Site icon Vistara News

Robbery Video: ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ಕಳ್ಳರು ಬ್ಯಾಗ್‌ ಕಸಿದು ಓಡುತ್ತಾರೆ! ಪೋಲಿಸ್ರು ಏನ್‌ ಮಾಡ್ತಿದ್ದಾರೋ!

Robbery Video

ಬೆಂಗಳೂರು: ಕಳ್ಳತನದ ಪ್ರಕರಣ ಇತ್ತೀಚಿನ ದಿನಗಳಲ್ಲಿ ಎಲ್ಲಾ ಕಡೆ ಕೇಳಿ ಬರುತ್ತಿದೆ. ಜನರಿಗೆ ದುಡಿಮೆ ಬಗ್ಗೆ ಆಸಕ್ತಿ ಕಡಿಮೆಯಾಗಿ ಸುಲಭವಾಗಿ ಹಣ ಸಂಪಾದಿಸಲು ಕಳ್ಳತನದ ಮಾರ್ಗವನ್ನು ಕಂಡುಕೊಳ್ಲುತ್ತಿದ್ದಾರೆ. ಇದರಿಂದ ಎಷ್ಟೋ ಜನರ ಜೀವವೂ ಹೋಗಿದೆ. ಹಾಗಾಗಿ (Robbery Video) ಇಂತಹ ಕಳ್ಳತನ(Robbery Case )ವನ್ನು ಮಟ್ಟ ಹಾಕಲೇಬೇಕು. ಇದೀಗ ಬೆಂಗಳೂರಿನಲ್ಲಿ ಹಾಡಹಗಲಿನಲ್ಲೇ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಧ್ಯವಯಸ್ಕರೊಬ್ಬರ ಬ್ಯಾಗನ್ನು ಕಿತ್ತುಕೊಂಡು ಓಡಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಡೀ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಬೆಂಗಳೂರಿನ ಸಿಲ್ಕ್ ಬೋರ್ಡ್‍ನಲ್ಲಿ ಮಧ್ಯವಯಸ್ಕ ವ್ಯಕ್ತಿಯೊಬ್ಬರು ಚೀಲವನ್ನು ಹಿಡಿದು ನಿಂತಿದ್ದು, ಹಿಂದಿನಿಂದ ಬಂದ ಕಳ್ಳ ಅದನ್ನು ಕಸಿದುಕೊಂಡು ಓಡಿದ್ದಾನೆ. ಹಾಡಹಗಲಿನಲ್ಲಿ ಜನಸಂದಣಿ ಇರುವ ಕಡೆಯಲ್ಲಿ ಈತ ಕಳ್ಳತನ ಮಾಡಿದ್ದನ್ನು ಕಂಡು ಜನರು ಭಯಗೊಂಡಿದ್ದಾರೆ. ವೀಡಿಯೊದಲ್ಲಿ, ಯುವಕನೊಬ್ಬ ಜನಸಂದಣಿ ಇರುವ ಬಸ್ ನಿಲ್ದಾಣದಲ್ಲಿ ಮಧ್ಯವಯಸ್ಕ ವ್ಯಕ್ತಿಯನ್ನು ಗಮನಿಸುತ್ತಾ ಅವರ ಹಿಂದಿನಿಂದ ಬಂದು ಚೀಲವನ್ನು ಹಿಡಿದು ಕಸಿದುಕೊಂಡು ಪೇರಿ ಕಿತ್ತಿದ್ದಾನೆ. ಕಳ್ಳನು ಕೈಯಲ್ಲಿ ಚೀಲದೊಂದಿಗೆ ಓಡಿಹೋಗುತ್ತಿರುವುದು ಕಂಡು ಮಧ್ಯವಯಸ್ಕ ವ್ಯಕ್ತಿ ಸಹಾಯಕ್ಕಾಗಿ ಕೂಗಿದ್ದಾರೆ.

ಸಿಟಿಜನ್ಸ್ ಮೂವ್ಮೆಂಟ್ ಈಸ್ಟ್ ಬೆಂಗಳೂರು ಎಂಬ ಕಮ್ಯುನಿಟಿ ಎಕ್ಸ್ ಹ್ಯಾಂಡಲ್ ಈ ವಿಡಿಯೋವನ್ನು ಹಂಚಿಕೊಂಡಿದ್ದು, “ಬೆಂಗಳೂರಿನ ಸಿಲ್ಕ್ ಬೋರ್ಡ್ ಜಂಕ್ಷನ್‍ನಲ್ಲಿ ಹಾಡಹಗಲೇ ಬ್ಯಾಗ್ ಸ್ನ್ಯಾಚಿಂಗ್ ಮಾಡಲಾಗುತ್ತಿದೆ. ಈ ಜನರಿಗೆ ಧೈರ್ಯ ಎಲ್ಲಿಂದ ಬರುತ್ತಿದೆ. ದಯವಿಟ್ಟು ನಿಮ್ಮ ಜಾಗರೂಕತೆಯನ್ನು ಕಳೆದುಕೊಳ್ಳಬೇಡಿ!” ಎಂದು ಬರೆದಿದ್ದಾರೆ.

ಈ ವಿಡಿಯೊ ನೋಡಿ ಹಲವರು ಕಾಮೆಂಟ್ ಮಾಡಿದ್ದಾರೆ. ಈ ಘಟನೆ ಮತ್ತೊಮ್ಮೆ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಿದೆ. ಹೊಸೂರು ರಸ್ತೆಯಲ್ಲಿ ಹಾಡಹಗಲೇ ಸರಗಳ್ಳತನ ಸಾಮಾನ್ಯವಾಗಿದೆ. ಬೆಂಗಳೂರು ಸಿಟಿ ಪೊಲೀಸರು ದಯವಿಟ್ಟು ಪ್ರಕರಣದ ಪರಿಸ್ಥಿತಿಯನ್ನು ಪರಿಶೀಲಿಸಿ. ಪ್ರತಿದಿನ ಕಾರುಗಳ ಮೂಲಕ ಬ್ಯಾಗ ಕಳ್ಳತನ ಮಾಡಲಾಗುತ್ತಿದೆ. ಇದರ ಹಿಂದೆ ಮಾಫಿಯಾ ಇದೆ. ನಾಗರಿಕರೇ, ಬೆಲೆಬಾಳುವ ವಸ್ತುಗಳನ್ನು ಎಂದಿಗೂ ಎಲ್ಲರಿಗೂ ಕಾಣುವಂತೆ ತೋರಿಸಬೇಡಿ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.

ಇದನ್ನೂ ಓದಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಬಾಲಕಿಗೆ ಅಶ್ಲೀಲ ವಿಡಿಯೊ ತೋರಿಸಿ ಲೈಂಗಿಕ ಕಿರುಕುಳ

ಇನ್ನೊಬ್ಬ ಬಳಕೆದಾರರು “ಈ ಕೃತ್ಯದಲ್ಲಿ ಕೆಲವು ಪೊಲೀಸರು, ಬಿಎಂಟಿಸಿ ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆ. ಹಾಗಾಗಿ ದರೋಡೆಕೋರರು ಸರಳವಾಗಿ ಈ ಕೆಲಸ ಮಾಡುತ್ತಿದ್ದಾರೆ. ಇಲ್ಲವಾದರೆ ಇಂತಹ ಘಟನೆ ಪ್ರತಿದಿನ ನಡೆಯುವುದಿಲ್ಲ” ಎಂಬುದಾಗಿ ತಿಳಿಸಿದ್ದಾರೆ. ಇಂತಹ ಪ್ರಕರಣದಿಂದ ಬೆಂಗಳೂರು ಜನರ ಜೀವನ ನರಕವಾಗಿದೆ ಎಂದು ನೆಟ್ಟಿಜನ್ ಬೇಸರ ವ್ಯಕ್ತಪಡಿಸಿದ್ದಾರೆ.

Exit mobile version