Site icon Vistara News

Ambani School Fees: ಅಂಬಾನಿ ಸ್ಕೂಲ್‌ನಲ್ಲಿ ಎಲ್‌ಕೆಜಿ ವಾರ್ಷಿಕ ಶುಲ್ಕವೇ 5 ಲಕ್ಷ ದಾಟುತ್ತದೆ!

Ambani School Fees


ಮುಂಬೈ: ಭಾರತದ ಶ್ರೀಮಂತ ಉದ್ಯಮಿ ಆಗಿರುವ ಮುಖೇಶ್‌ ಅಂಬಾನಿ ಕುಟುಂಬವು ಧೀರೂಭಾಯಿ ಅಂಬಾನಿಯವರ ಹೆಸರಿನಲ್ಲಿ ಇಂಟರ್ನ್ಯಾಷನಲ್ ಸ್ಕೂಲ್ ಅನ್ನು ಸ್ಥಾಪಿಸಿದ್ದು, ಇದು ದೇಶದ ಅತ್ಯಂತ ದುಬಾರಿ ಶಾಲೆಯಾಗಿ ಹೊರ ಹೊಮ್ಮಿದೆ! ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್‍ನಲ್ಲಿ ಪ್ಲೇಹೋಂನಿಂದ 12ನೇ ತರಗತಿಯವರೆಗಿನ ಮಕ್ಕಳಿಗೆ ಶಿಕ್ಷಣವನ್ನು ನೀಡಲಾಗುತ್ತದೆ. ಇಂತಹ (Ambani School Fees) ದುಬಾರಿ ಶಾಲೆಯಲ್ಲಿ ಶುಲ್ಕ ಎಷ್ಟು ಎಂದು ಕೇಳಿದರೆ ನೀವೇ ಶಾಕ್ ಆಗುತ್ತೀರಿ. ಇಲ್ಲಿ ಅನೇಕ ಬಾಲಿವುಡ್ ಸಿನಿಮಾ ತಾರೆಯರ ಮಕ್ಕಳು ಸೇರಿದಂತೆ ಶ್ರೀಮಂತರ ಮಕ್ಕಳು ಅಧ್ಯಯನ ಮಾಡುತ್ತಿದ್ದಾರೆ.

ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್‍ನಲ್ಲಿ 2024ರ ಶೈಕ್ಷಣಿಕ ವರ್ಷದಲ್ಲಿ ಎಲ್‌ ಕೆಜಿಯಿಂದ 12ನೇ ತರಗತಿಯವರೆಗೆ ಶುಲ್ಕದ ವಿವರ ಇಲ್ಲಿದೆ. ಪ್ಲೇಹೋಂನಿಂದ ಎಲ್‌ಕೆಜಿವರೆಗೆ ಟ್ಯೂಷನ್‌ ಫೀ ಸೇರಿದಂತೆ ಒಟ್ಟು ವಾರ್ಷಿಕ ಶುಲ್ಕ 5 ಲಕ್ಷ ರೂ. ದಾಟುತ್ತದೆ. ಪುಸ್ತಕಗಳು, ಲೇಖನ ಸಾಮಗ್ರಿಗಳು, ಸಮವಸ್ತ್ರ ಮತ್ತು ಸಾರಿಗೆಯಂತಹ ವ್ಯವಸ್ಥೆಗಳಿಗೆ ಪ್ರತ್ಯೇಕ ಶುಲ್ಕ ಪಾವತಿಸಬೇಕಾಗುತ್ತದೆ.

‌School Fees

ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್‍ನಲ್ಲಿ ಎಲ್‍ಕೆಜಿಯಿಂದ 7ನೇ ತರಗತಿಗೆ ವಾರ್ಷಿಕ ಟ್ಯೂಷನ್‌ ಫೀ ಮಾತ್ರವೇ 1,70,000 ರೂ.ಗಳು. ಹಾಗೇ 8ರಿಂದ 10 ನೇ ತರಗತಿಯ ವಾರ್ಷಿಕ ಟ್ಯೂಷನ್‌ ಫೀ 5,90,000 ರೂಪಾಯಿ. 11 ಮತ್ತು 12ನೇ ತರಗತಿಗೆ ವಾರ್ಷಿಕ ಟ್ಯೂಷನ್‌ ಫೀ 9,65,000 ರೂಪಾಯಿ. ಈಜು ತರಬೇತಿ, ಪ್ರಯೋಗಾಲಯ ಇತ್ಯಾದಿಗಳೆಲ್ಲ‌ ಸೇರಿಸಿದರೆ ಶುಲ್ಕ ಇದರ ಹಲವು ಪಟ್ಟು ಹೆಚ್ಚುತ್ತದೆ. ಈ ಶಾಲೆಯಲ್ಲಿ ಇನ್ನೂ ಅನೇಕ ಸುಸಜ್ಜಿತ ಸೌಲಭ್ಯಗಳಿವೆ. ಆಟವಾಡಲು ದೊಡ್ಡ ಹೈಟೆಕ್‌ ಮೈದಾನಗಳಿವೆ. ಅಪರೂಪದ ಗ್ರಂಥಾಲಯವಿದೆ.

ಇದನ್ನೂ ಓದಿ: ಜಿಂಕೆಯನ್ನು ತಿನ್ನಲು ಸುರುಳಿ ಸುತ್ತಿದ ಹೆಬ್ಬಾವಿಗೆ ಕೊನೆಗೆ ಆಗಿದ್ದೇನು? ಭಯಾನಕ ವಿಡಿಯೊ

‌School Fees

ಈ ಸ್ಕೂಲ್‍ನಲ್ಲಿ ಸೆಲೆಬ್ರಿಟಿಗಳ ಮಕ್ಕಳು ಹೆಚ್ಚಾಗಿ ಅಧ್ಯಯನ ಮಾಡುತ್ತಾರೆ. ಈ ಹಿಂದೆ ಅನೇಕ ಸೆಲೆಬ್ರಿಟಿಗಳ ಮಕ್ಕಳು ಡಿಎಐಎಸ್‌ನಲ್ಲಿ ಅಧ್ಯಯನ ಮಾಡಿದ್ದಾರೆ. ಶಾರುಖ್ ಖಾನ್, ಐಶ್ವರ್ಯಾ ರೈ, ಕರೀನಾ ಕಪೂರ್ ಅವರ ಮಕ್ಕಳು ಸಹ ಈ ಶಾಲೆಯಲ್ಲಿ ಓದುತ್ತಾರೆ. ಈ ಶಾಲೆಯು ಸಿಐಎಸ್‍ಸಿಇ (ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್), ಸಿಎಐಇ (ಕೇಂಬ್ರಿಡ್ಜ್ ಅಸೆಸ್ಮೆಂಟ್ ಇಂಟರ್ನ್ಯಾಷನಲ್ ಎಜುಕೇಶನ್ ಮತ್ತು ಐಬಿ (ಇಂಟರ್ನ್ಯಾಷನಲ್ ಬ್ಯಾಕಲಾರೆಯಟ್) ಮಂಡಳಿಗಳೊಂದಿಗೆ ಸೇರಿಕೊಂಡಿದೆ.

Exit mobile version