Site icon Vistara News

Police Arrest: ಅಕ್ರಮ ಮದ್ಯ ಸಾಗಿಸಲು ಸಹಾಯ; ಸಿಕ್ಕಿ ಬಿದ್ದ ಸಿಐಡಿ ಲೇಡಿ ಆಫೀಸರ್!

Police Arrest

ಅಹಮದಾಬಾದ್: ಪೊಲೀಸ್ ಅಧಿಕಾರಿಗಳೆಂದರೆ ಕಳ್ಳತನ, ಸುಲಿಗೆ, ದರೋಡೆ ಮಾಡುವಂತಹ ದುಷ್ಟರನ್ನು ಹಿಡಿದು ಜನರಿಗೆ ನ್ಯಾಯ ಕೊಡಿಸುವವರು ಎಂಬ ಭಾವನೆ ಜನರಲ್ಲಿದೆ. ಆದರೆ ಗುಜರಾತ್‌ನ ಕಚ್‌ನಲ್ಲಿ ಇತ್ತೀಚೆಗೆ ನಡೆದ ಘಟನೆಯೊಂದು ಪೊಲೀಸ್ ವೃತ್ತಿಗೆ ಅಪಖ್ಯಾತಿ ತರುವಂತದಾಗಿದೆ. ಯಾಕೆಂದರೆ ಮಹಿಳಾ ಅಪರಾಧ ತನಿಖಾ ಇಲಾಖೆ (ಸಿಐಡಿ) ಪೊಲೀಸ್ ಅಧಿಕಾರಿಯೊಬ್ಬರು ಮದ್ಯವನ್ನು ಸಾಗಿಸುವ ಪ್ರಯತ್ನದಲ್ಲಿ ಕಳ್ಳಸಾಗಣೆದಾರನಿಗೆ ಸಹಾಯ ಮಾಡಿ ಸಿಕ್ಕಿಬಿದ್ದಿದ್ದಾರೆ. ಇವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ (Police arrest).

ಭಚೌ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಭಾನುವಾರ ರಾತ್ರಿ, ಮದ್ಯ ಕಳ್ಳಸಾಗಣೆಯನ್ನು ತಡೆಯಲು ಕಚ್(kutch) ನ ಭಚೌ ಪೊಲೀಸ್ ಠಾಣೆ ಪ್ರದೇಶದ ಚೋಪ್ಡ್ವಾ(chopdwa) ಸೇತುವೆಯ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ, ಬಿಳಿ ಥಾರ್ ವಾಹನವೊಂದು ಪೊಲೀಸ್ ತಪಾಸಣೆಯನ್ನು ಕಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿತು. ಮತ್ತೊಂದು ಪೊಲೀಸ್ ಬೆಂಗಾವಲು ವಾಹನ ಅವರನ್ನು ಹಿಂಬಾಲಿಸಿ ತಡೆದರು. ನಂತರ ಪೊಲೀಸರು ವಾಹನವನ್ನು ಶೋಧಿಸಿದಾಗ ಅದರಲ್ಲಿ 16 ಬಾಟಲಿ ಮದ್ಯ ಮತ್ತು ಎರಡು ಕ್ಯಾನ್ ಬಿಯರ್ ಪತ್ತೆಯಾಗಿದೆ. ನಂತರ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು ಕಚ್ ಪೂರ್ವ ಸಿಐಡಿಯ ಅಧಿಕಾರಿ ನೀತಾ ಚೌಧರಿ ಮತ್ತು ಕಳ್ಳಸಾಗಣೆದಾರನನ್ನು ಯುವರಾಜ್ ಸಿಂಗ್ ಎಂದು ಪತ್ತೆ ಮಾಡಲಾಗಿದೆ. ಇವರಿಬ್ಬರ ವಿರುದ್ಧ ಪೊಲೀಸರು ಐಪಿಸಿಯ ಸೆಕ್ಷನ್ 307 ಮತ್ತು 427 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ ಎನ್ನಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಯುವರಾಜ್ ಸಿಂಗ್ ಈ ಹಿಂದೆ 16 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕೊಲೆ ಯತ್ನ ಸೇರಿದಂತೆ 6 ಪ್ರಕರಣಗಳಲ್ಲಿ ಬೇಕಾಗಿದ್ದಾನೆ ಎನ್ನಲಾಗಿದೆ. ಮತ್ತು ಪೊಲೀಸ್ ಅಧಿಕಾರಿ ನೀತಾ ಚೌಧರಿ ಅವರು ಪೊಲೀಸ್ ಸಮವಸ್ತ್ರದಲ್ಲಿ ನೃತ್ಯ ವೀಡಿಯೊಗಳನ್ನು ಮಾಡುವುದು ಸೇರಿದಂತೆ ತನ್ನ ಅಸಾಂಪ್ರದಾಯಿಕ ನಡವಳಿಕೆಗಾಗಿ ಅವರು ಈ ಹಿಂದೆ ವಿವಾದದಲ್ಲಿ ಸಿಲುಕಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಭಾರತದ ಶ್ರೀಮಂತ ಕುಟುಂಬಗಳ ಅತ್ಯಂತ ಅದ್ಧೂರಿ ಮದುವೆ ಯಾರದು? ಪಟ್ಟಿ ಇಲ್ಲಿದೆ

ಈ ಹಿಂದೆ, ಗುಜರಾತ್ ನಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿದ್ದರೂ ಕೆಲವು ಪೊಲೀಸ್ ಅಧಿಕಾರಿಗಳು ಕಳ್ಳಸಾಗಾಣಿಕೆದಾರರಿಗೆ ಸಹಾಯ ಮಾಡುತ್ತಿದ್ದರು ಎಂಬುದಾಗಿ ಮಾಹಿತಿ ತಿಳಿದುಬಂದಿತ್ತು. ಅಲ್ಲದೇ ಗುಜರಾತ್‌ನ ಭೋಪಾಲ್ ಮತ್ತು ಅಹಮದಾಬಾದ್‌ನಲ್ಲಿ ನಡೆದ ಅಪಘಾತಕ್ಕೀಡಾದ ವಾಹನದಲ್ಲಿ ಮದ್ಯ ನಿಷೇಧದ ಹೊರತಾಗಿಯೂ ಹಲವಾರು ಮದ್ಯದ ಬಾಟಲಿಗಳು ಪತ್ತೆಯಾಗಿವೆ ಎಂಬುದಾಗಿ ತಿಳಿದುಬಂದಿದೆ.

Exit mobile version