Site icon Vistara News

Sexual Abuse: ಮಹಿಳೆ ಮೇಲೆ ಅತ್ಯಾಚಾರ ಎಸಗಿ ಜನನಾಂಗದೊಳಗೆ ಗನ್ ತೂರಿಸಿದ ತೃಣಮೂಲ ಕಾರ್ಯಕರ್ತ!

Sexual Abuse


ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ (Sexual Abuse)ಮತ್ತು ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತನ ವಿರುದ್ಧ ಬಿರ್ಭುಮ್ ಜಿಲ್ಲೆಯ ಬೋಲ್ಪುರ್ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿ ಫಿರೋಜ್ ಖಾನ್ ಎಂಬುದಾಗಿ ತಿಳಿದುಬಂದಿದ್ದು, ಘಟನೆಯ ನಂತರ ಆರೋಪಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಬಹಿರಿ ಪಂಚಚೋವಾ ಗ್ರಾಮ ಪಂಚಾಯತ್ ಪ್ರದೇಶದ ಕರೀಂಪುರದ ನಿವಾಸಿಯಾದ ಫಿರೋಜ್ ಖಾನ್, ವಿವಾಹಿತ ಮಹಿಳೆಯನ್ನು ಗನ್ ತೋರಿಸಿ ಬಲವಂತವಾಗಿ ಅಪಹರಿಸಿ ದನದ ಕೊಟ್ಟಿಗೆಗೆ ಕರೆದೊಯ್ದು, ಅಲ್ಲಿ ಆಕೆಯ ಕೈ ಮತ್ತು ಕಾಲುಗಳನ್ನು ಕಟ್ಟಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೇ ಆರೋಪಿಯು ಸಂತ್ರಸ್ತೆಯ ಜನನಾಂಗಕ್ಕೆ ಗನ್ ತೂರಿಸುವ ಮೂಲಕ ಚಿತ್ರಹಿಂಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.

ಹಲ್ಲೆಯ ಸಮಯದಲ್ಲಿ ಆತ ಸಂತ್ರಸ್ತೆಯ ಪೋಟೊಗಳನ್ನು ಸಹ ತೆಗೆದುಕೊಂಡಿದ್ದಾನೆ ಎನ್ನಲಾಗಿದೆ. ನಂತರ ಅವಳ ನಾಲ್ಕು ವರ್ಷದ ಮಗ, ತನ್ನ ತಾಯಿಯನ್ನು ಹುಡುಕುತ್ತಾ ದನದ ಕೊಟ್ಟಿಗೆಗೆ ಬಂದಾಗ ತಾಯಿಯನ್ನು ಆ ಸ್ಥಿತಿಯಲ್ಲಿ ನೋಡಿದ ಮಗು ಅಳಲು ಪ್ರಾರಂಭಿಸಿತು. ಆಗ ಆರೋಪಿ ಟಿಎಂಸಿ ಕಾರ್ಯಕರ್ತ ಮಗುವನ್ನು ಬೆದರಿಸಿ ಗೋಣಿ ಚೀಲದಲ್ಲಿ ಕಟ್ಟಿಹಾಕಿದ್ದಾನೆ ಎಂಬುದಾಗಿ ವರದಿಯಾಗಿದೆ.

ಆರೋಪಿ ಫಿರೋಜ್ ಖಾನ್ ಹಲವಾರು ದಿನಗಳಿಂದ ತನಗೆ ಕಿರುಕುಳ ನೀಡುತ್ತಿದ್ದ. ಅವನು ತನ್ನೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಅವಳಿಗೆ ಮುಂಗಡ ಹಣವನ್ನು ನೀಡಿದ್ದ. ಆದರೆ ಅವಳು ಅವನ ಪ್ರಸ್ತಾಪವನ್ನು ತಿರಸ್ಕರಿಸಿದಾಗ, ಅವನು ಅವಳ ತಲೆಗೆ ಗನ್ ಹಿಡಿದು ಕೊಲ್ಲುವುದಾಗ ಬೆದರಿಕೆ ಹಾಕಿದ. ಆನಂತರ ಆಕೆ ನೀರು ತರಲು ಹೋಗಿದಾಗ ಆಕೆ ಒಂಟಿಯಾಗಿರುವುದನ್ನು ತಿಳಿದ ಖಾನ್ ಅವಳನ್ನು ಗನ್‍ಪಾಯಿಂಟ್‌ನಲ್ಲಿ ಬೆದರಿಸಿ ಬಲವಂತವಾಗಿ ಏಕಾಂತ ಸ್ಥಳಕ್ಕೆ ಕರೆದೊಯ್ದನು, ಅಲ್ಲಿ ಅವನು ಅತ್ಯಾಚಾರ ಮಾಡಿದ. ಹಾಗೇ ಆಕೆಯ ಮಗನನ್ನು ಗೋಣಿಚೀಲದಲ್ಲಿ ಕಟ್ಟಿ ಕೊಲ್ಲಲು ಪ್ರಯತ್ನಿಸಿದ. ಘಟನೆಯ ನಂತರ, ಆಕೆ ಆತ್ಮಹತ್ಯೆಗೆ ಪ್ರಯತ್ನಿಸಿದಳು ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ. ಹಲ್ಲೆಯ ನಂತರ, ಸಂತ್ರಸ್ತೆಯನ್ನು ಬೋಲ್ಪುರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ಶವಾಗಾರದಲ್ಲಿ ಶವಗಳ ಪಕ್ಕದಲ್ಲೇ ಲೈಂಗಿಕ ಕ್ರಿಯೆ! ಸಂಚಲನ ಮೂಡಿಸಿದೆ ಈ ವಿಡಿಯೊ

ಪೊಲೀಸರ ಪ್ರಕಾರ, ಮರ್ಯಾದೆಗೆ ಹೆದರಿ ಸಂತ್ರಸ್ತೆ ಹಲವಾರು ದಿನಗಳವರೆಗೆ ಘಟನೆಯನ್ನು ವರದಿ ಮಾಡಲು ಹಿಂಜರಿಯುತ್ತಿದ್ದಳು. ಅಂತಿಮವಾಗಿ, ಆಕೆಯ ಪತಿ ಆರೋಪಿಗಳ ವಿರುದ್ಧ ದೂರು ದಾಖಲಿಸಲು ಹೇಳಿದ್ದಾರೆ. ಹಾಗಾಗಿ ಸಂತ್ರಸ್ತೆ ಆಕೆಯ ಪತಿಯೊಂದಿಗೆ ನೀಡಿದ ದೂರಿನ ಆಧಾರದ ಮೇಲೆ ಬೋಲ್ಪುರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿ ಖಾನ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಆಗಸ್ಟ್ 21 ರ ಬುಧವಾರ ಸಂತ್ರಸ್ತೆ ಮತ್ತು ಆಕೆಯ ಪತಿಯ ಹೇಳಿಕೆಯನ್ನು ದಾಖಲಿಸಿದ ನಂತರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಖಾನ್ ನಿವಾಸ ಮತ್ತು ಇತರ ಅಡಗುತಾಣಗಳ ಮೇಲೆ ಪೊಲೀಸರು ದಾಳಿ ನಡೆಸುತ್ತಿದ್ದಾರೆ. ಈ ಘಟನೆಯು ಬೋಲ್ಪುರದ ಸಾರ್ವಜನಿಕರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.

Exit mobile version