕುರಿತು ಅಜ್ಮೀರ್‌ನ ಮಕ್ಕಳ ಕಲ್ಯಾಣ ಆಯೋಗ (CWC) ಪ್ರಕರಣ ದಾಖಲಿಸಿದೆ. ತನಿಖೆಯ ಬಳಿಕ ಕ್ರಮ ಕೈಗೊಳ್ಳ ಲಾಗುವುದು. ಘಟನೆಯ ಬಗ್ಗೆ ವಿದ್ಯಾರ್ಥಿಯೊಂದಿಗೆ ಮಾತನಾಡಿದ್ದೇನೆ ಎಂದು ಸಿಡಬ್ಲ್ಯೂಸಿ ಅಧ್ಯಕ್ಷೆ ಅಂಜಲಿ ಶರ್ಮಾ ಹೇಳಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿದ್ಯಾರ್ಥಿನಿಯನ್ನು ಆಕೆಯ ಚಿಕ್ಕಪ್ಪ ಮತ್ತು ಇತರ ಇಬ್ಬರು ಪುರುಷರು ಅತ್ಯಾಚಾರ ಮಾಡಿದ್ದರು. ಅವಳು ಶಾಲೆಗೆ ಬರುವುದರಿಂದ ಶಾಲೆಯ ವಾತಾವರಣ ಹಾಳಾಗುತ್ತದೆ ಎಂದು ಶಾಲೆಯವರು ಮನೆಯಿಂದಲೇ ಓದುವಂತೆ ಸೂಚಿಸಿದ್ದಾರೆ. ಇದಕ್ಕೆ ಅವಳು ಒಪ್ಪಿಕೊಂಡಳು ಮತ್ತು ಮನೆಯಲ್ಲಿ ತನ್ನ ಬೋರ್ಡ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಳು ಎಂದು ಅಂಜಲಿ ಶರ್ಮಾ ತಿಳಿಸಿದ್ದಾರೆ.
ಶಾಲೆಗೆ ಪ್ರವೇಶ ನಿರಾಕರಣೆ
ಬೋರ್ಡ್ ಪರೀಕ್ಷೆ ಬರೆಯಲು ಆಕೆ ತನ್ನ ಪ್ರವೇಶ ಪತ್ರವನ್ನು ಪಡೆಯಲು ಹೋದಾಗ ಶಾಲಾ ಅಧಿಕಾರಿಗಳು ನೀನು ಇನ್ನು ಮುಂದೆ ಶಾಲೆಯ ವಿದ್ಯಾರ್ಥಿಯಲ್ಲ ಎಂದು ಹೇಳಿದರು. ಆಕೆಯ ಮೇಲೆ ಅತ್ಯಾಚಾರವಾದ ಬಳಿಕ ಇತರ ವಿದ್ಯಾರ್ಥಿಗಳ ಪೋಷಕರು ಆಕೆ ಶಾಲೆಗೆ ಬರುವುದನ್ನು ವಿರೋಧಿಸಿದ್ದರಿಂದ ಶಾಲೆಯ ಅಧಿಕಾರಿಗಳು ಆಕೆ ಶಾಲೆಗೆ ಪ್ರವೇಶಿಸದಂತೆ ನಿರ್ಬಂಧಿಸಿರುವುದಾಗಿ ಅವಳಿಗೆ ತಿಳಿಯಿತು.
ಶೈಕ್ಷಣಿಕವಾಗಿ ಉತ್ತಮ ಅಂಕ ಗಳಿಸುತ್ತಿದ್ದ ವಿದ್ಯಾರ್ಥಿನಿ ಈ ಘಟನೆಗಳಿಂದ ಖಿನ್ನತೆಗೆ ಒಳಗಾಗಿದ್ದಾಳೆ. ಅವಳು 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ಶೇ. 79 ಅಂಕಗಳಿಸಿದ್ದಳು. ಅವಳು 12 ನೇ ಬೋರ್ಡ್ ಪರೀಕ್ಷೆ ಉತ್ತಮವಾಗಿ ಬರೆಯುತ್ತಿದ್ದಳು. ಆದರೆ ಶಾಲೆಯ ನಿರ್ಲಕ್ಷ್ಯದಿಂದಾಗಿ ಅವಳು ಒಂದು ವರ್ಷ ಕಳೆದುಕೊಳ್ಳುವಂತಾಗಿದೆ ಎಂದು ಅಂಜಲಿ ಶರ್ಮಾ ಹೇಳಿದ್ದಾರೆ.
ಮಗನಿಂದ ರೇಪ್, ತಾಯಿಯಿಂದ ದೌರ್ಜನ್ಯ
ನಾಗ್ಪುರ್: ಏನೂ ತಪ್ಪೇ ಮಾಡದೇ ಇದ್ದರೂ ಅತ್ಯಾಚಾರಕ್ಕೆ ಒಳಗಾದ ಮೇಲೆ ನಿರಂತರ ಶೋಷಣೆಯನ್ನು ಅನುಭವಿಸಬೇಕಾದ ಪ್ರಸಂಗ ಸಾಕಷ್ಟು ನಡೆಯುತ್ತದೆ. ಇದರಲ್ಲಿ ಕೆಲವು ಬೆಳಕಿಗೆ ಬಂದರೆ ಇನ್ನು ಕೆಲವು ಉಸಿರುಗಟ್ಟಿಸಿ ಸಾಯುವಂತೆ ಮಾಡುತ್ತದೆ.
ಯುವಕನೊಬ್ಬನಿಂದ ಅತ್ಯಾಚಾರಕ್ಕೆ ಒಳಗಾದ ಯುವತಿಯನ್ನು ಆ ಯುವಕನ ತಾಯಿಯು ಮತ್ತೊಬ್ಬರ ಜತೆಗೆ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಇವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಅಭಿಷೇಕ್ ಕುರ್ಲಿ ಎಂಬಾತ ಅತ್ಯಾಚಾರ ನಡೆಸಿದ್ದಾನೆ. ಬಳಿಕ ಅಭಿಷೇಕ್ ಕುರ್ಲಿಯ ತಾಯಿ ಸಂತ್ರಸ್ತ ಯುವತಿಗೆ ಬೇರೆಯವರ ಜತೆ ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದು, ಇಲ್ಲವಾದರೆ ಸಂತ್ರಸ್ತೆಯ ಮೊಬೈಲ್ ನಲ್ಲಿರುವ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಳು ಎಂದು ಆರೋಪಿಸಲಾಗಿದೆ. ಈ ಕುರಿತು ನಾಗ್ಪುರದ ಜರಿಪಟ್ಕಾ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಿಸಲಾಗಿದೆ.