Site icon Vistara News

Robbery Case: ಹಾಡಹಗಲೇ ಬಂದೂಕು ತೋರಿಸಿ ಆಭರಣ ಮಳಿಗೆ ದೋಚಿದ ದರೋಡೆಕೋರರು; ವಿಡಿಯೊ ನೋಡಿ

Robbery Case


ಪುಣೆ: ಇತ್ತೀಚಿನ ದಿನಗಳಲ್ಲಿ ಹಾಡಹಗಲಿನಲ್ಲಿ ಕಳ್ಳರು ಕಳ್ಳತನ ಶುರುಮಾಡಿದ್ದಾರೆ. ಹಗಲಿನಲ್ಲಿ ಜನಸಂದಣಿ ಇರುವಂತಹ ಸ್ಥಳಗಳಲ್ಲೇ ದರೋಡೆಕೋರರು ಜನರ ಮೇಲೆ, ಅಂಗಡಿಗಳ ಮೇಲೆ ದಾಳಿ ಮಾಡಿ ಲೂಟಿ ಮಾಡುತ್ತಿದ್ದಾರೆ. ಅದೇರೀತಿ ಇತ್ತೀಚೆಗೆ ಹಾಡಹಗಲೇ ಮೂವರು ವ್ಯಕ್ತಿಗಳು ಬಂದೂಕು ತೋರಿಸಿ ಆಭರಣ ಅಂಗಡಿಯನ್ನು ಲೂಟಿ ಮಾಡಿದ ಘಟನೆ ಪುಣೆಯಲ್ಲಿ ನಡೆದಿದೆ. ಇಡೀ ಘಟನೆ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Robbery Case) ಆಗಿದೆ.

ದರೋಡೆಕೋರರು ಅಂಗಡಿಗೆ ನುಗ್ಗಿ ಅಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳನ್ನು ದೋಚಿದ್ದಾರೆ. ವಿಡಿಯೊದಲ್ಲಿ, ದರೋಡೆಕೋರರಲ್ಲಿ ಒಬ್ಬರು ಅಂಗಡಿಯೊಳಗಿನ ವ್ಯಕ್ತಿಯ ಮೇಲೆ ಬಂದೂಕನ್ನು ಗುರಿಯಾಗಿಸಿಕೊಂಡರೆ, ಇನ್ನೊಬ್ಬ ವ್ಯಕ್ತಿಯ ಕಾಲರ್ ಹಿಡಿದು ಕೆಳಕ್ಕೆ ತಳ್ಳುತ್ತಿದ್ದಾನೆ. ಮೂರನೆಯವನು ಅಂಗಡಿಯೊಳಗೆ ಇದ್ದ ವಸ್ತುಗಳನ್ನು ತೆಗೆದುಕೊಂಡಿದ್ದಾನೆ ಮತ್ತು ನಂತರ, ಮೂವರು ಅಂಗಡಿಯಿಂದ ಹೊರಗೆ ಹೋಗಿದ್ದಾರೆ.

ಪುಣೆಯ ಲಕ್ಷ್ಮಿ ಚೌಕ್ ಹಿಂಜೇವಾಡಿಯಲ್ಲಿ ಬೆಳಿಗ್ಗೆ 10:30 ಕ್ಕೆ ಈ ಘಟನೆ ನಡೆದಿದ್ದು, ಕೆಲವೇ ಸೆಕೆಂಡುಗಳಲ್ಲಿ ದರೋಡೆಕೋರರು ಅಂಗಡಿಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಜಾಗ ಖಾಲಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಸಿಸಿಟಿವಿಯಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿದ್ದು, ಪೊಲೀಸರು ಅದನ್ನು ಪರೀಶಿಲಿಸಿ ಕಳ್ಳರನ್ನು ಹುಡುಕುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ನಿನಗೆಷ್ಟು ಬಾಯ್‌ಫ್ರೆಂಡ್‌ ಎನ್ನುತ್ತ ಗೆಳತಿಗೆ ಭೀಕರವಾಗಿ ಇರಿದ ಯುವ ಕಾಂಗ್ರೆಸ್ ಮುಖಂಡ!

ಕಳೆದ ತಿಂಗಳು, ಇದೇ ರೀತಿಯ ಕಳ್ಳತನದ ಪ್ರಕರಣ ನಡೆದಿದ್ದು, ಖಾರ್ಘರ್ ಪ್ರದೇಶದಲ್ಲಿ ರಾತ್ರಿ 10:00 ರ ಸುಮಾರಿಗೆ ಮೂವರು ದರೋಡೆಕೋರರು ಹೆಲ್ಮೆಟ್ ಧರಿಸಿ ಆಭರಣ ಅಂಗಡಿಗೆ ನುಗ್ಗಿ ಬಂದೂಕು ತೋರಿಸಿ ಆಭರಣ ಅಂಗಡಿಯನ್ನು ಲೂಟಿ ಮಾಡಿದ್ದರು. ಕಳ್ಳತನದ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಹಿಡಿಯಾಗಿದೆ, ಮುಖವಾಡ ಧರಿಸಿದ ಮೂವರು ದರೋಡೆಕೋರರನ್ನು ಪತ್ತೆಹಚ್ಚಲು ಪೊಲೀಸರು ತಂಡಗಳನ್ನು ರಚಿಸಿದ್ದಾರೆ. ದರೋಡೆಯ ಸಮಯದಲ್ಲಿ, ದರೋಡೆಕೋರರು ಅಂಗಡಿಯೊಳಗೆ ಹಲವಾರು ಬಾರಿ ಗುಂಡುಗಳನ್ನು ಹಾರಿಸಿದರು. ಅವರು ತಪ್ಪಿಸಿಕೊಳ್ಳುವಾಗ, ಅವರು ಹೆಚ್ಚುವರಿ ಸುತ್ತು ಗುಂಡು ಹಾರಿಸಿದ್ದಾರೆ.

Exit mobile version