Site icon Vistara News

Sexual Abuse: ಹೋಟೆಲ್ ರೂಂನಲ್ಲಿ ಒಬ್ಬಳಲ್ಲ, ಇಬ್ಬರು ಹುಡುಗಿಯರ ಜೊತೆ ಪತಿಯ ಸರಸ; ರೆಡ್‍ಹ್ಯಾಂಡ್ ಆಗಿ ಹಿಡಿದ ಪತ್ನಿಯ ಸಾಹಸ!

Sexual Abuse


ಭುವನೇಶ್ವರ : ಇತ್ತೀಚಿನ ದಿನಗಳಲ್ಲಿ ಪತಿ ಪತ್ನಿಯರ ಅನೈತಿಕ ಸಂಬಂಧದ (Sexual Abuse) ಪ್ರಕರಣಗಳು ಹೆಚ್ಚು ಹೆಚ್ಚು ವರದಿಯಾಗುತ್ತಲೇ ಇವೆ. ತಮ್ಮ ಸಂಗಾತಿಗೆ ತಿಳಿಯದಂತೆ ಬೇರೊಬ್ಬರ ಜೊತೆ ಸಂಬಂಧ ಬೆಳೆಸುವ ಪ್ರಕರಣಗಳು ಹೆಚ್ಚುತ್ತಿವೆ. ಕೊನೆಗೆ ತನ್ನ ಸಂಗಾತಿಯ ಕೈಗೆ ಸಿಕ್ಕಿಬಿದ್ದು ಸಂಕಷ್ಟಕ್ಕೀಡಾದ ಪ್ರಸಂಗಗಳೂ ಸಾಕಷ್ಟಿವೆ. ಇಂತಹ ಘಟನೆ ಹಲವು ಬಾರಿ ನಮ್ಮ ಸುತ್ತಮುತ್ತಲೂ ನಡೆಯುತ್ತಿರುತ್ತದೆ. ಇದೀಗ ಭುವನೇಶ್ವರದ ಪಾಟಿಯಾ ಪ್ರದೇಶದಲ್ಲಿ ಇಂತಹದೊಂದು ಘಟನೆ ವರದಿಯಾಗಿದೆ. ಇಲ್ಲಿನ ಹೋಟೆಲ್‍ವೊಂದರ ರೂಂನಲ್ಲಿ ಬುಧವಾರ ಮುಂಜಾನೆ ವ್ಯಕ್ತಿಯೊಬ್ಬ ಇಬ್ಬರು ಬಂಗಾಳಿ ಹುಡುಗಿಯರ ಜೊತೆ ಸರಸಸಲ್ಲಾಪದಲ್ಲಿ ತೊಡಗಿದ್ದಾಗ ರೆಡ್‍ಹ್ಯಾಂಡ್ ಆಗಿ ಪತ್ನಿಯ ಕೈಗೆ ಸಿಕ್ಕಿಬಿದ್ದಿದ್ದಾನೆ.

ಪತಿಯ ಅನೈತಿಕ ಸಂಬಂಧದ ಬಗ್ಗೆ ಮಾಹಿತಿ ತಿಳಿದ ನಂತರ ಪತ್ನಿ ಇನ್ಫೋಸಿಟಿ ಪೊಲೀಸರ ತಂಡದೊಂದಿಗೆ ಹೋಟೆಲ್‍ಗೆ ನುಗ್ಗಿದ್ದಾಳೆ. ಆ ಸಮಯದಲ್ಲಿ ಕೆಲವು ಆಕ್ಷೇಪಾರ್ಹ ವಸ್ತುಗಳು ಮತ್ತು ಮದ್ಯದ ಬಾಟಲಿ ಹಾಗೂ ಇಬ್ಬರು ಹುಡುಗಿಯರ ಜೊತೆ ಪತಿ ಪತ್ತೆಯಾಗಿದ್ದಾನೆ. “ನಾನು ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಹೋಟೆಲ್ ರೂಂನಲ್ಲಿ ಇಬ್ಬರು ಹುಡುಗಿಯರೊಂದಿಗೆ ನನ್ನ ಗಂಡನನ್ನು ಹಿಡಿದಿದ್ದೇನೆ. ನಿನ್ನೆ, ನನ್ನ ಪತಿ ತನ್ನ ವಿರುದ್ಧ ಎರಡು ಪೊಲೀಸ್ ಠಾಣೆಗಳಲ್ಲಿ ಕೆಲವು ಪ್ರಕರಣಗಳು ದಾಖಲಾಗಿರುವುದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು’ ಎಂದು ಪತ್ನಿ ಹೇಳಿದ್ದಾಳೆ. ತನ್ನ ಪತಿ ಈ ಹಿಂದೆ ತಾನು ಎಂಜಿನಿಯರ್ ಎಂದು ಹೇಳಿಕೊಂಡಿದ್ದನು ಮತ್ತು ಈಗ ತನ್ನ ಕೆಲಸವನ್ನು ಬದಲಾಯಿಸಿದ್ದಾನೆ ಎಂದು ಅವಳು ತಿಳಿಸಿದ್ದಾಳೆ.

ರೂಂನಲ್ಲಿದ್ದ ಇಬ್ಬರು ಹುಡುಗಿಯರನ್ನು ರಕ್ಷಿಸಿದ್ದು, ಈ ಹೋಟೆಲ್ ನಲ್ಲಿ ಸೆಕ್ಸ್ ದಂಧೆ ನಡೆಯುತ್ತಿದೆ ಎಂದು ಶಂಕಿಸಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎಲ್ಲಾ ದಾಖಲೆಗಳನ್ನು ಸಹ ಪರಿಶೀಲಿಸಲಾಗುತ್ತಿದೆ. ಆರೋಪಿ ಪತಿ ಮತ್ತು ಇಬ್ಬರು ಯುವತಿಯರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಫೇಲ್ ಮಾಡುವುದಾಗಿ ಹೆದರಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಶಿಕ್ಷಕನಿಗೆ 11 ಸಾವಿರ ರೂ. ದಂಡ!

ಮಾಹಿತಿಯ ಪ್ರಕಾರ, ಮಹಿಳೆಯ ಪತಿ ರ್ಯಾಪರ್ ಎಂದು ಹೇಳಲಾಗಿದ್ದು, ಆತನ ವಿರುದ್ಧ ಭುವನೇಶ್ವರದ ನಂದಂಕನನ್ ಮತ್ತು ಚಂದ್ರಶೇಖರಪುರ ಪೊಲೀಸ್ ಠಾಣೆಗಳಲ್ಲಿ ಕೆಲವು ಪ್ರಕರಣಗಳು ದಾಖಲಾಗಿವೆ. ಇತ್ತೀಚಿನ ವರದಿಯ ಪ್ರಕಾರ, ಈ ಸಂಬಂಧ ಪತಿ, ಇಬ್ಬರು ಯುವಕರು ಮತ್ತು ಮೂವರು ಬಂಗಾಳಿ ಹುಡುಗಿಯರು ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ.

Exit mobile version