ಮುಂಬೈ: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ (Saniya Mirza) ಅವರ ಬಗ್ಗೆ ಎಲ್ಲರಿಗೂ ತಿಳಿದಿದೆ. ಆಕೆ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ಮದುವೆಯಾಗಿ ಇದೀಗ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಹೆಚ್ಚು ಸುದ್ದಿಗಳು ಕೇಳಿಬರುತ್ತಿದೆ. ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಫ್ಯಾಷನ್ ಮತ್ತು ಕಲರ್‌ಫುಲ್, ಬಿಂದಾಸ್ ನಡವಳಿಕೆಗೂ ಫೇಮಸ್. ಸಾನಿಯಾ ಮಿರ್ಜಾ ನಿಮಗೆ ಗೊತ್ತು. ಅವರಿಗೊಬ್ಬಳು ತಂಗಿ ಇದ್ದಾಳೆ. ಅವರ ಹೆಸರು ಅನಮ್ ಮಿರ್ಜಾ. ಇವರದು ಕೂಡ ಬಿಂದಾಸ್ ಲೈಫ್. ಇವರ ಬಗ್ಗೆ ನಿಮಗೆ ಗೊತ್ತೆ?
ಅನಮ್ ಮಿರ್ಜಾ ಅವರು ಹೈದರಾಬಾದ್‌ನ ನಾಸರ್ ಶಾಲೆಯಲ್ಲಿ ಮಾಸ್ ಕಮ್ಯೂನಿಕೇಷನ್ ಮತ್ತು ಮೀಡಿಯಾ ಅಧ್ಯಯನದಲ್ಲಿ ಪದವಿ ಪಡೆದಿದ್ದರು. ಪದವಿಯ ನಂತರ ಅವರು ವಿವಿಧ ನ್ಯಾಷನಲ್ ಚಾನೆಲ್‌ಗಳಲ್ಲಿ ಇಂಟರ್ನ್ ಆಗಿ ತಮ್ಮ ಪತ್ರಿಕೋದ್ಯಮ ವೃತ್ತಿಯನ್ನು ಪ್ರಾರಂಭಿಸಿದರು. ನಂತರ ಅವರು ಪತ್ರಿಕೋದ್ಯಮ ವಲಯದಲ್ಲಿ ಅನುಭವವನ್ನು ಪಡೆದು 2013ರಲ್ಲಿ ಅವರು ಮಹತ್ವಾಕಾಂಕ್ಷಿ ಪತ್ರಕರ್ತರಿಗೆ ಮೀಸಲಾಗಿರುವ ವೆಬ್ ಸೈಟ್ ‘ಇಂಕ್ ಟು ಚೇಂಜ್’ ಅನ್ನು ಪ್ರಾರಂಭಿಸಿದರು. ನಂತರ ಅವರು ‘ದಿ ಲೇಬಲ್ ಬಜಾರ್’ನೊಂದಿಗೆ ಫ್ಯಾಶನ್ ಉದ್ಯಮದಲ್ಲೂ ತಮ್ಮ ಛಾಪು ಮೂಡಿಸಿದರು.
2022ರಲ್ಲಿ ಅನಮ್ ದಾವತ್-ಎ-ರಂಜಾನ್ ಅನ್ನು ಸಹ ಸ್ಥಾಪಿಸಿದರು. ಇದು ಈಗ ಭಾರತದ ಅತಿದೊಡ್ಡ ರಂಜಾನ್ ಎಕ್ಸ್ ಪೋ ಆಗಿ ಬೆಳೆದಿದೆ. ಇದು ವರ್ಷದಲ್ಲಿ ಸರಾಸರಿ 1,50,000 ಸಂದರ್ಶಕರನ್ನು ಸೆಳೆಯುತ್ತದೆ. ಕೇವಲ ಎರಡು ವರ್ಷಗಳಲ್ಲಿ ಈ ವ್ಯವಹಾರ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ.
ಇದನ್ನೂ ಓದಿ: ಚಿಕನ್ ಲೆಗ್‌ಪೀಸ್‌ಗಾಗಿ ರಣರಂಗವಾಯ್ತು ಮದುವೆ ಮನೆ!
ಅನಮ್ 2016ರಲ್ಲಿ ಅಕ್ಬರ್ ರಶೀದ್ ಅವರನ್ನು ವಿವಾಹವಾದರು. ಆದರೆ ಈ ದಂಪತಿಗಳಲ್ಲಿ ಹೊಂದಾಣಿಕೆಯಾಗದ ಕಾರಣ 2018ರಲ್ಲಿ ವಿಚ್ಛೇದನ ಪಡೆದು ದೂರವಾದರು. ನಂತರ ಅವರು 2019ರಲ್ಲಿ ಖ್ಯಾತ ಮಾಜಿ ಕ್ರಿಕೆಟಿಗ ಮತ್ತು ರಾಜಕಾರಣಿ ಮೊಹಮ್ಮದ್ ಅಜರುದ್ದೀನ್ ಅವರ ಮಗ ಕ್ರಿಕೆಟಿಗ ಮೊಹಮ್ಮದ್ ಅಸಾದುದ್ದೀನ್ ಅವರೊಂದಿಗೆ ಮರುಮದುವೆಯಾದರು. ಆ ಮೂಲಕ ಅವರು ಅಜರುದ್ದೀನ್ ಕುಟುಂಬಕ್ಕೆ ಸೇರ್ಪಡೆಗೊಂಡರು. ಇವರಿಗೆ 2022ರಲ್ಲಿ ಹೆಣ್ಣು ಮಗು ಜನಿಸಿದ್ದು, ಅವಳಿಗೆ ದುವಾ ಎಂದು ಹೆಸರಿಡಲಾಗಿದೆ.
ಯಶಸ್ವಿ ಮಹಿಳಾ ಉದ್ಯಮಿಯಾಗಿ ಬೆಳೆದಿರುವ ಅನಮ್ ಮಿರ್ಜಾ ಅವರ ನಿವ್ವಳ ಮೌಲ್ಯ 40 ಮಿಲಿಯನ್ ಡಾಲರ್ ಅಂದರೆ 331 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದರಿಂದ ಉದ್ಯಮದಲ್ಲಿ ಅವರ ಯಶಸ್ಸನ್ನು ತಿಳಿಸುತ್ತದೆ. ಹಾಗೇ ಅವರ ಪತಿ ಅಸಾದುದ್ದೀನ್ ಅವರು ತಮ್ಮ ತಂದೆಯನ್ನು ಅನುಸರಿಸಿದ್ದು, ಕ್ರಿಕೆಟ್ ಕ್ಷೇತ್ರದಲ್ಲಿ ಮಿಂಚಿದ್ದರು. ಅದರ ಜೊತೆಗೆ ಅವರು ಕಾನೂನು ವೃತ್ತಿಜೀವನವನ್ನು ಮುಂದುವರಿಸಿದ್ದಾರೆ ಎನ್ನಲಾಗಿದೆ.
ಶೋಯೆಬ್ ಮಲಿಕ್ ಅವರ ಮೂರನೇ ಮದುವೆಯ ನಂತರ ಅನಮ್ ಮಿರ್ಜಾ ಅವರು ತಮ್ಮ ಸಹೋದರಿ ಸಾನಿಯಾ ಅವರ ಪರವಾಗಿ ಇನ್ ಸ್ಟಾಗ್ರಾಂನಲ್ಲಿ ಟಿಪ್ಪಣಿಯೊಂದನ್ನು ಬರೆದಿದ್ದರು. ಸಾನಿಯಾ ಯಾವಾಗಲೂ ತಮ್ಮ ವೈಯಕ್ತಿಕ ಜೀವನವನ್ನು ಮಾಧ್ಯಮಗಳ ದೃಷ್ಟಿಯಿಂದ ದೂರವಿಡುತ್ತಿದ್ದರು ಎಂಬುದಾಗಿ ಅವರು ತಿಳಿಸಿದ್ದರು.